IMG 20180318 WA0000

…….ಎಷ್ಟು ಎಲೆಗಳುದುರಿ..
ಚಿಗುರಿತೋ..ನಗುವು..
ಎಷ್ಟು ತಲೆಗಳುರುಳಿ..
ಅರಳಿತೋ..ಜಗವು..
ತಿರುಗಿ ಸೋಲದೆ..ಭುವಿಯು..
ಉರುಳುತಿರಲಿ..
ಹೊಸೆದಂತೆ ಹೊಸದೊಂದು..
ಅರಳುತಿರಲಿ..
ಶುಭಾಷಯಗಳು..ನನ್ನವರಿಗೆ…

ಆಗೆಲ್ಲ..ಎಲ್ಲದಕ್ಕೂ ಕೋಣೆಗಳಿಲ್ಲ..ಎಲ್ಲ ತರಗತಿಗಳಿಗೂ ಒಂದೇ ಕೋಣೆ.
ಒಂದನೆತ್ತಿ ಮಕ್ಕಳ ಜೊತೆಗೆ ಮತ್ತೆರಡು..ಮೂರು.. ಬರುತ್ತಿದ್ದವು..ಯಾಕೆಂದರೆ ಅಂಗನವಾಡಿಗಳಿಲ್ಲ..ಬಹುತೇಕ ನಾವೆಲ್ಲ ಮೂಗಿನಸಿಂಬಳ‌ ತಿಂದವರೇ..ಆಗ ಯಾರಿಗೂ ಅದು ಹೇಸಿಗೆಯೇ ಅಲ್ಲ..ಎಲ್ಲರ ಅಂಗಿಕೈಗಳೂ..ರಟ್ಟಿನಂತೆ.ಒದ್ದೆಯಾದರೆ ನೋಳಿನೋಳಿಯೇ..

ಕರಚಿಪ್ಗಳಂತೂ..ಆಯಿಗೆ ಒಂದೇ..ಅದೂ ಹೋಪಲ್ಲಿ ವಸ್ತ್ರದ ಮಡಿಕೆಯಲ್ಲಿರುತ್ತಿತ್ತು..
ಯಾವ ಹಿಂಡಿನ ಹತ್ತಿರ ಹೋದರೂ..ಒಂದಕ್ಕೆ ವಾಸನೆಯೇ.ನಾವೆಲ್ಲ ಒಟ್ಟಾಗೇ
ಒಂದಕ್ಕೆ ಹೋಗುವುದು..ವಿವಿಧ ಬಂಗಿಗಳಲ್ಲಿ ಯಾರದು ದೂರ ಹೋಗುವುದೆಂಬ ಸ್ಪರ್ದೆ..ಯಾರದು ಮೇಲೆ ಹಾರುವುದೆಂಬ ಸ್ಪರ್ದೆ..

ಎಲ್ಲರಾಂಗಿಚೆಡ್ಡಿಗಳೂ..ಉಚ್ಚಿಕೆಡಿನಾತವೇ..ಹಾಗಾಗಿ ನಮ್ಮ ಮೂಗು ಹೊಂದಿಕೊಂಡಿತ್ತು.ಇನ್ನು ತಂಡಿಯ ಯಾಪಾರ..ಯಾವ ಹಪ್ನಾತವೂ ಬರತ್ತಿರಲಿಲ್ಲ..ನಾನು ಮೂರನೆತ್ತಿಯ ಮಾಣಿ ಇದ್ದಾಗ ಒಂದು ಮಜಾ ನಡೆಯಿತು..ನಮಗೆ ಮಾಸ್ತರು ಎಲ್ಲಿ ಒಂದಕ್ಕೆ ಮಾಡುವರೆನ್ನುವ ಕುತೂಹಲ..ಆಗ ‘ಅಡಿಗ’ ಮಾಸ್ತರ್ರು ಇದ್ದರು.ನಾವು ಅವರ ಬೆನ್ನತ್ತಿದೆವು..ಕಡೆಗೂ ಸಿಕ್ಕೆದರು..ನಮ್ಮನ್ನೆಲ್ಲ ಅದುಇದು ಬರೆಯಲು ಹೇಳಿ ಅಡಿಗಮಾಸ್ತರು ಹೊರಗೆ ಹೋಗುತ್ತಿದ್ದರು..ನಾವು ಆದಿನ ಒಂದಕ್ಕೆ ಹೋದವರು ಬರಲೇ ಇಲ್ಲ..ಅಡಿಗ ಮಾಸ್ತರು ನಾವು ನಿಲ್ಲುವ ಹಿಂಡಿನ ಮರೆಯಲ್ಲಿ ಕುಳಿತರು ಕಿವಿಗೆ ಜನಿವಾರ ಸಿಕ್ಕೆಸಿದ್ದರು..

