ತಿಗಣೇಶ ಮಾಗೋಡು.

ಕಳೆದವಾರ ಓದಿದ..ಖುಷಿಯಾಗಿದ್ದರೆ..ಓದಲು ಕಾಯುತ್ತಿರುವ ನನ್ನವರೇ.. ಹಳೆಯ ನೆನಪುಹೊತ್ತು ಬಂದಿರುವೆ..ನೀವೂ ನಿಮ್ಮ ನೆನಪು ಕೆದಕಿ ಕೆಲ ಕ್ಷಣ ಬಾಲಕರಾಗಿ.

ನಾವು ಬಲ್ಬಿನ ಕೆಳಗೆ ಓದಿದವರಲ್ಲ.ತಗಡಿನ ಚಿಮಣಿಬುರುಡೆಯೇ ನಮ್ಮ ಬೆಳಕಿನ ಮೂಲ.ಶ್ರೀಮಂತರ ಮನೆಯಲ್ಲಿ ತಾಮ್ರದ ಬುರುಡೆ..ಕೆಲವರ ಮನೆಯಲ್ಲಿ ಆಲೆಮಾವ್ …ಕಡು ಬಡವರ ಮನೆಯಲ್ಲಿ ತಗಡು..ಬಹುತೇಕ ಹುಲ್ಲಿನ ಮನೆ..ನಮ್ಮನೆ ಅಜ್ಜ ಹಾಕಿದ ಹಂಚು..ಅಜ್ಜ ತಂದ ಕಂಚು.ಒಂದು ಬುರುಡೆಯ ಸುತ್ತಲೂ ನಾಲ್ಕೈದು ಜನ ಪಾಟಿ ಹರಡಿ ಕುಳಿತಿರುತ್ತಿದ್ದೆವು..ಕಾಲಿಗೆ ಮುಳ್ಳು ಹೆಟ್ಟಿದವರೂ..ಅದೇ ಬುರುಡೆಯ ಎದುರಿಗೇ..ಗಾಳಿ ಬಂದರೆ ಬುರುಡೆ ಬಂದ್.ಮೇಣದ ಬತ್ತಿ ಇದ್ದರೂ ಕಪಾಟಿನಲ್ಲಿ ಇರುತ್ತಿತ್ತು.ಓಡಾಡುವುದಕ್ಕೆ..ಸೂಡಿ..ಇಲ್ಲಾ ವಾಟೆ ಅಂಡೆಯ ಜಿಮಟಗೆ.ಇಲ್ಲಾ ಕನ್ನು ಗೆರಟೆಯಲ್ಲಿ ಮೇಣದಬತ್ತಿ ಹಚ್ಚಿ..ಒಡಾಡುವವರು.ನುಸಿ-ನೊರ್ಜುಗಳು ಯತೇಚ್ಚ ಕಚ್ಚುತ್ತಿದ್ದವು..ಮಲಗಲು ಲೇಪುಗಳಿಲ್ಲ..ಹುಲ್ಲಿನಲ್ಲಿ ನೆಯ್ದ ಹಸೆ.. ಕಂಬಳಿ..ದೊಡ್ಡಪ್ಪನ ಮನೆಯಲ್ಲಿ ಲೇಪುಗಳಿದ್ದವು.

ಎಲ್ಲಾದರೂ ವರ್ಷಕ್ಕೊಂದು ಸಲ ಬಿಸಿಲಿಗೆ ಹಾಕಿ ಬೆತ್ತದಲ್ಲಿ ಜಪ್ಪಿ ಧೂಳು ಹೊಡೆಯುತ್ತಿದ್ದರು..ನಾವು ಆಗ ಉರಿ ಬಿಸಿಲಲ್ಲಾದರೂ ತಾಸುಗಟ್ಳೆ ಒಣಗಿಸಿದ ಲೇಪಿನ ಮೇಲೆ ಕದ್ದು ಮಲಗಿ ಸುಖ ಪಡುತ್ತಿದ್ದೆವು..ಹೊರಳಾಡಿ ಮತ್ತಗಿನ ಲೇಪಿನ ಸುಖದಿಂದ ಬುಸಿಲಲ್ಲೇ ಒರಗಿದ್ದಿದೆ..ಒಂದುಸಲ ಸಿಕ್ಕುಹಾಕಿಕೊಂಡು..ಹಬ್ಬಸಗೆ ಗಿಡದ ಬರ್ಲು ತಿಂದ ನೆನಪಿದೆ..ಆದರೂ ಆ ಕದ್ದು ಮಲಗಿದ ಲೇಪಿನ ಮೆತ್ತಗಿನ ಸುಖದ ನಿದ್ರೆ..ಮತ್ತೆ ಬರಲೇ ಇಲ್ಲ.ಈಗ ಲೇಪಿದೆ ನಿದ್ರೆಯಿಲ್ಲ.

