ತೆಗೆದುಕೊಳ್ಳುವಾಗ ಎಷ್ಟು ಸಾವಕಾಶ ತೆಗೆದುಕೊಳ್ಳುತ್ತೀಯೋ ಅದಕ್ಕಿಂತಲೂ ಇಮ್ಮಡಿ ಸಾವಕಾಶ ಹವೆ ಹೊರಗೆ ಹಾಕಬೇಕು. ಶ್ವಾಸ ತೆಗೆದುಕೊಳ್ಳುವಾಗ ‘ಸೋ’ ಮತ್ತು ಬಿಡುವಾಗ ‘ಅಹಂ’ ಹೀಗೆ ಸಹಜವಾಗಿಯೇ ಶಬ್ದ ಬರುತ್ತದೆ.

(ಶ್ರೀ ಶಂಕರ ಪಂಡಿತ, ಸಜ್ಜನಗಡ ಅವರಿಗೆ ಬರೆದ ಪತ್ರ)

—— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

                               

                                   || ಶ್ರೀರಾಮ ಸಮರ್ಥ ||

ಚಿ. ಶಂಕರ ಪಂಡಿತನಿಗೆ ಆಶೀರ್ವಾದ,

೧. ನೀನಿರುವ ಸ್ಥಳದಲ್ಲೇ ಅಥವಾ ಧಬಧಬೆ ಮಾರುತಿಯ ದೇವಸ್ಥಾನದಲ್ಲಿ, ಎಲ್ಲಿ ಹೆಚ್ಚು ಅನುಕೂಲವೆನಿಸುತ್ತದೆಯೋ ಅಲ್ಲಿ ಕುಳಿತುಕೊಳ್ಳಲು ಆಕ್ಷೇಪವಿಲ್ಲ. ಧಬಧಬೆಯ ಮಾರುತಿಯ ಸ್ಥಾಪನೆ ಪ್ರತ್ಯಕ್ಷ ಸಮರ್ಥರೇ ಮಾಡಿದ್ದಾರೆ. ಅಲ್ಲಿ ತುಂಬಾ ಏಕಾಂತವಿದೆ. ಮತ್ತು ಮುಚ್ಚುಕೊಂಡೂ ಇರುತ್ತದೆ. ಅಲ್ಲಿ ಅನುಕೂಲವಾದರೆ ಒಳ್ಳೆಯದೇ. ಪ್ರದಕ್ಷಿಣೆಗೆ ಹೇಗೂ ಹೋಗುವದಿರುತ್ತದೆ. ಸಮಯವಿದ್ದಂತೆ ಅಲ್ಲಿ ಕುಳಿತು ನಂತರ ಹಾಗೆಯೇ ಪ್ರದಕ್ಷಿಣೆ ಪೂರ್ಣ ಮಾಡಿದರಾಯಿತು.

೨. ಶರೀರಪ್ರಕೃತಿ ಕಾದುಕೊಂಡು ಯಾವುದು ಅನಿಸುತ್ತದೆಯೋ ಅದನ್ನು, ಎಷ್ಟು ಶಕ್ಯವೋ ಅಷ್ಟು ಸೇವಾಕಾರ್ಯ ಮಾಡಲು ಆಕ್ಷೇಪವಿಲ್ಲ. ಹಾಗೆ ಒಂದು ಧೋರಣೆ ಕಾಪಾಡಿಕೊಂಡರಾಯಿತು. ಪ್ರಕೃತಿಗೆ ಒಗ್ಗುವದಾದರೆ ಯಾವುದೇ ಸೇವೆಯನ್ನೂ ನಾನು ಅಲ್ಲಗಳೆಯುವದಿಲ್ಲ. ಪ್ರದಕ್ಷಿಣೆ ಮೊದಲಾದ ಸೇವೆ ಮಾಡು.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

೩. ಮುಕ್ತವಾಗಿ ‘ಓ’ ಎಂದು ತೆರೆದ ಹಲ್ಲಿನ ರಂಧ್ರಗಳಿಂದ ಹವೆ ಒಳಗೆ ಎಳೆದುಕೊಳ್ಳಬೇಕು. ಹವೆ ಬಿಡುವಾಗ ಅತ್ಯಂತ ಸಾವಕಾಶ ಬಿಡಬೇಕು. ಒಮ್ಮೆಲೇ ಮೂಗಿನಿಂದ ಬಿಟ್ಟರೆ ಎದೆ ನೋವು ಬರುತ್ತದೆ. ಹವೆಯನ್ನು ಸಾವಕಾಶ ತೆಗೆದುಕೊಂಡು, ಸಾವಕಾಶ ಬಿಡುವದು ಸಹಜವಾಗಿ ಎಷ್ಟು ಶಕ್ಯವಾಗುತ್ತದೆಯೋ ಅಷ್ಟು ಅಭ್ಯಾಸ ಮಾಡಬೇಕು. ತೆಗೆದುಕೊಳ್ಳುವಾಗ ಎಷ್ಟು ಸಾವಕಾಶ ತೆಗೆದುಕೊಳ್ಳುತ್ತೀಯೋ ಅದಕ್ಕಿಂತಲೂ ಇಮ್ಮಡಿ ಸಾವಕಾಶ ಹವೆ ಹೊರಗೆ ಹಾಕಬೇಕು. ಶ್ವಾಸ ತೆಗೆದುಕೊಳ್ಳುವಾಗ ‘ಸೋ’ ಮತ್ತು ಬಿಡುವಾಗ ‘ಅಹಂ’ ಹೀಗೆ ಸಹಜವಾಗಿಯೇ ಶಬ್ದ ಬರುತ್ತದೆ.

೪. ಲಕ್ಷೀನಾರಾಯಣನಿಗೆ ಹೇಳಿ ಇಟ್ಟಿದ್ದೇನೆ. ಇದ್ದಲ್ಲಿ ರಾತ್ರಿ ತೆಗೆದುಕೊಂಡು ಹೋಗು. ಅವನು ಕೊಡುತ್ತಾ ಹೋಗುತ್ತಾನೆ. ಮಂಡಳದಲ್ಲಿ ಇದ್ದರೆ ಕುಲಕರ್ಣಿಬುವಾನಿಗೆ ಹೇಳಿ ಇಟ್ಟರೆ ಅವನು ಕೊಡುತ್ತಾ ಹೋಗುತ್ತಾನೆ. ಬಾಳೆಹಣ್ಣು ತಿನ್ನಲು ನಾನು ಹೇಳಿದ್ದೇನೆ ಎಂದು ಹೇಳು. ಆದರೆ ಮಳೆಗಾಲದಲ್ಲಿ ಬಾಳೆಹಣ್ಣು ತಂಪು. ನಿನ್ನ ಪ್ರಕೃತಿ-ಜಾಯಮಾನ ನೋಡಿಕೊಂಡು ಯಾವುದು ಯೋಗ್ಯವೋ ಹಾಗೇ ಮಾಡು.

RELATED ARTICLES  ಭವಿಷ್ಯದ ಸೋಲು

೫. ಬರೆದು ತಿಳಿಸಿದ ನಿನ್ನ ಎಲ್ಲ ವಿಚಾರಸರಣಿಯು ಯೋಗ್ಯವಾಗಿದೆ.

೬. ಕುಲಕರ್ಣಿಯವರಿಗೆ ಹೇಳು. ಹೊದ್ದುಕೊಳ್ಳಲು ಕಂಬಳಿ ಕೊಡುತ್ತಾರೆ.

೭. ಆದ್ಯಂತದಲಿ ಬ್ರಹ್ಮ ನಿರ್ಗುಣ| ಅದೇ ಶಾಶ್ವತದ ಚಿನ್ಹೆ| ಅರಿತಿರು ಈ ಪಂಚಭೂತಿಕ| ಅಶಾಶ್ವತ                         ೬|೨|೮||

ಸಂಪೂರ್ಣ ಬ್ರಹ್ಮಾಂಡ ನಾಶವಂತ| ಉಳಿಯುವದು ಕೇವಲ ಬ್ರಹ್ಮ|   ೬|೩|೨೭||

ದೇವಪದವದು ನಿರ್ಗುಣ| ದೇವಪಾದದಿ ಅನನ್ಯತೆ| ಪೂರ್ಣತೆಯ ನೋಡಿ| ಸಮಾಧಾನ ಪಡೆ|                              ೬|೯|೩೨||

ಇದೇ ಜನ್ಮದಲಿ ಮುಂದೆ| ಸಂಸಾರದಿ ಮುಕ್ತನಾಗುವೆ| ಮೋಕ್ಷ ನಿಶ್ಚಯವು| ಸ್ವರೂಪಾಕಾರದಲಿ||            ೬|೯|೨೯||

ಕೇಳು ಶಿಷ್ಯನೆ ಇಂದು ಗೂಢವ| ನೀನೇ ಬ್ರಹ್ಮನು| ಸಂದೇಹ – ಭ್ರಮೆ| ಹಿಡಿಯದಿರು ಎಂದೂ||                          ೫|೬|೪೫||

                                                       ಶ್ರೀಧರ