ಶ್ರೀ ತಿಗಣೇಶ ಮಾಗೋಡು
ಬನ್ನಿ..ನನ್ನವರೇ ಅಜ್ಜನಮನೆಯಲ್ಲೇ ಇರುವೆನೀವೂ ಅಲ್ಲೀಗೇ ಬರುವಿರೆಂದುಕೊಳ್ಳುವೆ..
ಬಹುಷಃ ನನ್ನಷ್ಟು ಪಟಿಂಗಿರಿ ಮಾಡಿದವರೇ ಇಲ್ಲ. ಈಗಲೂ ನನ್ನ ಕಂಡವರು..ನನ್ನ ಮಾಣಿ ಹತ್ತಿರ ಈಗಲೂ ನನ್ನ ಮಹಿಮೆ ಹೇಳುತ್ತಾರೆ.ಕೆಲವನ್ನು ನೆನಪುಮಾಡಿ..ನನ್ನಜ್ಜನ ಮನೆ..ಕಣ್ಣಿ ಗೇಗೇ ಮನೆ..ಪಟೆಲರ ಮನೆ ಕೇರಿ ದಾಟಿ..ಹರನೀರ ಕೆರೆ..ದಾಟಿ..ಆಲೆಗೆ ಹೋಗುವುದು..ಮದ್ಯದಲ್ಲಿ ಒಂದು ಜಟ್ಗನಮನೆ. ಹಾಗೆ ದಾಟಿದರೆ ಅಜ್ಜನ ಮನೆ ತೋಟ ಅದರಲ್ಲೊಂದು ಕೆರೆ..ಅದಕ್ಕೆ ಜೊಟ್ಟೆ ಹಾಕಿ ನೀರುಬಾರಿ ಮಾಡುತ್ತಿದ್ದರು..ನೀರು ತೋಕಲು ನಾನೂ ಹೋಗುತ್ತಿದ್ದೆ.
ಸೋಗೆ..ಸೊಯ್ದು..ಹುಂಬಾಳೆ ಬಳ್ಳಿಯಲ್ಲಿ ಕಟ್ಟಿ..ಕಟ್ಟು ಮಾಡಿಕೊಡುತ್ತಿದ್ದ..ಮಞಾತ ಮಾವ..ಹಂಗರಕನ ಮರದ ಹಾಳೆ..ನನಗೆ ಕೊಡುತ್ತಿರಲಿಲ್ಲ..ಹಾಳೆ ಹಿಂದೆಮುಂದೆ ಕೊಯ್ದು..ಅವಳೆತುದಿ ಹೊಮಡದಲ್ಲಿ ಬಿಟ್ಟ ನೀರು ತೋಕಬೇಕಿತ್ತು.ಹಂಗರಕನ ಹಾಳೆ ಕೊಡದಿದ್ದಕ್ಕೆ ಅದನ್ನು ಜಪ್ಪಿ ಒಡೆದು ಹಾಕುತ್ತಿದ್ದೆ..ಸಿಕ್ಕಾಕ ಬಿದ್ದು ಹೊಡ್ತ ಬಿದ್ದಮೇಲೆ..ಬುದ್ದಿ ಕಲಿಯಲಿಲ್ಲ. ಒಂದುದಿನ ಹೇಲಾಟ ಆದರೂ ಹೆದರಿಸಿಸಣ್ಣ ಅಲೆಗೆ ಕಳಿಸಿದರು..ಅದು ಜೋರಾಗಿ ಶಾಲೆ ಬಿಡಿಸಿಕೊಂಡು ಬರುತ್ತಿದ್ದಾಗ..ಬಂದಹಾಗೆ ಆಯ್ತು..ದರೆಹಾರಿ ಅಜ್ಜನಮನೆ ಕೆರೆಹತ್ತಿರ ಮುಗಿಸಿ..ತೊಳೆಯಲು ಕೆರೆ ಇಳಿದೆ..ಮೆಟ್ಳಪಾಜಿ ಹಿಸಿದು ಕರೆಯಲ್ಲಿ ಬಿದ್ದೆ..ಪೂರಾ ವದ್ದೆಯಾಯ್ತು..ಅದೇ ಮೈಗೆ ಚಡ್ಡಿಹಾಕಿ..ಪಾಟಿಚೀಲ ಹಾಕಿ ಬಂದೆ..ಎಲ್ಲ ಒದ್ದೆಯಾಗಿ..ಬೈಸಿಕೊಂಡೆ..ಒಂದುಸಲ ಹುಳಸಂಪಗೆ ಹಣ್ಣು ಆಗಿತ್ತು ಅದನ್ನು ಕೊಯ್ಯಲು ಮರ ಹತ್ತಿದ್ದೆ..ಅಮ್ಮ ಹಬ್ಬಸಗೆ ಬರ್ಲು ಹಿಡಿದು ಕೆಳಗೆ ಬಂದೇ ಬಿಟ್ಟಳು..ಬೈಯಲು ಶುರು ಮಾಡಿದರು..ಎಷ್ಟು ಹೇಳಿದರೂ ಕೇಳಲಿಲ್ಲ.ಕೊನೆಗೆ ಮರದಿಂದ ಅಮ್ಮನ ಅಂದರೆ ಅಜ್ಜಿಯ ಮೈಮೇಲೆ ಹಾರಿದೆ..