ಅಕ್ಷರರೂಪ :ಪ್ರಭಾ ಮತ್ತು ವೆಂಕಟ್ರಮಣ ಭಟ್ಟ ಪುಣೆ

ನಿಮಗೆ ಪೂರ್ಣ ಶಕ್ತಿ ಮತ್ತು ಆಯುಷ್ಯ ಕೊಟ್ಟು ಆ ಸರ್ವಸಮರ್ಥ ಪರಮೇಶ್ವರ ತನ್ನ ಕಾರ್ಯವನ್ನು ಪೂರ್ಣಗೊಳಿಸಿಕೊಂಡೇ ಕೊಳ್ಳುತ್ತಾನೆ. ನನ್ನ ಪ್ರಾರ್ಥನೆಯ ಆವಶ್ಯಕತೆ ಇಲ್ಲದೇ ಹೋದರೂ ನಾನು ಪ್ರಾರ್ಥನೆ ಮಾಡುತ್ತೇನೆ.

(ಇಸವಿ ಸನ ೧೯೪೫ರಲ್ಲಿ ಶ್ರೀ ಬಾಬಾಸಾಹೇಬ ದೇಶಪಾಂಡೆ, ಸಜ್ಜನಗಡ ಅವರಿಗೆ ಬರೆದ ಪತ್ರ)

||ಶ್ರೀರಾಮ ಸಮರ್ಥ||
ಮಂಗಳೂರು
೩೦-೧೨-೧೯೪೫
ಸ.ಭ. ಶ್ರೀ ಶಿವ ಸಮರ್ಥದಾಸರವರಿಗೆ ಶ್ರೀಸಮರ್ಥಚರಣಸ್ಮರಣಪೂರ್ವಕ ಆಶೀರ್ವಾದ.

ನಿಮ್ಮ ಪತ್ರ ತಲುಪಿ ಇಂದು ೨-೩ ದಿನಗಳಾಗಿರಬೇಕು. ಶ್ರೀಸಮರ್ಥಕಾರ್ಯವಾಹಕ ಮಂಡಳದಿಂದ ಬಂದ ಪತ್ರಕ್ಕೆ ಈ ಮೊದಲೇ ಉತ್ತರ ಕಳಿಸಬೇಕಾಗಿತ್ತು. ಅದಕ್ಕಾಗಿ ಮನಃಪೂರ್ವಕ ಶ್ರೀಸಮರ್ಥರ ಕ್ಷಮೆ ಬೇಡುತ್ತೇನೆ.

ನಿಮ್ಮ ನೆನಪಾದ ಕೂಡಲೇ ತಪ್ಪದೇ ಈ ಸಂಪೂರ್ಣ ಶ್ಲೋಕ ನೆನಪಾಗುತ್ತದೆ ಮತ್ತು ಗೌರವಭಾವವೆನಿಸುತ್ತದೆ.
‘ಯಾರ ದೇಹ ಯಾವಾಗಲೂ ದೇವಕಾರ್ಯದಲ್ಲೇ ತೊಡಗಿದೆಯೋ|
ಯಾರ ಮಾತು ಯಾವಾಗಲೂ ರಾಮನಾಮದಲ್ಲಿ ನಿತ್ಯ ತಲ್ಲೀನವೋ|
ಯಾರು ಯಾವಾಗಲೂ ಉತ್ತಮರ ನಡೆಯಲ್ಲಿ ನಡೆಯುವರೋ|
ಜಗತ್ತಿನಲ್ಲಿ ಅಂಥ ಸರ್ವೋತ್ತಮನ ದಾಸನೇ ಧನ್ಯನು||’

