ಅಕ್ಷರರೂಪ :ಪ್ರಭಾ ಮತ್ತು ವೆಂಕಟ್ರಮಣ ಭಟ್ಟ ಪುಣೆ
‘ಆರ್ಯಸಂಸ್ಕೃತಿ’ ಪುಸ್ತಕ ಹೇಗೆ ಮುದ್ರಿತವಾಗಿದೆ ಎಂದು ಕುತೂಹಲದಿಂದ ಒಂದು ದಿವಸ ನೋಡುತ್ತಾ ಕುಳಿತಿದ್ದೆ …. ಪರೀಕ್ಷಣವನ್ನು ಎಷ್ಟು ಲಕ್ಷವಿಟ್ಟು ಮಾಡಿದರೂ ಕಡಿಮೆಯೇ ಆಗುತ್ತದೆ ಎಂಬುದು ಇದರಿಂದ ನಿದರ್ಶನಕ್ಕೆ ಬರುತ್ತದೆ.
(ಶ್ರೀ. ಅಮರೇಂದ್ರ ಗಾಡಗೀಳ, ಪುಣೆ ಅವರಿಗೆ ಬರೆದ ಪತ್ರ)
|| ಶ್ರೀರಾಮ ಸಮರ್ಥ ||
ಚಿ. ಅಮರೇಂದ್ರನಿಗೆ ಆಶೀರ್ವಾದ,
ನಿನ್ನಿಂದ ಬಂದ ಒಂದೆರಡು ಪತ್ರಗಳನ್ನು ನನಗೆ ಓದಿ ತೋರಿಸಿದರು. ಅದನ್ನು ಕೇಳಿಯೂ ತುಂಬಾ ದಿನಗಳಾದವು. ಪತ್ರ ಬರೆಯಲಿಕ್ಕೆ ವೇಳೆಯಿರಲಿಲ್ಲ. ಇಂದು ಕೆಲವೊಂದು ಕಾರಣಗಳಿಂದಾಗಿ ಅತ್ಯಾವಶ್ಯಕ ಪತ್ರ ಬರೆಯುವ ಪ್ರಸಂಗ ಬಂದಿದ್ದರಿಂದ, ಅದರಲ್ಲಿ ನಿನ್ನನ್ನೂ ಸೇರಿಸಿಕೊಂಡು ಈ ಪತ್ರ ಸ್ವಲ್ಪದರಲ್ಲಿ ಬರೆಯುತ್ತಿದ್ದೇನೆ.
ಶ್ರೀಸಮರ್ಥ ಶ್ರೀಧರ ತತ್ವಜ್ಞಾನ ಮಂಡಳ ಸದುದ್ದೇಶದಿಂದ ಸ್ಥಾಪಿಸಿದದನ್ನು ಕೇಳಿ ಸಮಾಧಾನ ಅದಾರು ವ್ಯಕ್ತ ಮಾಡುವದಿಲ್ಲ? ಇಲ್ಲಿಯ ಜನರಿಗೆ ತುಂಬಾ ಆನಂದವಾಗಿದೆ. ನನಗೂ ನಿಮ್ಮ ಸೇವೆ ಸಂಮತಿಯಿದೆ. ಶ್ರೀಸಮರ್ಥರಿಗೂ ನಿಮ್ಮ ಮೇಲೆ ವಾತ್ಸಲ್ಯ ಉಕ್ಕಿಬಂತು. ‘ಆರಂಭಶೂರಾಃ ಖಲು ದಾಕ್ಷಿಣಾತ್ಯಃ’ ಎಂಬ ದಾಕ್ಷಿಣಾತ್ಯರ ಮೇಲಿನ ಆರೋಪ, ಬರುವ ದಿನಗಳಲ್ಲಿ, ಅತಿ ಹುರುಪಿನಿಂದಕಾರ್ಯ ಮಾಡುವ ನಿಮ್ಮಂಥ ಉತ್ಸಾಹಪೂರ್ಣ ತರುಣರಿಂದಲೇ ಅಳಿಸಿಹೋಗಬೇಕು.
