ಸಮರ್ಥಾ! ನಿನ್ನ ಒಬ್ಬ ಮಗ ದೂರ ದೇಶದಲ್ಲಿ’ ಎಂದು ಶ್ರೀಸಮರ್ಥರ ಹತ್ತಿರ ನನ್ನ ಬಗ್ಗೆ ಕರುಣೆಯಿಂದ ಬೇಡಿಕೊಳ್ಳಿರಿ.
(ಇಸವಿ ಸನ ೧೯೬೫ರ ಸುಮಾರಿಗೆ ಶ್ರೀ ಅಣ್ಣಾ ಬುವಾ ರಾಮದಾಸಿ, ಸಜ್ಜನಗಡ ಅವರಿಗೆ ಬರೆದ ಪತ್ರದ ಮೂರನೇ ಭಾಗ)
ಇಲ್ಲಿ ನಾಲ್ಕೂ ಕಡೆ ಪರ್ವತ ಶಿಖರದ ಮೇಲೆ ದೊಡ್ಡ ಪ್ರಮಾಣದಲ್ಲಿ ಹಿಮ ಬಿದ್ದಿರುವದು ಕಾಣುತ್ತದೆ. ಹಗಲೂರಾತ್ರಿ ಈ ಶಿಖರಗಳು ಹಿಮಾಚ್ಛಾದಿತವಾಗೇ ಇರುತ್ತವೆ. ಈ ಪರ್ವತ ಶ್ರೇಣಿಗಳು ‘ನಾಮೇಲೆ’ ‘ನಾಮೇಲೆ’ ಎಂದು ಸ್ಪರ್ದೆಗೇ ಹತ್ತಿರುವದೋ ಎಂದು ಕಾಣುತ್ತದೆ. ಹೀಗೆ ಗಗನಸ್ಪರ್ಷೀ ಪರ್ವತಗಳ ಅತಿ ಸುಂದರ ದೃಶ್ಯ ಇಲ್ಲಿ ನೋಡಲು ಸಿಗುತ್ತದೆ. ಸೃಷ್ಟಿಸೌಂದರ್ಯದ ಅದೇನು ಪ್ರದರ್ಶನವೇ ಈ ದಿನಗಳಲ್ಲಿ ಇಲ್ಲಿ ನಡೆಯುತ್ತಿದೆಯೋ ಎಂದು ಅನಿಸುತ್ತದೆ. ಇನ್ನು ಹತ್ತು-ಹದಿನೈದು ದಿನಗಳ ನಂತರ ಚಳಿಯಿಂದಾಗಿ ಇಲ್ಲಿ ಹುಲ್ಲೆಲ್ಲ ಇಲ್ಲವಾಗಿ, ಎಲ್ಲೆಡೆ ಕರಿಗಪ್ಪು ಶಿಲೆಯ ಭೀಕರ ದೊಡ್ಡ ದೊಡ್ಡ ಪರ್ವತಾಕಾರದ ಶ್ರೇಣಿಗಳ ಸಾಲೇ ಕಾಣಿಸ ಹತ್ತುವದು. ಮಳೆಯ ಒಂದು ಹನಿ ಬಿದ್ದದ್ದು ಕಾಣಿಸುತ್ತದೆಯೋ ಇಲ್ಲವೋ ಆಗಲೇ ದಬಾದಬ ಹಿಮ ಬೀಳಹತ್ತುವದು. ಮಾಡಿನ ಸೂರಿನ ನೀರಿನ ಧಾರೆ ಬೀಳುತ್ತಿರುವಾಗಲೇ, ಸ್ವಲ್ಪ ಚಳಿ ಹೆಚ್ಚಾಯಿತೆಂದರೆ ಅಲ್ಲೇ ಗಟ್ಟಿಯಾಗಿ ಬಿಡುವದು. ಜನರ ಬಾಯಿಂದ ಈ ರೀತಿಯ ವರ್ಣನೆ ಕೇಳಿ ಬರುತ್ತಿದೆ. ಅಲ್ಲಿಯವರೆಗೇನೂ ನಾವೇನು ಇಲ್ಲಿ ಇಲ್ಲಿರುವದಿಲ್ಲ.
