muralidhar 2

ಮುಂದುವರೆದು:-

ಅನೇಕ ಊರುಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಶ್ರೇಷ್ಠವಾದ ಪ್ರಸಿದ್ದಿ ಪಡೆದ ದೇವಸ್ಥಾನಗಳು ಇರುವುದುಂಟು. ಅದೇ ರೀತಿ ಕೆಲವು ಊರುಗಳಲ್ಲಿಯೂ ಪ್ರಸಿದ್ದಿ ಪಡೆದಂತಹ ಕ್ರೀಡಾ ಪಟುಗಳು, ಚಲನಚಿತ್ರ ನಟರು, ಸಾಹಿತಿಗಳು, ಸಮಾಜ ಸೇವಕರು, ಹೀಗೆ ಅನೇಕ ಕ್ಷೇತ್ರಗಳಲ್ಲಿ ದುಡಿದಿರುವ ಹಾಗೂ ದುಡಿಯುತ್ತಿರುವ ಅನೇಕ ಗಣ್ಯವ್ಯಕ್ತಿಗಳು ಇರುತ್ತಾರೆ. ಆ ಊರಿನ ಗಣ್ಯವ್ಯಕ್ತಿಗಳೇ ಊರಿನ ಹೆಮ್ಮೆಯಾಗಿರುತ್ತಾರೆ. ಇಂಥಹ ಗಣ್ಯವ್ಯಕ್ತಿಗಳು ನಮ್ಮ ಊರಿನವರು ಎಂದು ಹೇಳುವುದಕ್ಕೆ ಆ ಊರಿನ ಜನತೆಗೆ ಬಹಳ ಹೆಮ್ಮೆಯಾಗುತ್ತದೆ.

ಇನ್ನೂ ಮುಂದುವರೆದು ಆ ಹೆಸರಾಂತ ಗಣ್ಯವ್ಯಕ್ತಿಗಳು ನಮ್ಮ ತಾಲ್ಲೂಕುರವರೆಂದು, ಸಂಬಂಧಪಟ್ಟ ತಾಲ್ಲೂಕುರವರು, ಜಿಲ್ಲೆಯವರು, ನಮ್ಮ ರಾಜ್ಯದವರೆಂದು ಆ ರಾಜ್ಯದ ಜನಗಳು ಹೆಮ್ಮೆ ಪಡುವುದರಲ್ಲಿ ಸಂಶಯವೇ ಇಲ್ಲ. ನಮ್ಮ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಅನೇಕ ಕ್ಷೇತ್ರಗಳಲ್ಲಿ ಅನೇಕ ಮಹನೀಯರುಗಳು ಅದ್ವಿತೀಯ ಸಾಧನೆ ಮಾಡಿದ್ದಾರೆ. ಇದರ ಪಟ್ಟಿ ಮಾಡುತ್ತಾ ಹೋದರೆ ಕೊನೆಯೇ ಇರುವುದಿಲ್ಲ.

ಯಾವುದಾದರೂ ದೇವಸ್ಥಾನಗಳನ್ನು ಗುರ್ತಿಸಿದಾಗ, ಮೊದಲು ಕೇಳುವುದು ಪ್ರಸಿದ್ದಿ ಪಡೆದ ದೇವಸ್ಥಾನ ಯಾವ ರಾಜ್ಯದಲ್ಲಿದೆ ಎಂದು? ಅಂದರೆ ಆ ದೇವಸ್ಥಾನಗಳ ಜೊತೆಗೆ ಆ ಊರು ಪ್ರಸಿದ್ದಿ ಪಡೆಯುತ್ತದೆ. ಅನೇಕ ದೇವಸ್ಥಾನಗಳಿಂದ ಆ ಊರುಗಳೇ ಪುಣ್ಯಕ್ಷೇತ್ರಗಳಾಗಿವೆ. ಅದೇರೀತಿ ಅದ್ವಿತೀಯ ಸಾಧನೆ ಮಾಡಿದ ವ್ಯಕ್ತಿಯ ಜೊತೆಗೆ ಹುಟ್ಟಿದ ಊರು, ರಾಜ್ಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದರೆ ಅವರು ಹುಟ್ಟಿದ ದೇಶವು ಸಹ ಪ್ರಸಿದ್ದಿ ಪಡೆಯುತ್ತವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ನೀಡುವ ನೋಬೆಲ್ ಪ್ರಶಸ್ತಿ ಯಾರಿಗಾದರೂ ಲಭಿಸಿದ್ದಲ್ಲಿ, ಆ ಮಹಾನ್ ವ್ಯಕ್ತಿಯು ಹುಟ್ಟಿದ ದೇಶಕ್ಕೆ ಹೆಮ್ಮೆ ಎನಿಸುತ್ತದೆ. ಒಲಂಪಿಕ್ಸ್ ಕ್ರೀಡೆಗಳಲ್ಲಿ, ಚಿನ್ನದ ಪದಕಗಳನ್ನು ಗೆದ್ದಲ್ಲಿ, ಆ ಕ್ರೀಡಾಪಟುವಿನ ದೇಶದ ಕೀರ್ತಿ ಬೆಳಗುತ್ತದೆ. ಒಲಂಪಿಕ್ಸ್, ಏಷ್ಯನ್ ಗೇಮ್ಸ್, ಅಥವಾ ಇನ್ಯಾವುದಾದರೂ ಕ್ರೀಡೆಗಳಲ್ಲಿ ಮೊದಲು ಗುರ್ತಿಸುವುದು ಯಾವ ದೇಶದ ಪ್ರಜೆ ಎಂಬುದಾಗಿ, ಹಾಗೆಯೇ ಪದಕಗಳ ಪಟ್ಟಿ ಅಥವಾ ಪಾಯಿಂಟ್ಸ್‍ಗಳ ಪಟ್ಟಿಯನ್ನು ಹಾಕುವಾಗ ದೇಶದ ಹೆಸರು ನಮೂದಿಸಿ ಆ ದೇಶ ಎಷ್ಟು ಪದಕಗಳನ್ನು ಪಡೆದಿದೆ ಎಂದು ನಮೂದಿಸುತ್ತಾರೆ. ಒಬ್ಬ ವ್ಯಕ್ತಿ ಏನಾದರೂ ಸಾಧನೆ ಮಾಡಿದರೆ ಅದು ಒಬ್ಬ ವ್ಯಕ್ತಿಗೆ ಮಾತ್ರ ಕೀರ್ತಿ ಹೆಸರು ತಂದುಕೊಡುವುದಿಲ್ಲ. ಅಥವಾ ಅವನು ಸಂಪಾದಿಸಿದ ಕೀರ್ತಿ ಅವನಿಗೆ ಮಾತ್ರ ಸೀಮಿತವಲ್ಲ. ಅವನ ದೇಶ, ರಾಜ್ಯ ಹುಟ್ಟಿದ ಊರಿಗೆ ಕೀರ್ತಿ ಹಾಗೂ ಅವರ ಹೆತ್ತವರಿಗೆ ಕೀರ್ತಿ ತಂದು ಕೊಡುತ್ತದೆ.

RELATED ARTICLES  ಮನಸ್ಸು ಮಾನಸ ಸರೋವರದಂತಿರಲಿ.

ಯಾವುದಾದರೂ ದೇವಸ್ಥಾನವು ಪ್ರಸಿದ್ದಿ ಪಡೆದರೆ, ಆ ಪ್ರಸಿದ್ದಿ ಪಡೆದ ದೇವಸ್ಥಾನದಿಂದ, ದೇವಸ್ಥಾನ ಇರುವ ಊರು ಅಥವಾ ರಾಜ್ಯ ಪ್ರಸಿದ್ದಿ ಪಡೆದಂತೆ, ಸಾಧಕರಿಂದ ಅವರು ಹುಟ್ಟಿದ ಊರು ರಾಜ್ಯ ಹಾಗೂ ದೇಶ ಪ್ರಸಿದ್ದಿ ಪಡೆಯಬಹುದು. ಪ್ರಸಿದ್ದಿ ಪಡೆದ ದೇವಸ್ಥಾನವು ಪುಣ್ಯಕ್ಷೇತ್ರವಾಗಿ ಮಾರ್ಪಟ್ಟು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಹೋಗುತ್ತಾರೆ. ಆದರೆ ಸಾಧಕರ ಕೀರ್ತಿ ಬೆಳೆದಂತೆ ಅವರನ್ನು ನೋಡಲು ಎಲ್ಲರಿಗೂ ಸಾಧ್ಯವಿರುವುದಿಲ್ಲ ಆದರೆ ಅವರು ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸಿದಾಗ ಅವರನ್ನು ನೋಡಲು ಅಪಾರ ಜನಸ್ತೋಮ ಸೇರುವುದುಂಟು. ಕ್ರೀಡಾಪಟುಗಳು, ರಾಜಕಾರಣ ಗಳು, ಕಲಾವಿದರು, ಸಾಹಿತಿಗಳು, ಅಥವಾ ಇನ್ಯಾವುದೇ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಲ್ಲಿ, ಅಭಿಮಾನಿಗಳು ದಿನೇ ದಿನೇ ಜಾಸ್ತಿಯಾಗುತ್ತಾರೆ. ಯಾವುದಾದರೂ ದೇವಸ್ಥಾನದ ಹಿರಿಮೆ ಜಾಸ್ತಿಯಾದರೆ ಅದಕ್ಕೆ ಭಕ್ತಾದಿಗಳು ಹೆಚ್ಚಾದಂತೆ, ಅದ್ವಿತೀಯ ಸಾಧನೆ ಮಾಡಿದವರಿಗೆ ಅಭಿಮಾನಿಗಳು ಹೆಚ್ಚಾದಂತೆ ಹೋಗುತ್ತಾರೆ. ದೇವಸ್ಥಾನಗಳ ಕಳಶಗಳು ಮಿತಿಯಲ್ಲಿರುತ್ತದೆ. ಆದರೆ ಪ್ರಶಸ್ತಿಗಳಿಗೆ ಮಿತಿ ಇರುವುದಿಲ್ಲ.

