muralidhar 2

ನದಿ ಮೂಲ ಋಷಿಮೂಲ ಹುಡುಕಬಾರದು ಎಂಬ ನಾಡ್ನುಡಿ ಇದೆ. ಅಷ್ಟಾಗಿ ಇದರ ಮೂಲವನ್ನು ಯಾರೂ ಹುಡುಕಲು ಕಂಡು ಹಿಡಿಯಲು ಹೋಗುವುದಿಲ್ಲ. ಆದಾಗ್ಯೂ ಕೆಲವು ನದಿಗಳ ಮೂಲ ಎಲ್ಲರಿಗೂ ಗೊತ್ತಿರುವ ವಿಷಯವೇ.

ಕೆಲವು ಸನ್ನಿವೇಶಗಳಲ್ಲಿ ಒಂದೇ ಊರಿನಲ್ಲಿರುವ ಇಬ್ಬರು ಮಕ್ಕಳ ತಂದೆಯರು ಒಂದೇ ಕೆಲಸಕ್ಕೆ ಹೋಗುತ್ತಿದ್ದು, ಒಬ್ಬರ ತಂದೆಯು ಮಾತ್ರ ಅವನ ಸಂಬಳದ ಹಣದಿಂದ ಮಾತ್ರ ಕಷ್ಟದಲ್ಲಿ ಜೀವನ ನಡೆಸುತ್ತಾ ಇದ್ದರೆ, ಇನ್ನೊಬ್ಬ ತಂದೆಯು ಇದಕ್ಕೆ ವಿರುದ್ದವಾಗಿ ಹೇರಳವಾಗಿ ಹಣವನ್ನು ಸಂಪಾದಿಸುತ್ತಾ, ಮನೆಯನ್ನು ಕಟ್ಟಿ ಕಾರಿನಲ್ಲಿ ಓಡಾಡುತ್ತಾ ಇದ್ದು, ಮಕ್ಕಳಿಗೆ ಕೇಳಿದಷ್ಟು ಹಣವನ್ನು ಕೊಡುತ್ತಾ ತನ್ನ ಮನಸ್ಸಿಗೆ ಬಂದಂತೆ ಖರ್ಚು ಮಾಡುತ್ತಾ ಇದ್ದರೆ ಯಾರಿಗಾದರೂ ಅನುಮಾನ ಬರುತ್ತದೆ.

ಇವೆಲ್ಲದ್ದಕ್ಕಿಂತ ಹೆಚ್ಚಾಗಿ ತಂದೆಯ ಆದಾಯದ ಮೂಲವನ್ನು ಅವನ ಮಕ್ಕಳು ಕೇಳಿದರೆ? ಕೇಳುವಂತಹ ಮನಸ್ಸು ಹೊಂದಿರುವಂತಹ ಮಕ್ಕಳು ಇದ್ದಾರೆಯೇ? ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ಎಚ್ಚೆತ್ತುಕೊಂಡು ಮಕ್ಕಳಾದವರು ತಂದೆಯವರ ಸಂಪಾದನೆ ಬಗ್ಗೆ ಪ್ರಶ್ನೆ ಮಾಡುವವರು ಇದ್ದರೆ ಅಂತಹ ತಂದೆಗೂ ಒಂದು ರೀತಿಯ ಭಯ ಕಾಡುತ್ತದೆ. ಆದರೆ ಇದಕ್ಕೆ ತಲೆಕೆಡೆಸಿಕೊಳ್ಳದೆ ಮಕ್ಕಳಿಗೆ ತಿರುಮಂತ್ರ ನೀಡಿ, ನಿನಗೇಕೆ? ನಾನು ಸಂಪಾದನೆ ಮಾಡುವುದನ್ನು ಕಟ್ಟಿಕೊಂಡು ನಿನಗೇನು? ನಾನು ಎಲ್ಲಿಂದಲಾದರೂ ತರುತ್ತೇನೆ. ಸಂಸಾರ ನಿರ್ವಹಣೆ ಮಾಡುವುದು ಹಾಗೂ ನಿಮ್ಮನ್ನು ಸಾಕುವುದು ನನ್ನ ಕರ್ತವ್ಯ ಮುಂದೆ ಏನಾದರೂ ಬಂದರೂ ನಾನೇ ನಿಭಾಯಿಸುತ್ತೇನೆ. ನಿನ್ನ ಪಾಡಿಗೆ ನೀನು ಓದಿ ಬುದ್ದಿವಂತನಾಗುವುದನ್ನು ಕಲಿತುಕೋ ಎಂದು ಉದ್ದಟತನ ತೋರಿದರೆ, ಇದರಿಂದ ಕೊನೆಗೊಂದು ದಿನ ಕುಟುಂಬವರೆಲ್ಲರೂ ಕಷ್ಟಕ್ಕೆ ಸಿಲುಕಬಹುದು.

