Shubha Giranimane

ವಿಶ್ವ ಎಂದು ಕರೆಯಲ್ಪಡುವ ಇಡೀ ಆಕಾಶ ಕಾಯವೇ ಒಂದು ನಿಸರ್ಗ. ನಿಸರ್ಗದಲ್ಲಿ ಇಲ್ಲ ಎನ್ನುವುದು ಯಾವುದೂ ಇಲ್ಲ. ಇದೆ ಎಂದು ಬೊಟ್ಟು ಮಾಡಿ ತೋರಿಸುವಲ್ಲಿಗೆ ಮುಗಿಯದ ಪುಟಗಳು ಅಲ್ಲಿ ಮತ್ತೆ ತಿರುವು ಹಾಕುತ್ತದೆ. ನಿನ್ನೆ ಏನೋ ಒಂದು ಕಂಡಿದ್ದೇವೆ ಎಂದುಕೊಂಡರೆ ಮತ್ತೆ ಮಾರನೆ ದಿನವಾದ ಇಂದು ಹೊಸತೊಂದು ವಿಸ್ಮಯ ಗೋಚರಿಸುತ್ತದೆ. ಆಲಸ್ಯವೊಂದನ್ನು ಬಿಟ್ಟು ನೋಡುತ್ತ ಹೋದರೆ ಆ ರಸಿಕನಿಗೆ ವಿಸ್ಮಯಗಳ ಆಗರವೇ ತುಂಬಿಕೊಂಡು ನಿಂತಿದೆ ನಿಸರ್ಗ.

ಭೂಮಿಯ ಆಳವನ್ನು ಅಗೆದರೆ ವಿಚಿತ್ರ ರೂಪದ ಖನಿಜಗಳು, ಜೀವಿಗಳು, ಲೋಹಗಳು ಲೆಕ್ಕ ಇಲ್ಲದಷ್ಟು ನಿಕ್ಷೇಪಗಳು ಸಿಗುತ್ತವೆ. ಸಮುದ್ರವನ್ನು ಹೊಕ್ಕರೆ ಆ ಲೋಕವೇ ಸೌಂದರ್ಯ ತುಂಬಿದ ಅರಮನೆ. ವಿವಿಧ ಪ್ರಬೇಧದ ಜಲಚರ ಪ್ರಾಣಿಗಳು, ಮುತ್ತು, ರತ್ನ, ಹವಳಗಳು, ಶಂಖಗಳು, ಮತ್ತೂ ಆಳವಿಳಿದರೆ ಆ ಸಾಗರದಲ್ಲೆ ಬೆಳೆದು ನಿಂತ ಬಣ್ಣ ಬಣ್ಣದ ಸಸ್ಯಗಳು ಇವನ್ನೆಲ್ಲ ಹುಲುಮಾನವ ಲೆಕ್ಕ ಇಡಲಾರ. ಒಮ್ಮೆ ತಲೆ ಎತ್ತಿ ಆಗಸದತ್ತ ನೋಡಿದರೆ ತಾರೆ, ಸೂರ್ಯ, ಚಂದ್ರ, ನೀಹಾರಿಕೆ, ಗ್ರಹಗಳು. ಭೂಮಿಯ ಮೇಲೆ ಎಲ್ಲ ಪ್ರಾಣಿಗಳ ಜೊತೆ ವಿಶೇಷ ಎನ್ನಿಸುವ ಮನುಷ್ಯರಾದ ನಾವೇ ಒಂದು ವಿಸ್ಮಯವಾದ ಪ್ರಾಣಿ. ಆದರೆ ಇದನ್ನೆಲ್ಲ ನೋಡುವ ಕಣ್ಣುಗಳು ತೆರೆದಿಟ್ಟುಕೊಳ್ಳ ಬೇಕು.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಊಹೆಗೆ ನಿಲುಕದಷ್ಟು ವಸ್ತುಗಳು ಪಾಠಕಲಿಸಲು ತಯಾರಾಗಿ ನಿಂತಿದೆ. ಅಲ್ಲಿ ನಾವು ಒಂದು ಹೆಜ್ಜೆ ಇರಸಿದರೆ ಕೌತುಕವು ಮೂಡುತ್ತದೆ. ತಂಪು ನೀಡುವ ಚಂದ್ರನನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ಚಂದ್ರ ತಂಪು ಯಾಕೆ, ರಾತ್ರಿ ಮಾತ್ರ ಕಾಣಿಸುತ್ತಾನೆ ಯಾಕೆ, ಚಂದ್ರನಲ್ಲಿ ಕಲೆಗಳು ಹೇಗಾದವು, ಪೂರ್ಣ ಚಂದ್ರ ಕರಗುವುದು ಹೇಗೆ, ಭೂಮಿಯಿಂದ ಇರುವ ದೂರವೆಷ್ಟು, ಅವನಲ್ಲಿ ಜೀವಿಗಳು ಬದುಕಬಹುದೇ ಹೀಗೆ ಹಲವಾರು ಪ್ರಶ್ನೆಗಳು ಹುಟ್ಟಿ ಅದಕ್ಕೆ ಉತ್ತರವನ್ನು ಕಂಡು ಹಿಡಿದಿದ್ದಾರೆ. ಹಾಗೆ ಉತ್ತರ ಕಂಡು ಹಿಡಿಯಬೇಕು ಅಂದಾಗ ಆ ಚಂದ್ರನ ಬಗ್ಗೆ ಕಲಿಕೆಯು ಆರಂಭವಾಗಬೇಕು. ಚಂದ್ರನ ಸಂಪೂರ್ಣ ವಿವರ ತಿಳಿಯಲು ಅಲ್ಲಿಗೆ ಮುಟ್ಟಿ ಬರಬೇಕು. ಹಾಗೆ ಮುಟ್ಟಿ ಬರುವ ಒಂದು ಸಾಧನ ಬೇಕು. ಅಲ್ಲಿ ನಿರ್ವಾತ ಪರಿಸ್ಥಿತಿ ಎನ್ನುವ ಅರಿವಿಗಾಗಿ ಮತ್ತೊಂದು ಅಧ್ಯಯನ ನಡೆಯಬೇಕು. ಅಲ್ಲಿಯಗೆ ಹೋಗಿ ಬರುವ ಸಮಯದ ಕಲ್ಪನೆ ಬೇಕು. ಹಾಗಾದರೆ ಚಂದ್ರನನ್ನು ತಲುಪಲು ಸಾಕಷ್ಟು ಮುಂಚಿತ ತಯಾರಿಬೇಕೆಂದಾಯಿತು. ಅದೆಲ್ಲ ಹೇಗೆ ಬೇಕು ಎನ್ನುವ ಕಲಿಕೆ ಮತ್ತೆ ಶುರುವಾಯಿತು ಎಲ್ಲ ಕಲಿಕೆಯೂ ನಿಸರ್ಗ ನಮಗೆ ಪ್ರಶ್ನೆಯಾಗಿ ನೀಡಿದೆ.
ಅಂದಾಗ ನಿಸರ್ಗದ ಕಲಿಸಲು ವಿವಿಧ ರೂಪದ ಪುಸ್ತಕವನ್ನು ನೀಡಿದೆ. ಆ ಪುಸ್ತಕವನ್ನು ತೆರೆದಾಗ ಪ್ರಶ್ನೆಗಳು ಸಿಗುತ್ತವೆ. ಆ ಪ್ರಶ್ನೆಗೆ ಅದೇ ಪ್ರಕೃತಿ ಉತ್ತರವನ್ನು ಸಹ ನೀಡಿದೆ. ಆದರೆ ಆ ಪುಸ್ತಕ ಓದುವ ಅರ್ಥೈಸಿಕೊಳ್ಳುವ ಜ್ಞಾನವನ್ನು ಈ ಪ್ರಕೃತಿಯನ್ನು ಹೊಕ್ಕು ಪಡೆದುಕೊಳ್ಳುವುದು ನಮ್ಮದೇ ಕೆಲಸವಾಗಿದೆ.

