ravi soori

ತೋರಿಕೆಯ ಆಡಂಬರದ ಭಕ್ತಿಯಿಂದ ಭಗವಂತನನ್ನು ಮೆಚ್ಚಿಸಲು ಸಾಧ್ಯವಿಲ್ಲ. ನಾನೇ ಎಂಬ ಭಾವ ತೊರೆದು ನೀನೇ ಎಂದು ಶರಣಾದಾಗ ಭಗವಂತನ ಕೃಪೆ ನಮಗೆ ದೊರೆಯುತ್ತದೆ. ಭಗವಂತನೆಂದರೆ ಕರೆಯದಿದ್ದರೂ ಕೇಳುವವನು, ತಿಳಿಮನದ ಭಾವುಕತೆಗೊಲಿದು ಬರುವವನು, ಒಳಮನದ ತಳಮಳವನ್ನು ಅರಿಯುವವನು, ನುಡಿವ ಮೊದಲೇ ಆಲಿಸುವ ಕಿವಿಯುಳ್ಳವನು ನಮ್ಮ ಅಂತಃಸಾಕ್ಷಿ-ಆತ್ಮಸಾಕ್ಷಿಯ ರೂಪದಲ್ಲಿರುವವನು.

RELATED ARTICLES  ತಂಪಿನಲ್ಲೂ ತಂಪು ಯಾವುದು…?

ಅಂತಹ ಭಗವಂತನಿಗೆ ತೋರಿಕೆ ಬೇಡ ಭಾವಬೇಕು. ಭಾವಕ್ಕೆ ಸ್ಪಂದಿಸಿದ ದೇವನನ್ನು ಶ್ರೀರಾಮನ ರೂಪದಲ್ಲಿ ನಾವು ಕಾಣುತ್ತೇವೆ. ಎಂಜಲಲ್ಲೂ ನಂಜಿಲ್ಲದ ಭಕ್ತಿಯನ್ನು ಕಂಡವನು ರಾಮ. ಕಾಲಿಗೆ ತಾಕಿದ ಕಲ್ಲಿಗೂ ಜೀವ ನೀಡಿದವನು ರಾಮ. ತಪ್ಪನ್ನು ಒಪ್ಪಿದ ವಾನರ ವಾಲಿಗೆ ಕೈವಲ್ಯ ಅನುಗ್ರಹಿಸಿದವನು ರಾಮ. ಅಳಿಲಿಗೆ ಸೇವಾ ಸಾಫಲ್ಯ ಒದಗಿಸಿದವನು ರಾಮ. ಭೀಷಣ ರಕ್ಕಸರಾಜ್ಯವನ್ನು ವಿಭೀಷಣನ ವಶವಾಗಿಸಿದವನು ರಾಮ. ಧರ್ಮದ ಬದಲು ದುರ್ಮಧ ಬಂದಾಗ ಅಂತವರನ್ನು ಸಂಹರಿಸಿದವನು ರಾಮ. ಈ ಎಲ್ಲದರ ಹಿಂದೆ ನೀನೇ ಎಂಬ ಭಾವ ಕೆಲಸ ಮಾಡಿದೆ.

RELATED ARTICLES  ಸಮರ್ಥಾ! ನಿನ್ನ ಒಬ್ಬ ಮಗ ದೂರ ದೇಶದಲ್ಲಿ’ ಎಂದು ಶ್ರೀಸಮರ್ಥರ ಹತ್ತಿರ ನನ್ನ ಬಗ್ಗೆ ಕರುಣೆಯಿಂದ ಬೇಡಿಕೊಳ್ಳಿರಿ. ಶ್ರೀಧರರ ನುಡಿಗಳಿವು.

ಭಾವದಿಂದ ಭಗವಂತನ ಅನುಗ್ರಹಕ್ಕೆ ಪಾತ್ರರಾಗಿ ಭವದ ಬಂಧನದಿಂದ ಮುಕ್ತಿ ಪಡೆಯೋಣ.