muralidhar 2

ದೇವರ ಗುಡಿಗಳನ್ನು ಗುರ್ತಿಸಲು ಗೋಪುರಗಳನ್ನು ನಿರ್ಮಿಸುವುದು ಮೊದಲಿನಿಂದಲೂ ಬಂದಿರುವ ವಿಚಾರ. ದೇವಸ್ಥಾನಗಳಿಗೆ ಗೋಪುರವೇ ಒಂದು ಅಲಂಕಾರವಿದ್ದಂತೆ. ಆ ಗೋಪುರಕ್ಕೆ ಕಲಶಗಳೇ ಶ್ರೇಷ್ಠ ಹಾಗೂ ಆಕರ್ಷಕವಾಗಿರುತ್ತದೆ. ಗೋಪುರ ನಿರ್ಮಿಸಿ ಕಳಶಗಳನ್ನು ಸ್ಥಾಪಿಸದಿದ್ದರೆ ಆ ಗೋಪುರಕ್ಕೆ ಕಳೆಯೇ ಇರುವುದಿಲ್ಲ. ಸಾಮಾನ್ಯವಾಗಿ ಗೋಪುರಗಳನ್ನು ದೇವರ ಗರ್ಭಗುಡಿಯ ಮೇಲೆ ಕಟ್ಟಿ, ರಾಜಗೋಪುರಗಳನ್ನು ದೇವಸ್ಥಾನದ ಮುಂಬಾಗದ ಬಾಗಿಲಿನ ಮೇಲೆ ಕಟ್ಟುವುದು ನಡೆದುಕೊಂಡು ಬಂದಿರುವ ರೂಢಿ. ದೇವಸ್ಥಾನಗಳಿಗೆ ಗೋಪುರಗಳು ಕೀರ್ತಿ ಶಿಖರ ಇದ್ದಂತೆ, ಗೋಪುರಗಳೇ ಆ ದೇವಸ್ಥಾನಗಳ ವೈಭವತೆಯನ್ನು ಹೇಳುತ್ತವೆ.

ಮನುಷ್ಯನ ಜೀವನಕ್ಕೂ ದೇವಸ್ಥಾನದ ಗೋಪುರಕ್ಕೂ ಏನು ಸಂಬಂಧ ಎಂದರೆ, ಮೇಲ್ನೋಟಕ್ಕೆ ಏನೂ ಅನ್ನಿಸುವುದಿಲ್ಲ ಆದರೆ ಒಳಹೊಕ್ಕು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಮನುಷ್ಯ ತನ್ನ ಜೀವನದಲ್ಲಿ ಏನಾದರೂ ಅದ್ವಿತೀಯ ಸಾಧನೆ ಮಾಡಿ, ದೇವಸ್ಥಾನದಂತಹ ಪವಿತ್ರವಾದ ವ್ಯಕ್ತಿತ್ವ ಹೊಂದಿದ್ದಾನೆ ಎಂದು ಭಾವಿಸಿದರೆ, ಮನುಷ್ಯನು ತನ್ನ ಜೀವನದಲ್ಲಿ ಸಂಪಾದಿಸುವ ಕೀರ್ತಿ ದೇವಸ್ಥಾನದ ಗೋಪುರವಿದ್ದಂತೆ, ಮನುಷ್ಯನ ಸಾಧನೆ ಬೆಳೆದಂತೆ, ಅವನ ಕೀರ್ತಿ ವಿಧ ವಿಧವಾದ ದೇವಸ್ಥಾನಗಳ ಗೋಪುರಗಳು ಎತ್ತರೆತ್ತರಕ್ಕೆ ಬೆಳೆಯುತ್ತಾ ಹೋದಂತೆ ಹೋಗುತ್ತದೆ, ಅಂತಹ ಮನುಷ್ಯನಿಗೆ ಪ್ರಶಸ್ತಿಗಳೇ ಕಳಶವಿದ್ದಂತೆ. ಕೀರ್ತಿವಂತ ಮನುಷ್ಯನ ಅಭಿಮಾನಿಗಳು ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿದ್ದಂತೆ.

