ಕರ್ನಾಟಕಕ್ಕೆ ಬಂದೆನು ಹೊಸದೇನಲ್ಲ ಹಲವಾರು ವರ್ಷಗಳಿಂದ ಈ ರೀತಿಯ ಹಲವಾರು ಬಂದ್ ಗಳನ್ನು ಕರ್ನಾಟಕ ರಾಜ್ಯ ಕಂಡಿದೆ .
ಭಾರತವೇ ಇರಲಿ ಕರ್ನಾಟಕವೇ ಇರಲಿ ಬಂದ್ ಎನ್ನುವುದು ಶಾಶ್ವತ ಪರಿಹಾರವೂ ಅಲ್ಲ ಅಂತಿಮ ನಿರ್ಧಾರವೂ ಅಲ್ಲ . ಹಲವಾರು ಬಂದ್ಗಳನ್ನು ಭಾರತವಷ್ಟೇ ಅನುಭವಿಸುತ್ತಿಲ್ಲ ಇಂತಹ ಸಮಸ್ಯೆಯನ್ನು ಇಡೀ ಪ್ರಪಂಚವೇ ಅನುಭವಿಸುತ್ತಿದೆ.
ಇದಕ್ಕೇ ಉದಾಹರಣೆ ಎಂದರೆ ಉ. ಕೊರಿಯಾ ಎನ್ನಬಹುದು ಮತ್ತೊಂದೆಡೆ ಬೃಹತ್ ರೀತಿಯಲ್ಲಿ ಆಕ್ರಮಣ ಮಾಡುತ್ತಿರುವ AI (artificial intelligence)ಅಥವಾ ರೊಬೊಟಿಕ್ ತಂತ್ರಜ್ಞಾನ ಇದು ಹಲವಾರು ಉದ್ಯೋಗಗಳನ್ನು ಕಸಿದುಕೊಳ್ಳುತ್ತಿದೆ ಹಾಗೂ ಅನ್ನವನ್ನು ಕಸಿದು ಕೊಳ್ಳುತ್ತಿದೆ.
ಹಲವಾರು ಸಮಸ್ಯೆಗಳು ಬಂದ್ ಒಂದೇ ಪರಿಹಾರವಲ್ಲಾ ಉದಾಹರಣೆಗೆ ಮಹಧಾಯೀ ,ಮಹಾರಾಷ್ಟ್ರ ಗಡಿ ವಿಚಾರ ಇನ್ನೂ ಕೆಲವು.
ಬಂದ್ ಎಂದರೇ ಅದು ಇಡೀ ರಾಜ್ಯವನ್ನೇ ಬಂದ್ ಮಾಡಿ ಏಕೆ ಪ್ರತಿಭಟಿಸಬೇಕು?? ಅಥವಾ ಹಲವಾರು ಆಸ್ತಿ ಪಾಸ್ತಿಗಳನ್ನು ಏಕೆ ಹಾಳು ಮಾಡಬೇಕು ??
ಹಲವಾರು ವಿಚಾರದಲ್ಲಿ ಬಂದ್ ಮಾಡದೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅದಕ್ಕೆ ಹಲವಾರು ಮಾರ್ಗಗಳಿವೆ.
1◆ನ್ಯಾಯಾಲಯಗಳಿವೆ.
2◆ರಾಜ್ಯ ಅಥವಾ ಕೆ0ದ್ರದ ಮಧ್ಯಸ್ಥಿಕೆ ವಹಿಸಬಹುದು
3◆ಒಂದು ರಾಜ್ಯದ ಮತ್ತು ಮತ್ತೊಂದು ರಾಜ್ಯದ ಎಲ್ಲಾ ಮತ್ರಿಗಳು ಸೇರಿ ಸರ್ವ ಪಕ್ಷ ನಿರ್ದಾರ ಮಾಡಬಹುದು
4◆ಭಾರತದಂತಹ ದೇಶದಲ್ಲಿ ಹಲವಾರು ನಟರು ಅಥವ ನಟಿಯರು ಒಂದು ರಾಜ್ಯ ಹಾಗು ಇನ್ನೊಂದು ರಾಜ್ಯದ ನಟ ನಟಿಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಅವರ ಮುಖಾ0ತರ ಮನವೊಲಿಸಬಹುದು
5◆ ಇನ್ನು ಹಲವಾರು ಮಾಧ್ಯಮ ಮಿತ್ರರು ಹಲವಾರು ರಾಜ್ಯದವರ ಜೊತೆ ಮಿತ್ರರಾಗಿದ್ದಾರೆ ಅವರೆಲ್ಲರ ಜೊತೆ ಕೂತು ಮಾತನಾಡಬಹುದು
ಇಷ್ಟೆಲ್ಲಾ ಬಿಟ್ಟು ಕೇಂದ್ರ ನಾಯಕರು ಎಲೆಕ್ಷನ್ ಪ್ರಚಾರ ಮಾಡುವುದಕ್ಕೆ ಬರುವ ಹಾಗೆ ಒಂದೊಂದು ರಾಜ್ಯದ ಸಮಸ್ಯೆಗಳನ್ನು ಬಗೆಹರಿಸಿ ಬಂದರೇ ಒಳ್ಳೆಯದೇನೋ.
ಇಷ್ಟೆಲ್ಲಾ ಆದ ಮೇಲೂ ಅಂತಿಮ ಅಸ್ತ್ರವಾಗಿರುವುದು ಒಂದೇ ಅದು ಬಂದ್ .
ಒಂದು ಬಂದ್ ನಿಂದ ಅಂತಿಮವಾಗಿ ಸಿಗುವುದು ಏನು?? ಕೇವಲ ಹೋರಾಟಗಾರರ ಮತ್ತು ಅದರ ಮುಂದಾಳತ್ವವಹಿಸಿದ ಮುಖಂಡರ ಅಪ್ರತಿಮ ಪ್ರಚಾರ .
