ಇನ್ನು ಕೆಲವರು ರಾಮಪಟ್ಟಾಭಿಷೇಕದ ಚಿತ್ರಪಟ ಅಥವಾ ಚಿತ್ರ ಇಟ್ಟು, ಉತ್ಸವ ಮಾಡುತ್ತಾರೆ. ಗುಡಿಸಿ, ಸಾರಿಸಿ ಸ್ಥಳವನ್ನು ಶುದ್ಧ ಮಾಡಿದ ಮೇಲೆ, ಅದನ್ನು ತಳಿರು – ತೋರಣಗಳಿಂದ ಅಲಂಕೃತ ಮಾಡಬೇಕು. ಪ್ರತಿಪದೆಯಿಂದ ನವಮಿಯವರೆಗೆ ಕೆಳಗೆ ಬರೆದಂತೆ ಕಾರ್ಯಕ್ರಮ ನಡೆಸಬೇಕು.

(ಇಸವಿ ಸನ ೧೯೬೦ರ ಸುಮಾರಿಗೆ ಸ್ವಾಮಿಗಳ ಶಿಷ್ಯ ಸುಬೇದಾರ ಶ್ರೀ. ವಿ. ದಿ. ಕುಲಕರ್ಣಿ, ನಾಸಿಕ, ಅವರು ತ್ರಿವೇಂದ್ರಮದಲ್ಲಿ ಇದ್ದಾಗ, ಸ್ವಾಮಿಗಳಿಗೆ ‘ಶ್ರೀರಾಮನವಮಿ ಉತ್ಸವ ಹೇಗೆ ಮಾಡಬೇಕು?’ ಎಂದು ಕೇಳಿ ಬರೆದ ಪತ್ರಕ್ಕೆ ಸ್ವಾಮಿಗಳ ಉತ್ತರರೂಪಿ ಪತ್ರ)

||ಶ್ರೀರಾಮ ಸಮರ್ಥ||

ಚಿ. ವಿ. ದಿ. ಕುಲಕರ್ಣಿಗೆ ಆಶೀರ್ವಾದ
೧೪-೦೩-೧೯೬೦ರ ಪತ್ರ ಸಿಕ್ಕಿತು. ಶ್ರೀರಾಮಜನ್ಮೋತ್ಸವವನ್ನು ಮಾಡುವ ಯಾವ ಕಾರ್ಯ ಮನಸ್ಸಿಗೆ ಬಂದಿದೆಯೋ ಅದು ಅತ್ಯಂತ ಸ್ತುತ್ಯವಾಗಿದೆ. ಕ್ಷೇಮ ಸಮಾಚಾರ ಓದಿ ಅತ್ಯಂತ ಆನಂದವಾಯಿತು. ದೇವಾಲಯ ಅಂದ ಮೇಲೆ ಅಲ್ಲಿ ಮೂರ್ತಿಯಿರುತ್ತದೆ. ಕೆಲವರ ಮನೆಯಲ್ಲಿ ಸಣ್ಣ ಮೂರ್ತಿ ಇರುತ್ತದೆ ಮತ್ತು ಇನ್ನು ಕೆಲವರು ರಾಮಪಟ್ಟಾಭಿಷೇಕದ ಚಿತ್ರಪಟ ಅಥವಾ ಚಿತ್ರ ಇಟ್ಟು ಉತ್ಸವ ಮಾಡುತ್ತಾರೆ. ಗುಡಿಸಿ, ಸಾರಿಸಿ ಸ್ಥಳವನ್ನು ಶುದ್ಧ ಮಾಡಿದ ಮೇಲೆ, ಅದನ್ನು ತಳಿರು – ತೋರಣಗಳಿಂದ ಅಲಂಕೃತ ಮಾಡಬೇಕು. ಪ್ರತಿಪದೆಯಿಂದ ನವಮಿಯವರೆಗೆ ಕೆಳಗೆ ಬರೆದಂತೆ ಕಾರ್ಯಕ್ರಮ ನಡೆಸಬೇಕು.

