ದೇಹದ ವಿಸ್ಮರಣೆಯಾಗುವದು ಎಂದರೆ, ಇದು ನಿನ್ನ ಪೂರ್ವಜನ್ಮದ ಸಾಧನೆಯ ಫಲ ಈ ಜನ್ಮದಲ್ಲಿ ನಿನಗೆ ಸಿಗುತ್ತಿದೆ. ಒಳ್ಳೆಯದೇ ಆಯಿತು. ಸಂಶಯ ಬಿಟ್ಟು ಬಿಡು. ಪುಕ್ಕಲುತನ ಹೊಂದಬೇಡ.
(ಶ್ರೀ ಶಂಕರ ಪಂಡಿತ, ಸಜ್ಜನಗಡ ಅವರಿಗೆ ಬರೆದ ಪತ್ರದ ಎರಡನೆಯ ಭಾಗ)
—— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ
೪. ನಾದ, ತೇಜಸ್ಸು ಯೋಗಶಾಸ್ತ್ರದ ದೃಷ್ಟಿಯಲ್ಲಿ ಬ್ರಹ್ಮಸಾಕ್ಷಾತ್ಕಾರದ ಪೂರ್ವಚಿನ್ಹೆಯಾಗಿದೆ. ಹೆದರಬಾರದು ಅಥವಾ ಸಂಶಯವನ್ನೂ ಹೊಂದಬಾರದು. ಪ್ರಕಾಶ ಕಾಣುವಾಗ ನೋಡುವವನು ಕೇವಲ ಜ್ಞಾನರೂಪದಲ್ಲಿ ಉಳಿದುಕೊಂಡಿರುತ್ತಾನೆ ಮತ್ತು ಈ ಪ್ರಕಾಶವು ಅವನ ಆ ಅರಿವಿನ ರೂಪದ್ದೆಂದು ತಿಳಿಯಲ್ಪಡುತ್ತದೆ. ಆನಂದಸ್ವರೂಪದ ಅನುಭವ ಎಚ್ಚರಾದ ಮೇಲೆ ಬರುತ್ತದೆ. ನಾವು ಸರ್ವಪ್ರಕಾಶಕ ಜ್ಞಾನಮಾತ್ರ ಆನಂದರೂಪವೇ ಆಗಿದ್ದೇವೆ, ಅವಿನಾಶಿಯಾಗಿದ್ದೇವೆ, ಸದೈವ ಏಕರೂಪದಲ್ಲಿರುವ ನಿರ್ವಿಕಲ್ಪವಾಗಿದ್ದೇವೆ, ಯಾವುದೇ ಕಲ್ಪನೆಗೆ ಪ್ರಕಾಶಿಸುವ ನಿರ್ವಿಕಲ್ಪ ಅರಿವಿನ ರೂಪವಾಗಿದ್ದೇವೆ ಎಂಬ ಸ್ವರೂಪದ ಸ್ಮೃತಿ ಯಾವಾಗಲೂ ಜಾಗ್ರತವಾಗಿರಬೇಕು.
೫. ಲಘು – ದೀರ್ಘ ಶಂಕೆಯ ತೀವ್ರತೆಯನ್ನು ತಡೆಯಬಾರದು. ಅದರಿಂದ ರೋಗಗಳ ಉತ್ಪನ್ನವಾಗುತ್ತದೆ. ನೀರಿಲ್ಲದಿದ್ದರೆ ಕಲ್ಲಿನಿಂದ, ಎಲೆಗಳಿಂದ, ಮಣ್ಣಿನ ಮುದ್ದೆಯಿಂದ ಆ ಸ್ಥಳ ಉದ್ದಿ ಶುದ್ಧ ಮಾಡಬೇಕು ಮತ್ತು ನಂತರ ನೀರಿನಿಂದ ಯಥಾಕ್ರಮ ಶುದ್ಧಮಾಡಬೇಕು. ಗಡದ ಮೇಲೆ ನೀರಿದೆ. ಎಲ್ಲಿಗೆ ಹೋಗುವದಿದ್ದರೂ ಕಮಂಡಲು ತುಂಬ ನೀರು ತೆಗೆದುಕೊಂಡು ಹೋಗಬೇಕು. ಶಕ್ಯವಿದ್ದಲ್ಲಿ ನೀರಿನಿಂದ ಶೌಚ ಹೊಂದಿ ನಂತರವೇ ಧ್ಯಾನಕ್ಕೆ ಕಳಿತುಕೊಳ್ಳುವದು ಉತ್ಕೃಷ್ಟ. ಇನ್ನು ಹಾಗೆ ಶಕ್ಯವೇ ಇಲ್ಲೆಂದಾದರೆ ಆತ್ಮರೂಪ ನಿತ್ಯಶುದ್ಧವಿದೆ ಎಂಬ ದೃಷ್ಟಿಯಿಂದ ಆತ್ಮಚಿಂತನೆಯಲ್ಲಿ, ಆತ್ಮಧ್ಯಾನದಲ್ಲಿ ಇರಲು ಏನೂ ಅಭ್ಯಂತರವಿಲ್ಲ.
೬. ಹಿಂದಿನ ಜನ್ಮದಲ್ಲೇ ನಿನಗೆ ಸಗುಣಸಾಕ್ಷಾತ್ಕಾರವಾಗಿದೆ. ಮೋಕ್ಷಕ್ಕಾಗಿಯೂ ಬಹಳಿಷ್ಟು ಸಾಧನೆ ಮಾಡಿದ್ದೀಯೆ. ಆದುದರಿಂದ ಈ ಜನ್ಮದಲ್ಲಿ ನಿನಗೆ ದೇವತಾದರ್ಶನ ತಾನೇತಾನಾಗಿ ಆಗುತ್ತಿದೆ ಮತ್ತು ದೇಹದ ವಿಸ್ಮರಣೆಯಾಗುತ್ತದೆ. ದೇಹದ ವಿಸ್ಮರಣೆಯಾಗುವದು ಎಂದರೆ, ಇದು ನಿನ್ನ ಪೂರ್ವಜನ್ಮದ ಸಾಧನೆಯ ಫಲ ಈ ಜನ್ಮದಲ್ಲಿ ನಿನಗೆ ಸಿಗುತ್ತಿದೆ. ಒಳ್ಳೆಯದೇ ಆಯಿತು. ಸಂಶಯ ಬಿಟ್ಟು ಬಿಡು. ಪುಕ್ಕಲುತನ ಹೊಂದಬೇಡ. ಹಾಗೆಯೇ ನಿಷ್ಠ ಸಾಧಕರಿಗೆ ತೋರಿಸಲಿಕ್ಕೂ ಅಭ್ಯಂತರವಿಲ್ಲ.
ಶ್ರೀಧರ ಸ್ವಾಮಿ