ಅಕ್ಷರರೂಪ :ಪ್ರಭಾ ಮತ್ತು ವೆಂಕಟ್ರಮಣ ಭಟ್ಟ ಪುಣೆ

ಶ್ರೀಗುರು ಸರ್ವತ್ರ ವ್ಯಾಪಿಸಿಕೊಂಡಿದ್ದಾನೆ. ನಿಮ್ಮ ಮನೆಯಲ್ಲಿ, ನೀವು ಕುಳಿತಲ್ಲೇ, ಯಾವ ಸುಖದುಃಖದ ಸಮಾಚಾರ ಮಾತನಾಡುತ್ತೀರೋ ಅವೆಲ್ಲ ಅವನಿಗೆ ವಿದಿತವಾಗುತ್ತದೆ. ನಿಮ್ಮ ಅನನ್ಯ ಭಕ್ತಿಯಿಂದಾಗಿ, ಅಲ್ಲಿಂದಲ್ಲೇ ನಿಮ್ಮ ಪ್ರಾರ್ಥನೆ ಕೇಳಿ, ನಿಮ್ಮ ಎಲ್ಲ ಅನಿಷ್ಟ ದೂರಮಾಡಿ, ಅವನು ನಿಮಗೆ ನಿತ್ಯ ಸುಖರೂಪಿ ಮಾಡುತ್ತಾನೆ.

(ಇಸವಿ ಸನ ೧೯೫೧ರಲ್ಲಿ ಶ್ರೀ ಅಮರೇಂದ್ರ ಗಾಡಗೀಳ, ಪುಣೆ ಅವರಿಗೆ ಬರೆದ ಪತ್ರ)

|| ಶ್ರೀರಾಮ ಸಮರ್ಥ ||
ಚೈತ್ರ ವ| ೧೩ ಶ| ೧೮೭೩
ದಿ. ೦೩-೦೫-೧೯೫೧
ಸಮರ್ಥರನರಿತು ನಮ್ಮಂತರಂಗದಿ| ನಡೆ ನೀನು ಪ್ರಸಂಗಾವಧಾನದಿ|
ಅಪಾರ ಭಾಗ್ಯ ವೈಭವ| ಲಭಿಸುವದು ಎರಡು ಮಾತಿಲ್ಲ||
ಜಗದಿ ವಿದ್ಯೆಯಂತೆಯೆ ನಡತೆ| ಆಡಂಬರಕೆ ಸರಿ ವೈಭವ|
ತೂಕದ ತಕ್ಕಡಿಯ ದೇಹಭಾವದ ನಟನೆ| ಜಗದ ರೀತಿ||

ಚಿ. ಅಮರೇಂದ್ರನಿಗೆ ಆಶೀರ್ವಾದ,

ಬಹಳ ದಿನಗಳಾದವು. ನನಗೆ ನಿನ್ನ ಪತ್ರವಿಲ್ಲ ಮತ್ತು ನನ್ನ ಪತ್ರವೂ ನಿನಗೆ ಸಿಗಲಿಲ್ಲ. ಅಲ್ಲಿ ಬರಲು ನನಗೆ ಇನ್ನೂ ೫-೬ತಿಂಗಳಾದರೂ ಹಿಡಿಯಬಹುದು. ನಿನ್ನ ಪ್ರತ್ಯುತ್ತರದ ಪತ್ರ ನನಗೆ ಸಿಗುವವರೆಗೆ ನಾನಿಲ್ಲಿ ಇರಲು ಶಕ್ಯವಿಲ್ಲದಿದ್ದರೂ ಒಂದು ಆಶೀರ್ವಾದದ ಪತ್ರ ಬರೆದು ಮುಂದೆ ಹೋಗೋಣ ಎಂದು ಮನಸ್ಸಿನಲ್ಲಿ ಬಂದಿದ್ದರಿಂದ ನಾನು ಈ ಪತ್ರ ಬರೆಯುತ್ತಿದ್ದೇನೆ. ಶ್ರೀಕೃಪೆಯಿಂದ ಈಗ ನೀನು ಚೆನ್ನಾಗಿ ಇರಬಹುದು. ಪರಿಸ್ಥಿತಿ ಪ್ರತಿಕೂಲವಿದ್ದರೆ ಅನುಕೂಲವಾಗಲಿ! ಒಟ್ಟಿನಮೇಲೆ ನಿನ್ನ ಜೀವನ ಸುಖಪೂರ್ಣವಾಗಲಿ. ಇದೇ ಜನ್ಮದಲ್ಲಿ ನೀನು ಸರ್ವದೃಷ್ಟಿಯಿಂದ ಕೃತಕೃತ್ಯನಾಗು! ನಿಮ್ಮೆಲ್ಲರ ಜೀವನ ಸಫಲವಾಗಲಿ!

RELATED ARTICLES  ಸಿಕ್ಕ ಸಿಕ್ಕ ಫೋಟೋ, ವಿಡಿಯೋವನ್ನು ವಾಟ್ಸಪ್ ಸ್ಟೇಟಸ್ ಗೆ ಹಾಕೋ ಆಗಿಲ್ಲ..!