ಬೆಳಿಗ್ಗೆ ೫ ಗಂಟೆಗೆ ಸ್ನಾನ ಮುಗಿಸಿ, ಸೂರ್ಯೋದಯ ಪೂರ್ವ ಸ್ತೋತ್ರ ಹೇಳುತ್ತಾ ಕುಳಿತುಕೊಳ್ಳಬೇಕು.
ಸಾಧಾರಣ ಅರುಣೋದಯ ಸಮಯಕ್ಕೆ ಸರಿಯಾಗಿ ಕಾಕಡಾರತಿ ಮಾಡಬೇಕು. ನಂತರ ಸಂಧ್ಯಾದಿಕ ಆಹ್ನಿಕ ಮುಗಿಸಿ ಪ್ರಾತಃಪೂಜೆ ಮಾಡಬೇಕು.
೯-೯|| ಸುಮಾರಿಗೆ ಮಾಧ್ಯಾಹ್ನಪೂಜೆಗೆ ಪ್ರಾರಂಭಮಾಡಿ, ಸಮಯವಿದ್ದಂತೆ ಹೆಚ್ಚು ಕಡಿಮೆ ಮಧ್ಯಾಹ್ನದೊಳಗೆ ಮುಗಿಸಬೇಕು.
ಶ್ರೀರಾಮಾಷ್ಟೋತ್ತರ ಶತನಾಮಾವಳಿ ಸಿಕ್ಕಿದರೆ ನಾಮಗಣಿತದೊಂದಿಗೆ ಒಂದೊಂದು ತುಳಸೀದಲ ಅಥವಾ ತುಳಸೀಪತ್ರ ಅರ್ಪಿಸಬೇಕು.
ಮಹಾನೈವೇದ್ಯದ ಮೊದಲು ಆಧ್ಯಾತ್ಮರಾಮಾಯಣದ ಬಾಲಕಾಂಡದ ಪಾರಾಯಣ ಒಂಭತ್ತು ದಿವಸದಲ್ಲಿ ಓದಿ ಮುಗಿಸುವ ರೀತಿಯಲ್ಲಿ ದಿನಾ ಅಷ್ಟಷ್ಟು ಓದಬೇಕು. ಅದರಲ್ಲಿಯ ಶ್ರೀರಾಮಹೃದಯ, ಶ್ರೀರಾಮಗೀತಾ ಇವುಗಳ ಪಾರಾಯಣವನ್ನೂ ಶಕ್ಯತೆಯನ್ನು ದೃಷ್ಟಿಯಲ್ಲಿಟ್ಟು ಇಡಬೇಕು.

RELATED ARTICLES  ಸಾವು ಬದುಕಿನ ಅಂತ್ಯವಲ್ಲ

ದಿನದ ಪಾರಾಯಣವಾದ ನಂತರ ಮಹಾನೈವೇದ್ಯ ಅರ್ಪಿಸಿ, ಕೆಳಗೆ ಬರೆದ ಆರತಿ ಹಾಡು ಹೇಳಿ ಆರತಿ ಮಾಡಬೇಕು.
ವೈದಿಕ ಬ್ರಾಹ್ಮಣರಿದ್ದರೆ ಆ ಆ ವೇಳೆಗೆ ಸರಿಯಾಗಿ ಅವನು ಆ ಆ ಮಂತ್ರ ಹೇಳುತ್ತಾನೆ. ಆ ಸಂದರ್ಭದಲ್ಲಿ ವೇದೋಕ್ತ ಆರತಿ ಆದ ಮೇಲೆ, ಈ ಕೆಳಗಿನ ಆರತಿ ಹಾಡು ಹೇಳಬೇಕು.

೧. ಸಾಫಲ್ಯಾ ನಿಜವಲ್ಯಾ, ೨. ಸುವರ ವರದಾಯಿನೀ, ೩. ಸತ್ರಾಣೇ ಉಡ್ಡಾಣೇ, ೪. ನಾನಾ ದೇಹೀಂ, ೫. ಸುಖಸಹಿತಾ ದುಃಖರಹಿತಾ, ೬. ಬ್ರಹ್ಮವಿಷ್ಣುಹರಾದಿಕ.
ಅದಾದ ನಂತರ ಮಂತ್ರಪುಷ್ಪ ಅರ್ಪಿಸಿ, ಪ್ರದಕ್ಷಿಣೆ ನಮಸ್ಕಾರ ಮಾಡಬೇಕು.
ನಂತರ ಪ್ರಸಾದ ತೆಗೆದುಕೊಂಡು ನಿಮ್ಮ ವ್ಯಾವಹಾರಿಕ ಕೆಲಸಕ್ಕೆ ಹೋಗಬಹುದು.

ಸಮಯವಿಲ್ಲದಿದ್ದರೆ ಮೇಲಿನ ೧, ೩, ೬ ಸಂಖ್ಯೆಯಲ್ಲಿ ಹೇಳಿದ ಆರತಿ ಹಾಡು ಹೇಳಿ ಮುಗಿಸುವ ಸಮಯದೊಳಗೆ ಎಲ್ಲವನ್ನೂ ಹೊಂದಿಸಿ ಕೂರಿಸಬಹುದು.
ನಂತರ ಕೆಲಸದಿಂದ ಬಂದ ಮೇಲೆ ಸ್ನಾನ ಮಾಡಿ ಸಂಧ್ಯಾವಂದನೆ ಮುಗಿಸಬೇಕು ಮತ್ತು ‘ಅನುದಿನಿ ಅನುತಾಮೇ’ಯ ಒಂದಾದರೂ ಅಷ್ಟಕ ಹೇಳಬೇಕು.
೧. ವಂದಿಲಾ ಗಜವದನ, ೨. ನಾಮ ಶ್ರೀರಾಮ ಸುಂದರ, ೩. ರಾಮದೂತ ವಾಯುಸುತ, ೪. ಶ್ರೀಸಮರ್ಥ ಮುಖ್ಯಪ್ರಾಣ.
ಕನಿಷ್ಠ ಈ ನಾಲ್ಕು ಭಜನೆಗಳನ್ನು ಉಚ್ಚಸ್ವರದಲ್ಲಿ ಹೇಳಬೇಕು.

