ನನ್ನನ್ನು ಓದುತ್ತಿರುವ..ಓದಲಿರುವ ಎಲ್ಲ ಜೋಡಿಕಣ್ಣುಗಳೊಂದಿಗೆ..ಹರಳುಗಳಿದ್ದರೂ ..ಎಲ್ಲರೂ ರಜೆಯಲ್ಲಿಯೂ ವಂದನೆ ಸ್ವೀಕರಿಸಿರೆಂದು ಬೇಡುವೆ..
ಕಣ್ಣಿಮನೆ ಅಜ್ಹನ ಮನೆಯೆಂದಿದ್ದೆ ನೆನಪಿದೆಯೇ..ಕಣ್ಣಿಮನೆಯಲ್ಲಿ..ನನ್ನಜ್ಜನ ಮನೆಯನ್ನು..’ಗೇಗೇಮನೆ’..ಹಂಚಿನಮನೆ: ಎಂದೆಲ್ಲ ಕರೆಯುತ್ತಿದ್ದರು.ಈಗ ಊರೆಲ್ಲ..ಹಂಚು ಮಾಯವಾದರೂ..ಈಗಲೂ ಹಂಚಿನ ಮನೆಯೇ ಆಗಿದೆ..ಎತ್ತರದಲ್ಲಿರುವ ಮನೆಗೆ ಹೋಗಲು ಮೆಟ್ಪಲಪಾಜಿ ಹತ್ತೇ ಹೋಗಬೇಕು..ನನಜ್ಜ ಕನಿಷ್ಟ ಮೂರು ವಕೀಲರ ಹೊಟ್ಟೆ ಹೊರೆದವ..ಗೊಬ್ಬರಕುಳಿ ಒಂದುವರೆಗುಂಟೆ ತೋಟದ ಒಂದು ತೆಂಗಿನಮರಕ್ಕೆ ಅಗಿನ ಕಾಲದಲ್ಲಿಯೇಮೂರು ಲಕ್ಷ ಸುರಿದು..ನೀರುಹಾಕದೆ ಮರ ಸಾಯಿಸಿದ ನೆನಪಿದೆ.

