ಶ್ರೀರಾಮ ಜಯರಾಮ ಜಯಜಯ ರಾಮ’ ಈ ತಾರಕಮಂತ್ರ ನಿನಗೆ ಭಕ್ತಿ, ಜ್ಞಾನ, ವೈರಾಗ್ಯಪ್ರದವಾಗಲಿ. ಇದೇ ನನ್ನ ಅನುಗ್ರಹವೆಂದುಕೊಂಡು, ಹೇಗೆ ಮಾಡಲು ಶಕ್ಯವೋ ಮತ್ತು ಎಷ್ಟು ಮಾಡಲು ಶಕ್ಯವೋ ಅಷ್ಟು ಜಪ ಆನಂದದಿಂದ ಮಾಡು.

(ಇಸವಿ ಸನ ೧೯೬೧ರಲ್ಲಿ ಶ್ರೀ ಶಂಕರ ಪಂಡಿತ, ಸಜ್ಜನಗಡ ಅವರಿಗೆ ಬರೆದ ಪತ್ರ)

—— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

                                || ಶ್ರೀರಾಮ ಸಮರ್ಥ ||

                                                               ಸಜ್ಜನಗಡ

                                                         ಶಕೆ ೧೮೮೩ ಅ. ಜ್ಯೇಷ್ಠ ಶುಕ್ಲ ಪಕ್ಷ

                                                         ದಸರಾ ಸಮಾಪ್ತಿ, ಗುರುವಾರ

                                                         ೨೫-೦೫-೧೯೬೧

ಚಿ. ಪಂಡಿತನಿಗೆ ಆಶೀರ್ವಾದ,

ಸಮಯ ಸಿಕ್ಕಾಗೆಲ್ಲ, ಬಹಳ ಗಾಳಿ-ಮಳೆ ಇಲ್ಲದಿರುವಾಗ, ‘ಬ್ರಹ್ಮಪಿಸಾ’ದಲ್ಲಿ ಕುಳಿತು ಅಂಗುಷ್ಟ ಮತ್ತು ತರ್ಜನಿಯ ಚಿನ್ಮುದ್ರೆ ಅಂದರೆ ಜ್ಞಾನಮುದ್ರೆಯಲ್ಲಿ, ಸಮಯಕ್ಕೆ ತಕ್ಕಂತೆ, ಪ್ರಣವದ ದೀರ್ಘ ಉಚ್ಚಾರ ಮಾಡುತ್ತಾ ಕುಳಿತುಕೊಳ್ಳುತ್ತಿರು. ರಾತ್ರಿ ಮಲಗುವ ಮೊದಲು ಮತ್ತು ಮಲಗಿ ಎದ್ದ ಮೇಲೆ ಹಾಗೇ ಅಭ್ಯಾಸ ಮಾಡು. ಶ್ರೀಧರ ಕುಟಿಯಲ್ಲಿ ಕುಳಿತು ಯಾವ ಜಪ ಮಾಡುತ್ತಿರುವೆ? ಹೆಚ್ಚಾಗಿ ತ್ರಯೋದಶಾಕ್ಷರಿ ಶ್ರೀರಾಮತಾರಕ ಮಂತ್ರವಿರಬೇಕು. ಧ್ಯಾನದ ಶ್ಲೋಕ ಮೊದಲು ಹೇಳಿ(ಸಜ್ಜನಗಡ ಮಾಸಿಕದಲ್ಲಿ ಪ್ರಸಿದ್ಧವಾದದ್ದು) ನಂತರ ಜಪ ಮಾಡುತ್ತಾ ಹೋಗು. ಜಪದ ಮೊದಲು ಮತ್ತು ಕೊನೆಗೆ ಗಣಪತಿಯ ಮತ್ತು ‘ನಮಃಶಾಂತಾಯ …’ ಈ ಶ್ಲೋಕದ ೧೦೮ ಜಪಮಾಡಿ, ಉಳಿದ ಧ್ಯಾನದ ಶ್ಲೋಕ ಕ್ರಮಶಃ ಹೇಳಿ ತಾರಕಮಂತ್ರದ ಜಪವನ್ನು ಪ್ರಾರಂಭ ಮಾಡು. ಅದಕ್ಕೂ ಮೊದಲು ಇಲ್ಲಿಯ ಸಂಪ್ರದಾಯದಂತೆ ಮಾರುತಿ ಜಪ ಮಾಡು.

RELATED ARTICLES  ಅಡಿಪಾಯ

ಜಪ ಮಾಡುವ ಕ್ರಮ ಹೀಗೆ,

ಮೊದಲು ‘ಯಂ ನತ್ವಾ ಮುನಯಃಸರ್ವೇ …’ ಜಪ ನಂತರ ‘ನಮಃಶಾಂತಾಯ ….’ ನಂತರ ಮಾರುತಿಯ ಜಪ, ನಂತರ ತಿರುಗಿ ಎಲ್ಲ ಧ್ಯಾನಗಳ ಶ್ಲೋಕ ಹೇಳಿ, ಶ್ರೀರಾಮತಾರಕ ಮಂತ್ರದ ಜಪ ಮಾಡು ….

RELATED ARTICLES  ನ‌ವ‌ರ‌ಸ‌...

‘ಅಸ್ಯ ಶ್ರೀರಾಮದೂತಮಹಾಮಂತ್ರಸ್ಯ ಬ್ರಹ್ಮಪ್ರಜಾಪತಿಃ ಋಷಿಃ ಅನುಷ್ಟುಪ ಛಂದಃ ಶ್ರೀರಾಮದೂತ ಪ್ರೀತ್ಯರ್ಥೇ ಜಪೇ ವಿನಿಯೋಗಃ| ಧ್ಯಾನ-ಮನೋಜವಂ …..||

(ಮಂತ್ರ) ಓಂ ರಾಂ ರಾಮದೂತಾಯ ಸ್ವಾಹಾ| ಶ್ರೀರಾಮತಾರಕಮಂತ್ರ’ –

‘ಶ್ರೀರಾಮ ಜಯರಾಮ ಜಯಜಯ ರಾಮ’

ಈ ತಾರಕಮಂತ್ರ ನಿನಗೆ ಭಕ್ತಿ, ಜ್ಞಾನ, ವೈರಾಗ್ಯಪ್ರದವಾಗಲಿ. ಇದೇ ನನ್ನ ಅನುಗ್ರಹವೆಂದುಕೊಂಡು, ಹೇಗೆ ಮಾಡಲು ಶಕ್ಯವೋ ಮತ್ತು ಎಷ್ಟು ಮಾಡಲು ಶಕ್ಯವೋ ಅಷ್ಟು ಜಪ ಆನಂದದಿಂದ ಮಾಡು.

‘ಶ್ರೀದತ್ತಸ್ತವರಾಜ’ದ ಪಾರಾಯಣ ಔದುಂಬರದ ಕೆಳಗೆ ಕುಳಿತು ಮಾಡು.

ಆವಶ್ಯಕ ಆಸನಗಳನ್ನು ಮಾಡುತ್ತಿರು. ಸ್ವಪ್ನಾವಸ್ಥೆ ನಿಲ್ಲುತ್ತದೆ.

ಪೂರ್ಣತ್ವದ ಪ್ರಾಪ್ತಿಯಾಗಲಿ.

                                                 ಇದೇ ಆಶೀರ್ವಾದ

                                                     ಶ್ರೀಧರ