ದೇವಸ್ಥಾನಗಳನ್ನು ಎಲ್ಲಾ ಜನಗಳು ಭಕ್ತಿಯಿಂದ ನೋಡುವಂತೆ, ಸಾಧಕರನ್ನು ಗೌರವದಿಂದ ಕಾಣುತ್ತಾರೆ. ಗೋಪುರಗಳೇ ಇಲ್ಲದ ದೇವಸ್ಥಾನಗಳು ಎಲ್ಲೂ ಅಷ್ಟಾಗಿ ಕಾಣಸಿಗುವುದಿಲ್ಲ. ಅಂತಹ ಅಪರೂಪವಾಗಿದ್ದರೂ ಜನಗಳ ಗಮನ ಸೆಳೆಯುವುದಿಲ್ಲ. ಹಾಗೆಯೇ ಶ್ರೇಷ್ಠ ಅದ್ವಿತೀಯ ವ್ಯಕ್ತಿತ್ವ ವಿಲ್ಲದಿದ್ದರೂ ಜನಗಳ ಗಮನ ಸೆಳೆಯುವುದಿಲ್ಲ ಹಾಗೂ ಅಂತಹ ಮನುಷ್ಯನನ್ನು ಯಾರೂ ಗುರ್ತಿಸುವುದಿಲ್ಲ. ಆದರೆ ಎಲ್ಲರೂ ಅದ್ವಿತೀಯ ಸಾಧನೆ ಮಾಡಲು ಸಾಧ್ಯವಿಲ್ಲವೆಂದೇ ಹೇಳಬಹುದು. ಕೆಲವರಿಗೆ ಯಾವುದಾದರೂ ಕ್ಷೇತ್ರದಲ್ಲಿ ಸಾಧಿಸಬೇಕೆಂಬ ಮನಸ್ಸಿದ್ದರೂ ಅವರುಗಳು ಇರುವ ಕುಟುಂಬದ ವಾತಾವರಣ, ಬೆಳೆಯುವ ಪರಿಸರ, ಬಡತನ, ಅನಿರೀಕ್ಷಿತ ಘಟನೆಗಳು ಕೆಲವೊಮ್ಮೆ ಸಾಧನೆಗೆ ಅಡ್ಡ ಬರಬಹುದು. ಇದೆಲ್ಲವನ್ನೂ ದಾಟಿ ಮುಂದುವರೆದರೆ ಮಾತ್ರ ಏನಾದರೂ ಸಾಧನೆಗೈಯ್ಯಬಹುದು. ಎಲ್ಲರೂ ಸಾಧನೆ ಮಾಡಲು ಸಾಧ್ಯವಿಲ್ಲ ಆದರೆ ತ್ವರಿತವಾಗಿ ಬೆಳೆಯುತ್ತಿರುವ ಈಗಿನ ಪ್ರಪಂಚದಲ್ಲಿರುವ ಸೌಕರ್ಯಗಳನ್ನು ಉಪಯೋಗಿಸಿಕೊಂಡು ವಿದ್ಯಾವಂತರಾಗಲು ಯಾರ ಅಡ್ಡಿಯೂ ಇರುವುದಿಲ್ಲ. ಅದಕ್ಕೆ ಮನಸ್ಸು ಮಾಡಬೇಕಷ್ಟೇ. ಹಿಂದಿನ ಕಾಲದಲ್ಲಿ ಯಾವ ರೀತಿಯ ಸೌಕರ್ಯಗಳು ಇರಲಿಲ್ಲ. ಜೊತೆಗೆ ಕಿತ್ತು ತಿನ್ನುವ ಬಡತನ, ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಬೇಕಾದರೆ ನಡೆದೇ ಹೋಗಬೇಕಾಗಿತ್ತು. ಹೀಗೆ ಅನೇಕ ರೀತಿಯ ಕಷ್ಟಗಳು ಇದ್ದುದ್ದರಿಂದ ನಮ್ಮ ಕೆಲವು ಹಿರಿಯರು ಅವಿದ್ಯಾವಂತರಾಗಿ ತಮ್ಮ ಬಾಳನ್ನು ಮುಗಿಸಿದ್ದಾರೆ. ಹಾಗೂ ಅದೆಷ್ಟೋ ಪ್ರತಿಭೆಗಳು ಪ್ರಪಂಚಕ್ಕೆ ಪರಿಚಯವಾಗದೆ ಮಣ್ಣಾಗಿರಬಹುದು. ಆದರೆ ಈಗ ಕಾಲ ಬಹಳ ಬದಲಾಗಿದೆ. ಎಲ್ಲಾ ಕಡೆ ಟಿ.