RELATED ARTICLES  ಸಮಸ್ಥ ಜನರ ಪ್ರಯೋಜನಕ್ಕಾಗಿಯೇ ಶ್ರೀಸಮರ್ಥರು ರಾಮತಾರಕಮಂತ್ರದ ಉಪದೇಶ ಬರೆದಿಟ್ಟು ಹೋಗಿದ್ದಾರೆ

ಹುಟ್ಟಿದ ಮಗುವಿಗೆ ನೂರಾರು ಪ್ರಶ್ನೆಗಳು. ಒಂದು ಹಸುವನ್ನು ಕಂಡಿತು ಎಂದರೆ, ಅಮ್ಮ ಅದೇನು? ಅದು ಯಾಕೆ ಹುಲ್ಲು ತಿನ್ನುತ್ತದೆ? ಹುಲ್ಲು ತಿನ್ನುವಾಗ ಕಸಕಡ್ಡಿ ಬಾಯೊಳಗೆ ಹೋಗುವುದಿಲ್ಲವೆ? ನಮ್ಮಂತೆ ಕೈ ಯಾಕಿಲ್ಲ, ಕಿವಿಗಳು ಹಾಗೇಕೆ ಇದೆ, ಬಾಲದಲ್ಲಿ ಯಾಕೆ ತನಗೆ ತಾನು ಹೊಡೆದುಕೊಳ್ಳುತ್ತದೆ ಇಂತಹ ಪ್ರಶ್ನೆಗಳು ಬರುತ್ತವೆ. ತಿಳುವಳಿಕೆ ಬಂದ ದೊಡ್ಡವರಾದ ನಾವು ಉತ್ತರಿಸುವುದು ಸುಲಭವಾಗಬಹುದು. ಆದರೆ ಹೊಸತನ್ನು ಕಂಡ ನಮಗೂ ಕೂಡ ಪ್ರಕೃತಿಯ ವೈಶಿಷ್ಯತೆಯು ದೇವಾಲಯವೆನಿಸಿದೆ. ನಾವು ಕಲಿಯುವ ಶಿಷ್ಯರಾಗಿ ನಿಸರ್ಗವನ್ನು ಗುರುವಾಗಿ ಸ್ವಿಕರಿಸಿದರೆ ವಿಶ್ವವಿದ್ಯಾಲಯ ನಮ್ಮೆದುರೆ ಇದೆ.