ಈ ರೀತಿ ವಿವಿಧ ಬಣ್ಣಗಳ ದೃಶ್ಯ ಕತ್ತಲೆಯಲ್ಲಿ ಅಥವಾ ಕಣ್ಣು ಮುಚ್ಚಿಕೊಂಡಾಗ ಕಾಣಹತ್ತುತ್ತದೆ ಅಂದರೆ ಅದು ಬ್ರಹ್ಮಸಾಕ್ಷಾತ್ಕಾರದ ಪೂರ್ವಚಿನ್ಹೆಯಾಗಿರುತ್ತದೆ.

(ಶ್ರೀ ಶಂಕರ ಪಂಡಿತ, ಸಜ್ಜನಗಡ ಅವರಿಗೆ ಬರೆದ ಪತ್ರ)

‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

        || ಶ್ರೀರಾಮ ಸಮರ್ಥ ||

ಚಿ. ಶಂಕರ ಪಂಡಿತನಿಗೆ ಆಶೀರ್ವಾದ,

ನೀನು ಕೊಟ್ಟ ಚೀಟಿ ಚಿ.ಲಕ್ಷೀನಾರಾಯಣನಿಗೆ ಮುಟ್ಟಿಸಲು ಹೇಳಿದ್ದೇನೆ.

೧. ‘ಮುಖೇನ ವಾಯು ಸಂಗ್ರಹ್ಯ ಘ್ರಾಣರಂಧ್ರೇಣ ರೇಚಯೇತ್’

-ಯೋಗಗೋಪನಿಷದ್ದಿನ ಶ್ಲೋಕ ೯೫

ಮೂಗಿನಿಂದ ತೆಗೆದುಕೊಂಡು ಬಾಯಿಂದ ಶ್ವಾಸ ಬಿಡುವ ವಿಧಿ ಎಲ್ಲೂ ನನ್ನ ದೃಷ್ಟಿಗೆ ಬಂದಿಲ್ಲ. ಬಾಯಿಂದ ಎಂದೂ ಶ್ವಾಸ ಬಿಡಬಾರದು, ಎಂದು ಮಾತ್ರ ಬಹಳಿಷ್ಟು ಕಡೆ ಬರೆದದ್ದು ನೋಡಿದ್ದೇನೆ. ಎರಡೂ ಹಲ್ಲಿನ ಸಾಲುಗಳನ್ನು ಹಗುರವಾಗಿ ಒತ್ತಿ ಹಿಡಿದು ಅಂದರೆ ಮೇಲಿನ ಸಾಲು ಕೆಳಗಿನ ಸಾಲಿಗೆ ತಾಗಿಸಿಟ್ಟು ಅವುಗಳ ಛಿದ್ರಗಳಿಂದ ತುಟಿ ತೆರೆದಿಟ್ಟು ಹವೆ ಒಳಗೆಳೆದುಕೊಳ್ಳಬೇಕು; ಜೋರಾಗಿ ಅಲ್ಲ, ಸಾವಕಾಶ. ಮತ್ತು ನಂತರ ಮೂಗಿನಿಂದ ಅದೇರೀತಿ ಸಾವಕಾಶ ಬಿಡಬೇಕು. ಆದಷ್ಟು ಸಾವಕಾಶ ತೆಗೆದುಕೊಂಡು ಆದಷ್ಟು ಹೊಟ್ಟೆಯೊಳಗೆಳೆದುಕೊಂಡ ವಾಯುವನ್ನು ಮೂಗಿನ ಸೊರಳೆಗಳಿಂದ ಬಿಡಬೇಕು. ಶಕ್ಯವಾದಲ್ಲಿ ನಿನ್ನ ಅಭ್ಯಾಸದಲ್ಲಿ ಬಾಯಿಂದ ತೆಗೆದುಕೊಂಡು ಮೂಗಿನಿಂದ ಬಿಡುವಂತೆ ಇಷ್ಟು ಸುಧಾರಣೆ ಮಾಡಿಕೋ.

RELATED ARTICLES  ಎಲ್ಲವನ್ನು ಮಾಡುವದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ.

