ನಾವು ಯೋಗ್ಯಮಾರ್ಗದಲ್ಲಿ ನಡೆಯುತ್ತಿರುವಾಗ ಲೋಕಾಪವಾದ ಬಂದರೆ ಅದು ಭೂಷಣಾಸ್ಪದವೇ ಎಂದೆನ್ನಬೇಕು. ಅದಕ್ಕೆ ಏನೂ ಹೆದರುವ ಕಾರಣವಿಲ್ಲ. ಪರಮಾರ್ಥಕ್ಕೆ ಅದು ಸಾಧಕವೇ ಇರುತ್ತದೆ.

(ಶ್ರೀ.ದಿನಕರ ಬುವಾ ಸಜ್ಜನಗಡ ಅವರಿಗೆ ಬರೆದ ಪತ್ರ)

||ಶ್ರೀರಾಮ ಸಮರ್ಥ||

ಮಂಗಳೂರು
ಮಾಘ ವದ್ಯ ೫
ಚಿ. ದಿನಕರನಿಗೆ ಆಶೀರ್ವಾದ,

ಇದಕ್ಕೂ ಮೊದಲು ಎರಡು ಪತ್ರ ಕಳಿಸಿದ್ದೆ. ಆದರೆ ಅದಕ್ಕೆ ಉತ್ತರ ಬರಲಿಲ್ಲ. ಆ ಆ ಕಾಲದ ಕೆಲಸ ಆ ಆ ವೇಳೆಗೇ ಆಗಬೇಕು. ಅದರಲ್ಲಿ ಕಾಲ ತಳ್ಳುವದು ಅನರ್ಥಕಾರಿಯಾಗುತ್ತದೆ. ಚಿ.ಗಂಗಕ್ಕ ಮೊದಲಾದವರು ಇಲ್ಲಿ ಬರುವದು ಏನು ನಿಶ್ಚಯವಾಯಿತು? ಅಲ್ಲಿ ಇನ್ನೂ ಏನಾದರೂ ವಿಶೇಷವಿದ್ದರೆ ಬರೆಯಲಿಕ್ಕೆ ಸಂಕೋಚ ಮಾಡಬಾರದು.
‘ಆನೆ ನಡೆದಿದೆ ತನ್ನ ನಡಿಗೆಯಲಿ| ಬೀದಿ ನಾಯಿ ಬೊಗಳುತಿದೆ ಸುಮ್ಮನೆ|

‘ನೀನೋ ರಾಮಸ್ಮರಣೆಯಲೆ ಜಗ ವಶಗೈವೆ|’
‘ಲೋಕ ತೈಸಾ ಓಕ| ಧರಿತಾ ಧರವೇನಾ|’
‘ಲೋಕವ್ಯಾಪಾರ ಬಿಟ್ಟು ಭಕ್ತಿಯಲ್ಲೇ ಇರು’
ನಾವು ನಮ್ಮ ಆಚರಣೆ ಈ ರೀತಿ ಯೋಗ್ಯ ಮಾರ್ಗದಲ್ಲಿಟ್ಟಿರಬೇಕು. ಜನರೇನೆಂಬುವದನ್ನು ಲಕ್ಷಿಸಬಾರದು.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

‘ಸತ್ಯಮೇವ ಜಯತೇ ನಾನೃತಂ’
ಇಂದಲ್ಲ ನಾಳೆ ಸತ್ಯ ಹೊರಬಂದೇ ಬರುತ್ತದೆ.
‘ಲೋಕಾಂಚೀ ಲೋಕಾಂಸ ಲಾಜವೀ ವೃತ್ತಿ| ತೆವ್ಹಾ ಯೋಗೇಶ್ವರ|’
ನಮ್ಮ ಆಚರಣೆಯಲ್ಲಿ ಮಾತ್ರ ಯಾವುದೇ ಪ್ರಕಾರದ ಸಡಿಲು ಇರಬಾರದು.
‘ಎಲ್ಲ ವಿಷಯದಲ್ಲೂ ಎಚ್ಚರಿಕೆಯಿಂದಿರಬೇಕು.’
ನಾವು ಯೋಗ್ಯಮಾರ್ಗದಲ್ಲಿ ನಡೆಯುತ್ತಿರುವಾಗ ಲೋಕಾಪವಾದ ಬಂದರೆ ಅದು ಭೂಷಣಾಸ್ಪದವೇ ಎಂದೆನ್ನಬೇಕು. ಅದಕ್ಕೆ ಏನೂ ಹೆದರುವ ಕಾರಣವಿಲ್ಲ. ಪರಮಾರ್ಥಕ್ಕೆ ಅದು ಸಾಧಕವೇ ಇರುತ್ತದೆ.

