ಈ ನಿಮಿತ್ತದಿಂದಾದರೂ ಶ್ರೀಸಮರ್ಥ ಮತ್ತು ಶ್ರೀಚಾಂದ, ಈ ಇಬ್ಬರು ಮಹಾನ ಸಂಪ್ರದಾಯ ಪ್ರವರ್ತಕರ ಭೆಟ್ಟಿ ಮತ್ತೊಮ್ಮೆ ಆಗಿ, ಇಂದಿನ ಪರಿಸ್ಥಿತಿಯ ಬಗ್ಗೆ ಅದೇನು ಮಾತುಕತೆಯಾಗುತ್ತದೆಯೋ ಮತ್ತು ಅದರಲ್ಲಿ ನಿಶ್ಚಯಿಸಿದಂತೆ, ನನ್ನಿಂದ ಅಥವಾ ಅನ್ಯ ಅತುಲ್ಯ ಯಾರಿಂದಲೇ ಆದರೂ ಆ ಕಾರ್ಯ ಮಾಡಿಸಿ ಕೊಳ್ಳಬಹುದು.
(ಇಸವಿ ಸನ ೧೯೫೦ರ ಸುಮಾರಿಗೆ ಶ್ರೀಸಮರ್ಥ ಸೇವಾ ಮಂಡಳ, ಸಜ್ಜನಗಡಕ್ಕೆ ಬರೆದ ಪತ್ರದ ಆರನೆಯ ಭಾಗ)
ಗಂಗಾಮುನಿಗಳಿಗೆ ಹಿಂದಿ ಮತ್ತು ಸಂಸ್ಕೃತ ಈ ಎರಡೂ ಭಾಷೆಗಳ ಮೇಲೆ ಒಳ್ಳೆಯ ನೈಪುಣ್ಯತೆ ಇದೆ. ಇವರ ಜನ್ಮಸ್ಥಾನ ನಾಶಿಕದ ಹತ್ತಿರವೆಲ್ಲೋ ಇದೆ ಎಂದು ಅವರ ಮಾತಿನಲ್ಲಿ ಬಂದಿತ್ತು. ಇವರು ಮತ್ತು ಇನ್ನೊಬ್ಬ ಮಾನ್ಯಸಂತರು, ಲಕ್ಷ್ಮಣದಾಸರೊಂದಿಗೆ ನನ್ನ ದರ್ಶನಕ್ಕೆಂದು ಬಂದಿದ್ದರು. ಬದರೀನಾರಾಯಣದಲ್ಲಿ ಯಾರ ಸಹಾಯದಿಂದ ನನಗೆ ಕೆಲಕಾಲ ಛತ್ರ ನಡೆಸಲನುಕೂಲವಾಯಿತೋ ಅವರೇ ಈ ನಿಸ್ವಾರ್ಥಿ ಮತ್ತು ಅತ್ಯಂತ ಪರೋಪಕಾರಿ ಸಂತರು. ಗಂಗಾಮುನಿಗಳಿಗೆ ಮತ್ತು ಇಲ್ಲಿರುವ ಇನ್ನೂ ಕೆಲವರಿಗೆ ಶ್ರೀಸಮರ್ಥರ ವಿಷಯದಲ್ಲಿ ಉತ್ತಮ ಆದರಾಭಿಮಾನವಿದೆ. ಶ್ರೀಸಮರ್ಥಸಂಪ್ರದಾಯದ ಬಗ್ಗೆ, ಶ್ರೀಸಮರ್ಥಚರಿತ್ರೆಯ ಬಗ್ಗೆ ಮತ್ತು ಅವರ ಅವತಾರ ಕಾರ್ಯದ ಬಗ್ಗೆ ನಾನೆಷ್ಟು ಹೇಳಲು ಶಕ್ಯವೋ ಅಷ್ಟೇ ಗಂಗಾಮುನಿಗಳೂ ಹೇಳಲು ಶಕ್ತರಿದ್ದಾರೆ. ಶ್ರೀದಾಸನವಮಿ ಇವರ ಆಶ್ರಮದಲ್ಲೇ ನೆರವೇರಿಸಿ, ಭೋಜನೋತ್ತರ ಅವರಿಂದಲೇ ಇಲ್ಲಿಯ ಸಾಧುಸಮಾಜಕ್ಕೆ ಶ್ರೀಸಮರ್ಥಸಂಪ್ರದಾಯದ ಪರಿಚಯ ಮಾಡಿಕೊಡೋಣ ಎಂದುಕೊಳ್ಳುತ್ತಿದ್ದೇನೆ. ಈ ನಿಮಿತ್ತದಿಂದಾದರೂ ಶ್ರೀಸಮರ್ಥ ಮತ್ತು ಶ್ರೀಚಾಂದ, ಈ ಇಬ್ಬರು ಮಹಾನ ಸಂಪ್ರದಾಯ ಪ್ರವರ್ತಕರ ಭೆಟ್ಟಿ ಮತ್ತೊಮ್ಮೆ ಆಗಿ, ಇಂದಿನ ಪರಿಸ್ಥಿತಿಯ ಬಗ್ಗೆ ಅದೇನು ಮಾತುಕತೆಯಾಗುತ್ತದೆಯೋ ಮತ್ತು ಅದರಲ್ಲಿ ನಿಶ್ಚಯಿಸಿದಂತೆ ನನ್ನಿಂದ ಅಥವಾ ಅನ್ಯ ಅತುಲ್ಯ ಯಾರಿಂದಲೇ ಆದರೂ ಆ ಕಾರ್ಯ ಮಾಡಿಸಿ ಕೊಳ್ಳಬಹುದು. ಶ್ರೀದತ್ತ ಜಯಂತಿಯೂ ಇಲ್ಲಿ ಅತ್ಯಂತ ವೈಭವದಿಂದ ನೆರವೇರಿಸಲಾಯಿತು.
ನಾನು ತಿಳಿಸುವವರೆಗೂ ಅಲ್ಲಿಂದ ಬರಬೇಡಿ; ಅದರಿಂದ ನನಗೆ ತೊಂದರೆಯಾಗುತ್ತದೆ. ನನಗೆ ತೊಂದರೆ ಕೊಡುವ ಉದ್ದೇಶವಿದ್ದರೆ ಮಾತ್ರ ನನ್ನ ಅಪ್ಪಣೆ ಸಹಜವಾಗಿಯೇ ನಿಮಗೆ ನಗಣ್ಯವೆನಿಸಬಹುದು. ನನ್ನ ಅಪ್ಪಣೆಯ ಹೊರತು ಅಲ್ಲಿಂದ ಇಲ್ಲಿಗೆ ಯಾರೂ ಬರುವದಿಲ್ಲವೆಂದು ನಾನು ನಂಬಿಕೆಯಿಟ್ಟಿದ್ದೇನೆ. ಶ್ರೀರಾಮನವಮಿಯ ವರೆಗೆ ಇನ್ನು ನಾನು ಪತ್ರ ಬರೆಯುವದಿಲ್ಲ. ನಂತರ ಮುಂದಿನ ವಿಚಾರ ನಾನು ತಿಳಿಸುತ್ತೇನೆ. ಇಲ್ಲಿ ಅಥವಾ ಕಾಶಿಯಲ್ಲಿ ಅವಶ್ಯಕವಾದರೆ ನಿಮ್ಮನ್ನು ಕರೆಸಿಕೊಳ್ಳುತ್ತೇನೆ. ನಾನಿರುವ ಸ್ಥಳದಲ್ಲಿ ಬರುವದೆಂದರೆ ಒಂದು ಸತ್ವಪರೀಕ್ಷೆಯೇ ಆಗಿದೆ. ಇದು ಅತ್ಯಂತ ಕಠಿಣ ಪ್ರದೇಶದಲ್ಲಿದೆ. ಇರಲಿ.
ಎಲ್ಲರಿಗೂ ನನ್ನ ಆಶೀರ್ವಾದ. ನೀವೆಲ್ಲರೂ ನಡೆದಾಡುವ, ಮಾತನಾಡುವ ವಿಶ್ವಪಾವನ ಬ್ರಹ್ಮರೇ ಆಗಿ, ನಿಮ್ಮ ಉಜ್ವಲ ಕೀರ್ತಿಯಿಂದ ಸಂಪೂರ್ಣ ವಿಶ್ವವನ್ನು ತುಂಬಿಸಿಬಿಡಿ!
||ಸರ್ವೇ ಜನಾಃ ಸುಖಿನೋ ಭವಂತು||
ಶ್ರೀಧರ