ನೋಡು! ಮೂರ್ತಿಯಲ್ಲಿ ಕಲೆ ಜಾಗೃತವಾಗಿದ್ದರೆ ಮತ್ತು ಸ್ಥಳ ಪವಿತ್ರವಾಗಿದ್ದರೆ ಮಾತ್ರ ಅಲ್ಲಿಯ ಸಾಧಕರಿಗೆ ಮತ್ತು ತಮ್ಮಂಥವರಿಗೂ ಉತ್ತಮ.
(ಶ್ರೀ ನಾರಾಯಣ ಮಹಾರಾಜ ಗೋಡಸೆ, ಸಜ್ಜನಗಡ, ಅವರಿಗೆ ಬರೆದ ಪತ್ರ)
||ಶ್ರೀರಾಮ ಸಮರ್ಥ||
ಶ್ರೀಸಮರ್ಥಭಕ್ತ ನಾರಾಯಣ ಮಹಾರಾಜ ಗೋಡಸೆಯವರ ಸನ್ನಿಧಿಯಲ್ಲಿ,
ಶ್ರೀರಾಮರಾಯನ ಕೃಪೆಯಿಂದ ಇಲ್ಲಿ ಎಲ್ಲಾ ಕ್ಷೇಮ. ತಮ್ಮೆಲ್ಲರ ಕ್ಷೇಮವನ್ನೂ ಬಯಸುತ್ತೇನೆ.
ಕಲಾವೃದ್ಧಿ ಹೋಮದ ಕಾರ್ಯ ತಮ್ಮೆಲ್ಲರ ಸಹಾನುಭೂತಿಯಿಂದ ಏನೂ ಗಡಿಬಿಡಿಯಿಲ್ಲದೆ ನೆರವೇರಿತು ಎಂದು ಕೇಳಿ ತುಂಬಾ ಸಮಾಧಾನವೆನಿಸಿತು; ದೊಡ್ಡವರ ಆಚರಣೆ ಅವರಿಗೆ ಅನುರೂಪವಾಗಿಯೇ ಇರುತ್ತದೆ. ವೈದಿಕಮಂತ್ರದಿಂದಾದ ಸ್ಥಳಶುದ್ಧಿ ಮತ್ತು ಮಾಡಿದ ಕಲಾವೃದ್ಧಿ ಸಂಬಾಳಿಸುವ ಹೊಣೆ ತಮ್ಮಮೇಲೆ ಮತ್ತು ಸ.ಭ. ಬಾಲಾಜಿ ಮಹಾರಾಜರ ಮೇಲೆ ಇದೆ. ನಾನು ಚಿ. ದಿನಕರನಿಗೆ ಪತ್ರ ಬರೆದು ಬರೆದು ದಣಿದುಹೋದರೂ, ಶುದ್ಧೀಕರಣವಾದಮೇಲೆ ಮೂರ್ತಿಗೆ ಬೇರೆ ಯಾರ ಸ್ಪರ್ಷವೂ ಆಗಬಾರದೆಂದು, ಸ್ಥಳಕ್ಕಾಗಿ ಮಾಡಿಸಿಕೊಂಡಿರುವ ಬಾಗಿಲು ಮಾತ್ರ ಇನ್ನೂ ಶ್ರೀರಾಮನ ಮುಂದೆ ನಿಲ್ಲಿಸಿಲ್ಲ. ಮತ್ತೆ ಬೇರೆಯವರ ಸ್ಪರ್ಷವಾಯಿತು ಎಂದರೆ ಮಾಡಿದ್ದೆಲ್ಲಾ ವ್ಯರ್ಥವಾಗುತ್ತದೆ. ಸ್ಥಳದ ಪಾವಿತ್ರ್ಯ ಇಟ್ಟಷ್ಟು ಕಲೆ ಅಷ್ಟು ಹೆಚ್ಚು ಇರುತ್ತದೆ; ಅದಲ್ಲದೇ ಸ್ಥಳದ ಮಹಾತ್ಮ್ಯೆಯೂ ಅಷ್ಟೇ ಹೆಚ್ಚಾಗಿರುತ್ತದೆ. ತಾವು ಬಲ್ಲಿದರಿದ್ದೀರಿ. ಶ್ರೀ ಬಾಲಾಜಿ ಮಹಾರಾಜರಿಗೂ ತಿಳಿಸಿರಿ. ತಾವಿಬ್ಬರೂ ಗಡದಲ್ಲಿರುವ ಜನರಲ್ಲಿ ಹಿರಿಯರಿದ್ದೀರಿ. ಇಬ್ಬರೂ ಕೂಡಿ ಚಿ. ದಿನಕರನಿಂದ ಶ್ರಾವಣಮಾಸದೊಳಗೆ ಆ ಬಾಗಿಲಷ್ಟು ಕೂಡಿಸಿಕೊಳ್ಳಲೇ ಬೇಕು. ಹೇಳಿ ಮಾಡಿಸಿಕೊಳ್ಳುವ ಅಧಿಕಾರ ದೊಡ್ಡವರಿಗೆ ಇದ್ದೇ ಇದೆ. ದೊಡ್ಡವರ ಮಾತು ಎಲ್ಲ ದೃಷ್ಟಿಯಿಂದಲೂ ಹಿತಕಾರಿಯಿರುತ್ತದೆ. ಚಿ. ಅಯ್ಯಾನಿಗೂ ಹೇಳಿರಿ. ಹೇಗೇ ಮಾಡಾದರೂ ಬಾಗಿಲನ್ನಷ್ಟು ಕೂಡಿಸಿಕೊಳ್ಳಲೇ ಬೇಕು. ತಮ್ಮಂಥವರು ಮನಸ್ಸು ಮಾಡಿದರೆ ಈ ಕೆಲಸ ಆಗೇ ಆಗುತ್ತದೆ. ಬ್ರಾಹ್ಮಣೇತರರೊಂದಿಗೆ ಅಂತ್ಯಜಾದಿಯವರೂ ಒಳಗೆ ಹೋಗುತ್ತಾರೆ ಎಂಬುದು ತಮಗೆ ಗೊತ್ತು. ಯಾರೂ ಇಲ್ಲ ಎಂದು ನೋಡಿ, ಮೂರ್ತಿಯನ್ನು ಮುಟ್ಟುವ ಬಹಳಿಷ್ಟು ಜನರನ್ನು ನಾನು ಹಿಂದೆ ತಡೆದಿದ್ದೆ. ನೋಡು! ಮೂರ್ತಿಯಲ್ಲಿ ಕಲೆ ಜಾಗೃತವಾಗಿದ್ದರೆ ಮತ್ತು ಸ್ಥಳ ಪವಿತ್ರವಾಗಿದ್ದರೆ ಮಾತ್ರ ಅಲ್ಲಿಯ ಸಾಧಕರಿಗೆ ಮತ್ತು ತಮ್ಮಂಥವರಿಗೂ ಉತ್ತಮ.
ಶ್ರೀರಾಮರಾಯನ ಅಪ್ಪಣೆಯಂತೆ ಇಲ್ಲಿಂದ ಜನರನ್ನು ಕಳುಹಿಸಿ ೨|| ಸಾವಿರದ ಹತ್ತಿರ ಹತ್ತಿರ ವೆಚ್ಚ ಮಾಡಲಾಗಿದೆ. ನಿಮ್ಮೆಲ್ಲರ ಶ್ರಮ ಮತ್ತು ಅಷ್ಟು ಹಣ ವ್ಯರ್ಥವಾಗಬಾರದೆಂದು ಮೌನವಿದ್ದಾಗ್ಯೂ ಪತ್ರ ಬರೆದಿರುವೆ. ಉಳಿದೆಲ್ಲ ಪತ್ರವ್ಯವಹಾರ ನಿಲ್ಲಿಸಲಾಗಿದೆ. ಆದರೆ ಇದು ಉಪಾಸನೆಯ ಕಾರ್ಯವೆಂದು ನಿಯಮವನ್ನು ಮುರಿದೆ. ಇವೆಲ್ಲವನ್ನೂ ಸಾರ್ಥಕ ಮಾಡುವದು ತಮ್ಮ ಮತ್ತು ಶ್ರೀಬಾಲಾಜಿಯವರ ಕೈಯಲ್ಲಿದೆ. ಹೇಗೇ ಮಾಡಿ, ಆ ಮಕ್ಕಳಿಂದ ಬಾಗಿಲು ಕೂಡಿಸಿಕೊಂಡು, ಅನ್ಯರ ಸ್ಪರ್ಷ ತಪ್ಪಿಸುತ್ತೀರೆಂದು ಮತ್ತು ಆ ಪವಿತ್ರ ಸ್ಥಳದ ಪಾವಿತ್ರ್ಯದ ಪ್ರಾಧಾನ್ಯತೆಯನ್ನು ಉಳಿಸಿಕೊಳ್ಳುತ್ತೀರೆಂದು ನಾನು ನಂಬಿಕೊಂಡಿದ್ದೇನೆ.
||ಸರ್ವೇ ಜನಾಃ ಸುಖಿನೋ ಭವಂತು||
ಶ್ರೀಧರ