muralidhar 2
ಇಂದು ನಾವೆಲ್ಲರೂ 21ನೇ ಶತಮಾನದಲ್ಲಿದ್ದೇವೆ. ದಿನಗಳು ಬೇಗ ಕಳೆಯುತ್ತಿದೆ ಪ್ರಪಂಚವು ಇಂದು ತ್ವರಿತವಾಗಿ ಬದಲಾಗುತ್ತಿದೆ. ಎಂಬ ಭಾವನೆ ಎಲ್ಲರಲ್ಲಿಯೂ ಹಾÀಸುಹೊಕ್ಕಾಗಿದೆ. ಆದರೆ ಸೂರ್ಯ ಚಂದ್ರರೂ ಬದಲಾಗಿಲ್ಲ, ಕಾಲವು ಹೆಚ್ಚು ಕಡಿಮೆಯಾಗಿಲ್ಲ. ಒಂದು ದಿನಕ್ಕೆ 24 ಗಂಟೆ, ವರ್ಷಕ್ಕೆ 365 1/4 ದಿವಸಗಳು ಮಾತ್ರವೇ ಇದೆ. ಹಿಂದಿನ ಕಾಲಕ್ಕೂ ಈಗಿನ ಕಾಲಕ್ಕೂ ಇದರಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಆದರೆ ಬದಲಾಗಿರುವುದು ಮನುಷ್ಯನ ಸ್ವಭಾವ, ಜೀವನದ ವೈಖರಿ ಹಾಗೂ ದಿನಚರಿ ಮಾತ್ರ ಮತ್ತು ಹವಾಮಾನದ ಬದಲಾವಣೆ ಮಾತ್ರ ಎಂದರೆ ತಪ್ಪಾಗಲಾರದು.

ಕಾಲ ಬದಲಾಗಿಲ್ಲ ದಿನಗಳು ಹಾಗೂ ವರ್ಷಗಳು ಉರುಳಿವೆ, ಉರುಳುತ್ತಲೂ ಇವೆ. ಮನುಷ್ಯನ ಜೀವನವೇ ಒಂದು ಯಾಂತ್ರೀಕೃತ ಜೀವನದಂತಾಗಿ, ಯಂತ್ರವು ತಿರುಗಿದಂತೆ ಜೀವನವೂ ತಿರುಗುತ್ತಾ ಇದೆ. ಪ್ರಾರಂಭಿಸಿದ ಯಂತ್ರವು ಕೆಲಸ ಪೂರೈಸುವವರೆಗೂ ಬಿಡುವಿಲ್ಲದೆ ಒಂದೇ ಸಮನೆ ತಿರುಗುತ್ತಾ ಇರುವಂತೆ ಮನುಷ್ಯನ ದಿನ ನಿತ್ಯದ ಬದುಕು ಒಂದು ಯಂತ್ರದಂತೆ ಆಗಿದೆ. ಒಂದು ಕಡೆ ಕುಳಿತು ವಿಶ್ರಮಿಸಲು ಸಮಯವಿಲ್ಲ, ಯಾವಾಗಲೂ ದುಡಿಯುತ್ತಾ ಕಾಲ ತಳ್ಳುವಂತಾಗಿದೆ.

