ಅಕ್ಷರರೂಪ- ಶ್ರೀಮತಿ ಪ್ರಭಾ ಮತ್ತು ವೆಂಕಟ್ರಮಣ ಭಟ್ಟ ಪುಣೆ.

ಭವಸಮುದ್ರದಲ್ಲಿ ನಮ್ಮ ಅತ್ಯುಚ್ಚ ಧ್ಯೇಯದ ಮೇಲಿನ ದೃಷ್ಟಿ ತುಸುವೂ ಅತ್ತಿತ್ತ ಸರಿಯದಂತೆ ನಮ್ಮ ಶರೀರ ನಡೆಯಬೇಕು.
(ಇಸವಿ ಸನ ೧೯೪೮ರಲ್ಲಿ ಶ್ರೀ ಭಾಸ್ಕರ ಬುವಾ ರಾಮದಾಸಿ, ಸಜ್ಜನಗಡರವರಿಗೆ ಬರೆದ ಇನ್ನೊಂದು ಪತ್ರ)

||ಶ್ರೀರಾಮ ಸಮರ್ಥ||
ಚಿ. ಭಾಸ್ಕರನಿಗೆ ಆಶೀರ್ವಾದ,
ಉತ್ತಮರದೆಲ್ಲವೂ ಸರ್ವೋತ್ಕೃಷ್ಟವಿರುತ್ತದೆ. ಯಾರ ಆಚರಣೆಯಲ್ಲಿ ಹುಡುಕಿ ನೋಡಿದರೂ ಬೆರಳಿಡುವಷ್ಟೂ ಕೂಡ ಕುಂದು ಕಾಣಿಸುವದಿಲ್ಲವೋ ಆತನೇ ದಕ್ಷ.
‘ಜಾಗರೂಕತೆ, ಸಾಕ್ಷೀಭಾವ ದೃಷ್ಟಿ ಮತ್ತು ದಕ್ಷತೆ| ಆಗ ಅವನ ಮೋಕ್ಷ ತಕ್ಷಣ||
ಧ್ರುವತಾರೆಯನ್ನು ನೋಡಿ ಹೇಗೆ ನಾವಿಕ ತನ್ನ ನಾವೆಯನ್ನು ನಡೆಸುತ್ತಾನೋ ಅದೇ ರೀತಿ ಭವಸಮುದ್ರದಲ್ಲಿ ನಮ್ಮ ಅತ್ಯುಚ್ಚ ಧ್ಯೇಯದ ಮೇಲಿನ ದೃಷ್ಟಿ ತುಸುವೂ ಅತ್ತಿತ್ತ ಸರಿಯದಂತೆ ನಮ್ಮ ಶರೀರ ನಡೆಯಬೇಕು. ಇರಲಿ.
‘ಸದ್ಗುರುರೂಪದಲ್ಲಿ ಅನನ್ಯತೆ| ಹಾಗಿದ್ದಾಗ ನಿನಗೇತರ ಚಿಂತೆ||
ಎಲ್ಲರಿಗೂ ಆಶೀರ್ವಾದ.
ಶ್ರೀಧರ

ನನ್ನ ಚಿಂತನವನ್ನು ಅನನ್ಯವಾಗಿ ಮಾಡುತ್ತ ಯಾರು ನನ್ನ ನಿಷ್ಕಾಮ ಉಪಾಸನೆಯನ್ನು ಮಾಡುತ್ತಾರೋ, ಆ ನಿರಂತರ ನನ್ನಲ್ಲೇ ಏಕೈಕ ಭಾವದಿಂದಿರುವರ ಯೋಗಕ್ಷೇಮವನ್ನು ನಾನೇ ನೋಡಿಕೊಳ್ಳುತ್ತೇನೆ …
‘ಅನನ್ಯಾಶ್ಚಿಂತಯಂತೋಮಾ ಯೇ ಜನಾಃ ಪರ್ಯುಪಾಸತೇ|
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಂ||’ – ಭಗವದ್ಗೀತಾ
(ಶ್ರೀ ಗೋವಿಂದ ವೈಜಾಪುರಕರ, ವಾರಣಾಸಿಯವರಿಗೆ ಬರೆದ ಪತ್ರ)
||ಶ್ರೀರಾಮ ಸಮರ್ಥ||

