ಮೂರು ಚಾತುರ್ಮಾಸ್ಯಗಳ ಹಿಂದಿನ ಮಾತು – ಹಿಂದೂ ಸಮಾಜದ ಶ್ರೇಷ್ಟ ಸಂತರಲ್ಲಿ ಒಬ್ಬರಾದ , ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳವರು ಕೆಕ್ಕಾರಿನಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡ ಸಂದರ್ಭ ..ಇಂತಹ ಚಾತುರ್ಮಾಸ್ಯ ಅನುಷ್ಠಾನ ಕೈಗೊಂಡ ಸಂದರ್ಭದಲ್ಲಿ ಮತ್ತು ಆ ಚಾತುರ್ಮಾಸ್ಯ ಕೈಗೊಳ್ಳುವ ಮುಂಚಿತವಾಗಿ ಸತತವಾಗಿ ಶ್ರೀ ಮಠಕ್ಕೆ /ಶ್ರೀ ಮಠದ ವ್ಯವಸ್ಥೆ ನೋಡಿಕೊಳ್ಳುತ್ತಿರುವ ಹಲವರಿಗೆ ಹತ್ತಾರು ಬೆದರಿಕೆ ಕರೆಗಳು ಬರುತ್ತವೆ / ಹಣದ ಬೇಡಿಕೆ ಒಡ್ಡಲಾಗುತ್ತದೆ , ಪ್ರಾಣ ಬೆದರಿಕೆ ಒಡ್ಡಲಾಗುತ್ತದೆ . ಅವೆಲ್ಲಕ್ಕೂ ಒಂದೇ ಉದ್ದೇಶ ಶ್ರೀಗಳನ್ನು ಶ್ರೀ ರಾಮಚಂದ್ರಾಪುರ ಮಠದಿಂದ ಹೊರ ಹೋಗುವಂತೆ ಮಾಡಬೇಕು !!!!
ಯಾವತ್ತೂ ನ್ಯಾಯಪರ ದಾರಿಯನ್ನು ಬಿಟ್ಟು ಹೋಗದ ಶ್ರೀ ಮಠ / ಶ್ರೀ ಮಠದ ಶಿಷ್ಯ ಭಕ್ತರು , ಈ ನೆಲದ ನ್ಯಾಯ ಕಾನೂನಿನಂತೆ , ಆಯಾಯ ವ್ಯಾಪ್ತಿಯ ಪೊಲೀಸ್ ಠಾಣೆ ಗಳಲ್ಲಿ ಈ ವಿಷಯದ ಬಗೆಗೆ , ಈ ಬೆದರಿಕೆಗಳ ಬಗೆಗೆ ದೂರು ನೀಡುತ್ತಾರೆ .. ಆಮೇಲೆ ಪೊಲೀಸ್ ವ್ಯವಸ್ಥೆ ಸುಮಾರು ಇಪ್ಪತ್ತು ದಿನಗಳಿಗೂ ಹೆಚ್ಚು ತನಿಖೆ ಮಾಡುತ್ತದೆ ..
ತನ್ನ ತನಿಖೆಯ ಆಧಾರದ ಮೇಲೆ ಆರೋಪ ಪಟ್ಟಿ ತಯಾರು ಮಾಡುತ್ತದೆ .. ಶ್ರೀಮತಿ ಪ್ರೇಮಲತಾ ದಿವಾಕರ ಶಾಸ್ತ್ರೀ , ಶ್ರೀ ದಿವಾಕರ ಶಾಸ್ತ್ರೀ , ಶ್ರೀ ಸಿ ಎಂ ಏನ್ ಶಾಸ್ತ್ರಿಗಳವರ ಕೈವಾಡವನ್ನು ಈ ಬೆದರಿಕೆಯಲ್ಲಿ ಗುರುತಿಸುತ್ತದೆ – ನಂತರ ಮೂರನೇ ಆರೋಪಿ ತಲೆ ತಪ್ಪಿಸಿಕೊಂಡಿದ್ದರಿಂದ , ಮೊದಲೆರಡು ವ್ಯಕ್ತಿಗಳನ್ನು ತನ್ನ ಕಸ್ಟೋಡಿ ಗೆ ತೆಗೆದು ಕೊಂಡು ವಿಸ್ತೃತವಾದ ವಿಚಾರಣೆ ನಡೆಸುತ್ತದೆ
ಗೊತ್ತಿದ್ದೋ ಗೊತ್ತಿಲ್ಲದೆಯೋ , ಆ ವ್ಯಕ್ತಿಗಳು ಪೊಲೀಸ್ ರ ಎದುರು ತಾವು ನಡೆಸಿದ ನಡೆಸುತ್ತಿದ್ದ ಮಸಲತ್ತನ್ನು ಸಂಪೂರ್ಣವಾಗಿ ಒಪ್ಪಿಕೊಂಡು ಬಿಟ್ಟರು .. ಅವರು ಹೇಳಿದ ವಿಷಯವನ್ನು ಅರಸಿಕೊಂಡು ಹೋದ ಪೊಲೀಸರಿಗೆ ಅವರು ಷಡ್ಯಂತ್ರ ನಡೆಸುತ್ತಿದ್ದರು ಎನ್ನುವುದಕ್ಕೆ ಬೇಕಾದಷ್ಟು ಸಾಕ್ಷ್ಯಗಳೂ ಸಿಕ್ಕವು ಕೂಡ .. ತಮಗೆ ಗೊತ್ತಿರಲಿ , ಭಾರತದ ಸಾಕ್ಷಿ ಅಧಿ ನಿಯಮದ ಪ್ರಕಾರ ಒಬ್ಬ ಆರೋಪಿ ತಪ್ಪು ಒಪ್ಪಿಕೊಂಡು ಆತ ಕೊಟ್ಟ ತಪ್ಪೊಪ್ಪಿಗೆ ಹೇಳಿಕೆಗಳಿಗೆ ಪೂರಕವಾಗಿ ಸಾಕ್ಷಿ ಸಿಕ್ಕಾಗ ಅದು ಬಹಳ ಮುಖ್ಯವಾದ ಸಾಕ್ಷಿಯಾಗಿ ಪರಿಗಣಿತವಾಗುತ್ತದೆ !!!
