ಅಕ್ಷರರೂಪ :ಪ್ರಭಾ ಮತ್ತು ವೆಂಕಟ್ರಮಣ ಭಟ್ಟ ಪುಣೆ

ಶ್ರೀಸಮರ್ಥರು ಮಾರುತಿರಾಯನ ಅವತಾರವಾಗಿರುವದರಿಂದ ಅವರಿಗೆ ತಪಸ್ಸಿನ ಅವಶ್ಯಕತೆ ಇರಲಿಲ್ಲ; ಅದು ಸ್ವತಃ ಜನ್ಮಸಿದ್ಧವಾಗಿತ್ತು, ಎನ್ನುವದು ನಿಜವಾಗಿದ್ದರೂ ತಪಸ್ಸಿನಿಂದ ಅಘಟಿತ ಕಾರ್ಯ ಸಾಧಿಸಲಾಗುತ್ತದೆ ಎಂಬುದರ ನಿದರ್ಶನ ಅವರು ತೋರಿಸಿ ಕೊಟ್ಟಿದ್ದಾರೆ.

(ಇಸವಿ ಸನ ೧೯೬೮ರಲ್ಲಿ ಶ್ರೀ ಗಜಾನನ ಗುರುಜೀಯವರಿಗೆ ಬರೆದ ಪತ್ರ)

ಪತ್ರದ ಸಂದರ್ಭ: ಮಹಾರಾಷ್ಟ್ರದ ಟಾಕಳೀ ಊರಿನ ಹತ್ತಿರದ ನಂದನಿ-ಗೋದಾ ಸಂಗಮಕ್ಕೆ ತಾಗಿ ಶ್ರೀ ಸಂಗಮೇಶ್ವರ ಮಹಾದೇವ ಮಂದಿರ ಮತ್ತು ಅದರಲ್ಲೇ ಶ್ರೀ ಸಮರ್ಥಮೂರ್ತಿ ಎಂಬ ಮಂದಿರವನ್ನು ಕಟ್ಟಿ, ಟಾಕಳಿ ಮಠದ ಜೀರ್ಣೋದ್ಧಾರವನ್ನೂ ಮಾಡಬೇಕು ಎಂದು ಮುಂಬೈ ಹತ್ತಿರದ ಠಾಣೆಯ ಸಂತ ಶ್ರೀ ಗಜಾನನ ಮಹಾರಾಜ ಪಟ್ಟೇಕರರ ಮನದಿಚ್ಛೆಯಿರುವದೆಂದು ಮತ್ತು ಅದಕ್ಕಾಗಿ ಆಶೀರ್ವಾದ ಬೇಡಿರುವ ನಾಶಿಕದ ವೇ| ಶಾ.ಸಂ. ಗಜಾನನ ಗುರೂಜಿ ಕ್ಷೇಮಕಲ್ಯಾಣಿಯವರು ಬರೆದ ಪತ್ರಕ್ಕೆ ಸ್ವಾಮಿಗಳ ಉತ್ತರ
||ಓಂ|||
ಶ್ರೀ ಶ್ರೀಧರಾಶ್ರಮ, ಶ್ರೀಕ್ಷೇತ್ರ ವರದಪುರ
ಚೈತ್ರ ಶು.೧೨, ಶಕೆ ೧೮೬೦
ಯೋಧರ್ಮಾಂಧನಿವಾರಣೈಕತರಣಿರ್ದೈದಿಪ್ಯಮಾನೋ ಮಹಾನ್|
ಸಾಕ್ಷಾದ್ಧರ್ಮಮನೋಜ್ಞರಾಮಕಮಲಾಮೋದೈಕದಿವ್ಯಾಕೃತಿಃ||
ಯೀಭೂಚ್ಛ್ರೀಶಿವರಾಟ್ ಚಕೋರಹೃದಯಾನಂದೇನ್ದುಭೃಚ್ಛಂಕರಃ|
ರಾಮಾಭಿನ್ನವಿಶಾಲದಾಸಪದವೀಂ ಶ್ರೀರಾಮದಾಸಂ ಭಜೇ||

RELATED ARTICLES  ಬದುಕಿಗೆ ಬಣ್ಣ ತುಂಬಿದವರು ಸಂಚಿಕೆ -108

ವೇದಶಾಸ್ತ್ರ ಸಂಪನ್ನ ಗಜಾನನ ಗುರೂಜೀ ಕ್ಷೇಮಕಲ್ಯಾಣಿಯವರಿಗೆ ಶ್ರೀಮನ್ನಾರಾಯಣ ಸ್ಮರಣಪೂರ್ವಕ ಅನೇಕ ಶುಭ ಆಶೀರ್ವಾದಗಳು.
ನಿಮ್ಮ ದಿ. ೩೦-೦೩-೧೯೬೮ನ ಪತ್ರ ತಲುಪಿತು. ಅದನ್ನು ನಾನು ಸ್ವತಃ ಓದಿ ನೋಡಿದೆ.
ಶ್ರೀಸಮರ್ಥರು ದೇಶ-ಧರ್ಮದ ಉದ್ಧಾರಕ್ಕಾಗಿ ದಿವ್ಯ ತಪಸ್ಸು ಆಚರಿಸಿದ ಸ್ಥಳ ಅಂದರೆ ಈ ಟಾಕಳಿ ಮಠ.