RELATED ARTICLES  ಸದಾ ಸ್ಮರಿಸು ಅವನ

ಚಿ. ಗೋವಿಂದ ನರಹರಿ ವೈಜಾಪುರಕರನಿಗೆ ಆಶೀರ್ವಾದ,
ಮಗಾ! ಬಹಳೇ ದಿನಗಳಾದವು. ನಿನಗೆ ಪತ್ರ ಬರೆಯಲು ಆಗಲೇ ಇಲ್ಲ. ಇಂದು ಬೆಳಿಗ್ಗೆ ಬೇರೆ ಯಾವುದೇ ಕೆಲಸವಿಲ್ಲದ್ದರಿಂದ ಪತ್ರ ಬರೆಯಲು ಸಮಯ ಸಿಕ್ಕಿತು. ಸಂದೇಶ ಕಳಿಸಿ ಎಷ್ಟೋ ದಿನಗಳಾದವು. ಇನ್ನೂ ಭಾಷಾಂತರ ಆಗಿಲ್ಲವೆಂದು ಕೇಳಲಿಕ್ಕೆ ಬಂತು. ನಿನ್ನ ಕುಟುಂಬದವರೇ ಒಬ್ಬರು ತೀರಿಕೊಂಡಿದ್ದರಿಂದ ನಿನಗೆ ಚಿತ್ತಸ್ವಾಸ್ಥ್ಯವಿಲ್ಲ ಮತ್ತು ಚಿತ್ತಸ್ವಾಸ್ಥ್ಯವಿಲ್ಲದ್ದರಿಂದ ಲೇಖನಕಾರ್ಯವಾಗಲಿಲ್ಲ ಎಂದು ತಿಳಿಸಿದರು. ನಿನ್ನ ಕುಟುಂಬದ ವ್ಯಕ್ತಿ ತೀರಿಕೊಂಡಿದ್ದರಿಂದ ನಿನಗಾದಂತೆ ನನಗೂ ದುಃಖವಾಗುವದು ಸ್ವಾಭಾವಿಕವೇ.
ಇದು ಮೃತ್ಯುಲೋಕ. ಇಲ್ಲಿ ಯಾರ ಆಯುಷ್ಯ ಮುಗಿಯುತ್ತದೆಯೋ ಅವನು ದೇಹ ಬಿಟ್ಟು ಹೋಗುತ್ತಾನೆ. ಹೀಗಿರುವಾಗ ಮರಣಹೊಂದಿದವನ ವಿಚಾರ ಪುನಃ ಪುನಃ ಮನಸ್ಸಿನಲ್ಲಿ ತಂದು ಹೃದ್ರೋಗ ಹಚ್ಚಿಕೊಳ್ಳುವದರಲ್ಲಿ ಏನು ಅರ್ಥವಿದೆ?

RELATED ARTICLES  ಸರಕಾರದ ಸಾಲ ಮನ್ನಾ ಹೇಗೆ? ಏನು?

‘ಗತಂ ನಶೋಚ್ಯಮ್’ ಹೀಗೊಂದು ಶಿಷ್ಠರ ವಚನವಿದೆ. ಹೋದವರ ಬಗ್ಗೆ ಶೋಕವೇಕೆ ಮಾಡಬೇಕು? ದುಃಖಪಟ್ಟರೆ ಮರಣಹೊಂದಿದವನು ತಿರುಗಿ ಬರುವನೇ?
‘ಅವ್ಯಕ್ತೋಯಮಚಿಂತ್ಯೋಯಮವಿಕಾರ್ಯೋಯಮುಚ್ಯತೇ| ತಸ್ಮಾದೇವಂ ವಿದಿತ್ವೈನಂ ನಾನುಶೋಚಿತುರ್ಮೈಹಸಿ||’
‘ಅವಿನಾಶಿ ತು ತದ್ವಿದ್ಧಿ ಯೇನ ಸರ್ವಮಿದಂ ತತಮ್| ವಿನಾಶಮವ್ಯದಸ್ಥಾಸ್ಯ ನ ಕಶ್ಚಿತ್ಕರ್ತುಮರ್ಹತಿ||’
ಈ ಶ್ಲೋಕದೊಂದಿಗೇ ಇಲ್ಲಿ ಈ ಪ್ರಸಂಗದಲ್ಲಿ ಮತ್ತೊಂದು ಶ್ಲೋಕ ಬರೆಯಬೇಕೆಂದೆನಿಸುತ್ತಿದೆ.

‘ಮತ್ಕರ್ಮಕೃನ್ ಮತ್ಪರಮೋಮದ್ ಭಕ್ತಃ ಸಂಗವರ್ಜಿತಃ| ನಿರ್ವೈರಃ ಸರ್ವಭೂತೇಷು ಯಃ ಸ ಮಾಮೇತಿ ಪಾಂಡವ||’
ಈ ಶ್ಲೋಕಗಳ ವಿಚಾರ ಮಾಡು ಮತ್ತು ಕಾರ್ಯತತ್ಪರತೆಯ ಮೂಲಕ್ಕೆ ಹಿಂದಿರುಗು. ನನ್ನ ಭಕ್ತರು ಇಷ್ಟು ದುರ್ಬಲ ಮನಸ್ಸಿನವರಿರಬಹುದೆಂದು ನನಗೆ ಅನಿಸುವದಿಲ್ಲ.
‘ಸದ್ಗುರುವಿನಲ್ಲಿ ಅನನ್ಯತೆ| ಇರುವಾಗ ನಿನಗೇತರ ಚಿಂತೆ| ಬೇರೆಂಬ ಭಾವ| ಇರುವದೇ ಬೇಡ||’
ಮನಸ್ಸನ್ನು ಏಕಾಗ್ರ ಮಾಡಿ ಕರ್ತವ್ಯದಕ್ಷನಾಗು. ಸೇವೆಗಾಗಿ ಪ್ರಾಣ ಪಣಕಿಟ್ಟವರ ಚಿಂತೆ ಆ ದೇವರೇ ನೋಡಿಕೊಳ್ಳುತ್ತಾನೆ. ಅವನಿಗೆ ಅವನ ಬಗ್ಗೆ ಚಿಂತೆ ಮಾಡಬೇಕಾಗುವದಿಲ್ಲ.
‘ಅನನ್ಯಾಶ್ಚಿಂತಯಂತೋಮಾ ಯೇ ಜನಾಃ ಪರ್ಯುಪಾಸತೇ|
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಂ||’
ಇತಿ ಶಮ್
ಶ್ರೀಧರ