ಇನ್ನೇನು ಆ ಷಡ್ಯಂತ್ರಿಗಳಿಗೆ ಶಿಕ್ಷೆ ಆಗಿಯೇ ಹೋಯಿತು ಎಂದಾಗ ಏನೇನು ಆಯಿತು ಎಂಬುದು ಈ ನಾಡಿನ ಜನರಿಗೆ ಗೊತ್ತಿದೆ. . ಅವರು ಮಾಡಿಕೊಂಡ ಸಂಚಿನಂತೆ ಶ್ರೀಗಳ ಮೇಲೆ ಸುಳ್ಳು ಲೈಂಗಿಕ ಆರೋಪಗಳನ್ನು ಮಾಡಲಾಗುತ್ತದೆ .. ನಂತರ ವ್ಯವಸ್ಥಿತವಾಗಿ ಎಲ್ಲ್ಲಾ ಪ್ರಕರಣಗಳನ್ನು ಸಿ ಐ ಡಿ ಎಂಬ ತನಿಖಾ ಸಂಸ್ಥೆ ಗೆ ವಹಿಸಲಾಗುತ್ತದೆ .. ಆ ಸಿ ಐ ಡಿ ಸಂಸ್ಥೆ ಏನು ಮಾಡಿತು ಎಂಬುದನ್ನು ಇವತ್ತು ನ್ಯಾಯಾಲಯ ಹೇಳಿದೆ ಮಾತ್ರವಲ್ಲ ಆ ಸಿ ಐ ಡಿ ಸಂಸ್ಥೆಗೆ ಇದ್ದ ಒತ್ತಡವೇನು ಎಂಬುದನ್ನು ಕೂಡ ಪ್ರಶ್ನೆ ಮಾಡಿದೆ .
ಸಾಕ್ಷಿಗಳಿಲ್ಲದ , ತಾರ್ಕಿಕವಾಗಿ , ತಾಂತ್ರಿಕವಾಗಿ , ಕಾನೂನಾತ್ಮಕವಾಗಿ , ಎಲ್ಲಿಯೂ ತಪ್ಪಾಗಿರದ ಸುಳ್ಳು ಅತ್ಯಾಚಾರ ಪ್ರಕರಣದಲ್ಲಿ ಚಾರ್ಜ್ ಶೀಟ್ ಹಾಕಲಾಯಿತು – ನ್ಯಾಯಾಲಯ ಈ ವಿಷಯದಲ್ಲಿ ಸಿ ಐ ಡಿ ಗೆ ಛಿಮಾರಿ ಹಾಕಿ ಆ ಚಾರ್ಜ್ ಶೀಟ್ ನ್ನು ವಜಾಮಾಡಿದ್ದು ಇತಿಹಾಸ .. ಅದರ ಜೊತೆಗೆ ಸಂಪೂರ್ಣ ಸಾಕ್ಷಿಗಳಿದ್ದ ಬ್ಲಾಕ್ಮೇಲ್ ಪ್ರಕರಣಕ್ಕೆ ಬಿ ರಿಪೋರ್ಟ್ ಹಾಕಿ ಮತ್ತೆ ನ್ಯಾಯಾಲಯದಿಂದ ಛಿಮಾರಿ ಹಾಕಿಸಿಕೊಂಡಿತು ಕೂಡ
ಛಿಮಾರಿ ಹಾಕಿದ್ದು ಮಾತ್ರ ಅಲ್ಲ – ನಿನ್ನೆ ನ್ಯಾಯಾಲಯ ಇನ್ನೂ ಒಂದು ಹೆಜ್ಜೆ ಮುಂದು ಹೋಗಿದೆ .. ನ್ಯಾಯಾಲಯದ ಭಾರತೀಯ ಕ್ರಿಮಿನಲ್ ಪ್ರೊಸೀಜರ್ ಕೋಡ್ ಕೊಡ ಮಾಡಿರುವ ವಿಶೇಷ ಅಧಿಕಾರ ಉಪಯೋಗಿಸಿಕೊಂಡು ನೇರವಾಗಿ ಮೇಲಿನ ಮೂರು ವ್ಯಕ್ತಿಗಳೂ ಸೇರಿ , ಭಾರತ ಸರ್ಕಾರಕ್ಕೆ ಹೊಂದಿ ಕೊಂಡಿರುವ ಸಂಸ್ಥೆಯೊಂದರ ಮುಖ್ಯಸ್ಥ ಶ್ರೀ ಕೃಷ್ಣ ಶಾಸ್ತ್ರೀ , ಶ್ರೀ ಗಂಗಾಧರ ಶಾಸ್ತ್ರೀ ,ಶ್ರೀ ಬಿ ಟಿ ವೆಂಕಟೇಶ್ ಹಾಗು ಶ್ರೀ ಪದ್ಮನಾಭ ಶರ್ಮ ಎಂಬುವರ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಆದೇಶ ಮಾಡಿದೆ ..