RELATED ARTICLES  .........ಅಪ್ಪನಿಲ್ಲದ ಹೊಳ್ಳಿ......

ಇನ್ನು ದೊಡ್ಡಪ್ಪನ ಮನೆಯಲ್ಲಿ ಗ್ಯಾಸ ಲೈಟ ಇತ್ತು..ಅದು ಅಂತಂತಾ ದುನ ಹೊರಗೆ ಬರುವದು..ಅದನ್ನು ಹಚ್ಚುವಾಗ ನಮಗೆ ಹತ್ತಿರ ಬರಲು ಕೊಡುತ್ತಿರಲಿಲ್ಲ..ಅದನ್ನು ಹಚ್ಚುವುದು ಕಲೆಯೆ..ಪಂಪು ಹೊಡೆವಾಗ ಮೇಂಟಲ್ ಉದುರಿದರೂ..ಹಚ್ಚುವವ ಬಯ್ಯುವುದು ನಮಗೇ..”ಹಡಬೆ ಪೋರ್ಗೋ” ಇದು ಕಾಮನ್ ಬೈಗ್ಳ..ಸಂಜೆ ಏಳು ಗಂಟೆಗೆ ಊಟ..ಎಂಟು ಗಂಟೆ ಒಳಗೆ ಮಲಗುತ್ತಿದ್ದರು..ಅಂಗಳದಲ್ಲಿ ಇಸ್ಪೀಟ ಮಂಡ ಅಗುತ್ತಿತ್ತು..ನಾವು ಕೆಲ ಹೊತ್ತು ನಿಂತು ನೋಡುತ್ತಿದ್ದೆವು.ದಿನಾ ಅವಲಕ್ಕಿ..ಉಪ್ಪಿಟ್ಟು.ಮುಸುರೆ ಮಾಡುತ್ತಿರಲಿಲ್ಲ..ಮೊಗೆಕಾಯಿ..ಸೌತೆಕಾಯಿ ಬೆಳೆದಾಗ..ದೋಸೆ ಬಾಳೆಮರ ಕಡಿದು ಕನ್ನು ತೋಡಿ..ಅದರಲ್ಲಿ ತುಂಬಿದ ನೀರು ತಂದು ದೋಸೆ ಮಾಡುತ್ತಿದ್ದರು..ಇನ್ನು ಅತ್ತಿಮರದ ಬೇರು ಕಡಿದು..ಹೊಂಡತೋಡಿ ಬೊಡ್ಡೆ ಇಡುತ್ತಿದ್ದೆವು..ಹನಿಹನಿ ಬಸಿದು ಬೊಡ್ಡೆ ತುಂಬುತ್ತಿತ್ತು..ಆ ನೀರು ಮುಸುರೆಯಲ್ಲ..ಅದರಲ್ಲಿ ಚಕ್ಕಲಿ..ವಡೆ ಮಾಡಿ ತಿಂದವರು.ನಮ್ಮನೆಯಲ್ಲಿ ಬಗೆಬಗೆ ಮಾಡಿದ್ದು ಕಡಿಮೆ..ನಮ್ಮದು ಒಂದೇ ಕಡೆ ಮನೆ ಯಾರ ಮನೆಯಲ್ಲಿ ಏನು ತಂದು ತಿಂದರೂ..ನಾವು ತೀಡುತ್ತಿದ್ದೆವು..ಅವರ ಮನೆಯ ಹೊಳ್ಳಿ ತಳೆಯುತ್ತಿದ್ದೆವು..ಕೈಮೇಲೆ ಒಂದು ಚೂರು ಇಡುವರೆಂಬ ಆಸೆಯಿಂದ..ಯಾರ ಮಬೆಯಲ್ಲಿ ಕಾರ್ಯವಾದರೂ..ನಾವು ಬಿಡುತ್ತಿರಲಿಲ್ಲ…ಎಂಟು ಹತ್ತು ಸಲ ಪಾನಕ..ಕುಡಿದು ಮರುದಿನ ಮೂಗು ಸೇರಿಸುತ್ತಿದ್ದೆವು.

