ಇತ್ತೀಚೆಗೆ ಕನ್ನಡ ಸಿನೇಮಾ ರಂಗದಲ್ಲಿ ನೈಜ ಘಟನೆಯನ್ನು ಆಧರಿಸಿರುವ ಚಿತ್ರಗಳ ಸಂಖ್ಯೆ ಹೆಚ್ಚುತ್ತಿದೆ.ಈಗಿನ ದಿನಗಳಲ್ಲಂತೂ ಕಿರು ಚಿತ್ರಗಳು ತಮ್ಮದೇ ಆದ ರೀತಿಯಲ್ಲಿ ಭರ್ಜರೀ ಸದ್ದು ಮಾಡುತ್ತಿವೆ.ಅದಕ್ಕೆ ಹೊಸ ಸೇರ್ಪಡೆ ಈ “ವರ್ತಮಾನ” ಕಿರು ಚಿತ್ರ.

ಇದು ನೈಜ ಘಟನೆಯನ್ನು ಆಧರಿಸಿದ ಚಿತ್ರವಾಗಿದ್ದು ಮಲೆನಾಡಿನ ಕೃಷಿ ಸಂಸಾರದ ಅದರಲ್ಲೂ ಅಡಿಕೆ ಬೆಳೆಗಾರರ ತೊಳಲನ್ನು ಪ್ರತಿನಿಧಿಸುತ್ತಿದೆ.ಹವ್ಯಕ ಸಮುದಾಯದ ಸಂಸ್ಕೃತಿ ಸಂಪ್ರದಾಯವನ್ನು ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಜನರಿಗೆ ತಲುಪಿಸುತ್ತಿರುವ h fm ಖ್ಯಾತಿಯ “ಬಾಳೇಸರ ವಿನಾಯಕ” ರವರ ಸಾಹಿತ್ಯ,ಸಂಭಾಷಣೆ ಮತ್ತು ನಿರ್ದೇಶನದೊಂದಿಗೆ ಈ ಕಿರು ಚಿತ್ರ ಅದ್ಭುತವಾಗಿ ಮೂಡಿಬಂದಿದೆ.ಸಂಭಾಷಣೆಗೆ ಬಳಸಿರುವ ‘ಹವ್ಯಕ ಭಾಷೆ’ ತನ್ನದೇ ಆದ ಇಂಪನ್ನು ಪಸರಿಸುವಂತಿದೆ.
ಇಂತಹ ಆಧುನಿಕ ವಿಜ್ಙಾನ ಶೈಲಿಯ ಜೀವನದ ವ್ಯವಸ್ಥೆಯಲ್ಲಿಯೂ ಹಳ್ಳಿಯನ್ನೇ ನಂಬಿ ಜೀವನ ನಡೆಸುವ ಸಂಸಾರದ ಅಡಿಕೆ ಕೊಯ್ಲಿನ ಸಮಸ್ಯೆಯನ್ನು ವಿಭಿನ್ನವಾಗಿ ಅಷ್ಟೇ ಕುತೂಹಲಕಾರಿಯಾಗಿಯೂ ಚಿತ್ರಿಸಲಾಗಿದೆ.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ -

ಮಲೆನಾಡ ಶಿರಸಿ ಸಮೀಪದಲ್ಲಿ ಹವ್ಯಕ ಮನೆಯ ಚಿತ್ರಣದಲ್ಲಿ ತಯಾರಿಸಿದ ಈ ಕಿರು ಚಿತ್ರ ನೈಜ ಅಭಿನಯವನ್ನು ಹೊಂದಿದೆ.’ಸಿಟಿ ಲೈಫ್’ನಿಂದ ದೂರವಿದ್ದು ತಿಳಿಯಾದ ಧಾರ್ಮಿಕ ನಂಬಿಕೆಯ ಲೇಪನ ಹೊಂದಿರುವ-ಹಳ್ಳಿಯ ಜೀವನದಲ್ಲೇ ಸಂತಸ ಕಾಣುವ ಪುಟ್ಟ ಸಂಸಾರವೊಂದು ಹೇಗೆ ಸಮಸ್ಯೆಯಲ್ಲಿ ಮುಳುಗುತ್ತದೆ ಮತ್ತು ಸಮಸ್ಯೆಗೆ ಪರಿಹಾರ ಸಿಕ್ಕಾಗ ಹೇಗೆ ಸಂಭೃಮಿಸುತ್ತದೆ ಎಂಬುದನ್ನು ಬಹು ವಿಭಿನ್ನವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.

