ಪ್ರಭಾ ಮತ್ತು ವೆಂಕಟ್ರಮಣ ಭಟ್ಟ ಪುಣೆ.

ನೀನು ಹಿಂದೆ ಬಂದಾಗ ನಿನಗೆ ಆಯುಷ್ಯ ಕೊಟ್ಟು ಕಳುಹಿಸಿದ್ದೆ. ಏನೂ ಚಿಂತೆ ಮಾಡಬೇಡ …. ನೋಡು! ಕಂದನ ರೋಧನದ ಕಾಳಜಿ ತಾಯಿಗೆ ಇದ್ದೇ ಇರುತ್ತದೆ.

(ಇಸವಿ ಸನ ೧೯೬೮ರ ಸುಮಾರಿಗೆ ಶ್ರೀ ನಾರಾಯಣ ಬುವಾ ಕರಮರಕರ, ಸಜ್ಜನಗಡ ಅವರಿಗೆ ಬರೆದ ಪತ್ರ)

||ಶ್ರೀರಾಮ ಸಮರ್ಥ||
ಶುಕ್ರವಾರ, ಶಕೆ ೧೮೯೦
ವರದಪುರ ಆಶ್ರಮ
ಚಿ. ನಾರಾಯಣ ಕರಮರಕರನಿಗೆ ಆಶೀರ್ವಾದ,
ಮಗಾ!
‘ಸಾಧಕ ಭಕ್ತಿಯಿಂದ ನಮಸ್ಕಾರ ಮಾಡಲು| ಆಗವನ ಚಿಂತೆ ಸಾಧುಗೆ ತಾಗಿತು|
ಸುಗಮ ಪಥದಲಿ ಕರೆದೊಯ್ದು ಇಡುವನು| ಎಲ್ಲಿ ಬೇಕೋ ಅಲ್ಲಿ||’
ಇದೊಂದೇ ಸಾಲು ನಿನಗೆ ಬೇಕಾದಷ್ಟು ಧೈರ್ಯ ಕೊಡಲು ಸಾಕು.
‘ಗರುಡ ಆಕಾಶದೆತ್ತರದಿ ಸುತ್ತುತ್ತ| ತನ್ನ ಚಿತ್ತವನಿಡುವದು ಮರಿಗಳ ಮೇಲೆ|
ಇದು ಹೀಗೇ ಹೌದೋ ಅಲ್ಲವೋ?

ನೀನು ಹಿಂದೆ ಬಂದಾಗ ನಿನಗೆ ಆಯುಷ್ಯ ಕೊಟ್ಟು ಕಳುಹಿಸಿದ್ದೆ. ಒಂದು ಬೋಧಪ್ರದ ಪತ್ರವನ್ನೂ ಕಳಿಸಿದ್ದೆ. ಏನೂ ಚಿಂತೆ ಮಾಡಬೇಡ. ನೋಡು! ಕಂದನ ರೋಧನದ ಕಾಳಜಿ ತಾಯಿಗೆ ಇದ್ದೇ ಇರುತ್ತದೆ. ‘ತಾಯಿ ಬಾಲಕನನ್ನು ನಾನಾ ಪ್ರಯತ್ನದಿಂದ ಸಾಕೇ ಸಾಕುತ್ತಾಳೆ’
‘ಯಾವನು ಅಂತರ್ನಿಷ್ಠನಿರುವನೋ| ಅವನು ಅವನ ಅಂತರ್ನಿಷ್ಠೆಯಿಂದಾಗಿಯೇ ಅಸಾಧಾರಣನು| ಜಗದ ಜಗದೀಶ | ಅವನನ್ನೇ ಗುರುತಿಸುವನು|’
‘ಮಿಥ್ಯೆಯನರಿತು ತ್ಯಜಿಸು| ಬ್ರಹ್ಮಭಾವದಲಿ ಅನುಭವಿಸು|
ಅದರ ಸಮಾಧಾನ ಪಡೆ| ನಿಸ್ಸಂಗದಲ್ಲೀ|’

RELATED ARTICLES  ಚಂಡಮಾರುತದ ಎಫೆಕ್ಟ್ : ಹಲವೆಡೆ ಮಳೆ.

