ಪ್ರಭಾ ಮತ್ತು ವೆಂಕಟ್ರಮಣ ಭಟ್ಟ ಪುಣೆ

ನಮ್ಮ ಧ್ಯೇಯ ಸಾಧಿಸಲು ನಿಷ್ಕಾಮ ಸೇವೆ ಮಾಡಬೇಕು ಮತ್ತು ಸತತ ಸ್ವರೂಪದ ಅನುಸಂಧಾನವನ್ನೂ ಕಾಯ್ದುಕೊಳ್ಳಬೇಕು.

(ಇಸವಿ ಸನ ೧೯೬೭ರಲ್ಲಿ ಶ್ರೀ ಮಾರುತಿ ಬುವಾ ರಾಮದಾಸಿ ಸಜ್ಜನಗಡ, ಅವರಿಗೆ ಬರೆದ ಪತ್ರ)

||ಶ್ರೀರಾಮ ಸಮರ್ಥ||
ವರದಪುರ ಆಶ್ರಮ
೧೦-೦೫-೧೯೬೭
ಚಿ. ಮಾರುತಿಗೆ ಆಶೀರ್ವಾದ,

ನಿನ್ನ ಅನುಷ್ಠಾನ ಚೆನ್ನಾಗಿ ನಡೆದಿದೆ ಎಂದು ಚಿ. ಲಕ್ಷ್ಮೀನಾರಾಯಣನು ಹೇಳಿದ್ದಾನೆ. ನೀನು ಆಶ್ರಮದ ಅಡಿಕೆ ಮರಗಳಿಗೆ ನೀರು ಹಾಕುವ ಸೇವೆಯನ್ನು ಸ್ವಸಂತೋಷದಿಂದ ಸ್ವೀಕರಿಸಿದ್ದೀಯೆಂದು ತಿಳಿದು ಬಂತು. ಸಾಧಕರು ತಮ್ಮ ಉಪಾಸನೆಯನ್ನು ಸಂಭಾಳಿಸುತ್ತ ಆದಷ್ಟು ಸೇವೆ ಮಾಡುವದು ಉತ್ತಮವೇ. ಸ್ವಲ್ಪ ಶ್ರಮ ಮಾಡುವದರಿಂದ ಶರೀರ ಚುರುಕಾಗಿರುತ್ತದೆ; ಅದೇರೀತಿ ಮನಸ್ಸೂ ಹಗುರಾಗುತ್ತದೆ. ನಿಷ್ಕಾಮ ಕರ್ಮಯೋಗ ಚಿತ್ತಶುದ್ಧಿಗೆ ಅತ್ಯಂತ ಉಪಯುಕ್ತವೆನಿಸುತ್ತದೆ. ನಮ್ಮ ಧ್ಯೇಯ ಸಾಧಿಸಲು ನಿಷ್ಕಾಮ ಸೇವೆ ಮಾಡಬೇಕು ಮತ್ತು ಸತತ ಸ್ವರೂಪದ ಅನುಸಂಧಾನವನ್ನೂ ಕಾಯ್ದುಕೊಳ್ಳಬೇಕು.

RELATED ARTICLES  ಶನಿ ಕಾಟದಿಂದ ತಪ್ಪಿಸಿಕೊಲ್ಳುವ ಉಪಾಯಗಳಿವೆ.

ಕೆಳಗೆ ಆಶ್ರಮದಲ್ಲಿ ನಿನಗೆ ಹೊಟ್ಟೆ ತುಂಬಾ ಊಟ ಹಾಕುತ್ತಾರಲ್ಲಾ? ಎಂದಾದರೂ ಮಧ್ಯದಲ್ಲೇ ಹಸಿವಾದರೆ ಚಿ. ಹರಗೋಪಾಲನಿಂದ ಶೇಂಗಾ ಅಥವಾ ಅವಲಕ್ಕಿ ಕೇಳಿ ತೆಗೆದುಕೋ. ಗುರುಸಾನಿಧ್ಯದಲ್ಲಿ ಯಾವುದೇ ಸಂಕೋಚ ಮಾಡದೇ ಜೀರ್ಣವಾಗುವದನ್ನು ತಿನ್ನು ಮತ್ತು ಬಹಳ ಸಾಧನೆ ಮಾಡು. ಇಲ್ಲಿಯ ಸೃಷ್ಟಿ ಸೌಂದರ್ಯ ಮತ್ತು ಹವಾಮಾನ ಅತ್ಯಂತ ಉತ್ತಮವಾಗಿರುವದರಿಂದ ಮನಸ್ಸು ಪ್ರಸನ್ನವಾಗಿದ್ದಿರಬೇಕು. ಮನೆ, ಮನೆಮಂದಿ ಬಿಟ್ಟ ಸಾಧಕರು ಉಪಾಸನೆಯ ಯೋಗದಿಂದ ಗುರುಕೃಪೆ ಸಂಪಾದಿಸಿ ತಮ್ಮ ಜೀವನ ಧನ್ಯ ಮಾಡಿಕೊಳ್ಳಬೇಕು.

RELATED ARTICLES  ಅಂಜಲಿ ನಿಂಬಾಳಕರ್ ವಿರುದ್ಧ ಮಹಿಳಾ ಅಭ್ಯರ್ಥಿ ನಿಲ್ಲಿಸಬಹುದೇ ಬಿಜೆಪಿ ?

ಇತಿ ಶಮ್
ಶ್ರೀಧರ