೨. ನೀಹಾರಧೂಮಾರ್ಕ ಅನಿಲಾನಿಲಾನಾಮ್|

    ಖಧ್ಯೋತ ವಿದ್ಯುತ್ ಸ್ಫಟಿಕ ಶಶೀನಾಮ್|

    ಏತಾನಿ ರೂಪಾಣಿ ಪುರಃಸರಾಣಿ|      

    ಬ್ರಹ್ಮಣ್ಯಭಿವ್ಯಕ್ತಿಕರಾಣಿ ಯೋಗೇ||  – ಶ್ವೇತಾಶ್ವೇತ ಉಪನಿಷದ್ದು ಅಧ್ಯಾಯ ೨-೧೧

ಯೋಗಾಭ್ಯಾಸದಿಂದ ನೀಹಾರ – ಮಂಜು, ಧೂಮ – ಹೊಗೆ, ಅರ್ಕ – ಸೂರ್ಯ, ಅನಲ – ಅಗ್ನಿ, ಅನಿಲ – ವಾಯು ಇವುಗಳ ಬಣ್ಣಗಳಂತೆ ದೃಶ್ಯಗಳು ಕಾಣಬರುತ್ತವೆ. ವಾಯುವಿನ ಬಣ್ಣ ನೀಲಿಯೆಂದು ಮನ್ನಿಸಲ್ಪಟ್ಟಿದೆ. ಉಳಿದ ಬಣ್ಣಗಳು ಗೊತ್ತಿದ್ದದ್ದೇ. ಖಧ್ಯೋತ – ಮಿಂಚುಹುಳ, ವಿದ್ಯುತ್ – ಮಿಂಚು, ಸ್ಫಟಿಕ, ಶಶಿ – ಚಂದ್ರ ಇವುಗಳ ಬಣ್ಣಗಳೂ ಕಾಣಿಸುತ್ತವೆ. ವರ್ಣ ಅಂದರೆ ಬಣ್ಣ. ಈ ರೀತಿ ವಿವಿಧ ಬಣ್ಣಗಳ ದೃಶ್ಯ ಕತ್ತಲೆಯಲ್ಲಿ ಅಥವಾ ಕಣ್ಣು ಮುಚ್ಚಿಕೊಂಡಾಗ ಕಾಣಹತ್ತುತ್ತದೆ ಅಂದರೆ ಅದು ಬ್ರಹ್ಮಸಾಕ್ಷಾತ್ಕಾರದ ಪೂರ್ವಚಿನ್ಹೆಯಾಗಿರುತ್ತದೆ. ನಿನಗೆ ಇದರಲ್ಲಿ ತಾಮ್ರವರ್ಣ ಮತ್ತು ಅದರಲ್ಲಿ ಶ್ರೀರಾಮನ ಸಗುಣ ಬ್ರಹ್ಮರೂಪ ದೃಷ್ಟಿಗೆ ಬಿತ್ತು. ಒಳ್ಳೆಯದೇ ಆಯಿತು.

RELATED ARTICLES  “ಮೋಹದ-ಕ್ಷಯವೇ ಮೋಕ್ಷ”

೩. ನೀನು ಪ್ರಣವದ ದೀರ್ಘ ಉಚ್ಚಾರ ದೊಡ್ಡ ಧ್ವನಿಯಲ್ಲಿ ಮಾಡುತ್ತಿರುವೆ ಎಂದು ಅನಿಸುತ್ತದೆ. ಹಾಗೆ ಮಾಡಲು ಏನೂ ತೊಂದರೆ ಇಲ್ಲ. ಆದರೆ ಅದಕ್ಕೆ ಏಕಾಂತವೇ ಬೇಕು. ಬ್ರಹ್ಮಪಿಶಾದ ಕಡೆಯಲ್ಲಿ ಏಕಾಂತವಿದೆ. ಪ್ರದಕ್ಷಿಣೆಯ ಮಾರ್ಗದಲ್ಲಿ ಮನುಷ್ಯರ ರಹದಾರಿ ಇರುತ್ತದೆ. ಮಳೆ, ಗಾಳಿ ಹೆಚ್ಚಿದ್ದರೆ ಶ್ರೀಸಮರ್ಥರ ಮುಂದಿನ ಗರ್ಭಗುಡಿಯಲ್ಲಿ ಬೆಳಿಗ್ಗೆ ಕುಳಿತುಕೊಳ್ಳಬೇಕು. ನನ್ನ ವಿಷಯ ಬೇರೆ. ಆದರೆ ಆದ ದೃಷ್ಟಾಂತ ಬೇರೆಯವರಿಗೆ ಹೇಳಬಾರದು.

(ಈ ಪತ್ರದ ಎರಡನೆಯ ಭಾಗ ಮುಂದುವರಿಯುವದು)