ಆದರ ಹಿಂದೆ ನಿಂತ ಸಾವಿರಾರು ಜನರು ಅವರ ಮೇಲೆ ಹಾಕಿದ ಕೇಸ್ ಇಷ್ಟೆಲ್ಲಾ ಮಾಡಿದ ಆ ಸಾವಿರಾರು ಜನರ ಪರಿಶ್ರಮವೆನು ಕೇವಲ ಮುಖಂಡರ ಫೋಟೋ ಅಥವಾ ಅವರ ಬೃಹದಾಕಾರದ ಚಿತ್ರಗಳು .
ಅವರಿಗಾಗಿ ಅದೆಷ್ಟೋ ಮಂದಿ ತಮ್ಮ ಕೆಲಸಗಳನ್ನು ಬಿಟ್ಟು ತಮ್ಮ ದಿನದ ಅನ್ನಕ್ಕಾಗಿ ದುಡಿದ ಜನರ ಹಾಗು ದುಡಿಯುತ್ತಿರುವ ಜನರ ಹೊಟ್ಟೆಯ ಮೇಲೆ ಹೊಡೆದ0ತಲ್ಲವೆ ಅವರಿಗೇ ಯಾರು ಅವರ ದಿನದ ಸಂಬಳ ಕೊಡುವವರು ??
ಅದೇನೇ ಇರಲಿ ಒಂದು ದಿನದ ಬಂದ್ ಗೆ ಸಾರಿಗೆ ನಿಲ್ಲುತ್ತದೆ .ಶಾಲಾ ಕಾಲೇಜುಗಳಿಗೆ ರಜೆ, ಸರ್ಕಾರಿ ಕಚೇರಿಗಳು ನಿಲ್ಲುತ್ತವೆ ,ಇನ್ನೂ ಹಲವು ಬಂದ್ ಆಗುತ್ತದೆ ಇದು ಒಂದುತರಹದ ಸರಪಳಿಯ ಹಾಗೇ ಒಂದಕ್ಕೊಂದು ಜಾಯಿಂಟ್ ಆಗಿರುತ್ತದೆ .
ಇಷ್ಟೆಲ್ಲಾ ಆದ ಮೇಲೆ ಆದರ ಒಂದು ದಿನದ ಬಂದ್ ನಿ0ದಾಗಿ ಆಗುವ ನಷ್ಟ ಅದು ಎಷ್ಟು ಲೆಕ್ಕ ಹಾಕಿದರು ಸರಿಯಾಗಿ ಅಂದಾಜಿಸಲು ಸಾದ್ಯವಿಲ್ಲ.
ನಷ್ಟದ ಪರಿಹಾರವನ್ನು ಬಂದ್ ಗೇ ಕರೆ ಕೊಟ್ಟವರು ತುಂಬಬೇಕಾ?? ಎನ್ನುವ ಒಂದು ಸಮೀಕ್ಷೆ ಯ ಪ್ರಕಾರ 90% ಜನ ಹೌದು ಎಂದಿದ್ದಾರೆ.
ಬಂದ್ ಅನ್ನು ನಡೆಸುವುದರ ನಷ್ಟವನ್ನು ಬಂದ್ ಅನ್ನು ಮಾಡಲು ಕರೆಕೊಟ್ಟರು ಕಟ್ಟಬೇಕು ನಿಜ ಆದರೇ ಅದಕ್ಕೆ ಸಹಕರಿಸಿದ ಹಲವಾರು ರಾಜಕೀಯ ಪಕ್ಷ ಗಳಿಗೆಕೇ ಈ ನಿಯಮ ಸಂಬಂದ ಪಡುವುದಿಲ್ಲ ??ಹಾಗು ನಷ್ಟದ ಹಣವನ್ನು ಮುಂದೊಂದು ದಿನ ಹೋರಾಟಗಾರರು ಕಟ್ಟಿದರೆ ಆ ಹಣ ಕೇವಲ ಆಸ್ತಿ ಪಾಸ್ತಿ ನಷ್ಟವಾದ ಕಡೆಗೆ ಮಾತ್ರ ಹೋಗುತ್ತದೆ .ಆದರೇ ಸಣ್ಣ ವ್ಯಾಪಾರಿಗಳು ಬೀದಿ ಬದಿಯ ದಿನದ ಅನ್ನಕ್ಕಾಗಿ ವ್ಯಾಪಾರ ಮಾಡುವವರಿಗೆ ಈ ಹಣವೇಕೆ ಸಂದಾಯ ಮಾಡಬಾರದು . ಅವರು ಮನುಷ್ಯರಲ್ಲವೆ ಅಥವ ಅವರೇಕೆ ಇವರಿಗಾಗೋ ಅಥವಾ ಇನ್ನಾರಿಗೋ ತಮ್ಮ ದಿನದ ಹೊಟ್ಟೇಯನ್ನೇಕೇ ಬಡವ ಮಾಡಿಕೊಳ್ಳ ಬೇಕು ಹಾಗು ತಾವೆಕೇ ಹಸಿವಿನಿಂದ ನೀರು ಕುಡಿದು ಅನಾಥ ಬಾವನೇಯಿಂದ ರಾತ್ರಿ ಮಲಗಬೇಕು ನೀವೇ ಹೇಳಿ??
ಇಂತಹ ಬಂದ್ ಗಳು ಕರ್ನಾಟಕಕ್ಕೆ ನ್ಯಾಯವೇ ??ನೀವೇ ಹೇಳಿ??
✍✍ಕೃಷ್ಣ ಭಟ್