ಅಕ್ಷರರೂಪ : ಶ್ರೀಮತಿ ಪ್ರಭಾ ಮತ್ತು ವೆಂಕಟ್ರಮಣ ಭಟ್ಟ ಪುಣೆ.

ಕೆಲಜನರು ಗುರುವಿನ ಮಹತ್ವವನ್ನು ಅರಿಯದೆ ತಮ್ಮ ಪ್ರಾಕೃತ ಬುದ್ಧಿಯಿಂದ, ಕಾರ್ಯವನ್ನು ಸಮರ್ಥಸೇವೆ ಎಂದು ಎಣಿಸದೆ ಕೆಲಸ ಮಾಡುತ್ತಿದ್ದಾರೆಂದು ಕಂಡುಬರುತ್ತಿದೆ.
(ದತ್ತಾ ಬುವಾ ರಾಮದಾಸಿಯವರಿಗೆ ಬರೆದ ಪತ್ರ)

||ಶ್ರೀರಾಮ ಸಮರ್ಥ||
ಗುರುವಚನ ಪಾಲನೆಯೆ| ಶಿಷ್ಯನ ಲಕ್ಷಣ|
ಗುರುಭಜನೆ ಹೊರತು ಬೇರೆ| ಇಲ್ಲವೋ ಮೋಕ್ಷದಾಯಕ||

ಚಿ.ದತ್ತಾನಿಗೆ ಆಶೀರ್ವಾದ,

ಇಲ್ಲಿಯ ಜನರಷ್ಟೇ ಅಲ್ಲ, ಬೇರೆ ಬೇರೆ ಸ್ಥಳದ ಜನರೂ ಶ್ರೀಗಡಕ್ಕೆ ಉತ್ಸವಕ್ಕೆಂದು ಬರುವರಿದ್ದಾರೆ. ಉತ್ತಮ ವ್ಯವಸ್ಥೆ ಇಡುವ ಜವಾಬುದಾರಿ ನಿಮ್ಮೆಲ್ಲರ ಮೇಲಿದೆ. ಇಲ್ಲಿಯ ಜನರು ಅಂದರೆ ಸಾಗರದ ಸುತ್ತ-ಮುತ್ತಲಿನ ಜನರೇ ಉತ್ಸವಕ್ಕೆಂದು ಇಲ್ಲಿಯವರೆಗೆ ಐದುಸಾವಿರ ರೂಪಾಯಿಯಾದರೂ ಕನಿಷ್ಠ ಕಳಿಸಿರಬೇಕು ಎಂದು ನನ್ನ ಅಂದಾಜಿದೆ. ಸರಿಯಾಗಿ ನಮೂದಿಯಾದ ಅಂಕೆಯನ್ನು ಈ ಪತ್ರ ಮುಟ್ಟಿದ ಮೇಲೆ ನನಗೆ ತಿಳಿಸಬೇಕು.

RELATED ARTICLES  ಮೋಡದಿಂದ ಸೂರ್ಯ ಹೊರಬರುವಂತೆ ಸತ್ಯವೂ ಹೊರಬರುವುದು!

ಬಂದ ಜನರಿಗೆ ಚಳಿಯಿಂದ ತೊಂದರೆಯಾಗಬಾರದೆಂದು ನಾಲ್ಕೂ ಕಡೆ ಮತ್ತು ಮೇಲೆ ತಟ್ಟಿ ಕಟ್ಟಿ ಅನುಕೂಲ ಮಾಡಿಡಬೇಕು. ಅದಕ್ಕಾಗಿ ೭-೮ನೂರು ರೂಪಾಯಿ ಖರ್ಚಾದರೂ ಚಿಂತೆಯಿಲ್ಲ. ಅನುಕೂಲ ಮಾತ್ರ ಎಲ್ಲಾ ದೃಷ್ಟಿಯಿಂದಲೂ ಉತ್ತಮವಾಗಿರಬೇಕು. ಸಮರ್ಥರ ಕಾರ್ಯ ಸುಗಮವಾಗೇ ಆಗುವದು; ಸಮರ್ಥರ ಕಾರ್ಯದಲ್ಲಿ ಸಾಮರ್ಥ್ಯ ಸಹಜವಾಗಿಯೇ ಇರುವದು!

ನಿಶ್ಚಯವಿರಬೇಕು. ಹಗಲಿನ ಬೆಳಕಿನಲ್ಲಿ ಕಣ್ಣು ಮುಚ್ಚಿ ಹೊಂಡದಲ್ಲಿ ಬಿದ್ದರೆ ಸೂರ್ಯನಿಗೆ ಪ್ರಕಾಶವಿಲ್ಲ ಎಂದು ಹೇಳಲು ಬರುವದಿಲ್ಲ.
ಕೆಲಜನರು ಗುರುವಿನ ಮಹತ್ವವನ್ನು ಅರಿಯದೆ ತಮ್ಮ ಪ್ರಾಕೃತ ಬುದ್ಧಿಯಿಂದ, ಕಾರ್ಯವನ್ನು ಸಮರ್ಥಸೇವೆ ಎಂದು ಎಣಿಸದೆ ಕೆಲಸ ಮಾಡುತ್ತಿದ್ದಾರೆಂದು ಕಂಡುಬರುತ್ತಿದೆ. ಅವರಿಗೆ ಯಾವಾಗ ಶ್ರೀಗುರುವಿನ ಮಹತ್ವ ಅರಿವಾಗುವದೋ ಆಗ ಅವರ ಕೈಯಿಂದ ಇದಕ್ಕಿಂತಲೂ ಉತ್ಕೃಷ್ಟ ಕಾರ್ಯ ಸಾಧ್ಯವಾಗುತ್ತದೆ.
ಇರಲಿ! ನಿಮ್ಮೆಲ್ಲರ ಹೆಜ್ಜೆ ಯೋಗ್ಯಮಾರ್ಗದಲ್ಲೇ ಸದಾಸರ್ವದಾ ಇರಲಿ.

RELATED ARTICLES  ಪತ್ರ ಮುಖೇನ ಶಿಷ್ಯರಿಗೆ ದಾರಿತೋರಿದ ಭಗವಂತ.

ರೊಕ್ಕದ ಅಂಕೆ ಅವಶ್ಯ ತಿಳಿಸಿರಿ. ಅನುಕೂಲತೆಯನ್ನೂ ಚೆನ್ನಾಗಿ ಇಡಿ. ಈಗಿಂದಲೇ ಪ್ರಯತ್ನ ಮಾಡಿ. ಧಾನ್ಯದ ಕೊರತೆಯೂ ಆಗಬಾರದು. ಹಣ ನಾನು ಬಂದಮೇಲೂ ಸಿಗುತ್ತದೆ. ಸಮರ್ಥರಿದ್ದಾರೆ. ಯಾರದೇ ಮತ್ತು ಯಾವುದೇ ಕೆಲಸದಲ್ಲೂ ಸ್ವಲ್ಪ ಕೂಡಾ ನ್ಯೂನ್ಯತೆ ಇರಬಾರದು.
||ಸರ್ವೇ ಜನಾಃ ಸುಖಿನೋ ಭವಂತು||
ಶ್ರೀಧರ