ಕೆಲಸಕ್ಕೆ ಬೇಗ ಹೋಗಬೇಕು, ಇಲ್ಲದಿದ್ದರೆ ಗೈರುಹಾಜರಾಗುವ ಭಯ, ಗೈರುಹಾಜರಾದರೆ ಸಂಬಳಕ್ಕೆ ಕತ್ತರಿ ಬೀಳುತ್ತದೆ. ನಗರ ಪ್ರದೇಶಗಳಲ್ಲಿಯೇ ಹೆಚ್ಚಾಗಿ ಕಾರ್ಖಾನೆಗಳು ಕಛೇರಿಗಳು ಇದ್ದು, ಎಲ್ಲರೂ ನಗರಗಳಿಗೆ ಕೆಲಸಕ್ಕೆ ಹೋಗುವ ಅನಿವಾರ್ಯತೆ ಉಂಟಾಗಿ ನಗರ ಪ್ರದೇಶಗಳೆಲ್ಲಾ ಜನದಟ್ಟಣೆಯಿಂದ ವಾಹನ ದಟ್ಟಣೆಯಿಂದ ತುಂಬಿ ಹೋಗಿದೆ. ಕೆಲಸಕ್ಕೆ ಹೋಗುವ ಜನಗಳು ನಗರದಲ್ಲಿಯೇ ಇರಬೇಕೆಂದು ನಗರ ಪ್ರದೇಶಗಳಲ್ಲಿ ವಾಸಮಾಡುತ್ತಿರುವುದರಿಂದ ನಗರಗಳು ಬೆಳೆಯುತ್ತಾ ಹೋದಂತೆ ಪ್ರತಿಯೊಂದು ಕಿ.ಮೀಗಳಿಗೂ ಸಿಗ್ನಲ್‍ಗಳು, ನಿಲ್ದಾಣಗಳು ಉದ್ಭವವಾಗಿವೆ. ನಗರಗಳಲ್ಲಿ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಹೋಗಬೇಕಾದರೆ ಇವೆಲ್ಲವನ್ನೂ ದಾಟಿ ಹೋಗಬೇಕು. ಎಲ್ಲರಿಗೂ ನಗರಗಳ ಹೃದಯಭಾಗದಲ್ಲಿ ವಾಸಿಸುವುದಕ್ಕೆ ಆಗುವುದಿಲ್ಲ. ಸಣ್ಣ ಸಣ್ಣ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರುಗಳು ನಗರದ ಹೊರಭಾಗದಲ್ಲಿ ವಾಸಿಸುತ್ತಾರೆ. ಸಂಬಳಕ್ಕೆ ತಕ್ಕಂತೆ ಬಾಡಿಗೆ ಮನೆಯನ್ನು ನೋಡಿ ಬರುವ ಸಂಬಳದಲ್ಲಿ ಜೀವನವನ್ನು ಸಾಗಿಸುತ್ತಾ ಬಂದಿರುವುದು ಸರ್ವೇ ಸಾಮಾನ್ಯವಾಗಿದೆ.

ಇದರ ಜೊತೆಗೆ ಒತ್ತಡದ ಜೀವನ, ಬೆಳಗೆದ್ದು ಬೇಗ ಕೆಲಸಕ್ಕೆ ಹೋಗಬೇಕು, ಕೆಲಸಕ್ಕೆ ಹೋಗುವ ಮುಂಚೆ ಅಡುಗೆ ತಿಂಡಿ ಸಿದ್ದಪಡಿಸಬೇಕು, ಮಕ್ಕಳನ್ನು ಶಾಲೆಗೆ ಕಳುಹಿಸಲು ಸಿದ್ದಪಡಿಸಬೇಕು, ಗಂಡ ಅಥವಾ ಹೆಂಡತಿ ಇಬ್ಬರೂ ಕಛೇರಿಗೆ ಹೋಗಲು ಸಿದ್ದರಾಗಬೇಕು. ಇವೆಲ್ಲವನ್ನೂ ಮಾಡಿ ಮುಗಿಸುವ ಹೊತ್ತಿಗೆ ಸಾಕಾಗಿ ಹೋಗಿರುತ್ತದೆ. ಒಂದು ದಿನದ ಕಥೆಯಲ್ಲವಲ್ಲ ಇದು ನಿವೃತ್ತಿಯಾಗುವವರೆಗೂ ನಿಲ್ಲದ ದಿನ ನಿತ್ಯದ ಕೆಲಸ.