ಅಂದ ಹಾಗೆ , ನ್ಯಾಯಾಲಯ ಈ ವ್ಯಕ್ತಿಗಳ ಮೇಲೆ ಹಾಕಲು ಹೇಳಿದ ಮೊದಲ ಸೆಕ್ಷನ್ IPC 120 (B) – ಈ ಸೆಕ್ಷನ್ ಮುಖ್ಯವಾಗಿ ಬಳಸುವುದು ಗುಂಪಾಗಿ ಷಡ್ಯಂತ್ರ ಮಾಡುತ್ತಾರಲ್ಲ ಅವರ ಮೇಲೆ .. ಅಂದರೆ ಈ ಮೇಲಿನ ಸೆಕ್ಷನ್ ನ್ನು ಇತರ ಸೆಕ್ಷನ್ ಜೊತೆ ನೋಡಿದಾಗ ನ್ಯಾಯಾಲಯದ ಅಭಿಪ್ರಾಯದಲ್ಲಿ ಮೇಲಿನ ಆರು ವ್ಯಕ್ತಿಗಳು ಸೇರಿ ತಮ್ಮ ಕ್ರಿಮಿನಲ್ ಒಳಸಂಚು ಹಾಗೂ ಷಡ್ಯಂತ್ರದ ಮೂಲಕ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳನ್ನು ಸುಳ್ಳಾಗಿ ಕ್ರಿಮಿನಲ್ ಆರೋಪ (ಅತ್ಯಾಚಾರ ಆರೋಪ) ಮಾಡುವ ಬೆದರಿಕೆ ಮಾಡಿ , ಹಣವನ್ನು ಸೆಳೆಯಲು ಹಾಗೂ ಸಮಾಜವನ್ನು ಪ್ರಚೋದಿಸಲು ಪ್ರಯತ್ನ ಮಾಡಿದ್ದಾರೆ ಎಂಬ ಆರೋಪ ಯೋಗ್ಯವಾಗಿದೆ ಮತ್ತು ಅದಕ್ಕೆ ತಕ್ಕ ವಿಚಾರಣೆ ಆಗಬೇಕು .. ಇದೇ ಅಲ್ಲವೇ ನಾವೆಲ್ಲರೂ ವರ್ಷಗಳ ಕಾಲ ಹೇಳಿದ್ದು ..ಈಗ ನ್ಯಾಯಾಲಯ ಹೇಳುತ್ತಿರುವುದು ..
ನ್ಯಾಯಾಲಯದ ವಿಚಾರಣೆ ಸರಿ ದಿಕ್ಕಿನಲ್ಲಿ ಸಾಗಲಿ , ಧರ್ಮ , ಸತ್ಯ ಮತ್ತು ಉಳಿಯಲಿ ಎಂಬುದು ನಮ್ಮ ಹಾರೈಕೆ .. ಮತ್ತು ಶ್ರೀ ಪೀಠ ಹಾಗೂ ಶ್ರೀ ಪೀಠದ ಆರಾಧ್ಯ ದೈವದ ಅನುಗ್ರಹದಿಂದ ಹಾಗೆ ಆಗುತ್ತದೆ ಎಂಬುದು ನಮ್ಮ ನಂಬಿಕೆ ಕೂಡ ..
ನಮಸ್ಕಾರಗಳೊಂದಿಗೆ
ಪ್ರಸನ್ನ ಎಂ ಮಾವಿನಕುಳಿ
✍️ Prasanna Mavinakuli
9945134485