ಸೂರ್ಯೋದಯದ ಮೊದಲು ಸಂಧ್ಯಾಧಿಕ ಮುಗಿಸಿ, ಸೂರ್ಯೋದಯಕಾಲದಿಂದ ಇಲ್ಲಿಯ ಸಂಗಮದಲ್ಲಿ ನಿಂತು, ಮಧ್ಯಾಹ್ನ ೧೨ ಗಂಟೆಯ ವರೆಗೆ ಪುರಶ್ಚರಣದ ಜಪವನ್ನು ಶ್ರೀಸಮರ್ಥರು ಮಾಡುತ್ತಿದ್ದರು. ಅವರ ಈ ಕ್ರಮ ಅವ್ಯಾಹತವಾಗಿ, ಸತತ ಹನ್ನೆರಡು ವರ್ಷ ನಡೆಯಿತು.

‘ವಿಕ್ರಮಾರ್ಜಿತಸತ್ವಸ್ಯ ಸ್ವಯಮೇವ ಮೃಗೇಂದ್ರತಾ’ ಎಂಬ ದೃಷ್ಟಿಯಿಂದ ಶ್ರೀಸಮರ್ಥರು ಮಾರುತಿರಾಯನ ಅವತಾರವಾಗಿರುವದರಿಂದ ಅವರಿಗೆ ತಪಸ್ಸಿನ ಅವಶ್ಯಕತೆ ಇರಲಿಲ್ಲ. ಅದು ಸ್ವತಃ ಜನ್ಮಸಿದ್ಧವಾಗಿತ್ತು ಎನ್ನುವದು ನಿಜವಾಗಿದ್ದರೂ ತಪಸ್ಸಿನಿಂದ ಅಘಟಿತ ಕಾರ್ಯ ಸಾಧಿಸಲಾಗುತ್ತದೆ ಎಂಬುದರ ನಿದರ್ಶನ ಅವರು ತೋರಿಸಿ ಕೊಟ್ಟಿದ್ದಾರೆ. ‘ಮೊದಲುಮಾಡಿದರು; ನಂತರ ಹೇಳಿದರು’ ತಮ್ಮ ಈ ಮಹದ್ವಾಕ್ಯಕ್ಕೆ ಇದು ಅನುಸಾರವಾಗಿಯೇ ಆಯಿತು; ಆದುದರಿಂದ ಅವರಿಗೆ ‘ಮನಸ್ಸು ಮಾಡಿದ್ದು ಆಗುತ್ತದೆ| ಜಗತ್ತಿನ ವಿಘ್ನಗಳೆಲ್ಲಾ ನಾಶವಾಗುತ್ತವೆ| ರಘುನಾಥನ ಕೃಪೆಯೊಂದಿದ್ದರೆ| ಅನುಭವವಾಗುವದು||

RELATED ARTICLES  ಬದುಕಿಗೆ ಬಣ್ಣ ತುಂಬಿದವರು

‘ಹೇ ತೋ ಆಹೇ ಸುಪ್ರಚೀತ| ತುಝ ವಾಟೇ ನಾ ಪ್ರಚೀತ| ಸಾಕ್ಷಾತ್ಕಾರೇ ನೇಮಸ್ಥ| ಪ್ರತ್ಯಯೋ ಪಹಾವಾ||
ಹಾಗಾಗಿಯೇ, ಈ ಮೇಲಿನಂತೆ ಅಧಿಕಾರ ವಾಣಿಯಿಂದ ಹೇಳಲಿಕ್ಕೆ ಬಂತು. ಮತ್ತು ಅವರು ಇವುಗಳ ಸತ್ಯತ್ವವನ್ನು ಸ್ವಧರ್ಮ ಮತ್ತು ಸ್ವರಾಜ್ಯದ ಸ್ಥಾಪನೆಯಿಂದ ಜನರ ನಿದರ್ಶನಕ್ಕೆ ತಂದರು ಎಂಬಲ್ಲಿ ತಿಳಮಾತ್ರವೂ ಸಂಶಯವಿಲ್ಲ.

ಅವರ ಉಜ್ವಲ ತಪಶ್ಚೈರ್ಯದ ಬೆಳಗುತ್ತಿರುವ ಜ್ಯೋತಿಯನ್ನು ಶ್ರೀಸಮರ್ಥರ ಸ್ಮಾರಕರೂಪದಿಂದ ಅಖಂಡವಾಗಿ ಕಾದಿಡಬೇಕೆಂದು ಅನಿಸುವದು ಯಾರಿಗಾದರೂ ಸಹಜವೇ ಇದೆ.
(ಈ ಪತ್ರದ ಎರಡನೆಯ ಭಾಗ ಮುಂದುವರಿಯುವದು)