RELATED ARTICLES  ಇಳಿಜಾರು ಓಟ

ನಾವೂ ಮರುದಿನ ಮನೆಯಿಂದ ನುಗುಲುಂಡೆ ಕದ್ದುತಂದು ಕಿವಿಗೆ ಸುತ್ತಿ ಕುಳಿತೆವು..ಆಗ ಅದು ಜನಿವಾರವೆಂದು ಗೊತ್ತಿರಲಿಲ್ಲ..ನೆನಪಾದರೆ.ನಗು ನಿಲ್ಲುವುದೇ ಇಲ್ಲ..ನಾನು ಕಲಿತದ್ದು ಹಾಡಿಶಾಲೆ..ಮೊದಲನೇ ದಿನ ನನ್ನನ್ನು ಮಂಕರಕೆಯಲ್ಲಿ ಹಾಕಿ ಹೊತ್ತುಕೊಂಡು ಹೋದದ್ದು ಆಯಿ ಇನ್ನೂ ಹೇಳುತ್ತಾಳೆ..ಅಳುತ್ತ ಚೂಳಿಯಲ್ಲಿ..ನಾನು..ನುಕ್ಕಿಬರ್ಲು ಹಿಡಿದು ಪಾಟೀಚೀಲ ಹಿಡಿದು ಆಯಿ ನನಗೆ ಬಯ್ಯುತ್ತ..ತಮ್ಮನನ್ನು ಅಂಡಿಗೆಹಾಕಿ ಶಾಲೆವರೆಗೆ ಬಂದಿದ್ದು..ಊರವರು ಈಗೂ ಹೇಳುತ್ತಾರೆ..ಬಗಲಚೀಲ..ಮಣ್ಣುಪಾಟಿ..ಬೆಣ್ಣೆಕಡ್ಡಿ..ಹಗರದಬ್ಬೆಯನ್ನು ತೆಳ್ಳಗೆ ಕೆತ್ತಿಮಾಡಿದ ಇಂಚಪಟ್ಟಿ..ಬೀನಗೋಡ ಸುಬ್ರಾಯಬಾವ ಬಿಟ್ಟ ಪುಸ್ತಕ..ಇವು ನನ್ನ ಆಸ್ತಿ..ತಂದ ಎರಡುದಿನದಲ್ಲಿಯೇ ಪಾಟಿ ಒಡೆದು ಹೋಗುತ್ತಿತ್ತು..ಮಾಸ್ತರ್ರು ಹೊಡೆಯುವುದು ಪಾಟಿದಂಡಿಗೆಯಲ್ಲಿ.

RELATED ARTICLES  ಮದುವೆ ಮನೆಯಲ್ಲಿ ವಧು ವರರು ಗನ್ ಹಿಡಿದರು : ಮುಂದೆ ನಡೆದಿದ್ದು ಅನಾಹುತ.

ರೋಲ್ಕಟ್ಟಿಗೆಯಲ್ಲಿ..ಗಂಟೆಹೊಡೆಯುವುದು..ಬಲುಖುಷಿ..ಹೋದವರೇ ಗಂಟೆಕೋಲನ್ನು ಉಗ್ಗಿಸಿಡುತ್ತಿದ್ದೆವು..ನೀರಪಾಳಿ..ಕಸದಪಾಳಿ…ಅದೆಲ್ಲ ಈಗ ಅಪರಾಧ.ಪ್ರಾರ್ಥನೆ ಒಂದು ಶಿಕ್ಷೆಯಾಗಿತ್ತು..ಹಲ್ಲುತಿಕ್ಕದವರು..ಉಗುರುಬಿಟ್ಟವರು..ಮಂಡೆತೆಗೆಯದವರು..ಹಿಂದೇ ನಿಲ್ಲುತ್ತಿದ್ದರು..ಅವರನ್ನು ಸ್ವಚ್ಛತಾಮಂತ್ರಿ..ಎಳೆದು ಮಾಸ್ತರ ಎದುರಿಗೆ ತರುತ್ತಿದ್ದ..ಮಾಸ್ತರು..ಮಂಡೆಬಿಟ್ವವನಿಗೆ..’ಕುರಬ’ ಉಗುರ ಬಿಟ್ಟವನಿಗೆ..’ಮಂಗನಚೋಟನವ’..ಹಲ್ಲು ತಿಕ್ಕದವಂಗೆ ‘ದನುನಜಾತಿಯವ’..ಎಂದು ಬಯ್ದು ..ಎರಡು ಬಿಡುತ್ತಿದ್ದರು.

ಒಂದನೆತ್ತಿಯಿಂದ ನಾಲ್ಕನೆತ್ತಿವರೆಗೆ.ಮೂರ್ನಾಲ್ಕುಅಮರವಾಣಿಯಲ್ಲಿಯೇ ಕಳೆಯುತ್ತಿದ್ದೆವು..ಇಂದಿನ ಪಂಚಾಂಗ..ಮಾಸ್ತರ್ರು ಹೇಳಿದ್ದೇ..ಕೆಲವರಂತೂ ಶಾಲೆಗೆ ಬರುವಾಗ ಗಂಟಿ ಹೊಡೆದುಕೊಂಡು ಬರುತ್ತಿದ್ದರು..ಗದ್ದೆಗೆ ಗಂಟಿಹೊಕ್ಕಿದರೆ..ಆ ಗದ್ದೆಯವ ಶಾಲೆಗೆ ಬಂದು ಮಾಸ್ತರ ಎದುರಿಗೇ ಬಯ್ದು ಹೋಗುತ್ತಿದ್ದ..ಮಾಸ್ತರು..’ಮನಿಗೋಗಿ ಕಟ್ಟಾಕಬಾರ ಗಂಟಿನಾ’ ಎಂದು ಬಿಡುತ್ತಿದ್ದರು..ಗಂಟಿಬೆನ್ನಿಗೆ ಹೋದವ ಬರುವುದು ನಾಳೆ..ಪಾಟಿಚೀಲ ಶಾಲೆಯಲ್ಲಿ..ಮಗ್ಗಿ..ಬಳ್ಳಿಗೆ ಕಳ್ಳಬೀಳಲು ಒನ್ನಂಬ್ರ ಉಪಾಯವಾಗಿತ್ತು..
(ಮುಂದಿವಾರ..ಮತ್ತೆ ಎಳೆಯರಾಗೋಣ)

…..ತಿಗಣೇಶ ಮಾಗೋಡು.