ಸಣ್ಣ ದೇವಸ್ಥಾನಗಳ ಗೋಪುರಗಳು ಚಿಕ್ಕದಿದ್ದ, ಆ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಹೆಚ್ಚಾದಂತೆ ಹೋದಂತೆಲ್ಲಾ ಆ ದೇವಸ್ಥಾನದ ಕೀರ್ತಿ ಹೆಚ್ಚುತ್ತಾ ಹೋಗುತ್ತದೆ. ನಂತರದ ದಿನಗಳಲ್ಲಿ ದೊಡ್ಡ ದೊಡ್ಡ ದೇವಸ್ಥಾನಗಳ ವೈಭವೋಪೇತ ಗೋಪುರದಂತೆ ಕಂಗೊಳಿಸುತ್ತದೆ. ಅದೇರೀತಿ ಮೊದಲು ಮನುಷ್ಯನ ಸಾದನೆ ಕಡಿಮೆ ಇದ್ದಲ್ಲಿ ಅಂಥವನ ಕೀರ್ತಿಯೂ ಕಡಿಮೆ ಇರುತ್ತದೆ. ನಂತರದ ದಿನಗಳಲ್ಲಿ ಅದ್ವಿತೀಯ ಸಾಧನೆ ಮಾಡಿದಾಗ ಅವನ ಕೀರ್ತಿಯು ದೇಶದೆಲ್ಲಡೆ ಹರಡಿ ಅವನ ವ್ಯಕ್ತಿತ್ವವೂ ಬೆಳೆಯುತ್ತಾ ಹೋಗುತ್ತದೆ. ದೇವಸ್ಥಾನಗಳ ಗೋಪುರಗಳು ಎಷ್ಟು ಪವಿತ್ರವಾಗಿರುವುದೋ ಅದೇ ರೀತಿ ಮನುಷ್ಯನ ಕೀರ್ತಿಯೂ ಪವಿತ್ರವಾಗಿರುತ್ತದೆ. ದೇವಸ್ಥಾನಗಳ ಗೋಪುರಗಳನ್ನು ಯಾರೊಬ್ಬರೂ ಬಿನ್ನ ಮಾಡಲು ಹೋಗುವುದಿಲ್ಲ. ಅದೇ ರೀತಿ ಮನುಷ್ಯನ ವ್ಯಕ್ತಿತ್ವವನ್ನು ಹಾಳು ಮಾಡಲು ಯಾರಿಗೂ ಮನಸ್ಸು ಬರುವುದಿಲ್ಲ. ಹಾಳು ಮಾಡಿದರೆ ಕೆಟ್ಟ ಹೆಸರು ಬರಬಹುದೆಂಬ ಅಂಜಿಕೆಯಿಂದ ಕೆಲವರು ನೇರವಾಗಿ ಹಾಳು ಮಾಡಲು ಹೋಗುವುದಿಲ್ಲ. ಮನುಷ್ಯನಿಗೆ ತನ್ನ ವೈರಿ ಏನಾದರೂ ಅದ್ವಿತೀಯ ಸಾಧನೆ ಮಾಡಿ ಕೀರ್ತಿ ಗಳಿಸಿದನೆಂದರೆ ಅದನ್ನು ಸಹಿಸದೆ ಅನ್ಯಮಾರ್ಗದಿಂದ ಕೆಟ್ಟ ಹೆಸರು ತರಲು ನೋಡಬಹುದು. ಇಂತಹ ಕುಕ್ರುತ್ಯವೇನಾದರೂ ಫಲಿಸಿದರೆ ಮಾತ್ರ ಸಾಧಕನ ವ್ಯಕ್ತಿತ್ವಕ್ಕೆ ಭಂಗ ಉಂಟಾಗಬಹುದು. ಸಾಧಕನ ವ್ಯಕ್ತಿತ್ವಕ್ಕೆ ಭಂಗ ಉಂಟಾದರೆ ಅವನು ಸಂಪಾದಿಸಿದ ಕೀರ್ತಿಯೂ ಮಣ್ಣು ಪಾಲಾಗಬಹುದು. ಅನಿರೀಕ್ಷಿತ ಘಟನೆಗಳಿಂದ ಗೋಪುರವು ಕಳಚಿ ಬೀಳುವಂತೆ ಬೀಳಬಹುದು. ಯಾವ ರೀತಿ ದೇವಸ್ಥಾನಗಳ ಗೋಪುರಗಳು ಸಾಮಾನ್ಯವಾಗಿ ಅಥವಾ ಸುಲಭವಾಗಿ ಕಳಚಿ ಬೀಳುವುದಿಲ್ಲವೋ ಅದೇ ರೀತಿ ಸಾಧಕರ ವ್ಯಕ್ತಿತ್ವಕ್ಕೆ ಸುಲಭವಾಗಿ ಭಂಗ ಉಂಟಾಗುವುದಿಲ್ಲ. ಪ್ರಭಲವಾದ ಭೂಕಂಪ ಉಂಟಾಗಿ ಅಥವಾ ತುಂಬಾ ಹಳೆಯದಾಗಿದ್ದಲ್ಲಿ ಮಾತ್ರ ದೇವಸ್ಥಾನಗಳ ಗೋಪುರಗಳು ಕಳಚಿ ಬೀಳಬಹುದು. ಅದೇ ರೀತಿ ಸಾಧಕರ ಕೀರ್ತಿಯು ಯಾವುದಾದರೂ ಪ್ರಭಲವಾದ ಕಾರಣವಿದ್ದಲ್ಲಿ ಮಾತ್ರ ವ್ಯಕ್ತಿತ್ವ ಮುಸುಕಾಗಬಹುದು. ದೇವಸ್ಥಾನಗಳ ಗೋಪುರಗಳು ಶ್ರೇಷ್ಠವಾದಂತೆ, ಶ್ರೇಷ್ಠ ರಾಜಕಾರಣಿಗಳು, ಶ್ರೇಷ್ಠ ಶಿಕ್ಷಕರು, ಶ್ರೇಷ್ಠ ಉದ್ಯಮಿಗಳು, ಶ್ರೇಷ್ಠ ಕಲಾವಿದರು, ಶ್ರೇಷ್ಠ ಕ್ರೀಡಾಪಟುಗಳು, ಶ್ರೇಷ್ಠ ಸಾಹಿತಿಗಳು, ಶ್ರೇಷ್ಠ ನಾಟಕಕಾರರು, ಶ್ರೇಷ್ಠ ನಟರು/ನಟಿಯರುಗಳು, ಹೀಗೆ ಅನೇಕ ಕ್ಷೇತ್ರಗಳಲ್ಲಿ ಶ್ರೇಷ್ಠವ್ಯಕ್ತಿಗಳಾಗುತ್ತಾರೆ. ಎಲ್ಲಾ ಕ್ಷೇತ್ರಗಳಲ್ಲಿ ಪರಮೋಚ್ಛ ಮಟ್ಟ ಎಂಬುದು ಇರುತ್ತದೆ. ಯಾರಾದರೂ ಅಂತಹ ಪರಮೋಚ್ಛ ಮಟ್ಟವನ್ನು ತಲುಪಿ ದಾಗ ಅವರನ್ನು ಆ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆ ಮಾಡಿದಂತಹ ಶ್ರೇಷ್ಠ ವ್ಯಕ್ತಿ ಎನ್ನುತ್ತಾರೆ.

