ಅಯ್ಯಪ್ಪ ವ್ರತಧಾರಿಗಳ ಒಂದು ಅವಿಭಾಜ್ಯ ಅಂಗ. ಈ ಗಂಟಿನಲ್ಲಿ ಎರಡು ಭಾಗಗಳಿರುತ್ತದೆ. ಒಂದು ಭಾಗದಲ್ಲಿ ಪೂಜಾ ದ್ರವ್ಯಗಳು ಮತ್ತೊಂದರಲ್ಲಿ ಯಾತ್ರೆಗೆ ಆವಶ್ಯಕವಾದ ಸಾಮಗ್ರಿಗಳು. ಇದು ಭಕ್ತನೊಬ್ಬನ ಅಧ್ಯಾತ್ಮಿಕ ಮತ್ತು ಭೌತಿಕ ಘಟಕಗಳ ಸಂಕೇತ.
ಮನುಷ್ಯನ ದೈಹಿಕ ಮತ್ತು ಮಾನಸಿಕ ವರ್ತನೆಗಳು ವ್ಯಕ್ತಿಯ ಮೆದುಳನ್ನೇ ಅವಲಂಬಿಸಿರುತ್ತದೆ. ಅದರಲ್ಲಿರುವ ಸೆರೆಬ್ಲಮ್ ಮತ್ತು ಸೆರೆಬ್ರಲ್ ಕೋಟೆಕ್ಸ್ ಎಂಬುದು ಮೆದುಳಿನಲ್ಲಿರುವ ಎರಡು ವ್ಯವಸ್ಥೆ.
ಇರುಮುಡಿ ಕಟ್ಟಿ ಅದನ್ನು ತಲೆಯ ಮೇಲಿಟ್ಟುಕೊಳ್ಳುವ ವಿಧಾನದಿಂದ ಇವೆರಡು ಗ್ರಂಥಿಯು ಸರಿಯಾಗಿ ಕೆಲಸ ಮಾಡುವಂತೆ ಮಾಡುತ್ತದೆ.
ಒಂದು ಗಂಟಲ್ಲಿ ಅಕ್ಕಿ ಬರುವಂತೆ ಮಾಡಿ ಅದನ್ನು ತಲೆಯ ಮೇಲೆ ಇಡಲಾಗುತ್ತದೆ. ಇನ್ನೊಂದು ಗಂಟಲ್ಲಿ ಕಾಯಿ ಬರುವಂತೆ ಮಾಡಿ ಅದನ್ನು ತಲೆಯಿಂದ ಭುಜದ ಮೇಲೆ ಇಳಿ ಬಿಡುವಂತೆ ಕಟ್ಟಲಾಗುತ್ತದೆ. ಒಂದು ಗ್ರಂಥಿಯು ಮನುಷ್ಯನ ಅಧ್ಯಾತ್ಮಿಕ ಹಾಗೂ ಮಾನಸಿಕ ಭಾವನೆಯನ್ನು ಸಮತೋಲನದಲ್ಲಿರುವಂತೆ ಮಾಡುತ್ತದೆ. ತುಂಬಾ ದಿನಗಳವರೆಗೆ ಯಾತ್ರೆಯಲ್ಲೇ ಇರುವುದರಿಂದ ಸರಿಯಾದ ಆಹಾರ ಸಿಗದೇ ಇರುವುದರಿಂದ ಆರೋಗ್ಯ ಹದಗೆಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ರೀತಿಯಲ್ಲಿ ಇರುಮುಡಿ ಕಟ್ಟುವ ವಿಧಾನದಲ್ಲೂ ಆರೋಗ್ಯ ಕಾಪಾಡಿಕೊಳ್ಳುವ ಗುಟ್ಟು ಆ ಕಾಲದಲ್ಲೇ ತಿಳಿದಿದ್ದರು ಎಂಬುದು ನಿಜಕ್ಕೂ ಅಚ್ಚರಿಯ ಸಂಗತಿ.
ಇರುಮುಡಿಯಲ್ಲಿ ಏನೇನು ಇರುತ್ತದೆ
ಇರುಮುಡಿ ಎಂದರೆ ಹೆಸರೇ ಹೇಳುವಂತೆ ಎರಡು ಮುಡಿ ಎಂದರ್ಥ. ಮುಂದಿನ ಭಾಗದಲ್ಲಿ ತುಪ್ಪದ ಕಾಯಿ ಇರುತ್ತದೆ. ಭೂಮಿಯಲ್ಲಿ ಸಿಗುವ ಎಲ್ಲಕ್ಕಿಂತ ಶುದ್ಧವಾದದ್ದು ತೆಂಗಿನಕಾಯಿ. ಅದು ಶುದ್ಧತೆಯ ಸಂಕೇತ. ಅದಲ್ಲಿರುವ ಹಳೆಯದನ್ನು ತೆಗೆದು ಹಾಕಿ ಹೊಸದಾಗಿ ತುಪ್ಪವನ್ನು ತುಂಬಿಸಲಾಗುತ್ತದೆ. ನಮ್ಮ ಮನಸ್ಸಿನಲ್ಲಿರುವ ಹಳೆಯದನ್ನೆಲ್ಲಾ ತೆಗೆದು ಹೊಸತನ್ನು ತುಂಬುವ ಪ್ರತೀಕ.
