ಅಕ್ಷರರೂಪ :ಪ್ರಭಾ ಮತ್ತು ವೆಂಕಟ್ರಮಣ ಭಟ್ಟ ಪುಣೆ
ಭಕ್ತರ ಉದ್ಧಾರದ ಹೊರತು, ಪೂರ್ಣಕಾಮ – ಶ್ರೀಸರ್ವಸಮರ್ಥ ರಾಮನಿಗೆ ಮತ್ತೇನು ಕಾರ್ಯವಿದೆ?
(ಶ್ರೀ ಕನೈಯಾಲಾಲ ಆಸಾವಾ ಸೋನಗಾಂವ ಅವರಿಗೆ ಬರೆದ ಪತ್ರ)
||ಶ್ರೀರಾಮ ಸಮರ್ಥ||
ಚಿ. ಕನೈಯಲಾಲ (ಸೋನಗಾಂವ) ನಿಗೆ ಅನೇಕ ಆಶೀರ್ವಾದಗಳು,
ಚಿ. ದಿನಕರನ ಪತ್ರದಲ್ಲಿ ಇಲ್ಲಿಂದ ಪತ್ರ ಬರದೇ ಹೋದದ್ದರಿಂದ ಕಳಕಳಿಯಾಗಿದೆ ಎಂದು ಬರೆಯಲಾಗಿದೆ. ತಮ್ಮ ಪತ್ರದಲ್ಲಿ ಉತ್ತರದ ಅಪೇಕ್ಷೆ ಇರದಿದ್ದರಿಂದ ಪತ್ರ ಕಳಿಸಲಿಲ್ಲ.
‘ತೇಷಾಮಹಂ ಸಮುದ್ಧರ್ತಾ ಮೃತ್ಯುಸಂಸಾರಸಾಗರಾತ್| ಭವಾಮಿ ನ ಚಿರತ್ಪಾರ್ಥ ಮಯ್ಯಾವೇಷಿತ ಚೇತಸಾಮ್|’
‘ಶರಣಾಗತರಿಗೆ ದೇವರ ವಜ್ರಮುಷ್ಟಿ|’
‘ನುಪೇಕ್ಷೀ ಕದಾ ರಾಮದಾಸಾಭಿಮಾನೀ|’
‘ನ ಮೇ ಭಕ್ತ ಪ್ರಣಶ್ಯತಿ|’
‘ತಸ್ಯಾಹಂ ನ ಪ್ರಣಶ್ಯಾಮಿ| ಸ ಚ ಮೇ ನ ಪ್ರಣಶ್ಯತಿ|’
ಇಷ್ಟು ನಿಕಟ ಸಂಬಂಧವಿರುವಾಗ ಮನಸ್ಸಿನಲ್ಲೇಕೆ ಶಂಕೆ ಇಟ್ಟುಕೊಳ್ಳುವದು?
‘ಎಲ್ಲೆಲ್ಲಿ ಭಕ್ತ ಹೋಗುತ್ತಾನೋ| ಹಿಂದೆಯೇ ಹೋಗುವನು ಹನುಮಂತ||’
‘ನ ಹಿ ಕಲ್ಯಾಣಕೃತ್ ಕಶ್ಚಿದ್ ದುರ್ಗತಿ ತಾತ ಗಚ್ಛಸಿ|’
ಪರಮಾತ್ಮ ಸರ್ವಜ್ಞನಿದ್ದಾನೆ.
‘ಮಾಝೇ ಸಾಹೇ ಪರಿ ಮಾಝಾ ಭಕ್ತಾಂಚೇ ನ ಸಾಹೇ|’ ಎಂದು ಉದ್ಘೋಷಿತ ಮಾಡುವ ಪರಮಾತ್ಮ ಎಂದಿಗಾದರೂ ಭಕ್ತರ ಅನಹಿತ ಮಾಡುತ್ತಾನೆಯೇ? ಕ್ಷಣಕ್ಷಣಕ್ಕೂ ತನ್ನ ಭಕ್ತರ ಪ್ರತಿಹೆಜ್ಜೆ ಉನ್ನತ ಮಾರ್ಗದೆಡೆ ಬೀಳುತ್ತಿರುವದನ್ನು ನೋಡಿ ಭಗವಂತನು ಸಂತುಷ್ಟನಾಗುತ್ತಾನೆ. ಅವನದೊಂದು ವಿಚಿತ್ರ ಸಂಯೋಜನೆ; ಅವನೇನು ಬಹು ದೂರವಿರದೇ ಅತ್ಯಂತ ಹತ್ತಿರ ಅಂದರೆ ಎಲ್ಲಿಂದ ಎಲ್ಲರೂ ನನ್ನದು ಎಂದು ಹೇಳಲ್ಪಡುವ ‘ನಾನು’ ಎಂಬ ಅನಿಸುವಿಕೆ ಉದಯವಾಗುತ್ತದೆಯೋ ಅಲ್ಲೇ,
‘ತುಮ್ಹಾಸ ಪಾಠವಿಲೀ ಹಾಕ| ತೇಣೇಂ ನಿರಸಲಾ ಧಾಕ|’ ಎಂಬಂತ ನಿರ್ಭಯಸ್ಥಿತಿಯಲ್ಲಿ ಇರುವನು. ಭಕ್ತರ ಉದ್ಧಾರದ ಹೊರತು, ಪೂರ್ಣಕಾಮ – ಶ್ರೀಸರ್ವಸಮರ್ಥ ರಾಮನಿಗೆ ಮತ್ತೇನು ಕಾರ್ಯವಿದೆ?
ಶುಭಂ ಭ್ರೂಯಾತ್|
ಶ್ರೀಧರ