ಎಲ್ಲ ಸುಮನಸುಗಳಿಗೂ..ತಿಗಣೇಶ ವಂದಿಸುತ್ತಾನೆ.

ಆಗೆಲ್ಲ..ಇಂದಿನ ಹಾಗೆ ಗೋಡೆ ಚಿತ್ರಗಳು..ಪಠಗಳೆಲ್ಲ ಇಲ್ಲ..ಮಕ್ಕೊಚ್ಚಿನಮೇಲೆ ಮೂರ್ನಾಲ್ಕು ಪರಾಟಿ ಕೂಡಿಸಿ..ಕಡು ಹೊಕ್ಕುವಷ್ಟು ಗಂಡಿಯಿರುವ..ಕರಿ ಬೋರ್ಡು..ಕೈಹೊಲಿಗೆಯಲ್ಲಿ ಹೊಲಿದ ಹರಕು ಚಂಪೆ ತುಂಬಿ ಹೊಲಿದ ಡಸ್ಟರು..ಒಂದು ದೊಡ್ಡ ಟ್ರಂಕು..ಹಾಜರಿ ಪುಸ್ತಕ.ಬಾವುಟ..ಒಂದು ಗ್ಲೋಬು..ಬಳ್ಳಿ ಇರುವ ಪಟ.. ಒಂದು ಮಣ್ಣಿನ ಹೂಜಿ..ಜಂಬು..ಕೊಡಪಾನ..ಹಗ್ಗ.. ಇಷ್ಟೇ ಶಾಲೆ ಆಸ್ತಿ.. ನೀರಪಾಳಿ ಎಂದರೆ ಬಲು ಖುಷಿ..ಶಾಲೆಯ ಹತ್ತಿರದ ಹರಣಿಮಕ್ಕಿ ಗೊಯ್ಯನ ಮನೆಯ ಹಿಸಿದ ಬಾವಿಯ ನೀರು..ಅಲ್ಲಿ ಹಗ್ಗ ಇರುತ್ತಿರಲಿಲ್ಲ..ಬೆತ್ತ ಶಿಗಿದು ಜಪ್ಪಿ..ನೇಯ್ದುಮಾಡಿದ ಹಗ್ಗ..ಶರುಳಹಾಕಲು ಕಷ್ಟ..ದಿನಾಲೂ ಕೊಡಪಾನ ಬಾವಿಯಲ್ಲಿ ಬೀಳುತ್ತಿತ್ತು..ಕೊಕ್ಕೆಜಲ್ಲಿನಲ್ಲಿ ಕೊಡಹೆಕ್ಕುವುದು..ಒಂದು ಮಜಾ.ಕತ್ತದಬಳ್ಳಿಗೆ ಕಲ್ಮುಟ್ಟಿ ಕಟ್ಟಿ..ಕೊಡ ಹೆಕ್ಕಿ ..ನೀರು ತರುವವರೆಗೆ..ಒಂದಕ್ಕೆ ಬೆಲ್ಲು…ಶಾಲೆಯ ಎಡಬಾಗದ ಗುಡ್ಡೆಯ ಮೇಲೆ ಮಾಪಾರಿ ಮಾಸ್ತರ ಮನೆ..ಅವರ ಮನೆಗೆ ಹೋಗುವುದು ಕಷ್ಟ..ದಣಕಲು ಮುಟ್ಟಿದ ಕೂಡಲೇ ಎರಡೂ ಕುನ್ನಿ..ಬೆರಸುತ್ತಿತ್ತು..ಮಾಸ್ತರ್ರಿಗೆ.