ಪ್ರತಿದಿನ ಒಂದು ನಂಬ್ರ ಅಗಲೇಬೇಕು..ಹೊಳೆಬದಿಯಲ್ಲಿ ಇರುವ ಮುಚ್ಚಿದ ಅಂಗಡಿಯ ನಂಬ್ರದಲ್ಲಿ..ನಾನೂ ದುಂಡಗೆ ಕತ್ತಿಚೂರಿ ಹಿಡಿದು..ಕುಣಿದು ನೇವಳ ಕಳೆದುಕೊಂಡ ನೆನಪಿದೆ..ದೊಡ್ಡ ಜಮೀನಿದ್ದ ಅಜ್ಜನಮನೆ ಈಗ ಸರಕಾರಿ ಕಾಯ್ದೆಯ ಹೊಡೆತಕ್ಕೆ ಬೇರೇಮನೆ ಕೆಲಸಕ್ಕೆ ಮಾವ ಹೋಗುವಂತ ಪರೀಸ್ಥಿತಿ ತಂದಿಟ್ಟಿದೆ..ಇಂದೂ ಲಕ್ಷಗಟ್ಟಲೆ ಕುಟುಂಬ ಬೀದಿಯಲ್ಲಿ ನಿಂತು ಸರಕಾರವನ್ನು ಶಪಿಸುತ್ತಿದೆ..
ನಮ್ಮನೆ ಪರೀಸ್ಥಿತಿಯೂ ಅದೇ ಆಯಿತು..ಪಾಲಿಗೆ ಬಂದಿದ್ದ ಗೇಣಿಗದ್ದೆಗಳು..ಕಾಯಿದೆಗೆ ಆಹುತಿಯಾಗಿ..ಗೇಣು ಭೂಮಿ ಉಳಿದು..ರಾಜನಾಗಿ ದಿನಕಳೆದ ನನ್ನಪ್ಪ ಬಾಬು..ಶೇಂಗಾಬೀಜಕ್ಕೂ..ಗತಿಯಿರದವನಾದ..ಆಗ ಆಯಿ ಕಿತ್ತೋದ ಪರೀಸ್ಥಿತಿಗೆ ಟೊಂಕಕಟ್ಟಿ ಕಿತ್ತೂರ ಚೆನ್ನಮ್ಮನಾಗಿ ಹೋರಾಡಿದಳು.ಅಜ್ಜನ ಮನೆಯಿಂದ ಮಾವದಿಕ್ಳು ಬೀಜಗಾಯಿ..ಕೊಡಿಬಳ್ಳಿ ತಂದು ನೆಟ್ಟರು..ಈಗಲೂ ಅಜ್ಜನಮನೆ ತೆಂಗಿನಮರದ ಕಾಯಿ ನಮಗೆ ಸಿಗದಿದ್ದರೂ..ಯಾವಜನ್ಮದ ಋಣವಿತ್ತೋ ಬೆಳಚಿಮಂಗಗಳು ತಿನ್ನುತ್ತಿವೆ.ದೊಡ್ಡಮಾವ..ನಮ್ಮನೆಗೆ ಬಂದರೆ ಪೇಪರಮೆಂಟಿನ ಪೊಟ್ಳೆ ತರುತ್ತಿದ್ದ..ಆಗ ನಮಗೆ ಹಬ್ಬ..ಅವ ಬಂದಕೂಡಲೇ ನಮ್ಮ ಇದ್ದೆರಡು ಚಡ್ಡಿಅಂಗಿ ಅವನ ಚೀಲದಲ್ಲಿ ಹಾಕಿ ನಾವು ಅಜ್ಜನ ಮನೆ ಕನಸು ಕಾಣುತ್ತಿದ್ದೆವು..ಆವ ತಂದ ಕೆಂಪುಬಣ್ಣದ ಕಪ್ಪು ಹಂಡುಹುಂಡಿರುವ ಅಂಗಿ ಪಾಯ್ಜಾಮ ಈಗಲೂ ನೆನಪಿದೆ..ಆ ಪ್ಯಾಂಟ ಹೆಗಲಿಗೆ ಕತ್ರಿಬಳ್ಳಿಹಾಕಿ ಕಟ್ಟುವುದಾಗಿತ್ತು..ಅಂಗಿಗೆ ರಾಜಬಟ್ಟಣ್ಣ ಇತ್ತು.ಅದು ಉದ್ದ ಇತ್ತು..ಒಂದೊಂದೇ ತುದಿ ಮಡಿಕೆ ಬಿಚ್ಚುತ್ತ ಮೂರು ವರ್ಷ ಹೋಪಲ್ಲಿ ಪ್ಯಾಂಟಾಯಿತು..ಜಬ್ಳೆಯಾದ ಅಂಗಿ..ಮೂರನೇ ವರ್ಷಕ್ಕೆ ಸರಿಯಾಗುವಷ್ಟರಲ್ಲಿ ಹರಿಯಿತು..ಅಂಗಿಪೇಂಟು ತೋರಿಸಲಿಕ್ಕಾಗಿಯೇ ನಾವು ಎಲ್ಲಾರಮನೆಯ ಕಾರ್ಯಕ್ಕೂ ಹೋಗಿದ್ದು ನೆನಪಿದೆ.

RELATED ARTICLES  ಕದರೀಗುಡ್ಡದ ಈ ಮಂಜನಾಥೇಶ್ವರ ಲಿಂಗದ ಉದ್ಭವದ ಬಗ್ಗೆ ಶ್ರೀಧರ ನುಡಿ.

