ravi soori

ಹಣದ ಹಿಂದೆ ನಾಗಾಲೋಟದಲ್ಲಿ ಸಾಗುತ್ತಿರುವ ವ್ಯವಸ್ಥೆಯಲ್ಲಿ ನಾವಿದ್ದೇವೆ. ಹಣ ಸಂಪಾದನೆಗಾಗಿ ಯಾವ ಮಟ್ಟಕ್ಕಾದರೂ ಇಳಿಯಬಲ್ಲ ಮನಃಸ್ಥಿತಿಯ ಜನರೊಂದಿಗೆ ನಾವು ಬದುಕುತ್ತಿದ್ದೇವೆ. ಅವರಂತೆ ನಾವಾಗುತ್ತಿದ್ದೇವೆ. ಆದರೆ “ಸಂಪಾದನೆ ದೊಡ್ಡದಲ್ಲ ಸದ್ವಿನಿಯೋಗ ದೊಡ್ಡದು” ಎಂಬ ಸತ್ಯವನ್ನು ನಾವು ಮರೆತಿದ್ದೇವೆ. ಉಂಡುಬರುವ ತೃಪ್ತಿ ದೊಡ್ಡದು. ಉಣಿಸಿ ಬರುವ ತೃಪ್ತಿ ಇನ್ನೂ ದೊಡ್ಡದು ಎಂಬುದನ್ನು ಅರಿತಾಗ ನಮಗೆ ಸಂಪಾದನೆಗಿಂತ ಸದ್ವಿನಿಯೋಗ ದೊಡ್ಡದು ಎಂದು ತಿಳಿದು ಬರುತ್ತದೆ. ನಾವು ದೊಡ್ಡ ಮನಸ್ಸನ್ನು ಹೊಂದಬೇಕು. ಸಣ್ಣವರು ದೊಡ್ಡವರಾಗಿ ಕಂಡರೆ ಅದು ದೊಡ್ಡ ಮನಸ್ಸು. ಯಾರಿಗೆ ಸಣ್ಣವರು ಕಾಣುತ್ತಾರೋ ಅವರೇ ದೊಡ್ಡವರು.

RELATED ARTICLES  ಕಳೆದುಹೋದ ಎಳೆಯ ದಿನಗಳು ( ಭಾಗ೨)

ನಾವು ಈ ಭೂಮಿಗೆ ಬರುವಾಗ ಏನನ್ನು ತಂದಿಲ್ಲ. ಹೋಗುವಾಗ ಏನನ್ನು ತೆಗೆದುಕೊಂಡು ಹೋಗುವುದಿಲ್ಲ. ತನ್ಮಧ್ಯದಲ್ಲಿ ಗಳಿಕೆಗಾಗಿ ಉಳಿಕೆಗಾಗಿ ನಾವು ಹೋರಾಡುತ್ತೇವೆ. ಗಳಿಸಿದ್ದೆಲ್ಲ ನಮ್ಮದೇ ಎಂದು ಬೀಗುತ್ತೇವೆ. ಈ ಜೀವ ಶಾಶ್ವತವೆಂಬಂತೆ ವರ್ತಿಸುತ್ತೇವೆ. ದಾನ- ಧರ್ಮಗಳಿಗೆ ಖರ್ಚು ಮಾಡದೇ ಕೂಡಿಡುತ್ತೇವೆ. ಕೊನೆಗೊಂದು ದಿನ ಮಣ್ಣಲ್ಲಿ ಮಣ್ಣಾಗಿ ಹೋಗುತ್ತೇವೆ.

RELATED ARTICLES  ಚಿಂತನ - ಮಂಥನ 5- ಪೂಜೆ ಹೀಗಿರಲಿ…..

ಎಲ್ಲವೂ ದೇವನದೇ ನಾವೆಲ್ಲಾ ಬಾಡಿಗೆ ಮನೆಯಲ್ಲಿದ್ದೇವೆ. ಆದರೆ ನಮ್ಮದೆಂಬಂತೆ ವರ್ತಿಸುತ್ತೇವೆ. ಎಲ್ಲರೂ ಬೇಡುವವರೇ-ಅವನೊಬ್ಬನೇ ನೀಡುವವನು ಎಂಬುದನ್ನು ಅರಿತಾಗ ಸದ್ವಿನಿಯೋಗಕ್ಕೆ ಮನ ಒಪ್ಪಬಹುದು. ಸದ್ಗತಿ ನಮಗೆ ದೊರಕಬಹುದು.