ತಿಗಣೇಶ ಮಾಗೋಡು

ನಮಸ್ಕಾರ..ಹೀಗೆ ಬನ್ನಿ..ನನ್ನ ಬಾಲ್ಯದೊಂದಿಗೆ..ನಿಮ್ಮ ಬಾಲ್ಯದ ಭವ್ಯ ನೆನಪುಗಳನ್ನು ಮೆಲುಕುಹಾಕುತ್ತ..ನಮ್ಮನ್ನು..ಕೇಳುವ ಕಿರಿಯರಿಗೆ..ಹಳೆಯರ ದರ್ಶನ ಮಾಡಿಸೋಣ..

ಕಾಲಕಾಲಕ್ಕೆ ನಮ್ಮ ಭಾನಗಡಿಯ ರೂಪಗಳು ಬದಲಾಗುತ್ತಿದ್ದವು..ಗೋವೇಬೀಜ..ಬಿಟ್ಟಿತೆಂದರೆ..ಅದರ ಮಜವೇ ಬೇರೆ..ಎಲ್ಲರ ಪಾಟಿಚೀಲದಲ್ಲಿ..ಚೂಪಿ ಕೊಚ್ಚು ಇರುತ್ತಿತ್ತು..ಮನೆಗೆ ಬಂದವರು ಕತ್ತಿಯನ್ನು ಉಗ್ಗಿಸಿ ತೆದುಕೊಂಡು ಹೋಗಿ..ಹಗರದಬ್ಬೆ ಕೆತ್ತಿ..ಕೊಚ್ಚು ಮಾಡುತ್ತಿದ್ದೆವು..ಮಾಳಪ್ಪ ಆಚಾರಿ ಕತ್ತಿಚೂರಿ..ಸ್ವಲ್ಪ ಹೆಚ್ಚುಕಮ್ಮಿ ಆದರೂ..ಬೆರಳಿಗೆ ಗಾಯ..ಬೆರಳಿಗೆ ಗಾಯವಾದರೆ..ಅಳುತ್ತಿರಲಿಲ್ಲ..ನಾಚಿಕೆ ಸಪ್ಪು ಜಪ್ಪಿ..ಒತ್ತಿ ಹಿಡಿದು..ತೀಡಿಬಿಟ್ಟರೆ..ಎಲ್ಲಾ ಕಮ್ಮಿ..ಯಾರ ಮನೆ ಗೋವೆ ಮರಕ್ಕೆ ಬೀಜ ಬೆಳೆದಿದೆ..ನಮಗೆ ಮೊದಲು ತಿಳಿಯುವುದು.

ಬೀಜ ಹೀಚಿದ ಕಲೆ ಎಲ್ಲರಿಗೂ ಇರುತ್ತಿತ್ತು..ಆಗ ಸ್ವಚ್ಛತಾ ಮಂತ್ರಿನೂ ಕಳ್ಳನೇ..ಬೀಜದ ಆಸೆಗೆ..ಸುಮ್ಮನಿರುತ್ತಿದ್ದ.ಬೀಜ ಬೆಳೆಯಿತೆಂದರೆ ಬೆಟ್ಟೆಗಾಗಿ ಹಳ್ಳ..ಹಳ್ಳ ಹುಡುಕುತ್ತಿದ್ದರು..ಗೋವೆಬೀಜ ಇಟ್ಟು ಬೆಟ್ಟೆಯಲ್ಲಿ ಹೊಡೆದು..ಗೆರೆಸುತ್ತಲೂ ಹೋದದ್ದನ್ನು..ಗೆದ್ದು..ಕೆಜಿಗಟ್ಟಲೆ ಬೀಜ ಮಾಡುತ್ತಿದ್ದೆವು.”ಅಬಗುಂಡಿ” ಮನೆಬಾಗಿಲಿಗೆ ಬರುತ್ತಿದ್ದ. ಕೊಟ್ಟಿಗಟ ಅಟ್ಟಕ್ಕೆ ಉಗ್ಗಿಸಿಟ್ಟ ಬಿಜ ಕೊಟ್ಟು..ದುಡ್ಡು ಮಾಡಿ..ಪೇಪರಮೆಂಟ ತಿನ್ನುತ್ತಿದ್ದೆವು..ಒಂದಲ್ಲ ಒಂದು ಆಟ..ತಗಟೆ ಸೋಡಿಗೆ ಶುರು ಆದರೆ..ಪಾಟಿಚೀಲದಲ್ಲಿ ಅದೇ..ಅದರಲ್ಲಿ ಕೋಳಿ ಆಟ ಆಡುತ್ತಿದ್ದೆವು..ಮನೆಯಲ್ಲಿ ಬೆಂಕಿಪೆಟ್ಟಿಗೆ ಉಗ್ಗಿಸಿಡುತ್ತಿದ್ದರು. ಅದರ ಚಾಪು ತೆಗೆದುಆಡುತ್ತಿದ್ದೆವು..ಕಣ್ಣೇಕಟ್ಟೆ ಆಟ..ಸಂಜೆ.ಕಡ್ಡಿ ಆಟ..ಚೆನ್ನೆ ಮನೆ..ಗದ್ಲಕಾಯಿ ಅಚ್ಚು..ಕಳ್ಳ ಪೋಲೀಸ ಚೀಟಿ..ಹುಲಿ ಮನೆ..ಡಪ್ಪಂಡುಪ್ಪಿ.ಲಗೋರಿ..ಆಟ ಒಂದೆರಡಲ್ಲ..ಮಳೆಗಾಲದ ಆಟವೇ ಬೇರೆ..ಗೌಡರ ಮಕ್ಳು..ಗುಳ್ಳೆ ಹಿಡಿದರೆ..ನಾವು ಹಾಳಿಕಂಟದ ಮೇಲೆ ನಿಂತು ನೋಡುತ್ತಿದ್ದೆವು.

