ಮಾವಿನಕಾಯಿ ಹಣ್ಣಾಗುವ ಮೊದಲು ಹುಲ್ಲಿನ ಪೆಟ್ಟಿಗೆಗೆ ಬರಬೇಕಾಗುತ್ತದೆ ಮತ್ತು ಅಲ್ಲಿ ಬೆದೆಗೆ ಹಾಕಿದ ಮೇಲೂ ತಕ್ಷಣ ಕೆಲಸವಾಗುವದಿಲ್ಲ. ಚೆನ್ನಾಗಿ ಹಣ್ಣಾಗುವವರೆಗೂ ಶಾಂತಿಯಿಂದ ಕುಳಿತು ದಾರಿಕಾಯಬೇಕಾಗುತ್ತದೆ.
(ಇಸವಿ ಸನ ೧೯೫೧ರಲ್ಲಿ ಶ್ರೀಸಮರ್ಥ ಸೇವಾ ಮಂಡಳ, ಸಜ್ಜನಗಡದವರಿಗೆ ಬರೆದ ಪತ್ರ)
||ಶ್ರೀರಾಮ ಸಮರ್ಥ||
ಚೈತ್ರ ವ| ೧೨ | ೧೮೭೩
೨-೫-೧೯೫೧
ಮೊದಲು ಆಚಾರವಿಡಬೇಕು| ನಂತರ ವಿಚಾರ ವೀಕ್ಷಿಸಬೇಕು|
ಸಾರಾಸಾರ ವಿಚಾರದಿಂ ಸ್ವರೂಪ ರತ್ನ| ಪಡೆಯಬೇಕು||
ಬಹಳ ಹುಡುಕಿ ನೋಡಿದೆ| ಮಹಾತ್ಮರ ಮನದೊಳಗೆ ಹೊಕ್ಕಿದೆ|
ನಂತರವೇ ಅನ್ನಿಸಿಕೋ ಸಾಧಿಸಿದೆ ನಾ| ಮಹಾತ್ಕಾರ್ಯ||
ಶ್ರೀಸಮರ್ಥಾನುಗ್ರಹಕ್ಕೆ ಶ್ರೀಸಮರ್ಥಸೇವಾ ಮಂಡಳಕ್ಕೆ ಶ್ರೀಸದ್ಗುರುಚರಣ ಸ್ಮರಣ ಪೂರ್ವಕ ಆಶೀರ್ವಾದ,
ಶ್ರೀರಾಮನವಮಿ ನಂತರ ನಾನು ಬೇಗನೆ ಗಡಕ್ಕೆ ಬರುವೆನೆಂದು ಎಲ್ಲರ ಉತ್ಸುಕತೆ ಹೆಚ್ಚಿ ಬಹಳ ಜನರ ಕಣ್ಣು ನನ್ನ ಆಗಮನದ ಕಡೆಯೇ ಇದ್ದಿರಬೇಕು. ಯಾವುದೇ ಕಾರ್ಯಕ್ಕೆ ಒಂದು ಕಾಲ-ವೇಳೆ ಎಂದು ನಿಶ್ಚಯವಾಗಿರುತ್ತದೆ. ಅದು ಈಶ್ವರನ ಸೂತ್ರದಂತೆ ಆಗುತ್ತಿರುತ್ತದೆ. ಶ್ರೀಸಜ್ಜನಗಡದ ದರ್ಶನದ ಯೋಗ ಇನ್ನೂ ಕೆಲದಿನಗಳ ನಂತರ ಬರುವದಿದೆ. ಸದ್ಯ ಇನ್ನೂ ಕೆಲ ದಿನ ನನಗೆ ಏಕಾಂತದಲ್ಲಿ ಎಲ್ಲಿಯಾದರೂ ಅಜ್ಞಾತಸ್ಥಳದಲ್ಲಿ ಕಳೆಯುವದಿದೆ. ಗಡಿಬಿಡಿಯಿಂದ ಯವುದೇ ಕಾರ್ಯವೂ ಆಗುವದಿಲ್ಲ. ಮಾವಿನಕಾಯಿ ಹಣ್ಣಾಗುವ ಮೊದಲು ಹುಲ್ಲಿನ ಪೆಟ್ಟಿಗೆಗೆ ಬರಬೇಕಾಗುತ್ತದೆ ಮತ್ತು ಅಲ್ಲಿ ಬೆದೆಗೆ ಹಾಕಿದ ಮೇಲೂ ತಕ್ಷಣ ಕೆಲಸವಾಗುವದಿಲ್ಲ. ಚೆನ್ನಾಗಿ ಹಣ್ಣಾಗುವವರೆಗೂ ಶಾಂತಿಯಿಂದ ಕುಳಿತು ದಾರಿಕಾಯಬೇಕಾಗುತ್ತದೆ. ಆ ಆ ಕೆಲಸ ಆ ಆ ಕಾಲಕ್ಕೇ ಆಗುತ್ತಿರುತ್ತದೆ. ಈಶಸಂಕಲ್ಪದ ವಿರುದ್ಧ ಯಾರು ಹೋಗಲಿಕ್ಕೆ ಶಕ್ಯವಿದೆ? ಬಹುತೇಕ ಈ ಬರುವ ಚಾತುರ್ಮಾಸದ ನಂತರ ಮುಂದಿನದು ಏನೆಂದು ನಿಶ್ಚಯವಾಗಬಹುದು. ಅಲ್ಲಿಯವರೆಗೆ ಈಶ್ವರೇಚ್ಛೆಯಂತೆ ಏಕಾಂತದಲ್ಲಿರುವದೇ ಒಳ್ಳೆಯದು.
ನೀವೆಲ್ಲರೂ ಶ್ರೀಗಡದಲ್ಲಿ ಸದ್ಗುರು ಸೇವೆಯಲ್ಲಿದ್ದೀರಿ. ನಿಮ್ಮ ಆ ಜೀವನದ ಸ್ಮರಣವಾದಾಗ ಸಹಜವಾಗಿಯೇ ಶ್ರೀಸಮರ್ಥರ ಈ ಸಾಲುಗಳು ನೆನಪಾದವು.
ಪರಮಾರ್ಥಾಂಚೇ ಜನ್ಮಸ್ಥಾನ| ತೇಂಚೀ ಸದ್ಗುರುಚೇ ಭಜನ|
ಸದ್ಗುರು ಭಜನೇ ಸಮಾಧಾನ| ಅಕಸ್ಮಾತ್ ಬಾಣೇ||
ದೇಹ ಮಿಥ್ಯಾ ಜಾಣೋನಿ ಜೀವೇ| ಯಾಚೇ ಸಾರ್ಥಕಚೀ ಕರಾವೇ|
ಭಜನಭಾವೇ ತೋಷವಾವೇ| ಚಿತ್ತ ಸದ್ಗುರುಂಚೇ||
ಶರಣಾಗತಾಂಚೀ ವಾಹೇ ಚಿಂತಾ| ತೋ ಏಕ ಸದ್ಗುರು ದಾತಾ|
ಜೈಸೇ ಬಾಲಕ ವಾಢವೀ ಮಾತಾ| ನಾನಾ ಯತ್ನೇ ಕರೂನಿ||
ಮ್ಹಣೌನಿ ಸದ್ಗುರುಂಚೇ ಭಜನ| ಜಯಾಸಿ ಘಡೇ ತೋಚೀ ಧನ್ಯ|
ಸದ್ಗುರುವಿಣ ಸಮಾಧಾನ| ಆಣೀಕ ನಾಹೀ||
ಗುರುಭಜನಾಚೇ ನಿ ಆಧಾರೇ| ನಿರೂಪಣಾಚೇನಿ ದ್ವಾರೇ|
ಕ್ರಿಯಾ ಶುದ್ಧ ನಿರ್ಧಾರೇ ಪಾವಿಜೇ ಪದ||
ಇತಿ ಶಮ್|
ಶ್ರೀಧರ