ravi soori

ಯಾವುದೇ ವಸ್ತುವನ್ನು ಅಥವಾ ವ್ಯಕ್ತಿಯನ್ನು ಕಳೆದುಕೊಂಡಾಗ ಮಾತ್ರ ನಮಗೆ ಅದರ ಮಹತ್ವದ ಅರಿವಾಗುತ್ತದೆ. “ಅಮ್ಮನ ಕಥೆಯಂತೆ ಅನ್ನದ ಕಥೆ” ಹೆತ್ತು-ಹೊತ್ತು-ಸಾಕಿ-ಸಲಹಿದ ಅಮ್ಮನನ್ನು ಕಂಡರೆ ಗುಮ್ಮನಂತೆ ಕಾಣುವವರದೆಷ್ಟೋ ಮಂದಿ, ಅಮ್ಮನ ಋಣ ತೀರಿಸಲಾಗದು ಎಂಬುದು ತಿಳಿದಿದ್ದರೂ, ಇಳಿವಯಸ್ಸಿನಲ್ಲಿ ಅಮ್ಮನನ್ನು ದೂರ ಮಾಡುವ ಹಲವರನ್ನು ನಾವು ಸಮಾಜದಲ್ಲಿ ಕಾಣುತ್ತೇವೆ.

ಇರುವಾಗ ಒಂದು ತುತ್ತು ಅನ್ನವನ್ನು ಹಾಕದವರು ಅಮ್ಮ ಸತ್ತ ಮೇಲೆ ಮೃಷ್ಟಾನ್ನ ಭೋಜನವನ್ನು ನೂರಾರು ಜನರಿಗೆ ಹಾಕುತ್ತಾರೆ. ತಾನು ಕಷ್ಟವನ್ನು ಅನುಭವಿಸಿ ಜೀವನಪೂರ್ತಿ ಪ್ರೀತಿಯನ್ನು ಧಾರೆ ಎರೆದ ಅಮ್ಮನ ಮಹತ್ವ ಅರಿಯದೇ ಕಟುಕರಂತೆ ವರ್ತಿಸುವ ಮಕ್ಕಳು ಮಾತೃದ್ರೋಹದ ಪಾಪಕ್ಕೆ ತುತ್ತಾಗುತ್ತಿದ್ದಾರೆ. ಅಮ್ಮನಂತೆ ಅನ್ನ ಕೂಡಾ ನಮ್ಮ ಹಸಿವನ್ನು ಇಂಗಿಸಿ ನಮಗೊಂದು ಬಾಳುಕೊಟ್ಟ ಅನ್ನದ ಮಹತ್ವ ಅರಿವಾಗುವುದು ಅದಿಲ್ಲದಾಗ ಹೊಟ್ಟೆ ತುಂಬಿದವರಿಗೆ ಹಸಿವಿನ ಅನುಭವವಿರುವುದಿಲ್ಲ. ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಆಹಾರವಿಲ್ಲದೇ ಪರದಾಡುವುದನ್ನು ಕಂಡಾಗ ಅನ್ನದ ಮಹತ್ವದ ಅರಿವಾಗುತ್ತದೆ.

RELATED ARTICLES  ದಿನದ ದೀವಿಗೆ

ಆದ್ದರಿಂದ ಅನ್ನವನ್ನು ಹಾಳು ಮಾಡಬಾರದು. ನಾವು ಉಳಿಸುವ ಅನ್ನ ಇನ್ನೊಬ್ಬನ ಜೀವ ಉಳಿಸಬಹುದು ಎಂಬುದನ್ನು ಅರಿತು ಬಳಸಿ, ನಮ್ಮ ಜೀವದ ಉಸಿರಾಗಿರುವ ಅಮ್ಮ ಹಾಗೂ ಅನ್ನಕ್ಕೆ ಮಹತ್ವ ಕೊಡೋಣ.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲೆಗಳು: ಮನುಷ್ಯ ತನ್ನ ತಪ್ಪಿಗೆ ಯಾವಾಗ ಪಶ್ಚಾತ್ತಾಪ ಪಡುತ್ತಾನೆ? ಭಾಗ - 1