ಮುಂದಿನ ಭಾಗದಲ್ಲಿ ಬೆಲ್ಲ, ಮೆಣಸು, ಅರಿಶಿನವೂ ಇರುತ್ತದೆ. ಎಲ್ಲಾ ವಸ್ತುಗಳು ಅಲ್ಲಿನ ಎಲ್ಲಾ ಕಾರ್ಯಕ್ಕೂ ಉಪಯುಕ್ತವಾಗುತ್ತದೆ. ಅರಿಶಿನ ಮಾಳಿಗಪುರಂ ದೇವಿಗೆ ಅರ್ಪಿಸಲಾಗುತ್ತದೆ. ಮೆಣಸು ಎರುಮೇಲಿಗೆ ಸೇರಿದರೆ, ಬೆಲ್ಲವನ್ನು ಪಾಯಸ ಹಾಗೂ ಅಯ್ಯಪ್ಪನ ನೈವೇದ್ಯಕ್ಕೆ ಬಳಸಿಕೊಳ್ಳುತ್ತಾರೆ.
ಹಿಂದೆಲ್ಲ ಇರುಮುಡಿಯನ್ನು ಅಡಿಕೆ ಹಾಳೆಯಲ್ಲಿ ಕಟ್ಟುತ್ತಿದ್ದರು. ಈಗ ಇದರಲ್ಲೂ ಹೊಸತನ ಬಂದಿದೆ. ಇರುಮುಡಿ ಶಬರಿಮಲೆಯ ಸಂಪ್ರದಾಯ. ಈ ರೀತಿ ಸಂಪ್ರದಾಯ ಇನ್ಯಾವ ದೇವಸ್ಥಾನದಲ್ಲೂ ಕಂಡು ಬರುವುದಿಲ್ಲ.
ದೀಕ್ಷಾವಸ್ತ್ರ
ಪ್ರಪಂಚದ ಸೃಷ್ಟಿಯ ಐದು ಮೂಲಗಳಲ್ಲಿ ಗುಣ, ರೂಪ, ಭಾವ, ಕ್ರಿಯೆ ಹಾಗೂ ಬಣ್ಣ ಮುಖ್ಯವಾದುದು. ಪ್ರತಿ ಸೃಷ್ಟಿಯ (ರೂಪ) ಗುಣಗಳು ಅದರ ಬಣ್ಣಕ್ಕೆ ಅನುಗುಣವಾಗಿರುತ್ತದೆ. ಬಣ್ಣಗಳಲ್ಲಿ ಮೂಲಬಣ್ಣಗಳು ಶ್ವೇತ (ಆಕಾಶ), ಹಳದಿ (ವಾಯು), ಕೆಂಪು (ಅಗ್ನಿ), ನೀಲಿ (ಜಲ) ಮತ್ತು ಹಸಿರು (ಪ್ರಕೃತಿ). ಇವೆಲ್ಲಕ್ಕಿಂತ ಮುಖ್ಯವಾದುದು ಕಪ್ಪು. ಏಕೆಂದರೆ ಬ್ರಹ್ಮಾಂಡದ ಬಣ್ಣ ಕಪ್ಪು. ಹಾಗೆ ಕೃಷ್ಣನ ಹಾಗೂ ಕಾಳಿಮಾತೆಯ ಬಣ್ಣವೂ ಕಪ್ಪು. ವ್ರತಧಾರಿಗಳು ಕಪ್ಪು, ನೀಲಿ, ಢಕೇಸರಿ (ಕಾವಿ) ಬಣ್ಣದ ಪಂಚೆಯನ್ನು ತೊಡಬೇಕು.
ಬಾಹ್ಯವಾದ ಈ ವಸ್ತ್ರ ಸ್ವಾಮಿಗಳ ಆಂತರಿಕ ಭಾವನೆಗಳ ಪ್ರತೀಕ. ಕಪ್ಪು, ಸಾವು ನೋವುಗಳ ಸಂಕೇತ. ಪ್ರಪಂಚದ ಆಸೆ ಆಮಿಷಗಳಿಗೆ ಅಯ್ಯಪ್ಪ ವ್ರತಧಾರಿ ಜೀವಂತನಲ್ಲ. ಅದನ್ನೆಲ್ಲ ತ್ಯಾಗ ಮಾಡಿ ಅವುಗಳ ಪಾಲಿಗೆ ಈತ ಸತ್ತಂತೆ ಎಂಬುದು ಶೋಕಸೂಚಕವಾದ ಈ ಕಪ್ಪು ವಸ್ತ್ರದ ಸಂದೇಶ. ಸರ್ವ ವ್ಯಾಪಕವಾದ ಆಕಾಶದ ಬಣ್ಣ. ಇದು ಭಗವಂತನ ಸರ್ವ ವ್ಯಾಪಕತೆಯ ಸಂಕೇತ. ಕಾವಿ ಬಣ್ಣ ತ್ಯಾಗದ ಪ್ರತೀಕ. ಎಲ್ಲವನ್ನೂ ಸುಟ್ಟು ಬಿಡುತ್ತದೆ. ತ್ಯಾಗದಿಂದ ಅಮೃತತ್ವ ಪ್ರಾಪ್ತಿ ಆನಂದದ ಲಾಭ.