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ -

ರಾಜಸೇವೆಯಿಂದ ನಿವೃತ್ತರಾಗಿ ಇಂದು ನೀವು ಅದಕ್ಕಿಂತಲೂ ಗೌರವಾಸ್ಪದವಾದ ಶ್ರೀಸಮರ್ಥಸೇವೆಗಾಗಿ ತಮ್ಮ ತನು-ಮನ-ಧನ ಹರಿಸಿದ್ದೀರಿ. ಅದಷ್ಟೇ ಅಲ್ಲ, ನಿಮ್ಮನ್ನು ಯಾವ ಆ ಪರಮೇಶ್ವರನು ಈ ಕಾರ್ಯಕ್ಕೆ, ಶ್ರೀಸಮರ್ಥಕಾರ್ಯಕ್ಕೆ, ಪ್ರೇರಿಸಿದನೋ, ಇದು ಆತನ ಸರ್ವಜ್ಞತೆಗೆ ಅನುರೂಪವಾಗಿಯೇ ಆಗಿದೆ. ನಿಮಗೆ ಪೂರ್ಣ ಶಕ್ತಿ ಮತ್ತು ಆಯುಷ್ಯ ಕೊಟ್ಟು ಆ ಸರ್ವಸಮರ್ಥ ಪರಮೇಶ್ವರ ತನ್ನ ಕಾರ್ಯವನ್ನು ಪೂರ್ಣಗೊಳಿಸಿಕೊಂಡೇ ಕೊಳ್ಳುತ್ತಾನೆ. ನನ್ನ ಪ್ರಾರ್ಥನೆಯ ಆವಶ್ಯಕತೆ ಇಲ್ಲದೇ ಹೋದರೂ ನಾನು ಪ್ರಾರ್ಥನೆ ಮಾಡುತ್ತೇನೆ.
ಬೆಂಗಳೂರಿನ ಅಧಿವೇಶನಕ್ಕೆ ಹೆಚ್ಚಾಗಿ ಬರಲಿಕ್ಕೆ ಶಕ್ಯವಾಗುವದಿಲ್ಲ. ಎರಡು-ಎರಡೂವರೆ ತಿಂಗಳ ಕಾರ್ಯಕ್ರಮ ನಿಶ್ಚಯವಾಗಿದೆ.

RELATED ARTICLES  ಈ ದಿನ ಗಣೇಶನಿಗೆ ಮೀಸಲು.

ಆ ಕಾಲದಲ್ಲಿ ಮಂಗಳೂರು ಬಿಟ್ಟು ಹೋಗಲಿಕ್ಕಾಗುವದಿಲ್ಲ. ಅಖಿಲ ಶ್ರೀರಾಮದಾಸಿಗಳ ಸಂಮೇಲನ ಎಲ್ಲಿ ನೆರವೇರಿಸಬೇಕೆಂಬುದು ಬೆಂಗಳೂರಲ್ಲೇ ನಿಶ್ಚಯವಾಗಬಹುದು. ಶ್ರೀ ದೇವರ ಮತದಂತೆ ಒಮ್ಮೆ ಮಹಾರಾಷ್ಟ್ರದ ಮುಖ್ಯಸ್ಥಳದಲ್ಲಿ ಯೋಜಿಸಿ, ನಂತರವೇ ದಕ್ಷಿಣಪ್ರಾಂತದಲ್ಲಿ ಯೋಜಿಸಿದರೆ ಯೋಗ್ಯವಾಗಬಹುದು. ಇಲ್ಲಿಯ ಪ್ರದೇಶದಲ್ಲಿ ಎಷ್ಟೆಂದರೂ ಶ್ರೀರಾಮದಾಸಿ ಜನರು ಕಡಿಮೆಯೇ. ಇಲ್ಲಿ ಪ್ರಚಾರವೂ ಹೆಚ್ಚಾಗಿ ಇಲ್ಲ. ಮರಾಠಿ ಭಾಷೆಯೂ ಇಲ್ಲಿ ಇಲ್ಲದಿರುವದರಿಂದ ಶ್ರೀಸಮರ್ಥಗ್ರಂಥದ ಸವಿಯೂ ಅಷ್ಟಾಗಿ ಅನಿಸದಿರುವದು ಸಹಜವೇ ಇದೆ. ಕೈಗೆ ಸಿಕ್ಕಿದನ್ನು ಮೊದಲು ವ್ಯವಸ್ಥಿತವಾಗಿ ನಿರ್ವಹಿಸಿ ನಂತರ ಹೊಸದರ ಕಡೆ ಗಮನಹರಿಸಬೇಕು.