ಸುಮಾರು ಮೂವತ್ತು ಪೂಟು ಎತ್ತರದಿಂದ. ಅದೇದಿನ ನನ್ನನ್ನು ಮನೆಗೆ ಕಳಿಸುವೆ ಎಂದು ಜೋರಮಾಡಿ..ಹೊಡೆದರು. ಸುರಕಟ್ಟೆ ಶಾಲೆಯಲ್ಲಿ..ವಿಕ್ರಮ ಮಾಸ್ತರ ಮೀಸೆ..ಕರ್ಕಿಮಾಸ್ತರ ಬೀಡಿ..ಲೀಲಾವತಕ್ಕೋರ ಕನ್ನಡಕ..ಸೀತಕ್ಕೋರು..ಬಾಲವಾಡಿ ಅಕ್ಕೋರು ಪುಳ್ಳಿ..ಅಕ್ಕಿ ಎನ್.ಎಸ್ ಬಟ್ರ ಇಂಗ್ಲೀಷು..ವಿಷ್ಣುಮಾಸ್ತರ ವಾರೆಸುಂಡಿ..ಇನ್ನೂ ನೆನಪಿದೆ..ದೇವರಣ್ಣನ ತಮ್ಮನ ಅಂಗಡಿಯ ಪೆನ್ನು..ಪರೀಕ್ಷೆಹಾಳೆ..ಬಳಕಡ್ಡಿ..ಇನ್ನೂ ನೆನಪಿದೆ..ಗೋದಿಕಡಿ ಉಪ್ಪಿಟ್ಟು ಹೆಚ್ಚಿಗೆಕೊಟ್ಟ..ಹೊಳೆಬದಿ ಗಣೇಶ(ಇಂದಿನ ಯಕ್ಷಸ್ತ್ರೀ ವೇಷಧಾರಿ ಮುಗ್ವಾ ಗಣೇಶ ನಾಯ್ಕ)..ಎಲ್ಲ ನೆನಪಿದೆ..
ಅಜ್ಜನಮನೆಗೆ ಆಗಾಗ ಬರುವ ಜಬ್ಲು..ಈರಮ್ಮಜ್ಜಿ ನೆನಪಿಗೆ ಬರುತ್ತಾಳೆ..ದುಂಡಗೆ ನಿಲ್ಲಿಸಿ.. ಕಣ್ಣಿಗೆ ಅಟ್ಳಹೊಡಿ ನೊರೆ ಹಾಕಿ.ಗೆಡಸಿ ಮೀಸಿಕೊಟ್ಟ ಈರಮ್ಮಜ್ಜಿ ನೆನಪಿದ್ದಾಳೆ..ಒಂದು ಪಟ್ಟಿ ಹಿಡಿದು ಉದ್ದಕ್ಕೆ ಅಮಗಳದಲ್ಲಿ ಹಾದು ಮೆಟ್ಳು ಇಳಿದುಹೋದ ಶ್ರೀಪಾದ ಶೆಟ್ಟಿಯವರ ಆಗಲೂ ಹಣಕಿ ನಡೆಯುತ್ತಿದ್ದ ಚಿತ್ರ ಈಗಲೂ ನೆನಪಿದೆ..ಶೀಯಾಳ ಕೊಯ್ಕೊಡುವ..ಅಮಗೂಸ..ನಾಗೇಶ..ಹೊಳೆ ಇಳಿದರೆ ಕೋಲು ತಂದು ಹೆದರಿಸುವ ಹನ್ಮಂತ..ನನ್ನನ್ನು ಹೊತ್ತು ಅವನಿಗೆ ಜೋರಮಾಡುವ ಚಂದ್ರಿ..ನೀರಿ ಇಳಿತ ಆದಾಗ ಹೊಳೆಹಾಯಲು ಕೆಳಗಿಳಿದ ಮಿನೀನಮನೆಯ ಹಿಂದಬದಿ ಮೆಟ್ಳು..ಹೇಲಲು ಕುಳಿತಾಗ ತೊಂದರೆಕೊಡುವ ಯಸುಡಿರಾಶಿ..ನೇಯಲು ಹೊಳೆಯಲ್ಲಿ ನೆನೆಸಿದ ಮಡ್ಳಹೊರೆ ಬಳ್ಳಿ ಕೊಯ್ದು ಬಯ್ಸಿಕೊಂಡದ್ದು..ಒಂದೇ ಎರಡೇ..ನನ್ನ ಭಾನಗಡಿ..ನನ್ನನ್ನು ಸಹಿಸಲಾಗದೇ..ಆರನೆತ್ತಿಗೆ ಮನೆಗೆ ತೌರಿದರು..ಅಲ್ಲಿಗೆ ನನ್ನ ಐದನೆತ್ತಿಯ ಉನ್ನತ ವ್ಯಾಸಂಗ ಮುಗಿಸಿ..ಮಳ್ಳಿಕೇರಿಯ ಶಾಲೆಗೆ ಮರಳಿಬಂದ..ಮಾಗೋಡ ಮಳ್ಳಮಾಣಿ..ಮುಂದಿವಾರ ಆರನೆತ್ತಿ..ಬರುವೆ..ನಮಸ್ಕಾರ.