ಯಾರ ತಂದೆಯಾದರೂ ತಾನು ನ್ಯಾಯವಾಗಿ ಎಷ್ಟೇ ಹಣವನ್ನು ಸಂಪಾದನೆ ಅದಕ್ಕೆ ತಕ್ಕ ಹಾಗೆ ಆದಾಯ ತೆರಿಗೆ ಕಟ್ಟಿ, ಮಾಡಿ ತನ್ನ ಪಾಡಿಗೆ ಸಂಸಾರವನ್ನು ತೂಗಿಸಿಕೊಂಡು ಹೋಗುತ್ತಿದ್ದರೆ ಯಾವ ಮಕ್ಕಳ ಮನಸ್ಸಿನಲ್ಲಿಯೂ ಇಂತಹ ಪ್ರಶ್ನೆ ಉದ್ಭವಿಸುವುದಿಲ್ಲ. ಸಂಪಾದಿಸುವ ಹಣಕ್ಕೆ ಆದಾಯ ತೆರಿಗೆ ಪಾವತಿಸುತ್ತಾ, ನೆಮ್ಮದಿಯಿಂದ ಇದ್ದರೆ ಯಾವ ತೊಂದರೆಯೂ ಎದುರಾಗುವುದಿಲ್ಲ. ಹೆಚ್ಚಾಗಿ ಅಂತಹ ತಂದೆಯನ್ನು ಕಂಡರೆ ಮಕ್ಕಳಿಗೂ ಒಂದು ರೀತಿಯ ಹೆಮ್ಮೆ ಎನಿಸುತ್ತದೆ. ಆದರೆ ತಂದೆಯಾದವನು ವಾಮಮಾರ್ಗದಿಂದ ಹಣವನ್ನು ಸಂಪಾದಿಸುತ್ತಾ, ಸರಿಯಾಗಿ ಆದಾಯ ತೆರಿಗೆ ಕಟ್ಟದೆ ಕದ್ದು ಮುಚ್ಚಿ ವ್ಯವಹಾರ ನಡೆಸುತ್ತಾ ಇದ್ದು, ಇಂತಹ ಮಕ್ಕಳಾದವರು ಪ್ರಶ್ನಿಸದೆ ತನ್ನ ತಂದೆಯ ಸಂಪಾದನೆ ಬಗ್ಗೆ ಎನೂ ಪ್ರಶ್ನಿಸದೆ ನನಗೇನು? ನನ್ನ ತಂದೆ ದುಡಿದು ತಂದು ಹಾಕುತ್ತಿದ್ದಾನೆ ಎಷ್ಟು ಕೇಳಿದರೂ ಹಣವನ್ನು ನೀಡುತ್ತಾನೆ, ನನ್ನ ಸ್ನೇಹಿತರ ಜೊತೆಯಲ್ಲಿ ತಿಂದು ಸಂತೋಷವಾಗಿರಬಹುದು. ಎಂಬ ಮನೋಭಾವನೆ ಬೆಳೆಸಿಕೊಂಡರೆ ಮುಂದೆ ಆಗುವ ಅನಾಹುತಕ್ಕೆ ತಂದೆಯೊಬ್ಬನೇ ಬಲಿಯಾಗುವುದಿಲ್ಲ ಜೊತೆಗೆ ಅವನ ಮಕ್ಕಳು ಸಹ ಬಲಿಪಶುಗಳಾಗಬೇಕಾಗುತ್ತದೆ.