ನೋಡು! ಭಿಕ್ಷೆಗೆ ಹೋಗುವ ದಿನಗಳು ಬಂದಿವೆ. ಇದೊಂದು ಸಮರ್ಥರ ದೊಡ್ಡಸೇವೆ. ಶ್ರೀ ಸಜ್ಜನಗಡದಲ್ಲಿ ನಡೆಯುವ ಅನ್ನದಾನಕ್ಕೆ ಇದರಿಂದ ಬಹಳ ಸಹಾಯವಾಗುತ್ತದೆ. ವರ್ಷದಲ್ಲಿ ಎರಡು-ಮೂರು ತಿಂಗಳು ನಿಮ್ಮೆಲ್ಲರ ಈ ಸೇವೆ ಅಮೂಲ್ಯವಾಗಿದೆ. ಇದರಲ್ಲಿ ಪ್ರಚಾರ ಕಾರ್ಯವೂ ಆಗುತ್ತದೆ. ‘ಕೀರ್ತನೆಯಿಂದ ದೇಹ ಬ್ರಹ್ಮರೂಪಿಯಾಗುತ್ತದೆ’ ಎಂಬ ಶ್ರೀ ತುಕಾರಾಮರ ವಾಕ್ಯ ನಿನ್ನ ಬಗ್ಗೆ ವಿಚಾರ ಮಾಡುವಾಗ ಸಹಜವಾಗಿ ನೆನಪಾಯಿತು. ಕೀರ್ತನೆಯಿಂದ ಪ್ರಚಾರ ಚೆನ್ನಾಗಾಗುತ್ತದೆ. ‘ಕಲೌ ಕೀರ್ತನ ವರಿಷ್ಠಃ’ ಹೀಗೆ ಶ್ರೀ ಸಮರ್ಥರ ಹೇಳಿಕೆ ಇದೆ. ನಿನ್ನಂಥ ಹರಿದಾಸ ಮತ್ತು ವಿರಕ್ತ ಶ್ರೀ ಸೇವಾಮಂಡಳಕ್ಕೆ ಸಿಕ್ಕಿದ್ದರಿಂದ ಅವರ ತೊಡಕುಗಳು ಬಹಳಿಷ್ಟು ದೂರವಾದವು. ಜನರಿಗೆ ಮಾರ್ಗದರ್ಶನವೂ ಆಗುತ್ತದೆ. ಭಕ್ತಿಯೂ ಹೆಚ್ಚುತ್ತದೆ. ದ್ರವ್ಯ ಸಹಾಯವೂ ಹೆಚ್ಚಾಗುತ್ತದೆ. ನಮ್ಮ ಸಂಗಡ ಕೆಲವೇ ಆರಿಸಿದ ಜನರಿರಬೇಕು. ಶಕ್ಯವಿದ್ದಲ್ಲಿ ಅವರಲ್ಲಿ ಹೆಣ್ಣುಮಕ್ಕಳಿರಬಾರದು. ಯಾರಾದರೂ ಒಬ್ಬಿಬ್ಬರು ಹಿರಿಯ, ಗಂಭೀರ, ಅಭ್ಯಾಸಶೀಲ ಗುರುಭಗಿನಿ ಇದ್ದರೆ ಜನರ ಕಣ್ಣು ಮುಂದೆ ಅಷ್ಟಾಗಿ ಬರುವದಿಲ್ಲ. ನಮ್ಮ ಒಟ್ಟಿನ ವ್ಯವಸ್ಥೆ, ನಿದರ್ಶನ ನೋಡಿ ಸಮಾಜದಲ್ಲಿ ಪೂಜ್ಯ ಭಾವ ನಿರ್ಮಾಣವಾಗಬೇಕು. ನಿತ್ಯ ಅಂತರ್ಮುಖವಾಗಿರುವದರಿಂದ ಮನಸ್ಸು ಶುದ್ಧವಾಗಿ ಭಗವಂತನ ಚರಣಗಳ ಪ್ರಾಪ್ತಿಯೂ ಹೆಚ್ಚಾಗುವದು.
ಎಲ್ಲವೂ ವ್ಯವಸ್ಥಿತವಾಗುವದು. ಶಂಕೆ ಅಥವಾ ಚಿಂತೆ ಇರಬಾರದು. ನೀವೆಲ್ಲ ಸಾಧಕರಿಗೆ ನನ್ನ ಆಶೀರ್ವಾದ.
ಇತಿ ಶಮ್
ಶ್ರೀಧರ

RELATED ARTICLES  WhatsApp ನಲ್ಲಿ ಬಂತು ಮತ್ತೊಂದು ಹೊಸ ಫೀಚರ್..!