ಈ ಲೋಕದೊಳಗೆ, ಆ ಲೋಕವನ್ನು ಬಿತ್ತುವ ಗೋ ಲೋಕ ವೇ, “ಗೋ ಸ್ವರ್ಗ.” (ಗುರುವಾಣಿ)
ಈ ” ಗೋ ಸ್ವರ್ಗ” ನಮ್ಮ ಪ್ರೀತಿಯ ಗುರುಗಳಾದ, ರಾಮಚಂದ್ರಾಪುರಮಠದ ಶ್ರೀಮದ್ ರಾಘವೇಶ್ವರ ಭಾರತೀ” ಗುರುಗಳ ಕನಸಿನ ಕೂಸು.
ಗೋವುಗಳ ಮೇಲೆ ಅಪಾರ ಪ್ರೀತಿಯನ್ನು ಹೊಂದಿದ ಗುರುಗಳಿಗೆ, ಕೊಟ್ಟಿಗೆ ಯಲ್ಲಿ ಕಟ್ಟಿದ ಗೋವುಗಳು, ಅದಕ್ಕೆ ನಿಂತಲ್ಲಿಯೇ ಹುಲ್ಲು , ಅಕ್ಕಚ್ಚ್, ಎಲ್ಲವನ್ನು ಕೊಡುವುದನ್ನು ನೋಡಿದಾಗ, ಎಲ್ಲೋ, ಈ ಗೋವುಗಳಿಗೆ ಇದು ಬಂಧನ ಅನಿಸುತ್ತದೆ ಅಲ್ವಾ…ಅಂಥ ಅನಿಸಿದೆ. ಅದಕ್ಕೂ, ಸ್ವಾತಂತ್ರ್ಯ ಬೇಕು, ಬೇಕೆನಿಸಿದಾಗ, ಹುಲ್ಲನ್ನು ತಿಂದು, ಆರಾಮ ಆಗಿ ಮಲಗಿ, ಬೇಕು ಅನಿಸಿದಾಗ, ಎದ್ದು ಹೊರಡ ಬೇಕು, ಅದೇ ಅಲ್ವಾ, ನಿಜವಾದ ಪ್ರೀತಿ, ಅನಿಸಿ, ” ಗೋ ಸ್ವರ್ಗ” ದ ಕಲ್ಪನೆ ಮನಸ್ಸಿನಲ್ಲಿ ಬಂದಿದೆ.
ಗುರುಗಳ ಕನಸು ಅಂದರೆ, ಅದು ಸಾಕಾರ ಆಯಿತು, ಅಂತಾನೆ ಅರ್ಥ. ಅದರ ಫಲವೇ, ಇಂದು ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರದ, ಬಾನಕುಳಿ ಯಲ್ಲಿ, ಸ್ಥಾಪನೆ ಆದ ” ಗೋ- ಸ್ವರ್ಗ”.
ಎಷ್ಟು ಚೆಂದ! ಈ ಗೋ ಸ್ವರ್ಗ” ದ ಕಲ್ಪನೆ! ಯಾವುದೇ ಬಂಧನ ವಿಲ್ಲದೆ, ಸ್ವತಂತ್ರ ವಾಗಿ ಓಡಾಡುವ ಸಾವಿರಾರು ಗೋವುಗಳು, ಬೇಕೆಂದಾಗ ನೀರು ಕುಡಿಯಲು ಶುದ್ಧವಾದ ನೀರಿನ ಕೆರೆ, ಹಾಯಾಗಿ ವಿಶ್ರಮಿಸಲು, ಹುಲ್ಲುಗಾವಲು, ಗೋ ಶಾಲೆ, ಸುತ್ತಲೂ ನೈಸರ್ಗಿಕ ಸೌಂದರ್ಯ, ಆಹಾ! ನಿಜವಾಗಿಯೂ, ಗೋವುಗಳಿಗೆ, ಸ್ವರ್ಗನೆ..ಈ ಗೋ- ಸ್ವರ್ಗ” .
ಇನ್ನು , ಈ ” ಗೋ- ಸ್ವರ್ಗ” ದ ಕಲ್ಪನೆ ಕೂಡಾ ಅಷ್ಟೇ ಅದ್ಭುತ. ಮದ್ಯದಲ್ಲಿ, ಜಲ ರೂಪದಲ್ಲಿ, ಪೂಜಿಸಲ್ಪಡುವ ಸಪ್ತ ದೇವತಾ ಸನ್ನಿಧಿ, ಅದರ ಸುತ್ತಲೂ ಸಾವಿರಾರು ಗೋವುಗಳು, ಜೀವನ, ಉಜ್ಜಿವನ” ಎರಡೂ ಬೆರೆತಿರುವ ” ಗೋ- ಸ್ವರ್ಗ” ಬಾಹ್ಯ ದಿಂದ ನೋಡಿದರೆ, ಒಂದು ಗೋ ಶಾಲೆ, ಆದರೆ ಆಳಕ್ಕಿಳಿದು ನೋಡಿದರೆ, ಅಲ್ಲಿ ಧರ್ಮ ಮತ್ತು ಅಧ್ಯಾತ್ಮದ ಗಂಧ ಇದೆ.
ಹೌದು, ಜಾಗತಿಕ ಮಟ್ಟದಲ್ಲಿ, ನಮ್ಮ ಗುರುಗಳ ಈ ಕಾರ್ಯ ತಲುಪಬೇಕು. ಎಲ್ಲಾ ಗೋ ಪ್ರೇಮಿಗಳಿಗೆ, ಇದು ಮೂಲವಾಗಬೇಕು. ಈ ಪುಣ್ಯ ಕಾರ್ಯಕ್ಕೆ ಗೋ- ಪ್ರೇಮಿಗಳೆಲ್ಲರೂ, ಒಂದಾಗಿ ಬನ್ನಿ.
ಗುರುಗಳ ಕನಸಿನ ” ಗೋ- ಸ್ವರ್ಗ” ವನ್ನು ನನಸು ಮಾಡೋಣ.
ಆದ್ದರಿಂದ ಗೋ ಸ್ವರ್ಗ ದ ಸುವಾರ್ತೆಯನ್ನು, ಸುಜನರ ಕಿವಿಯೊಳಗೆ ಇರಿಸುವ ಸುಕಾರ್ಯ ನಮ್ಮಂದಲೇ ಆಗಬೇಕು.
ಈ ” ಗೋ- ಸ್ವರ್ಗ” ವನ್ನು ನಿಜವಾದ ಗೋವಿನ ಸ್ವರ್ಗ ವನ್ನಾಗಿ ಮಾಡಲು, ಎಲ್ಲಾ ಗೋ-ಪ್ರೇಮಿ ಗಳು ಒಂದಾಗಿ ಬನ್ನಿ.
ಹರೇ ರಾಮ.
ಮಾಲಿನಿ ಹೆಗಡೆ. ಗಿರಿನಗರ, ಬೆಂಗಳೂರು.