ಅಕ್ಷರರೂಪ :ಪ್ರಭಾ ಮತ್ತು ವೆಂಕಟ್ರಮಣ ಭಟ್ಟ ಪುಣೆ

(ಇಸವಿ ಸನ ೧೯೪೫ರಲ್ಲಿ ಶ್ರೀ ಬಾಬಾಸಾಹೇಬ ದೇಶಪಾಂಡೆ, ಸಜ್ಜನಗಡ ಅವರಿಗೆ ಬರೆದ ಪತ್ರದ ಎರಡನೆಯ ಭಾಗ)

ಶ್ರೀದೇವರ ಕಾರ್ಯದಿಂದ ಮಹಾರಾಷ್ಟ್ರದ ದೃಷ್ಟಿ ಹೆಚ್ಚಾಗಿ ಶ್ರೀಸಮರ್ಥರ ಬೋಧನದೆಡೆ ತಿರುಗಿದೆ. ಶ್ರೀಸಮರ್ಥರನ್ನು ರಾಷ್ಟ್ರಗುರು ಎಂದು ನೋಡುವವರ ಸಂಖ್ಯೆ ಶೀಘ್ರಗತಿಯಲ್ಲಿ ಹೆಚ್ಚುತ್ತಿದೆ. ಅಲ್ಲಿ ಈ ಅಧಿವೇಶನದ ಬಹಳಷ್ಟು ಉಪಯೋಗವಾಗಬಹುದು. ಶ್ರೀದೇವರ ಮನಸ್ಸಿನಲ್ಲೂ ಹಾಗೇ ಇರುವದರಿಂದ ಅವರ ಮನಸ್ಸಿನಂತೆಯೇ ನಡೆಯುವದು. ನವಯುವಕರಿಗೂ ಶಕ್ತ್ಯೋತ್ಸಾಹ ಬರುವದು. ಶ್ರೀಸಮರ್ಥರನ್ನು ಮಹಾರಾಷ್ಟ್ರ ಎಷ್ಟು ಪ್ರೀತಿಯಿಂದ ನೋಡುವರೋ ಅಷ್ಟು ಪ್ರೀತಿ ಇನ್ನೂ ಇಲ್ಲಿಯ ಪ್ರಾಂತಗಳಲ್ಲಿ ಆಗಿಲ್ಲ; ಮುಂದೆ ಆಗುವದು.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ

ಮುಂದೆ ಭವಿತವ್ಯವಿರದ ಹೊರತೂ ಆ ರೀತಿ ಇಚ್ಛೆ ನಿಮ್ಮಂತವರ ಮನಸ್ಸಿನಲ್ಲಿ ಬರಲು ಶಕ್ಯವಿಲ್ಲ. ಶ್ರೀಸಜ್ಜನಗಡದ ವಿಷಯಗಳಲ್ಲಿ ಮತ್ತು ಶ್ರೀಸಮರ್ಥಸಂಪ್ರದಾಯದ ವಿಷಯಗಳಲ್ಲಿ ಯಾವ ಆದರ್ಶಾತ್ಮಕ ಭವಿಷ್ಯದ ಪರಮೋತ್ಕರ್ಷಗಳ ಉಜ್ವಲ ಚಿತ್ರ ನೀವು ನಿಮ್ಮ ಶಬ್ದಗಳಲ್ಲಿ ರಚಿಸಿದ್ದೀರೋ, ಅದು ಆ ಪರಮೇಶ್ವರನಿಂದ (ನಿಮ್ಮ ಮೂಲಕ) ಆದ ಭವಿಷ್ಯಕಥನ ಎಂದು ತಿಳಿಯುತ್ತೇನೆ.

‘ಮಹಾಯತ್ನ ಸಾವಧಪಣೇ| ಪ್ರಸಂಗೀ ಧಾರಿಷ್ಟ ಧರಣೇ| ಅದ್ಭುತಾಚಿ ಕಾರ್ಯ ಕರಣೇ|’

ಈ ಈಶ್ವರೀ ಕೊಡುಗೆ ತಮ್ಮಿಂದ ಉತ್ತಮೋತ್ತಮ ಕಾರ್ಯ ಮಾಡಿಸಿ ಕೊಳ್ಳಲಿ. ಶ್ರೀರಾಮ ಉಪಾಸನೆ ಅರ್ಥಾತ್ ಶ್ರೀಸಮರ್ಥಸಂಪ್ರದಾಯದ ತತ್ವಗಳು ‘ಬ್ರಹ್ಮಾಂಡ ಭೇದಿಸಿ ಅದರಾಚೆ ಕೊಂಡೊಯ್ಯಲಿ’ ಇದೇ ಧ್ಯೇಯ. ಇದೇ ಸಮರ್ಥರ ಅಪ್ಪಣೆ. ಪ್ರತಿಯೊಬ್ಬರೂ ತಮ್ಮ ಹೃದಯದಲ್ಲಿ ಇದನ್ನು ಕಾಪಾಡಿಕೊಳ್ಳಬೇಕು. ಪ್ರಪಂಚ ಮತ್ತು ಪರಮಾರ್ಥದ ಎರಡೂ ಸಿಹಿ ಜೊತೆಗೂಡಿಸುವ ಶ್ರೀಸಮರ್ಥಸಂಪ್ರದಾಯ ಜಗತ್ತಿಗೇ ಆದರಣೀಯವಾಗಿದೆ.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ

ಅದರ ಉನ್ನತೆಯನ್ನು ಜಗತ್ತಿಗೆ ಅರಿವುಮಾಡಿಕೊಡುವ ಪವಿತ್ರ ಮತ್ತು ಅಷ್ಟೇ ಮಹತ್ವದ ಯಾವ ಕಾರ್ಯ ತಮ್ಮಿಂದ ಆಗುತ್ತಿದೆಯೋ ಅದಕ್ಕೆ ಸಂಪೂರ್ಣ ಯಶಸ್ಸು ಬರಲಿ, ಎಂದು ಶ್ರೀಸಮರ್ಥಚರಣಗಳಲ್ಲಿ ಪ್ರಾರ್ಥನೆ ಮಾಡುವ,
ಶ್ರೀಧರ