‘ಆರ್ಯಸಂಸ್ಕೃತಿ’ ಪುಸ್ತಕ ಹೇಗೆ ಮುದ್ರಿತವಾಗಿದೆ ಎಂದು ಕುತೂಹಲದಿಂದ ಒಂದು ದಿವಸ ನೋಡುತ್ತಾ ಕುಳಿತಿದ್ದೆ. ಹೆಚ್ಚು ಸಮಯವಿಲ್ಲವಾದದ್ದರಿಂದ ಸಂಸ್ಕೃತ ಶ್ಲೋಕ ಮೊದಲು ಪರಿಶೀಲಿಸಬೇಕೆಂದು ಮನಸ್ಸಿನಲ್ಲಿ ಹಮ್ಮಿಕೊಂಡೆ. ಪುಸ್ತಕ ತೆರೆದು ನೋಡಿದಾಗ ಆ ಹನ್ನೊಂದನೇ ಪುಟ ಮೊದಲು ಕಣ್ಣು ಮುಂದೆ ಬಂತು. ಅದರಲ್ಲೂ ‘ಸ್ಥಿಂದ ಪ್ರಸವಣೇ’ ಈ ಶಬ್ದದ ಮೇಲೆ ದೃಷ್ಟಿ ಬಿತ್ತು. ‘ಸ್ಪಂದ ಪ್ರಸವಣೇ’ – ಪ್ರಸವಣೇ, ಇದು ಸಂಸ್ಕೃತ ಶಬ್ದ ಸ್ಪಂದ ಧಾತುವಿನ ಅರ್ಥಬೋಧಕವಿರುವಾಗ, ಅದಕ್ಕೆ ಭಿನ್ನ ಅರ್ಥದ ಮರಾಠಿ ರೂಪ ಕೊಟ್ಟಿದ್ದು ಕಂಡುಬಂದದ್ದು ನೋಡಿದರೆ, ಹೀಗೇ ವಿಸಂಗತಾರ್ಥದ ಮುದ್ರಣದ ಎಷ್ಟು ತಪ್ಪು ಈ ಪುಸ್ತಕದಲ್ಲಿ ಆಗಿದೆಯೋ ಯಾರಿಗೆ ಗೊತ್ತು? ಹೀಗೆ ವಿಚಾರದಲ್ಲಿದ್ದಾಗ ದರ್ಶನಕ್ಕೆ ಯಾರೋ ಬಂದರು ಮತ್ತು ಆ ವಿಷಯ ಅಲ್ಲೇ ಉಳಿಯಿತು.
‘ಸ್ಪಂದ ಪ್ರಸವಣೇ’ – ‘ಹರಿಸುವದು’ ಈ ಅರ್ಥದಲ್ಲಿ ಅಲ್ಲಿ ‘ಪ್ರಸವಣೇ’ ಇದ್ದು, ಅದರ ವಿರುದ್ಧಾರ್ಥದಲ್ಲಿ ಪ್ರಯೋಗಿಸಲ್ಪಟ್ಟು ಅದು ಅಲ್ಲಿ ವಾಚಕರ ದಿಕ್ಕು ತಪ್ಪಿಸುವ ಸಂಭವವಿದೆ. ಪರೀಕ್ಷಣವನ್ನು ಎಷ್ಟು ಲಕ್ಷವಿಟ್ಟು ಮಾಡಿದರೂ ಕಡಿಮೆಯೇ ಆಗುತ್ತದೆ ಎಂಬುದು ಇದರಿಂದ ನಿದರ್ಶನಕ್ಕೆ ಬರುತ್ತದೆ. ಉಳಿದೆಲ್ಲಾ ದೃಷ್ಟಿಯಿಂದ ಎಲ್ಲೂ ಹೆಸರು ತೆಗೆಯುವಂಥ ದೋಷಕ್ಕೆ ಸ್ಥಳವಿಲ್ಲ. ಪ್ರಥಮ ದರ್ಶನದಲ್ಲೇ ನೀವು ತೆಗೆದುಕೊಂಡ ಪರಿಶ್ರಮ ಮತ್ತು ತೋರಿಸಿದ ದಕ್ಷತೆ, ಅಷ್ಟೇ ಅಲ್ಲ ಆದರ ಸಾಕ್ಷೀಭೂತವಾದದ್ದು ತಾನೇತಾನಾಗಿ ಕಾಣಿಸುತ್ತದೆ. ನಿಮ್ಮಲ್ಲಿ ಏನೆಲ್ಲ ಉತ್ಕೃಷ್ಟದ್ದಿದೆಯೋ ಅವೆಲ್ಲ ಇನ್ನೂ ಹೆಚ್ಚಿನದಾಗಿ ಪೂರ್ಣತ್ವ ಹೊಂದಲಿ ಮತ್ತು ಕೆಟ್ಟದ್ದೇನಾದರೂ ಇದ್ದರೆ ಒಮ್ಮೆಲೇ ನಷ್ಟವಾಗಲಿ. ಸಮಾಜದಲ್ಲಿ ಚಿಕಿತ್ಸಕ ವರ್ಗವೂ ಇರಬೇಕಾಗುತ್ತದೆ. ಅದರಿಂದ ಗುಣದೋಷ ನಿದರ್ಶನಕ್ಕೆ ಬರುತ್ತದೆ. ಆರ್ಯಸಂಸ್ಕೃತಿಯ ಬಗ್ಗೆ ವಿದ್ವಾನ ಜನರ ಮತ ನನಗೆ ಎಷ್ಟು ಪ್ರಮಾಣದಲ್ಲಿ ತಿಳಿಯಬೇಕಾಗಿತ್ತೋ ಆ ಪ್ರಮಾಣದಲ್ಲಿ ತಿಳಿದು ಬರಲಿಲ್ಲ. ಪ್ರಸಿದ್ಧವಾದ ಎಲ್ಲ ಅಭಿಪ್ರಾಯಗಳನ್ನು ನನಗೆ ನೀನು ಕಳುಹಿಸಿ ಕೊಟ್ಟೇ ಕೊಡುತ್ತೀಯೆ.
ಚಿ. ಗೋಡಸೇ ಎಲ್ಲಿದ್ದಾನೆ? ಏನು ಮಾಡುತ್ತಿದ್ದಾನೆ? ಅವನ ಒಂದೂ ಪತ್ರವೂ ಇಲ್ಲ. ಆರ್ಯಸಂಸ್ಕೃತಿ ಪುಸ್ತಕದ ಬೇಡಿಕೆ ಎಷ್ಟರಮಟ್ಟಿಗೆ ಇದೆ? ನೀವು ಪ್ರಸಿದ್ಧ ಮಾಡಿದಂತೆ ಜನರಿಂದ ಎಷ್ಟರ ಮಟ್ಟಿಗೆ ದೇಣಿಗೆ ಬಂತು ಮೊದಲಾದವುಗಳ ಪತ್ರ ಕಳಿಸು. ಪುಸ್ತಕದ ಬೇಡಿಕೆಯಿಂದ ಪುಸ್ತಕದ ಬಗೆಗಿನ ಮೆಚ್ಚುಗೆ ವ್ಯಕ್ತವಾಗುತ್ತದೆ ಮತ್ತು ಅದರ ಮಾನ್ಯತೆ ಪ್ರಕಟವಾಗುತ್ತದೆ.
ನಿನ್ನ ಕ್ಷೇಮ ಕುಶಲೋಪರಿಯ ಪತ್ರ ಕಳಿಸು.
‘ಸರ್ವೇಪಿ ಸುಖಿನಃ ಸಂತು’
ಶ್ರೀಧರ