ಚಿ. ದಿನಕರನಿಗೆ ಶ್ರೀಧರಕುಟಿ ಮತ್ತು ಶ್ರೀಸಮರ್ಥ ಮಂಡಳ ಹೀಗೆ ಎರಡೂಕಡೆಯ ಕೆಲಸ ನೋಡಿಕೊಳ್ಳಲು ಶಕ್ಯವಿಲ್ಲ. ಇದು ಯಾವಾಗ ಅವನ ಹೇಳಿಕೆಯಿಂದಲೇ ತಿಳಿದು ಬಂತೋ ಆವಾಗ, ನನಗೂ ಹಾಗೇ ಅನಿಸಿದ್ದರಿಂದ, ಏಕಾಂತಪ್ರಿಯ, ಆದರೆ ಆಜ್ಞಾಧಾರಕ ಚಿ. ದತ್ತಾನಿಗೆ ಶ್ರೀಧರಕುಟಿಯ ವ್ಯವಸ್ಥೆ ನೋಡಿಕೊಳ್ಳಲು ಹೇಳಿ ಬಂದಿದ್ದೇನೆ. ಇಬ್ಬರೂ ನನ್ನ ಶಿಷ್ಯರಿದ್ದಾರೆ. ಇಬ್ಬರಿಂದಲೂ ಆಗುತ್ತಿರುವ ಕಾರ್ಯ ಅಂದರೆ ನನ್ನದೇ ಒಂದು ಸೇವೆ ಎಂಬುದರಲ್ಲಿ ಸಂಶಯವಿಲ್ಲ. ಶ್ರೀಧರಕುಟಿಯ ಕಾರ್ಯ ಚಿ. ದತ್ತಾನಿಗೆ ಒಪ್ಪಿಸಿರುವದರಿಂದ ಮತ್ತು ಚಿ. ದಿನಕರನಿಗೆ ಅಲ್ಲಿ ಲಕ್ಷವಿಡಲು ಶಕ್ಯವಾಗದಿರುವದರಿಂದ, ಚಿ. ದತ್ತಾನನ್ನು ಶ್ರೀಧರಕುಟಿಯ ಸಂದರ್ಭದಲ್ಲಿ ಕೇಳು. ಹಾಗೆ ಶಕ್ಯವಾದರೆ ದಿನಕರನಿಗೆ ತಿಳಿಸಬಾರದು ಎಂದಲ್ಲ. ಇಬ್ಬರಿಗೂ ಕೆಲಸದ ವಿಭಾಗ ಮಾಡಿ ಕೊಟ್ಟಿದ್ದೇನೆ. ಸಮಯ ಬಿದ್ದಾಗ ಎಲ್ಲರೂ ಕೂಡೇ ಶ್ರೀಧರಕುಟಿಯ ಕೆಲಸ ನಡೆಸಬೇಕಾಗುತ್ತದೆ. ನಿಮ್ಮೆಲ್ಲರ ‘ಗುರು’ ಎಂದು ನನ್ನೀ ಸ್ಥಾನದಲ್ಲಿ ನಿಮ್ಮೆಲ್ಲರ ಭಕ್ತಿ ಇರುವದರಿಂದ ಶ್ರೀಧರಕುಟಿಯ ಕಾರ್ಯವೆಂದರೆ ನಿಮ್ಮ ಗುರುಸೇವೆ ಎಂಬ ಬಗ್ಗೆ ಐಕ್ಯಮತವಿದ್ದರೆ ಉತ್ತಮ.

RELATED ARTICLES  "ಷಡ್ಯಂತ್ರದ ಜೊತೆಗೆ expose ಆಗುತ್ತಿರುವ ಷಡ್ಯಂತ್ರಿಗಳು!!!!!!!"

ಶ್ರೀಮಾರುತಿಮಹಾತ್ಮ್ಯ ಚಿ. ದತ್ತಾನ ಹತ್ತಿರ ಕೊಟ್ಟಿದ್ದೇನೆ. ಇನ್ನೂ ಏನಾದರೂ ಕೇಳುವದಿದ್ದರೆ ಚಿ. ದತ್ತಾನಹತ್ತಿರ ಕೇಳು. ಇಬ್ಬರ ವಿಚಾರದಂತೆ ನಿಶ್ಚಯಿಸಿರಿ.
ಏಕಾಂತದಲ್ಲಿ ಇರಬೇಕಾದದ್ದಿದೆ. ಏಕಾಂತದ ದಿನಗಳು ಮುಗಿದ ಮೇಲೆ ನಾನೇ ಪತ್ರ ಬರೆಯುತ್ತೇನೆ. ಶ್ರೀಗುರು ಸರ್ವತ್ರ ವ್ಯಾಪಿಸಿಕೊಂಡಿದ್ದಾನೆ. ನೀವು ನಿಮ್ಮ ಮನೆಯಲ್ಲಿ, ನೀವು ಕುಳಿತಲ್ಲೇ, ಯಾವ ಸುಖದುಃಖದ ಸಮಾಚಾರ ಮಾತನಾಡುತ್ತೀರೋ ಅವೆಲ್ಲ ಅವನಿಗೆ ವಿದಿತವಾಗುತ್ತದೆ. ನಿಮ್ಮ ಅನನ್ಯ ಭಕ್ತಿಯಿಂದಾಗಿ, ಅಲ್ಲಿಂದಲ್ಲೇ ನಿಮ್ಮ ಪ್ರಾರ್ಥನೆ ಕೇಳಿ, ನಿಮ್ಮ ಎಲ್ಲ ಅನಿಷ್ಟ ದೂರಮಾಡಿ, ಅವನು ನಿಮಗೆ ನಿತ್ಯ ಸುಖರೂಪಿ ಮಾಡುತ್ತಾನೆ.
ಶ್ರೀಧರ