RELATED ARTICLES  ಭಾಗ್ಯಗಳ ಸುರಿಮಳೆ ಇದ್ದರೂ ಸರಕಾರಿ ಶಾಲೆ ಸೋರುತಿದೆ ಏಕೆ?

ದೇವ ವಂದನೆ-ಜಯಕಾರ ಭಜನೆಯ ನಂತರ ಮಾಡುವದಿರುತ್ತದೆ.
ಇಷ್ಟಾದಮೇಲೆ ಸಾಯಂಪೂಜೆ ಮಾಡಬೇಕು.
ನೈವೇದ್ಯ, ಆರತಿ, ಮಂತ್ರಪುಷ್ಪ, ಪ್ರದಕ್ಷಿಣೆ ನಮಸ್ಕಾರ ಆದನಂತರ ‘ವದನಸುಹಾಸ್ಯ’ ಮತ್ತು ‘ತ್ರಿವಿಧ ತಾಪಹಾರಕ ಹೇ ಗುರುಪಾಯಾ’ ಈ ಎರಡು ಪದ್ಯ ಹೇಳಬೇಕು.
ಅದರ ನಂತರ ‘ದಾಸಬೋಧ’ದ ನವವಿಧ ಭಕ್ತಿಯ ಒಂದೊಂದು ಸಮಾಸ, ‘ಮನಾಚೇ ಶ್ಲೋಕ’ದ ೨೫ ಶ್ಲೋಕ ಓದಬೇಕು.
ಈ ಪಠಣಪೂರ್ವ ನಮನ ಮತ್ತು ಪಠಣಾನಂತರ ಶ್ರೀಮದ್ದಾಸಬೋಧ ಮತ್ತು ಮನೋಬೋಧದ ಆರತಿ ಹಾಡು ಹೇಳಬೇಕು.
ವೇಳೆಯಿದ್ದಲ್ಲಿ ಮುಂದಿನ ಸಾಂಪ್ರದಾಯಿಕ ಅಭಂಗವನ್ನೂ ಹೇಳಬೇಕು.

ಕಾರ್ಯಕ್ರಮದ ಅಂಗವಾಗಿ ಗಾಯನವೂ ಇದ್ದರೆ ಒಂದೆರಡು ಅಭಂಗ ಹೇಳಿ ಸಾಯಂಕಾಲದ ಉಪಾಸನೆಯ ಭಾಗವನ್ನು ಮುಗಿಸಿ, ರಾತ್ರಿಯ ಊಟಕ್ಕೆ ಹೋಗಬೇಕು.
ಸಾಧಾರಣವಾಗಿ ರೂಪರೇಷೆ ಹೀಗಿದೆ. ಸಮಯಾನುಸಾರ ಹೆಚ್ಚು ಕಡಿಮೆ ಮಾಡಬಹುದು. ಭಕ್ತಿಭಾವದಿಂದ ಮಾಡಿದ ಅಲ್ಪ ಸೇವೆಯೂ ಶ್ರೀಚರಣಕ್ಕೆ ಸೇರೇ ಸೇರುತ್ತದೆ ಎಂಬ ವಿಶ್ವಾಸವಿಡಬೇಕು.

ಈಶಸೇವೆ ಯಾವಾಗಲೂ ಅಭ್ಯುದಯ ನಿಃಶ್ರೇಯಸ್ಕರವಿರುತ್ತದೆ ಎಂಬ ಬಗ್ಗೆ ಅದಾರು ಸಂಶಯ ಪಡುತ್ತಾರೆ?
ಸರ್ವತೋಪರಿ ಧನ್ಯರಾಗಿರಿ! ಶ್ರೀಗುರುದೇವತೆಗಳ ಸಂಪೂರ್ಣ ಅನುಗ್ರಹವಾಗಲಿ. ವ್ಯಾವಹಾರಿಕ ಮತ್ತು ಪಾರಮಾರ್ಥಿಕ ಜೀವನದಲ್ಲಿ ಪ್ರಪ್ರಥಮರಾಗಿ, ಎಲ್ಲ ರೀತಿಯಿಂದಲೂ ಮಹಾನ ಸತ್ಕೀರ್ತಿಯ ಉದಾತ್ತ ಪುರುಷರಾಗಿರಿ!
ನಿಮ್ಮೆಲ್ಲರ ಸಂಪೂರ್ಣ ಜೀವನ ಹೀಗೆಯೇ ದಿವ್ಯ ಆದರ್ಶಾತ್ಮವಾಗಲಿ.
ಎಲ್ಲರೂ ಕೃತಾರ್ಥರಾಗಿರಿ!!
||ಸರ್ವೇ ಜನಾಃ ಸುಖಿನೋ ಭವಂತು||
ಶ್ರೀಧರ