ಆದರೆ ಬೇಕೆಂತಲೇ ಜನರನ್ನು ರೊಚ್ಚಿಗೆಬ್ಬಿಸಲು ಏನೂ ಮಾಡಬಾರದು. ಲೋಕನಿಂದೆಗೆ ಪಾತ್ರರಾಗುವದೇ ಪರಮಾರ್ಥದ ಉದ್ದಿಷ್ಟವಿರಬಾರದು ಎಂಬುದೂ ಅಷ್ಟೇ ಸತ್ಯ.
‘ಅತಿ ಸರ್ವತ್ರ ವರ್ಜಯೇತ್’
‘ಮುಚ್ಚಿ ಹಿಡಿದ ಮುಷ್ಟಿ ಒಂದೂಕಾಲು ಲಕ್ಷದ್ದು’
ಪರಮಾರ್ಥ ಬಾಹ್ಯ ಕೈಕರಣವಾಗಬಾರದು. ಅದು ಅಂತರಂಗ ಸಾಧನೆ. ಆ ಸಾಧನೆ ನಮ್ಮ ಸ್ವಂತದ ಉದ್ಧಾರಕ್ಕಾಗಿಯೇ ಇರಬೇಕು.
‘ಕೃಪಣಾಸೀ ಲಾಗಲೀ ಠೇವ| ತಯಾಪರೀ|’
‘ಹೊರ ಪ್ರಪಂಚ ನೋಡಿ ನಡೆ| ಆದರೆ ಅಂತರಂಗದಿ ಚಿರಸತ್ಯದಲೆ ತಾದಾತ್ಮ್ಯದಿಂದಿರು| ಕುಂದಿರದರಲಿ| ಯಾವುದೋ ಒಂದೂ ವಿಷಯದಲ್ಲೂ||’
‘ಪ್ರಸಂಗ ನೋಡಿ ಮಾಡು| ಎಲ್ಲವನ್ನೂ||’
‘ಬಹು ಜನರೊಡನೆ ತನ್ನದೇ ಹಟ| ಅಲ್ಲಿ ಒಡಕು ಹುಟ್ಟುವದು ದಿಟ||’
‘ಚಿಕ್ಕ ಮಕ್ಕಳ ನಡೆತ ನಡೆ||’
‘ಯದ್ಯಪಿ ಶುದ್ಧಂ ಲೋಕವಿರುದ್ಧಂ| ನಾ ಕರಣೀಯಂ ನಾ ಚರಣೀಯಮ್||’
‘ಮೊದಲು ಅಂತರಂಗವ ರಕ್ಷಿಸಿಕೊಂಡು ಮಾಡು| ಉಳಿದೆಲ್ಲ||’
‘ಯಾವುದು ಬಹುಜನರಿಗೆ ಮಾನ್ಯವೋ| ಅದು ಅಲ್ಪವೆಂದೆನ್ನದಿರು||’
‘ನ ಬುದ್ಧಿಭೇದ ಜನಯೇದಜ್ಞಾನಾಂ ಕರ್ಮಸಾಂಗಿನಾಮ್| ಜೋಷಯೇತ್ಸರ್ವಕರ್ಮಾಣಿ ವಿದ್ಯಾನ್ಯುಕ್ತಃ ಸಮಾಚರನ್||’
ಉದಾತ್ತ ತತ್ವ ಹೃದಯದಲ್ಲಿ ಧರಿಸಿ ನಡೆದರೆ ಅದು ಲೋಕವಾಸನೆಯಾಗುವದಿಲ್ಲ. ಎಲ್ಲರ ಮೇಲೆ ನನ್ನ ಪ್ರೇಮ ಆತ್ಮದೃಷ್ಟಿಯಿಂದಲೇ ಇರುತ್ತದೆ.

RELATED ARTICLES  ದಿನದ ದೀವಿಗೆ

ಒಂದು ಗಣಹೋಮ ಆಗಬೇಕು. ಬಹಳಷ್ಟು ವಿಘ್ನಗಳು ಯಾಕೆಂದು ಅರ್ಥವಾಗುತ್ತಿಲ್ಲ.

‘ಶ್ರೇಯಾಣಿ ಬಹು ವಿಘ್ನಾಣಿ’ ಈ ಮಾತು ಸರ್ವ ಪ್ರಸಿದ್ಧವಿದೆ. ವಿಘ್ನಹಾರಕನ ಸಹಾಯದಿಂದಾದರೂ ಈ ಎಲ್ಲ ವಿಘ್ನಗಳು ನಷ್ಟವಾಗುತ್ತದೋ ನೋಡೋಣ. ಆಡಂಬರ ಬೇಡ. ಸ್ವಲ್ಪದರಲ್ಲೇ ಶಾಸ್ತ್ರೋಕ್ತ ಮಾಡಿದರಾಯಿತು. ಮತ್ತೆಲ್ಲಾ ಕ್ಷೇಮ.
||ಸರ್ವೇ ಜನಾಃ ಸುಖಿನೋ ಭವಂತು|| ಎಂದು ಇಚ್ಛಿಸುವ,

ಶ್ರೀಧರ