ರೇಖಾ ಹೆಗಡೆ ಕಾಗೇರಿ , ಶ್ರೀಕೃಷ್ಣ ಹೆಗಡೆ ಕಾಗೇರಿ ,ಜಯದೇವ ಬಳಗಂಡಿ ಕುಮಟಾ ,ಗಜಾನನ ಹೆಗಡೆ ಬಾಳೇಸರ , ತಿಮ್ಮೇ ಗೌಡ ಹೀಗೆ ಅನೇಕರು ಆಧುನಿಕ ಲೇಪನವಿಲ್ಲದೇ ಮನ ಮುಟ್ಟುವ ಹಿತ ಮಿತವಾದ ಸಂಭಾಷಣೆಯೊಂದಿಗೆ ನೈಜವಾಗಿ ಅಭಿನಯಿಸಿ ವೀಕ್ಷಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಇದೊಂದು ಪೂರ್ಣ ಕುತೂಹಲ ಕೆರಳಿಸುವ ಕಿರು ಚಿತ್ರವಾಗಿದ್ದು ಅತಿ ಕಡಿಮೆ ಖರ್ಚು ಮತ್ತು ಸಮಯದಲ್ಲಿ ತಯಾರಾಗಿ ನೋಡುಗರಿಗೆ ಹತ್ತಿರವಾಗುವಂತಿದೆ.
‘ವಿನಯ ತೋಟದಹಳ್ಳಿ ಬೆಂಗಳೂರು’ ರವರ ಹಿನ್ನೆಲೆ ಧ್ವನಿಯಲ್ಲಿ ಮೂಡಿ ಬಂದ ಹವ್ಯಕ ಹಾಡು ಸಾಂದರ್ಭಿಕ ಅಭಿನಯವನ್ನೂ ಹೊಂದಿದ್ದು ಕೃಷಿ ಬದುಕಿನ ಹಲವು ಸಮಸ್ಯೆಗಳನ್ನು ಹೇಳುವ ಕಿರು ಚಿತ್ರ ಇದಾಗಿದೆ.

RELATED ARTICLES  ನೋಡಿ! ಎಷ್ಟಾಗುತ್ತದೆಯೋ ಅಷ್ಟು ನಿಮ್ಮ ಜೀವನವನ್ನು ದಿವ್ಯ ಮಾಡಿಕೊಳ್ಳಿರಿ!

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸಹಸ್ರಾರು ಸಂಖ್ಯೆಯ ಲೈಕ್ಸ್ ಮತ್ತು ಶೇರ್ಸ ನೊಂದಿಗೆ ಫೇಸ್ ಬುಕ್ , ಯೂಟ್ಯೂಬ್,ವಾಟ್ಸಪ್ ಗಳಲ್ಲಿ ಭಾರೀ ಸುದ್ದಿಯಲ್ಲಿರುವ “ವರ್ತಮಾನ” ಕಿರುಚಿತ್ರ ಖಂಡಿತವಾಗಿಯೂ ಅಡಿಕೆ ಬೆಳೆಗಾರರ ವರ್ತಮಾನವನ್ನು ಒಮ್ಮೆ ಕಣ್ ಪರದೆಯ ಮುಂದೆ ತರುತ್ತಿರುವುದಂತೂ ಸುಳ್ಳಲ್ಲ.
Vartamana Short Movie ಹೆಸರಿನಲ್ಲಿ youtube ನಲ್ಲಿ ಲಭ್ಯವಿರುವ ಈ ಕಿರು ಚಿತ್ರ ಪ್ರತಿಯೊಬ್ಬರೂ ವೀಕ್ಷಿಸುವಂತಿದೆ.

– ಅನುಷಾ ಹೆಗಡೆ.

ವಿಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ಕಿಸಿ