RELATED ARTICLES  ನಾಲಿಗೆ ಬಳಸುವಾಗ ಎಚ್ಚರವಿರಲಿ..

ಭಕ್ತರು ದೇವಸ್ಥಾನಕ್ಕೆ ಬಂದ ತಕ್ಷಣ ಮೊದಲು ಆ ದೇವಸ್ಥಾನಗಳ ಗೋಪುರವನ್ನು ಕಂಡಂತೆ, ಯಾರಾದರೂ ಗಣ್ಯವ್ಯಕ್ತಿಗಳು ಯಾವುದಾದರೂ ಊರಿಗೆ ಬಂದಾಗ, ಮೊದಲು ಆ ಊರಿನ ಗಣ್ಯ ವ್ಯಕ್ತಿಯ ಮನೆಗೆ ಹೋಗಿ, ಅವರ ಕ್ಷೇಮ ಸಮಾಚಾರ ವಿಚಾರಿಸಿ ನಂತರ ಬೇರೆ ಕಾರ್ಯಕ್ರಮಕ್ಕೆ ಹೋಗುವುದುಂಟು. ದೊಡ್ಡ ದೊಡ್ಡ ದೇವಸ್ಥಾನಗಳು ಇದ್ದಲ್ಲಿ ಆ ಊರಿನ ಜನಗಳು ಹೆಮ್ಮೆ ಪಡುವಂತೆ, ಶ್ರೇಷ್ಠ ವ್ಯಕ್ತಿಗಳು ಹೆಸರಾಂತ ವ್ಯಕ್ತಿಗಳು, ಕೀರ್ತಿ ಪತಾಕೆ ಹಾರಿಸಿದಂತೆ ವ್ಯಕ್ತಿಗಳು ಯಾವ ಊರಿನಲ್ಲಿದ್ದರೂ ಆ ಊರಿನ ಜನರು ಹೆಮ್ಮೆ ಪಡುತ್ತಾರೆ. ಇದನ್ನು ಪಟ್ಟಿ ಮಾಡುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಸಾವಿರಾರು ಸಾಧಕರು ಹೊರಹೊಮ್ಮಿದ್ದಾರೆ ಇದಕ್ಕೆ ಅಂತ್ಯವೇ ಇರುವುದಿಲ್ಲ.

RELATED ARTICLES  ಕನ್ನಡವು , ಪ್ರಚಾರದ ಭಾಷಣಕ್ಕಿಂತ , ಆಚಾರಕ್ಕೇ ಬರಲಿ.

ಮುಂದುವರೆಯುತ್ತದೆ.