RELATED ARTICLES  ಕಳೆದುಹೋಗುವ ಭಾವನೆಗಳು: ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲೆಗಳು(ಭಾಗ - 2)

ಆದರೂ ಬೇರೆಯವರ ಹೆತ್ತವರು ಕಷ್ಟಪಟ್ಟು ದುಡಿಯುತ್ತಿದ್ದರೂ ಸಹ ಅವರ ಮನೆಗಳಲ್ಲಿ ಕಷ್ಟದ ಜೀವನ ಸಾಗಿಸುತ್ತಿದ್ದು. ಇವರು ಮಾತ್ರ ಐಷಾರಾಮಿ ಜೀವನ ನಡೆಸುವುದನ್ನು ಪ್ರಶ್ನಿಸಲು ಹೋದರೆ ತಂದೆಯಿಂದ ಸಮಾಧಾನಕರವಾದ ಉತ್ತರ ದೊರೆಯದೇ ಇದ್ದಾಗ, ಮಕ್ಕಳಿಗೆ ಅನುಮಾನ ಬರುವುದು ಸಹಜ. ತನ್ನ ತಂದೆ ಎಲ್ಲೋ ದಾರಿ ತಪ್ಪಿ ಅನ್ಯಮಾರ್ಗದಿಂದ ಹಣವನ್ನು ಸಂಪಾದನೆ ಮಾಡುತ್ತಿದ್ದಾನೆ. ಇದರಿಂದ ಮುಂದೆ ನಮ್ಮ ಮನೆಗೆ ಅನಾನುಕೂಲವಾಗುತ್ತದೆ ಎಂದು ತಿಳಿದು ಮುಂಜಾಗರೂಕತೆಯಿಂದ ತಂದೆಯ ಸಂಪಾದನೆಯ ಬಗ್ಗೆ ವಿಷಯವನ್ನು ತಿಳಿದುಕೊಂಡು ತಂದೆಗೆ ಅನ್ಯಮಾರ್ಗದಿಂದ ಸಂಪಾದನೆ ಮಾಡುತ್ತಿರುವುದು ಸರಿಯಲ್ಲ. ಇದರಿಂದ ಯಾರಿಗೂ ಅನುಕೂಲವಿಲ್ಲ. ಆರಂಭದಲ್ಲಿ ಸಂತೋಷ ನೀಡಬಹುದು. ನಂತರ ಇದರಿಂದ ಮನೆಗೆ ಧಕ್ಕೆ ಉಂಟಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟರೂ ಅದನ್ನೇ ಮುಂದುವರೆಸಿದ್ದಲ್ಲಿ ಮಗನಾದವನು ಅನ್ಯಮಾರ್ಗದ ಹಣ ಬೇಕಿಲ್ಲ ಎಂದು ಹೇಳಿ ಬೇರೆ ರೀತಿಯಲ್ಲಿ ಸಂಸಾರ ಹೂಡಿದರೆ ಮಗನಾದರೂ ಸುರಕ್ಷಿತನಾಗಬಹುದು.