RELATED ARTICLES  ಗೋ ಸಂಜೀವಿನಿ

ಇಷ್ಟೂ ಕೆಲಸ ಇರುವಾಗ ತಾಳ್ಮೆ ಎಲ್ಲಿಂದ ಬರಬೇಕು? ಯಾವುದರಲ್ಲಿಯೂ ತಾಳ್ಮೆ ಇರುವುದಿಲ್ಲ. ಯಾರಾದರೂ ಏನಾದರೂ ಹೇಳಿದರೆ ಅದನ್ನು ಕೇಳುವ ಮನಸ್ಸೂ ಇರುವುದಿಲ್ಲದಂತಹ ಸನ್ನಿವೇಶ ಉಂಟಾಗಿದೆ. ಇದರ ಜೊತೆಗೆ ನಾನಾ ರೀತಿಯ ಸಂಸಾರ ತಾಪತ್ರಯಗಳು ಉದ್ಭವಿಸಿದರೆ, ತಮ್ಮ ಸಂಸಾರವನ್ನು ನೆಟ್ಟಗೆ ಮಾಡಿಕೊಂಡರೆ ಸಾಕು, ಬೇರೆ ಯಾರೊಬ್ಬರ ಗೊಡವೆಯೇ ಬೇಡ ಎಂಬ ಮನೋಭಾವ ಉಂಟಾಗುತ್ತದೆ. ಮಕ್ಕಳು ಹೇಳಿದಂತೆ ಕೇಳುವವರಿದ್ದರೆ ಪರವಾಗಿಲ್ಲ ಇಲ್ಲದಿದ್ದರೆ ಮಕ್ಕಳ ಯೋಚನೆ ತಲೆಯಲ್ಲಿ ತುಂಬಿಕೊಳ್ಳುತ್ತದೆ. ಚಿಕ್ಕವನಿದ್ದಾಗಲೇ ಈ ರೀತಿ ಇದ್ದಾನೆ ದೊಡ್ಡವನಾದ ಮೇಲೆ ಇನ್ನೇನು ಗತಿಯಪ್ಪಾ? ಎಂಬ ಯೋಚನೆ ಬರುವುದು ಸಹಜ. ಚಿಕ್ಕವರಿದ್ದಾಗ ಹಠವಾದಿಯಾಗಿ ದೊಡ್ಡವರಾದ ನಂತರ ಬುದ್ದಿ ಕಲಿತುಗೊಂಡರೆ ಪರವಾಗಿಲ್ಲ ಎನ್ನಬಹುದು. ಹೆತ್ತವರನ್ನು ಕಡೆಗಣ ಸಿ ತನಗೆ ಇಷ್ಟಬಂದವರನ್ನು ಪ್ರೀತಿಸಿ ವಿವಾಹವಾಗಿ ಚೆನ್ನಾಗಿ ಸಂಸಾರ ನಡೆಸಿಕೊಂಡು ಹೋದರೆ ಯಾರಿಗೂ ತೊಂದರೆ ಇರುವುದಿಲ್ಲ. ಅಕಸ್ಮಾತ್ ಇದರಲ್ಲಿ ಮಕ್ಕಳಿಗೆ ಮೋಸವಾದರೆ ಅವರನ್ನು ಸಂತೈಸುವವರು ಯಾರು? ದಿನಗಳು ಕಳೆದು ಮಕ್ಕಳು ಬೆಳೆಯುತ್ತಾ ಹೋದಂತೆ, ಸಮಸ್ಯೆಯೂ ಬೆಳೆಯುತ್ತಾ ಹೋಗುತ್ತದೆ. ಸಮಸ್ಯೆಗಳು ಕಡಿಮೆ ಇದ್ದಲ್ಲಿ ನಿಭಾಯಿಸಬಹುದು ಆದರೆ ಸಮಸ್ಯೆಗಳು ಉಲ್ಭಣವಾದಲ್ಲಿ ಪರಿಹರಿಸಲು ಸಾಧ್ಯವಾಗದೇ ಇರಬಹುದು. ನಗರಗಳು ಅತಿ ವೇಗದಿಂದ ಬೆಳೆಯುತ್ತಲಿದ್ದು, ಹೊಸ ಹೊಸ ಬಡಾವಣೆಗಳು, ನಿರ್ಮಿಸಲ್ಪಟ್ಟು ಹೊಸ ಜನಗಳು ಬಂದು ನೆಲಸಿದ್ದು, ಇವರಿಗೆ ಪಕ್ಕದ ಮನೆಯವರು ಯಾರೆಂದು ತಿಳಿದಿರುವುದೇ ಇಲ್ಲ. ಇಂಥಹ ಸನ್ನಿವೇಶ ಇರುವಾಗ ಯಾರಲ್ಲಿ ಕಷ್ಟಸುಖಗಳನ್ನು ಹೇಳಿಕೊಳ್ಳಬೇಕು? ಕಛೇರಿಗಳಲ್ಲಿ ಎಲ್ಲರಿಗೂ ಅವರದೇ ಆದ ಸಮಸ್ಯೆಗಳು, ಬೇರೆಯವರ ಒಂದು ಮಾತನ್ನು ಕೇಳಲು ಆಗದಂತ ಕೆಲಸಗಳ ಒತ್ತಡ. ಕೆಲಸ ಮುಗಿದರೆ ಸಾಕೆಂಬ ಮನೋಭಾವ ಹೊಂದಿ ಕೆಲಸಗಳನ್ನು ಮಾಡುತ್ತಾ ಇದ್ದರೆ ಬೇರೊಬ್ಬರ ಸಮಸ್ಯೆಗೆ ಸ್ಪಂದಿಸುವುದು ಕನಸಿನ ಮಾತು,

ಕೆಲವು ಸಮಸ್ಯೆಗಳನ್ನು ಬೇರೆಯವರು ಕೇಳುವವರಿದ್ದರೆ ಮಾತ್ರ ಅವರಿಗೆ ಹೇಳಿ ಬಗೆಹರಿಸಲು ಪ್ರಯತ್ನಿಸಬಹುದು. ಆದರೆ ಎಲ್ಲರ ಕಷ್ಟಗಳು ಒಂದೇ ಅಗಿದ್ದಲ್ಲಿ ಒಬ್ಬರ ಕಷ್ಟವನ್ನು ಕೇಳುವ ಮನಸ್ಥಿತಿ ಯಾರಲ್ಲೂ ಉಳಿದಿರುವುದಿಲ್ಲ. ನಮಗೇ ಅನೇಕ ಕಷ್ಟಗಳಿವೆ ಇದರಲ್ಲಿ ನಿಮ್ಮ ಕಷ್ಟಗಳನ್ನು ಹೇಗೆ ಕೇಳುವುದು ಎಂಬ ಮನೋಭಾವ ಬಂದು ಬಿಡುತ್ತದೆ. ಒಬ್ಬರ ಕಷ್ಟ ಅಥವಾ ಸಮಸ್ಯೆಯನ್ನು ತಾಳ್ಮೆಯಿಂದ ಇನ್ನೊಬ್ಬರು ಕೇಳಿ ಅರ್ಥ ಮಾಡಿಕೊಳ್ಳುವ ಸನ್ನಿವೇಶವೇ ಇಲ್ಲದಂತಾಗಿದೆ. ಸಣ್ಣ ಸಣ್ಣ ಸಮಸ್ಯೆಗಳಿದ್ದರೆ ಅಥವಾ ಹಲವು ಸಾವಿರ ರೂಪಾಯಿಗಳಲ್ಲಿ ಸಮಸ್ಯೆ ಬಗೆಹರಿಯುವಂತಿದ್ದರೆ ಕೇಳುವವರು ಇರುತ್ತಾರೆ. ಲಕ್ಷಾಂತರ ರೂಪಾಯಿ ನಷ್ಟ ಮಾಡಿಕೊಂಡು ಅವರವರೇ ಕಷ್ಟಗಳನ್ನು ಅನುಭವಿಸುವುದು. ಪರಿಹರಿಸಲು ಇನ್ನೂ ಕಷ್ಟವಾದಲ್ಲಿ ಎದುರಿಸಲಾರದೆ ಯಾರಿಗೂ ಹೇಳಲಾಗದೇ, ಹೇಳಿದರೂ ಕೇಳಿದವರು ಪರಿಹರಿಸದೆ ಅಥವಾ ಹೇಳುವುದನ್ನು ಯಾರೂ ಕೇಳುವವರು ಇಲ್ಲದೆ ಇದ್ದು ಬದುಕಿಗೇ ವಿದಾಯ ಹೇಳುವಂತಹ ಸನ್ನಿವೇಶ ಉಂಟಾಗುತ್ತದೆ. ಯಾರಾದರೂ ತಮ್ಮ ಕಷ್ಟವನ್ನು ಹೇಳಲು ಬಂದಾಗ ಕೇಳುವುದೇ ಇಲ್ಲ ಎಂದರೆ ತಪ್ಪಾಗುತ್ತದೆ. ಕಷ್ಟವನ್ನು ಕೇಳಿ ಪರಿಹರಿಸಲು ಸಾಧ್ಯವಾದರೆ ಪರಿಹರಿಸಬಹುದು ಇಲ್ಲದಿದ್ದಲ್ಲಿ ಪರಿಹಾರ ಮಾರ್ಗವನ್ನು ಹೇಳಬಹುದು, ಅಥವಾ ನೊಂದ ಜೀವಗಳಿಗೆ ಸಾಂತ್ವನದ ಮಾತನ್ನು ಆಡಿ ಅವರಲ್ಲಿ ಧೈರ್ಯವನ್ನು ತುಂಬಿದ್ದಲ್ಲಿ ಬದುಕಿ ಎಷ್ಟೇ ಕಷ್ಟ ಬಂದರೂ ಎದುರಿಸುವ ದೃಡಮನಸ್ಸು ಬರುತ್ತದೆ. ಯಾವ ಸಮಸ್ಯೆಯೂ ಬಗೆಹರಿಸಲಾಗದಷ್ಟು ಕ್ಲಿಷ್ಷವಾಗಿರುವುದಿಲ್ಲ. ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ. ಇದಕ್ಕೆ ಸ್ವಲ್ಪ ತಾಳ್ಮೆ ಇದ್ದು, ಪರಿಹಾರವಾಗುವ ತನಕ ಕಾಯಬೇಕು. ತಕ್ಷಣ ಸರಿಹೋಗಬೇಕೆಂದರೆ ಸಾಧ್ಯವಿಲ್ಲದ ಮಾತು. ಸ್ವಲ್ಪ ಸಮಯ ಕಾಯಬೇಕು, ಪರಿಹಾರ ಹುಡುಕಬೇಕು, ಒಬ್ಬರಿಗಲ್ಲದೆ ತಮ್ಮ ಸ್ನೇಹಿತರಿಗೆ ತಮ್ಮ ಕಷ್ಟಗಳನ್ನು ಹೇಳಿಕೊಂಡಲ್ಲಿ ಯಾರಾದರೂ ಬಂದು ಸಹಾಯ ಮಾಡಬಹುದು. ಎಲ್ಲರಿಗೂ ಹೃದಯ ಮತ್ತು ಮನುಷ್ಯತ್ವ ಎಂಬುದನ್ನು ದೇವರು ಕೊಟ್ಟಿದ್ದಾನೆ ಅದರಿಂದ ಎಲ್ಲರೂ ಸಹೃದಯರೇ, ಯಾರೂ ಕಠಿಣ ಮನಸ್ಸಿನವರು ಇಲ್ಲ. ದ್ವೇಷ ಅಸೂಯೆ ಇದ್ದಲ್ಲಿ ಮಾತ್ರ ಸಹಾಯ ಮಾಡಬಾರದೆಂಬ ಕಠಿಣ ಮನಸ್ಸು ಬರಬಹುದು. ಸಹಾಯ ಮಾಡುವ ಮನಸ್ಸು ಎಲ್ಲರಿಗೂ ಬಂದರೆ ಸಾಕು. ಒತ್ತಡದ ಜೀವನ ಯಾಂತ್ರೀಕೃತ ಜೀವನ ನಡೆಸುತ್ತಿರುವ ಮಂದಿ ತಾಳ್ಮೆಯನ್ನು ಹೊಂದಿ ಬೇರೆಯವರ ಕಷ್ಟಗಳನ್ನು ಆಲಿಸುವಂತಾಗಬೇಕು. ಆಗಲೇ ಇನ್ನೊಬ್ಬರ ಕಷ್ಟಗಳನ್ನು ಅರಿಯಲು ಸಾಧ್ಯ ವಾಗುವುದು. ಎಲ್ಲರಿಗೂ ಕಷ್ಟವಿರುತ್ತದೆ ಆದರೆ ಮನುಷ್ಯನಿಗೆ ಕಷ್ಟ ಇದೆ ಎಂದು ಬೇರೊಬ್ಬರ ಕಷ್ಟಗಳನ್ನು ಅರಿಯಬಾರದು ಎಂಬುದು ತಪ್ಪು. ಮನುಷ್ಯನಿಗೆ ಕಷ್ಟ ಇದ್ದು ಅದು ದೊಡ್ಡದಾದ ಸಮಸ್ಯೆಯಾಗಿದ್ದರೆ ಬೇರೊಬ್ಬರ ಕಷ್ಟವು ಚಿಕ್ಕದಾಗಿದ್ದು, ಪರಿಹರಿಸಲು ಶಕ್ತನಾಗಿದ್ದರೆ ಪರಿಹರಿಸಲು ಯತ್ನಿಸಬೇಕು. ಆಗ ತಮ್ಮ ಕಷ್ಟವನ್ನು ಎದುರಿಸಲು ಶಕ್ತರಾಗಬಹುದು. ಅಥವಾ ಬೇರೊಬ್ಬರೂ ಇವರಿಗೂ ಸಹಾಯ ಮಾಡಬಹುದು. ಇದರಿಂದ ಇಬ್ಬರ ಸಮಸ್ಯೆಗಳು ಪರಿಹಾರವಾಗಲೂಬಹುದು.

RELATED ARTICLES  ಕಾವ್ಯಾವಲೋಕನ-೬ ಕಾವ್ಯದೋಷಗಳು

ಮುಂದುವರೆಯುವುದು….