ಕೆಲವೊಂದು ವರ್ಷ ಇಷ್ಟು ಚಳಿಯಾದರೆ ಕೆಲವೊಮ್ಮೆ ಕಾರ್ತೀಕ ಮಾಸದವರೆಗೂ ಬಿರು ಬಿಸಿಲು ಇರುತ್ತದೆ ಮತ್ತು ಇನ್ನು ಕೆಲವು ಸಲ ಚೈತ್ರ-ವೈಶಾಖದಲ್ಲೇ ಹಿಮಪಾತ ಪ್ರಾರಂಭವಾಗುತ್ತದೆ. ‘ಭಗವಂತನ ಲೀಲೆ’ ಹೀಗೇ ಎಂದು ಈ ಸೃಷ್ಟಿಯಲ್ಲಿ ಒಂದು ನಿಯಮ ಹಾಕಿ ಹೇಳುವದು ಯಾರಿಗೂ ಶಕ್ಯವಿಲ್ಲ.
‘ಇದು ಆ ಮಾಯೆಯ ವಿಚಿತ್ರ ಕಲೆ’ ‘ಇದು ಹೇಗೇಗಿದೆ ಎಂದು ಆತನಿಗೇ ಗೊತ್ತು’
‘ಸಮರ್ಥಾ! ನಿನ್ನ ಒಬ್ಬ ಮಗ ದೂರ ದೇಶದಲ್ಲಿ’ ಎಂದು ಶ್ರೀಸಮರ್ಥರ ಹತ್ತಿರ ನನ್ನ ಬಗ್ಗೆ ಕರುಣೆಯಿಂದ ಬೇಡಿಕೊಳ್ಳಿರಿ. ಶ್ರೀ ಸಮರ್ಥ ಕೃಪೆಯಿಂದ ಇಲ್ಲಿ ನಾನು ಆನಂದದಿಂದಿದ್ದೇನೆ.
ಶ್ರೀಸಮರ್ಥರ ಕೃಪೆ ಎಲ್ಲರ ಮೇಲಾಗಲಿ. ಎಲ್ಲ ಜೀವಿಗಳ ಅತ್ಯಂತಿಕ ಹಿತ ಇಚ್ಛಿಸುವ,
ಶ್ರೀಧರ
ತಾವು ಓದಿ, ಚಿ. ದಿನಕರನಿಗೆ ಕೊಟ್ಟೇ ಕೊಡುತ್ತೀರಿ. ಪ್ರತಿ ಒಬ್ಬರಿಗೂ ಇಷ್ಟು ವಿಸ್ತಾರದ ಪತ್ರ ಹೇಗೆ ಬರೆಯುತ್ತಾ ಕುಳಿತುಕೊಳ್ಳಲಿ? ಅವನು ಉತ್ಸುಕರಿದ್ದವರಿಗೆ ತೋರಿಸುತ್ತಾನೆ ಮತ್ತು ಅಲ್ಪ ಪರಿಶ್ರಮದಲ್ಲಿ ಕೆಲಸವಾಗುತ್ತದೆ. ‘ಸ್ವಲ್ಪದರಲ್ಲೇ ಕೆಲಸವಾಗುತ್ತದೆಂದು’ ಎಲ್ಲರಿಗೂ ಪ್ರತ್ಯೇಕವಾಗಿ ಪತ್ರ ಕಳಿಸಿಲ್ಲ. ಎಲ್ಲರ ಬಗ್ಗೂ ನನ್ನ ಮನಸಿ್ಸನಲ್ಲಿ ಸಮಾನ ಪ್ರೇಮಾದರ ಇದೆ.
(ಪತ್ರಸರಣಿ ಮಂದುವರಿಯುವದು)