ತಂದೆಯೇ ಮನಸ್ಸುಮಾಡಿ ತನ್ನ ಮಗನಲ್ಲವೇ ಇವನಿಗೆ ಹೇಳಿದರೆ ತಪ್ಪೇನು? ಎಂದು ತನ್ನ ಹಣದ ಸಂಪಾದನೆಯ ಮೂಲವನ್ನು ಹೇಳಿ ಇದರಿಂದ ಏನೂ ಆಗುವುದಿಲ್ಲ. ಏನಾದರೂ ಆದರೆ ನಾನೇ ಪರಿಹರಿಸುತ್ತೇನೆ ಎಂದು ಮಕ್ಕಳಿಗೂ ಧೈರ್ಯ ತುಂಬಿದಾಗ ಮಕ್ಕಳು ತಂದೆಯ ಮಾತನ್ನು ನಂಬದೆ ಮುಂದೆ ಎದುರಾಗುವ ಅಪಾಯವನ್ನು ತಿಳಿಹೇಳಿ ತಂದೆಯನ್ನು ಒಳ್ಳೆ ಮಾರ್ಗಕ್ಕೆ ಬರುವಂತೆ ಮಾಡಿದರೆ ಒಂದು ಕುಟುಂಬ ಉಳಿಯಬಹುದು. ತನ್ನ ತಂದೆಯ ಮಾತನ್ನು ನಂಬಿ ತಂದೆಗೇ ಬೆಂಬಲವಾಗಿ ನಿಂತರೆ ಕಡೆಯಲ್ಲಿ ಇಬ್ಬರೂ ತೊಂದರೆಯಲ್ಲಿ ಸಿಕ್ಕಿಕೊಳ್ಳುವ ಅಪಾಯವಿರುತ್ತದೆ.

ಹೆತ್ತವರÀ ಸಂಪಾದನೆ ಬಗ್ಗೆ ಮಕ್ಕಳು ತಿಳಿದುಕೊಂಡ ನಂತರ ಮುಂದಾಗುವ ಅನಾಹುತದ ಬಗ್ಗೆ ಎಚ್ಚರಿಸಿ ಮುಂದೆ ಈ ರೀತಿಯಾಗಿ ಹಣವನ್ನು ಸಂಪಾದಿಸಬೇಡಿ, ಕಷ್ಟಪಟ್ಟು ದುಡಿದು ಬಂದಷ್ಟೇ ಸಾಕು ನೆಮ್ಮದಿಯಿಂದ ಇರೋಣ ಎಂದು ತಂದೆಗೆ ತಿಳಿಹೇಳಬಹುದು. ಕಾನೂನುಬಾಹಿರವಾಗಿ ದುಡಿದ ಹಣ ಯಾವತ್ತೂ ನಿಲ್ಲುವುದಿಲ್ಲ ಕಷ್ಟಪಟ್ಟು ದುಡಿದ ಹಣದಿಂದ ಸಂತೋಷ ನೆಮ್ಮದಿಯಿಂದ ಬದುಕಬಹುದು ಎಂದು ತಿಳಿಹೇಳಿದರೂ, ತಂದೆಯಾದವನು ನಾನು ಎಲ್ಲಿಂದಲಾದರೂ ಹಣವನ್ನು ಸಂಪಾದನೆ ಮಾಡಿಕೊಂಡು ಬರುತ್ತೇನೆ. ನೀನು ಓದುವುದನ್ನು ಮಾತ್ರ ನೋಡು ಎಂದು ಒರಟು ಉತ್ತರ ನೀಡಿದರೆ ಮಕ್ಕಳು ಏನೂ ಮಾಡಲು ಸಾಧ್ಯವಿಲ್ಲದಂತ ಸನ್ನಿವೇಶ ಉದ್ಭವವಾಗುತ್ತದೆ. ತಂದೆ ಮಾಡುತ್ತಿರುವ ಸಂಪಾದನೆಯು ಕಾನೂನು ಬಾಹಿರ ಎಂದು ತಿಳಿದಿದ್ದರೂ ಸಹ ಅನ್ಯಮಾರ್ಗವಿಲ್ಲದೆ ಸುಮ್ಮನಿರಬೇಕಾಗಬಹುದು. ತಂದೆಯ ಸಂಪಾದನೆಯ ಮೂಲ ಹುಡುಕಿ ಅದು ಕಾನೂನು ಬಾಹಿರ ವಾಗಿದ್ದರೆ ತಂದೆಯ ಮೇಲೆ ದೂರನ್ನು ನೀಡಲು ಸಾಧ್ಯವಾಗದೆ ಪರಿತಪಿಸುವಂತಾಗುತ್ತದೆ. ಯಾರಾದರೂ ಬಂದು ಪ್ರಶ್ನಿಸಿದರೆ ಏನು ಗತಿ ಎಂಬ ಭಯ ಮತ್ತು ಚಿಂತೆಯಿಂದ ದಿನವೂ ಜೀವನ ಸಾಗಿಸಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಇದರ ಬಗ್ಗೆ ತಂದೆಗೆ ತಿಳಿಹೇಳಿದರೂ ತಂದೆಯು ತಲೆಕೆಡೆಸಿಕೊಳ್ಳದೆ ತನ್ನ ದಾರಿಯಲ್ಲೇ ಮುಂದುವರೆದರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ವಿಷಯ ಗೊತ್ತಿದ್ದೂ ಮಕ್ಕಳು ಏನೂ ಮಾಡದೆ ಅಸಹಾಯಕರಾದರೆ ಎಲ್ಲರೂ ಕಷ್ಟವನ್ನು ಅನುಭವಿಸಬೇಕಾಗಿ ಬರಬಹುದು.