RELATED ARTICLES  ಮೂಲ ಸೌಕರ್ಯಗಳಿಂದ ವಂಚಿತವಾಗಿದೆ ಕುಮಟಾದ ಈ ಗ್ರಾಮ

ಬಡಿಸಲು ಬಂದಾಗ ಎಡಗೈಮುಂದೆ ಮಾಡಿ ಬೇಡಿದ ಲಾಡು ಮನೆಗೆ ತಂದು ತಿಂದದ್ದು ಕಣ್ಣಿಗೆ ಕಟ್ಟುತ್ತದೆ..ಮದುವೆ ಉಡುಗರೆ ಮಾಡಿದವರಿಗೆ ಪಂಚಕಜ್ಜದ ಪೊಟ್ಳೆ ಕೊಡುತ್ತಿದ್ದರು..ಆ ಪೊಟ್ಳೆಯನ್ನೂ ಕೈ ಒಡ್ಡಿ ತಂದು ತಿಂದ ನೆನಪಿದೆ..ಓದುವ ಬೆಳಕಿನ ಸುದ್ದಿ ಬರೆಯುತ್ತಿದ್ದೆ..ಬುರುಡೆಯೂ ಇಲ್ಲದ ಮನೆಯಿತ್ತು ಹೊಡಚಲು ಹಾಕಿ ದಿನ ಕಳೆದವರನ್ನು ಕಂಡಿರುವೆ ಅವರಿಗಿಂತ ನಾವು ದೊಡ್ಡವರು ಎನಿಸುತಿತ್ತು..ಬುರುಡೆ ಹಿಡಿದು..ಮನೆಗೆ ಬೆಂಕಿ ಬಿದ್ದ ಘಟನೆ ನೆನಪಿದೆ..ನಾವು ತೋಟದ ಹಳ್ಳದಲ್ಲಿಯೇ ಹೇತವರು..ಸಂಕದ ಮೇಲೆ ಕುಳಿತು ಹರಿವ ನೀರಲ್ಲಿ. ಮೀನುಗಳು ನಮಗಾಗಿ ಕಾಯುತ್ತಿದ್ದವು..ಮೀನಿನ ಜೊತೆ ಮಾತನಾಡುತ್ತಿದ್ದೆವು..ದಿನಾಲೂ ಬರುವ ಮೀನಿನ ಪರಿಚಯವಿರುತ್ತಿತ್ತು.

ಬೇಸಿಗೆಯಲ್ಲಿ ನೀರು ಸಣ್ಣದಾದಾಗ ಹಳ್ಳಕ್ಕೆ ಮೆಣಸಿನ ಬಳ್ಳಿ ಜಪ್ಪಿ ಹಾಕಿ ಎಲ್ಲ ಮೀನುಗಳನ್ನು ಕೊಂದು ತೆಗೆದು ಕೊಂಡು ಹೋಗುತ್ತಿದ್ದರು..ಮತ್ತೆ ಹೊಸಮೀನು..ಹೀಗೆ ಮೀನನ್ನೂ ಸಾಕಿದವರು..ನಾಯಿಗಳೂ ನಮ್ಮನ್ನು ಪ್ರೀತಿಸುತ್ತಿದ್ದವು..ಇದಕ್ಕಾಗಿಯೇ..ಇಂದು ತಿಂದದ್ದನ್ನೂ..ತಿಂದು ಬಿಟ್ಟಿದ್ದನ್ನೂ. ಮನೆಯಲ್ಲಿಯೇ..
ಇಟ್ಟು ಯಾವ ಪ್ರಾಣಿಗಳ ಪ್ರೀತಿಯಿಲ್ಲದೇ..ಸ್ವಚ್ಛದ ಅಡಿಯಲ್ಲಿ ಸ್ವಚ್ವಂದ ಸರಪಳಿಯ ಕೊಂಡಿ ಕಳಚಿದ್ದೇವೆ..ಪ್ರೀತಿಯಿರದ ಅನ್ನವಿದೆ..ನೀತಿಯಿರದ ಬಾಳಿದೆ..

ನಮಸ್ಕಾರ..ಮತ್ತೆ ಬರುವೆ..ತಿಗಣೇಶ.