ಲೇಖನ : ಶ್ರೀ ತಿಗಣೇಶ ಮಾಗೋಡು.

ಬನ್ನಿ.. ಸರ್ವಲಿಂಗರೂಪಿ ನನ್ನ ಪ್ರೀತಿಯಸ್ತರೇ..
ಕಳೆದು ಹೋದ, ಮತ್ತೆ ಬರಲಾರದ..ಸುಂದರ ಎಳೆಯ .. ಹಳೆಯದಾದ ಕ್ಷಣಗಳ ಬಗ್ಗೆ ತಿಗಣೇಶನೇನು ಕೆದಕಿ ಎಳೆದು ಎಳೆಯಾಗಿಸಿ ಬರೆದಾನು ಎಮದು ತಮ್ಮ ಮನಸು..ಅಣಕಿಸುವ ಮನಸುಮಾಡಿದರೆ ಧನ್ಯನೆನ್ನುವೆ.ಯಾಕೆಂದರೆ ನೀವು ಓದಿಯೇ ಓದುವಿರೆನ್ನಿವ..ಓದಿ ನಿಮ್ಮ ಬಾಲ್ಯ ನೆನಪಿಗೆ ಬಂದು ಕ್ಷಣಕಾಲ ಬಾಲಕರಾದರೂ..ಅ ದನ್ಯನೇ..

ಗೆಳೆಯರೇ ನಾನು ನನಗೆ ತಿಳಿದೋ..ತಿಳಿಯದೆಯೋ ನೂರಾನಲವತ್ನಾಕು..ಕಾಲಗಳನ್ನು ಕಂಡಿದ್ದೇನೆ..(÷೩). ಮುನ್ನೂರು ಕಂಡವರ ಅನುಭವ ಇನ್ನೂ ಭವ್ಯ ಎಂದು ನನಗೆ ಗೊತ್ತು..ಅರವತ್ತೆಂಟರಲ್ಲಿ ನನಪ್ಪ ಬಾಬು..ಆಯಿ ಸರಸ್ವತಿಗೆ..ಹಿರಿಯರು ಚಿನ್ನದ ದಾಬು ಕಟ್ಟಿದರು..ಎಪ್ಪತ್ತರಲ್ಲಿ ನಾನು ಬಂದೆ..ಎಂದು ಆಯಿ ನಾನು ತ್ರಾಸು ಕೊಡುವಾಗ ಬೈದ ನೆನಪು.ಅಪ್ಪನ ಪಾಲಿಗೆ ಬಂದದ್ದು ಗೇಣಿ ಗದ್ದೆ..ಗೇಣು ಭರಣದ ತೋಟ..ಕುಂತು ಜಗೆದರೆ ತಿಂಗಳೂ ಬಾರದಷ್ಟು ಅಡಿಕೆ..ಒಕ್ಕಲು..ಒಕ್ಕಿ..ಉಗ್ಗಿಸಿ..ಪಾಲಿನಲ್ಲಿ ಮಿಕ್ಕಿ..ತಂದಿಳಿಸಿದ ಅಕ್ಕಿ..ಗೆರಸಿ ತುಂಬದಷ್ಟು ಗೇರು..ಬಾಬಲಕ್ಕಿ ಬಿಟ್ಟ ಕಾಯಿ..ಇವೇ ನಮ್ಮಪ್ಪ ‘ಬಾಬು’ವಿನ ಐಶ್ವರ್ಯ..ಇಂಥ ಶ್ರೀಮಂತ ಕನಸಿನಲ್ಲಿ ನನ್ನ ಜನನ..ಕಣ್ಣಿಮನೆ ಅಜ್ಜನ ಮನೆ..ಅಪ್ನಾಯ್ಕನ ಒಳನಾಡಿ..ಎಂಪಿ ಕರ್ಕಿಯ ಕೆಂಪುನೀರು..ಹೈಗುಂದ ಡಾಕ್ಟರರ ಕರಿಗುಳಿಗೆ ನಮ್ಮ ಆರೋಗ್ಯ..ನಾನು ಹುಟ್ಟಿದ್ದು ಸಾಲದೆಂದು ಮತ್ತೆರಡು ವರ್ಷದಲ್ಲಿ ನನ್ನ ಬೆನ್ನಿಗೆ ಆಡಲೆಂದು ಮಾಣಿಯನ್ನೇ ಕೊಟ್ಟ ಎಂದು ಆಯಿ ಹೇಳಿದ ಮಾತು..ಅವ ನನ್ನ ದೇವರು ಕೊಟ್ಟ ತಮ್ಮ ಉಮೇಶ..ಈಗ ಹೆಂಡತಿ ಮಕ್ಕಳೊಂದಿಗೆ ಜೀವನದಾಟ ಆಡುತ್ತಿದ್ದಾನೆ..ನಿಜವಾಗಿ ಇಂದೂ ಅವ ನನಗೆ ದೇವರು ಕೊಟ್ಟವನೇ..ಅದು ಪುಣ್ಯ…(ಬಾಕಿ ಸಂಗ್ತಿ ಮುಂದೆ….)

RELATED ARTICLES  ಭಕ್ತರ ಉದ್ಧಾರದ ಹೊರತು, ಪೂರ್ಣಕಾಮ - ಶ್ರೀಸರ್ವಸಮರ್ಥ ರಾಮನಿಗೆ ಮತ್ತೇನು ಕಾರ್ಯವಿದೆ?