RELATED ARTICLES  ಪ್ರಸಕ್ತ ವರ್ಷದಿಂದಲೇ 5 ಮತ್ತು 8ನೇ ತರಗತಿಗೆ ವಾರ್ಷಿಕ ಪರೀಕ್ಷೆ..?

ಮಕ್ಕಳು ಹೇಳಿದ ಬುದ್ದಿವಾದವು ತಂದೆಗೆ ಹಿತಕರ ಎನಿಸುವುದಿಲ್ಲ. ಕಾರಣ, ಹೇರಳವಾಗಿ ಹಣ ಬರುತ್ತಿರುವಾಗ ಬೇರೆಯವರ ಮಾತು ಹಿತವೆನಿಸುವುದಿಲ್ಲ. ದುರಾಸೆಯಿಂದ ಹೆಚ್ಚು ಹೆಚ್ಚಾಗಿ ಹಣವನ್ನು ಸಂಪಾದನೆ ಮಾಡಬೇಕೆಂಬ ಗುರಿ ಹೊಂದಿರುತ್ತಾರೆ ವಿನಃ ಇದರಿಂದ ಮುಂದೆ ಅಪಾಯ ಉಂಟಾಗುತ್ತದೆ ಎಂಬ ಪರಿವೆಯೇ ಇರುವುದಿಲ್ಲ. ಆಗ ಯಾರ ಮಾತು ಕೇಳಿಸಿಕೊಳ್ಳುವ ತಾಳ್ಮೆಯೂ ಇರುವುದಿಲ್ಲ. ಹಣ ಒಂದಿದ್ದರೆ ಸಾಕು ಏನು ಬೇಕಾದರೂ ಸಾಧಿಸಬಹುದು ಎಂಬ ಹುಚ್ಚು ಕಲ್ಪನೆಯಿಂದ ಹಣ ಸಂಪಾದನೆ ಮಾಡುವುದರಲ್ಲಿಯೇ ಮಗ್ನರಾಗಿರುತ್ತಾರೆ. ಯಾವುದೇ ಅಪಾಯವಿಲ್ಲದೆ ನಡೆದುಕೊಂಡು ಹೋಗುತ್ತಿದ್ದರೆ ಪರವಾಗಿಲ್ಲ. ಅಕಸ್ಮಾತ್ ಒಂದು ಸಲ ಅಪಾಯ ಬಂದೊದಗಿದರೆ, ಅನ್ಯಮಾರ್ಗದಿಂದ ಸಂಪಾದಿಸಿ ಕೂಡಿಟ್ಟ ಹಣದ ಜೊತೆಗೆ ತನ್ನ ಸ್ವಂತ ಹಣ ಮತ್ತು ಆಸ್ತಿಯೂ ಕೊಚ್ಚಿಕೊಂಡು ಹೋಗುವಂತಹ ಪರಿಸ್ಥಿತಿ ಬಂದೊದಗುತ್ತದೆ ಎಂಬ ಜ್ಞಾನವೂ ಇರುವುದಿಲ್ಲ. ಅಂತಹ ಪರಿಸ್ಥಿತಿಯು ಹೊಳೆಯಲ್ಲಿ ಹುಣಸೇಹಣ್ಣನ್ನು ತೇಲಿಬಿಟ್ಟಂತೆ ಆಗುತ್ತದೆ ಎಂಬುದನ್ನು ಮನಗಾಣಬೇಕು.