ವಿಗಳು ಇಂಟರ್ ನೆಟ್ ಸೌಲಭ್ಯ, ವಿದ್ಯುಚ್ಛಕ್ತಿ ಸೌಲಭ್ಯಗಳು, ಒಂದು ಊರಿನಿಂದ ಇನ್ನೊಂದು ಊರಿಗೆ ಕ್ಷಣ ಮಾತ್ರದಲ್ಲಿ ಹೋಗುವಂತಹ ಸಾರಿಗೆ ಸೌಲಭ್ಯಗಳು ಹೀಗೆ ಅನೇಕ ರೀತಿಯ ಸೌಲಭ್ಯಗಳು ಮನೆ ಬಾಗಿಲಿಗೆ ಬಂದಿರುವಾಗ ಇಂತಹ ಅವಕಾಶಗಳನ್ನು ಉಪಯೋಗಿಸಿಕೊಂಡು ತಮ್ಮಲ್ಲಿರುವ ಪ್ರತಿಭೆಗಳನ್ನು ಪ್ರಪಂಚಕ್ಕೆ ಪರಿಚಯಿಸಿದರೆ, ದೇಶಕ್ಕೆ ಒಂದು ಅಮೂಲ್ಯ ಕೊಡುಗೆ ನೀಡಿದಂತಾಗುತ್ತದೆ. ತಿರಸ್ಕಾರ ಭಾವದಿಂದ ಅಥವಾ ಸೋಮಾರಿತನದಿಂದ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸದಿದ್ದರೆ ಎಲ್ಲರಿಗೂ ನಷ್ಟವಾಗುತ್ತದೆ. ಯಾರಲ್ಲಿ ಯಾವ ಪ್ರತಿಭೆ ಇದೆಯೋ ತಿಳಿಯುವುದಿಲ್ಲ. ಅವರಲ್ಲಿರುವ ಪ್ರತಿಭೆ ಪರಿಚಯಿಸಿದರೆ ಮಾತ್ರ ಎಲ್ಲರಿಗೂ ತಿಳಿಯುವಂತೆ ಆಗುತ್ತದೆ. ಈಗ ಟಿ.ವಿ ಮಾದ್ಯಮದಲ್ಲಿ ಅನೇಕ ಸ್ಪರ್ಧೆಗಳು ಮಾಡುತ್ತಾರೆ. ಇದರಿಂದ ಎಷ್ಟೋ ಪ್ರತಿಭೆಗಳು ಬೆಳಕಿಗೆ ಬಂದಿದೆ. ಎಲ್ಲಾ ಸೌಕರ್ಯ ಇದ್ದು, ಅವಿದ್ಯಾವಂತರಾದರೆ, ಏನು ಹೇಳಬೇಕೋ ತಿಳಿಯುವುದಿಲ್ಲ. ಯಾರೊಬ್ಬರೂ ಅವದ್ಯಾವಂತರಾಗದೆ, ಮಾಡದೆ, ಇರುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು, ಎಲ್ಲರೂ ವಿದ್ಯೆಯನ್ನು ಕಲಿತು ವಿದ್ಯಾವಂತರಾಗಿ ಹಾಗೂ ಬುದ್ದಿವಂತರಾದರೆ ಸಮಾಜಕ್ಕೆ ನೀಡುವ ಒಂದು ಒಳ್ಳೆಯ ಕೊಡುಗೆ ಯಾಗುತ್ತದೆ.

RELATED ARTICLES  "ಸ್ಥಿತಪ್ರಜ್ಞ ಶ್ರೀರಾಮ" (‘ಶ್ರೀಧರಾಮೃತ ವಚನಮಾಲೆ’).