RELATED ARTICLES  ಸ್ಪರ್ಧಾತ್ಮಕ ಒತ್ತಡ

ಎಸುಡಿ ಹಿಡಿದು ಕಾಲುಕೀಲು ಬೇರೆಮಾಡಿ ಚಂಬಿನಲ್ಲಿ ಹಾಕುತ್ತಿದ್ದರು..ಶಾಲೆಗೆ ಬರುವಾಗ ಚಂಬು ತಂದು ಹಿಂಡಲ್ಲಿ ಇಡುತ್ತಿದ್ದರು.ನಾವು ಚಪ್ಪಟೆ ಕಲ್ಲು ನೀರು ಕಟ್ಟಿದ ಗದ್ದೆಯಲ್ಲಿ ಬಗ್ಗಿ ಬಗ್ಗಿ ಹೊಡೆದು..ಕಪ್ಪೆ ಆಟ ಅಡುತ್ತಿದ್ದೆವು..ಎಲ್ಲರ ಪಾಟಿಚೀಲ ಇಟ್ಟು ಅದಕ್ಕೆಕೊಡೆ ಕೊಪ್ಪೆ ಸೂಡಿಸಿಟ್ಟು..ನಾವು ಅದ್ದುತ್ತಿದ್ದೆವು.ಯಾರಾದರೂ ಕಂಡು..ಶೆಳೆ ತಂದು ಬೆರಸಿದರೆ ನಮ್ಮ ಆಟ ಕತಮ್. ಕಾದದ ದೋಣಿ..ಬಾಳೆತೆಪ್ಪ..ಎಲ್ಲರ ಗದ್ದೆಲಿ ರೆರೆರೋ….ಪಪಪೋ… ಎನ್ನುವ ಹಾಡು..ಹುಳ ಹೆಕ್ಕುವ ನುರಾರು ಬೆಳ್ಳಕ್ಕಿ..ಅದನ್ನು ಹಿಡಿಯುವ ಉಳ್ಳ..ನೆಟ್ಟಿ ಸಮಯದಲ್ಲಿ ಅರಲಿನ ನೀರಲ್ಲಿ ಹಸಿರು..ಹಸಿರು ಜುಟ್ಟಿನಂತ ಶಶಿಕಟ್ಟು..ನೆಡುವಾಗ ಕುಣಿಯುವ ಸೂಡುವ ಗುರ್ಬು..ಹೆಂಗಸರ ..ಸೂ…ವೇ…..ಎನ್ನುವ ಹಾಡು..

RELATED ARTICLES  ಕಳೆದುಹೋಗುವ ಭಾವನೆಗಳು: ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲೆಗಳು(ಭಾಗ - 2).

ಕಣ್ಣು ಕುಡಿಯುವ ಜನಕೆ..ಒಡೆಯನ ಮನೆ ಹಾಲು ಹಾಕಿದ ಉಗ್ಗದಲಿ ತಂದ ಬಿಸಿಬಿಸಿ ಚಾ..ಅದನ್ನು ಕುಡಿಯುವಾಗ ನಮಗೆ ಮಾಣಿ..ಮಾಣಿ..ಎಂದು ಪ್ರೀತಿಯಿಂದ ಮಾತನಾಡಿಸಿದ್ದು.
ಅವರಿಲ್ಲದ ಈದಿನ..ಅವರು ದುಡಿದ ಗದ್ದೆ ತೋಟದ..ಪಲ ಉಣ್ಣುವಾಗ..ನೆನಪಿಗೆ ಬಂದು ಕಣ್ಣೀರು ಬರುತ್ತದೆ..ಈಗ ಆ ಪ್ರೀತಿಸುವ ಆಳೂ ಇಲ್ಲ..ಪ್ರೀತಿಸುವ ಮಾಣಿಯೂ ಇಲ್ಲ..ಎಲ್ಲ ದುಡ್ಡು..ಬರೆವಾಗ ಬೆರಳಮೇಲೆ..ಕಣ್ಣುಹನಿಬಿತ್ತು..

ಬರೆಯಲಾರೆ..ನೆನಪುಗಳು ಒತ್ತುತ್ತಿವೆ ತಾ ಮುಂದು..ತಾ ಮುಂದು ಎಂದು..
ಮುಂದಿನ ವಾರ ಕಣ್ಣೊರೆಸಿ ಬರುವೆ..ನೀವೂ ಕಣ್ಣೊರೆಸಿ ಕಾಯುವಿರಾ…

??ನಿಮ್ಮ ತಿಗಣೇಶನನ್ನು..