ತೊಂದರೆಗೆ ಒಳಗಾದಾಗ ಮಾತ್ರ ಮಕ್ಕಳು ಹೇಳಿದಂತೆ ಕೇಳಬೇಕಿತ್ತು ಎಂತಹ ಕೆಲಸ ಮಾಡಿದೆ ಎಂದು ಪರಿತಪಿಸುವಂತೆ ಆಗುತ್ತದೆ. ಕಷ್ಟಪಟ್ಟು ಎಷ್ಟು ಬೇಕಾದರೂ ಸಂಪಾದನೆ ಮಾಡಲಿ ಯಾರೂ ಬೇಡವೆನ್ನುವುದಿಲ್ಲ. ಕಷ್ಟಪಟ್ಟು ದುಡಿದು ಹೇರಳವಾಗಿ ಹಣವನ್ನು ಸಂಪಾದನೆಯನ್ನು ಮಾಡುತ್ತಿದ್ದಾನೆ ಎಂದು ಸಮಾಜದಲ್ಲಿ ಗೌರವ ಉಂಟಾಗುತ್ತದೆ. ಅನ್ಯಮಾರ್ಗದಿಂದ ಕಾನೂನುಬಾಹಿರವಾಗಿ ಹಣವನ್ನು ಸಂಪಾದಿಸುತ್ತಿದ್ದರೆ ವಿಚಾರ ತಿಳಿಯುವವರೆಗೆ ಗೌರವವಾಗಿಯೇ ಇರಬಹುದು. ವಿಷಯ ತಿಳಿದ ನಂತರ ಎಲ್ಲರ ಮುಂದೆ ತಲೆ ತಗ್ಗಿಸುವಂತಾಗುತ್ತದೆ. ಮಿಂಚಿಹೋದ ಕಾರ್ಯಕ್ಕೆ ಚಿಂತಿಸಿ ಫಲವೇನು? ಎಂಬ ಗಾದೆಯಂತೆ ಅಸಹಾಯಕರಾಗಬೇಕಾದ ಪರಿಸ್ಥಿತಿ ಬಂದೊದಗಬಹುದು. ಅದೊಂದು ಸ್ವಯಂಕೃತ ಅಪರಾಧವಾಗಿದ್ದು, ಯಾರೂ ಹೊಣೆಗಾರರಾಗಿರುವುದಿಲ್ಲ.

ಇದಕ್ಕೆ ವಿರುದ್ದವಾಗಿ ಮಕ್ಕಳು ಅನ್ಯಮಾರ್ಗದಿಂದ ಹಣ ಸಂಪಾದಿಸುತ್ತಿದ್ದು, ಹೆತ್ತವರು ಪ್ರಶ್ನಿಸ ದಿದ್ದರೂ ಸಹ ಮೇಲಿನಂತೆ ಕುಟುಂಬದ ಸದಸ್ಯರೆಲ್ಲರೂ ಕಷ್ಟಕ್ಕೆ ಸಿಲುಕಬೇಕಾಗುತ್ತದೆ.