ravi soori

“ಸಾವು ಬದುಕಿನ ಅಂತ್ಯವಲ್ಲ, ಸಾವಿನ ನಂತರವೂ ಬದುಕಿದೆ” ಎಂಬುದನ್ನು ತೋರಿಸಿಕೊಟ್ಟವಳು ಸೀತಾಮಾತೆ. ಬೆಂಕಿಯಲ್ಲಿ ಬಿದ್ದು ಎದ್ದವಳು. ರಾಮನನ್ನು ಪಡೆಯಲು ಸಾವನ್ನು ಅಪ್ಪಿದವಳು. ಆತ್ಮಸ್ವರದಲ್ಲಿ ಕರೆದರೆ ಭಗವಂತ ಆತ್ಮಶ್ರವಣದಲ್ಲಿ ಕೇಳಿಸಿಕೊಳ್ಳುತ್ತಾನೆ ಎಂಬುದನ್ನು ಸಾಬೀತು ಮಾಡಿದವಳು. ಬಾಹುಬಲ ಶಾಶ್ವತವಲ್ಲ, ಭಾವಬಲ ಶಾಶ್ವತ ಎಂಬುದನ್ನು ನಿರೂಪಿಸಿದವಳು. ಅಂತಹ ಸೀತಾಮಾತೆಯ ಜೀವನ ಕಥೆ ನಮಗೆ ಅನೇಕ ಪಾಠಗಳನ್ನು ಹೇಳಿಕೊಡುತ್ತದೆ. “ಮನಸನರಿಯದೇ ಮೈಯನಾಳುವುದಲ್ಲ ಪುರುಷನ ಸಾಧನೆ” ಎಂಬ ನೀತಿ ಅಲ್ಲಿದೆ, ಮಾನವತಿಯ ಮಾನವನ್ನು ಹರಣ ಮಾಡುವುದು ಮಾನವತೆಯಲ್ಲ ದಾನವತೆ ಎಂಬ ಸತ್ಯ ಅಲ್ಲಿದೆ. ಬಾಹುಬಲದಿಂದ ಗೆಲ್ಲುವುದಲ್ಲ ಭಾವದಿಂದ ಗೆಲ್ಲು-ಅಂತರಂಗದಿಂದ ಗೆಲ್ಲು ಎನ್ನುವ ಸಂದೇಶವಲ್ಲಿದೆ. ಹೆಣ್ಣಿಗೆ ನಡತೆಯಂತಾ ರಕ್ಷಣೆ ಇನ್ಯಾವುದೂ ಇಲ್ಲ ಎನ್ನುವದಲ್ಲಿ ಸಾಬೀತಾಗಿದೆ. ಕತ್ತಲೆಗೆ ಯಾವಾಗಲೂ ಬೆಳಕಿನ ಭಯ. ಆದರೆ ಬೆಳಕಿಗೆ ಯಾವ ಭಯವೂ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದೆ.

RELATED ARTICLES  ಪರಿಪೂರ್ಣ ವಿಕಾಸದೆಡಗೆ ಸಾಗಿಸಬಲ್ಲ ಶೃದ್ದಾ ಕೇಂದ್ರವೇ ಗುರು

“ಪರಮಪುರುಷನ ಹೊರತು ಇನ್ನೆಲ್ಲಾ ಪರಪುರುಷರು” ಎನ್ನುವ ಸೀತೆಯ ಭಾವ ನಿಜಕ್ಕೂ ಒಂದು ಆದರ್ಶ.