RELATED ARTICLES  ಕೆಡುಕಿನ ಹಿಂದೆ ಒಳಿತಿದೆ

ಕುಡಿಯಲು ಮಾಪಾರಿ ಮಾಸ್ತರ ಮನೆಯ ನೀರು..ಇನೆಸ್ಪೆಕ್ಟರ್ರು ಬಂದಾಗ..ಮಾಪಾರಿ ಮಾಸ್ತರ ಮನೆಯ ಬಿಸ್ಕೀಟು..ಚಾ..ಪ್ಲೇಟು ತಟ್ಟೆ ಅವರ ಮನೆಯದೇ..ನಾನು ಅಗ ಹುಷಾರಿ ಮಾಣಿ..ಮೂರನೆತ್ತಿಯಲ್ಲಿ ಓದುತ್ತಿದ್ದೆ..ನಾಕನೆತ್ತಿಯಲ್ಲಿ..ಕುಟ್ಣಕೂಸನ ಮನೆಯ ಈರು..ಕೂಸನ ಮನೆಯ ಕನ್ನೆ..ಎಲ್ಲ ಇದ್ದರು..ಅವರಿಗೆ ಕೇಳಿದ ಪ್ರಶ್ನೆಗೆ ನಾನೇ ಉತ್ತರ ಹೇಳುತ್ತಿದ್ದೆ..ಅವರಿಗೆ ಹೊಡೆಯುತ್ತಿದ್ದರು..ಆಗ ನನಗೆ ಬಲು ಖುಷಿ..ಒಂದುಸಲ..ಅಡಿಗ ಮಾಸ್ತರ್ರು..ಅವರಬೆನ್ನಿಗೆ ನನಗೂ ಹೊಡೆದರು..ಬೆದರು ಕೋಲು ಹೊಡಿಯಾಗುವರೆಗೆ ಹೊಡೆದುಬಿಟ್ಟರು..ನನ್ನ ಶಿಂಗಾರೊಟ್ಟೆಯಮೇಲೆ ಬಾರ್ಸಲೆ ಬಂತು..ಸಣ್ಣಕ್ಕೆ ನೆತ್ರ ಬಂದಿತ್ತು..ನಾನು ತೀಡುತ್ತಾ..ಮನೆಗೆ ಓಡಹೋದೆ..ಆಗ ಮೀಯಲು ಹೋದ ಆಯಿ..ತೀಡುವ ನನ್ನ ಕರೆದುಕೊಂಡು..ಶಾಲೆಗೆ ಬಂದರು..ನಾನು ತೀಡುತ್ತಾ ಕುಂಟುಹಾರಿಸಿತ್ತಾ..ಆಯಿಸಂಗಡ ಶಾಲೆಗೆ ಬಂದೆ..ಆಯಿ ಅಡಿಗಮಾಸ್ತರಿಗೆ ಶಿಕ್ಕಾಪಟ್ಟೆ ಬಯ್ದರು..ಆಗ ನನ್ನ ಅರ್ಧ ನೋವು ಕಡಿಮೆಯಾಗಿತ್ತು..ಗಾಯಕ್ಕೆ ಚಾಪುಡಿ ಹಚ್ಚಿದ್ದರು.ನಂತರ ಅಡಿಗ ಮಾಸ್ತರು..ಯಾರಿಗೂ ಹೊಡೆಯಲೇ ಇಲ್ಲ..ನನ್ನನ್ನು ತೊಡೆಯಮೇಲೆ ಕೂರಿಸಿ ಕಲಿಸುತ್ತಿದ್ದರು..ಇನಸ್ಪೆಕ್ಟರ ಎದುರಿಗೆ ಅವರ ಮರ್ಯಾದೆ ಉಳಿಸುತ್ತಿದ್ದೆ.ಅದೇ ವರ್ಷ ಅವರಿಗೆ ವರ್ಗವಾಯಿತು..

RELATED ARTICLES  ಇದ್ದಕ್ಕಿದ್ದಂತೆ ಹೊತ್ತಿ ಉರಿದ ಲಾರಿ

ನಂತರ ಮಳ್ಳಿಕೇರಿಯ ಎಲ್ ಜಿ ಹೆಗಡೇರು ಮಾಸ್ತರ್ರಾಗಿ ಬಂದರು..ಅವರು ನಾನು ಮಾಡಿದ ಪಟಿಂಗತನವನ್ನು..ಸಾಯುವವರೆಗೂ ನೆನಪಿಸುತ್ತಿದ್ದರು..ನನ್ನ ಮದುವೆಯ ಜಾತಕ ನೋಡಿಇದವರೂ ಅವರೇ…ಕೇವಲ ಕೋಲು ಹಿಡಿದು..ಉರುಗೋಲಾಗುವ ಶಿಕ್ಷಣ ನೀಡುವ ಸರ್ವಜ್ಞ ರೂಪಿ ಗುರುಗಳು..ಈಗ ಸಿಗುವುದು ಕಷ್ಟ..ಅವರೂ ವರ್ಗವಾಗಿ..ಮಾಳ್ಕೋಡಿನ ಮಾಲಿನಕ್ಕೋರು ಬಂದರು..ಅವರು ನನ್ನ ದೊಡ್ಡಪ್ಪನ ಮನೆ ಕೊಟ್ಟಿಗೆಬದಿಯ ಕೋಣೆಯಲ್ಲಿ ಬಾಡಿಗೆಗೆ ಇದ್ದರು..ಶಾಲೆಯಲ್ಲಿ..ಸೀರೆ ಉಡುತ್ತಿದ್ದ ಮಾಲಿನಕ್ಕೋರು..ಮನೆಯಲ್ಲಿ ಅಂಗಿ ಹಾಕುತ್ತಿದ್ದರು..ನಮಗೆ ಅದೂ ವಿಶೇಷವೇ..’ಅಕ್ಕೋರು ಅಂಗಿಹಾಕಂತರೆ’..ಎಂದು ಶಾಲೆಯಲ್ಲಿ ಸುದ್ದಿ ಹೇಳಿಕೊಳ್ಳುತ್ತಿದ್ದೆವು..ಮಾಲಿಬಕ್ಕೋರು ಹೊಡೆಯುತ್ತಿದ್ದರು..ಅದೇ ಸಿಟ್ಟಿಗೆ..ಜಟಗನಬಾಲೆಯಲ್ಲಿ ಅಡಗಿಕೊಂಡು..ಮಾಲಿನಕ್ಕೋರಿಗೆ ಕಲ್ಲು ಹೊಡೆದದ್ದು ನೆಮುಂದಿದೆಶಾಲೆ ಬಿಟ್ಟಕೂಡಲೇ..ಬಾಗಿಲುದಾಟುವಾಗ..ಪಾಟಿಚೀಲದಲ್ಲು..ಹೊಡೆದು..ಅವರು ಮನೆಗೆ ಬಂದು ಹೇಳಿ.ನಮಗೆ ಬಯ್ಸಿದ್ದರು..ಆದರೂ ನಮ್ಮನ್ನು ಪ್ರೀತಿಯಿಂದ ನೋಡುತ್ತಿದ್ದರು..ಯಾಕೆಂದರೆ ನಾವಾಗ ಹುಷಾರಿ ಮಕ್ಳು.. (ಮುಂದಿದೆ)