ಮನೆಯಲ್ಲಿ..ಕಷ್ಟ ಇತ್ತು..ಅಬ್ಬೆಗೆ ವರ್ಷವಾಗುತ್ತಿತ್ತು..ಬೇರೆ ಉಳಿದಮೇಲೆ..ಗೇಣಿ ಭೂಮಿ ಕಳೆದುಕೊಂಡು ಇನ್ನೂ ಕಷ್ಟವಾಯಿತು..ಒಂದೇ ದೋಸೆಬಂಡಿ..ಆಯಿ ದೋಸೆಗೆ ನೆನೆಸಿದಾಗಲೇ ಅವರೂ ನೆನೆಸುತ್ತಿದ್ದರು..ಅವರಮನೆಯ ಕರುವಿಗೆಲ್ಲ ದೋಸೆಯೆರೆದು ಆದಮೇಲೆ ನಮಗೆ ಬಂಡಿ ಕೊಡುತ್ತಿದ್ದರು..ಆಗ ಕತ್ತರಿಸಿ ಸಿಟ್ಟ ಬಂಡಿಗೆ..ಎಣ್ಣೆಹಾಕಿ..ಸರಿಮಾಡಿ ಇದ್ದಹನಿಯೆಣ್ಣೆಖರ್ಚಾಗಿ
ಹೊಡಿಮಂಡೆಯಲ್ಲಿ..ಹೊಟ್ಟು ಕಜ್ಜಿಯಾಗಿದ್ದು ನೆನಪಿದೆ..ಹಂಡೆಯೂ ಒಂದೇ..ಅವರಮನೆಯವರೆಲ್ಲ ಮಿಂದಾದ ಮೇಲೆ..ಬಿಸಿಅಕ್ಕಚ್ಚು ಆದಮೇಲೆ..ಸೌದಿಕೊಳ್ಳಿ ಸೊಗೆಯುತ್ತಿದ್ದರು..ಉಳಿದಕೆಂಡದಮೇಲೆ ಮಡ್ಳಸೂಡಿಯಿಟ್ಟು..ಊದಬತ್ತಿ ಅಂಡೆಯಲ್ಲಿ ಊದಿ ಬೆಂಕಿಮಾಡಿ..ಮೀಯುವಷ್ಟರಲ್ಲಿ..ಹಾಡಿಶಾಲೆಗೆ ಹೊತ್ತಾಗುತ್ತಿತ್ತು..ಎಲ್ಲಕಡೆ ಒಂಟೆಳೆಯ ಸಂಕ. ಹಿಸಿಯುವ ಹಾಳಿಕಂಟ..ಹಶಿಜಡ್ಡಿನಲ್ಲಿ ಶಿಕಾರಿಗೆ ಕುಳಿತ ಕೆಪ್ಪೆಹಾರಿಸುತ್ತ..ತಗ್ಟೆಗಿಡದ ಸೋಡಿಗೆಯ ಕೋಳಿಪಡೆ ಆಟ ಆಡುತ್ತ ಶಾಲೆಗೆ ಹೋಗುತ್ತಿದ್ದೆವು.

RELATED ARTICLES  “ ಲೋಕ ಮತ್ತು ಲೋಕಾಂತರ ಪ್ರಾಪ್ತಿ”( ‘ಶ್ರೀಧರಾಮೃತ ವಚನಮಾಲೆ’).

ಹೆಣ್ಣುಮಕ್ಕಳ ಪಾಟಿಚೀಲದಲ್ಲಿ..ಗದ್ನಕಾಯಿ..ಬೆಟ್ಟೆ..ಇರುತ್ತಿತ್ತು..ಗಂಡುಮಕ್ಕಳ ಪಾಟಿಚೀಲದಲ್ಲಿ..ಕಾಗದದಚೆಂಡು..ಗೆರಟೆಚಿಪ್ಪಿ..ಬೆಟ್ಟೆ..ಬೆಂಕಿಪೆಟ್ಗೆ ಚಾಪು..ಗೋವೇಬೀಜ..ಹಿಡಿಕಡ್ಡಿ ..ಹಾಣೆಗೆಂಡೆ..ಒರುತ್ತಿತ್ತು..ಹಾಣೆಗೆಂಡೆ ಪಟ ಹಿಂಡಲ್ಲಿಟ್ಟು ಹೋಗುತ್ತಿದ್ದೆವು..ಒಂದಕ್ಕೆ ಬಿಟ್ಟಾಗ..ನಮ್ಮ ಆಯುಧ ಹೊರಗೆ ಬೀಳುತ್ತಿತ್ತು..ಆಟ ಶುರು..ಮಾಸ್ತರ್ರು ಅಂಗಿಕಳಚಿ .. ಸಿಕ್ಕಿಸಿ.ಎಚ್ಚರಾದಕೂಡಲೇ..ಗಂಟೆ ನಮ್ಮನ್ನು ಎಚ್ಚರಿಸುತ್ತಿತ್ತು.

(ನೆಪಿಸಿಕೊಳ್ಳಿ..ಬಾಲ್ಯ ಸುಖದದಿನ..ಮುಂದಿನವಾರ ಬರೆಯುವೆ..ಬರುವೆ)

ತಿಗಣೇಶ ಮಾಗೋಡ.