ಹತ್ತು ನಾದ, ಜ್ಯೋತಿ, ಹತ್ತು ವಿಧಿಮಂಡಳ, ಐದು ಆಕಾಶ ಈ ಎಲ್ಲ ದೃಶ್ಯಗಳನ್ನು ದಾಟಿ, ಸಾಧನೆ ನಿಲ್ಲಿಸದೇ ಸಾಧಕ ಆನಂದಘನ ಸ್ವಮಾತ್ರವಾದ ಬ್ರಹ್ಮಸ್ಥಳಕ್ಕೆ ಹೋಗಿ ತಲುಪುತ್ತಾನೆ.

(ಶ್ರೀ ಶಂಕರ ಪಂಡಿತ, ಸಜ್ಜನಗಡ ಅವರಿಗೆ ಬರೆದ ಪತ್ರ)

—— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

                                || ಶ್ರೀರಾಮ ಸಮರ್ಥ ||

ಚಿ. ಶಂಕರ ಪಂಡಿತನಿಗೆ ಆಶೀರ್ವಾದ,

ನಿನ್ನ ಪತ್ರ ಬಂದು ೩-೪ ದಿನಗಳಾಗರಬಹುದು. ಉಳಿದ ಪತ್ರಗಳಿಗೆ ಉತ್ತರ ಬರೆಯುವಲ್ಲಿ ಸಮಯ ಕಳೆದು ಹೋಗಿ ನಿನಗೆ ಬರೆದು ಕಳಿಸಲಿಕ್ಕೆ ಆಗಲಿಲ್ಲ. ಇಂದು ಕ್ರಮದಂತೆ ನಿನ್ನ ಪತ್ರದ ಸರತಿ ಬಂತು. ದುರ್ಲಕ್ಷ, ಉದಾಸೀನತೆ ಅಥವಾ ಆಲಸ್ಯ ಪತ್ರ ಬರೆದು ಕಳಿಸದೇ ಹೋಗದಕ್ಕೆ ಕಾರಣವಲ್ಲ.

RELATED ARTICLES  ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕನಸು, ಆದೀತೆ ನನಸು?

೧. ‘ನಮಃ ಶಾಂತಾಯ …’ ಇದು ಗುರುಮಂತ್ರವಿದೆ. ಅದರಿಂದ ಮನಸ್ಸಿನ ಏಕಾಗ್ರತೆಯಾಗಿ ಆನಂದವಾಗುತ್ತಿದ್ದರೆ ಸಮಯ ಸಿಕ್ಕಾಗ ಅದರ ಜಪ ಮಾಡು.

೨. ಅಭ್ಯಾಸ ಮತ್ತು ಆನಂದ ಹೆಚ್ಚುತ್ತಾ ನಡೆದಿದೆ ಎಂಬುದನ್ನು ಓದಿ ಆನಂದವಾಯಿತು. ನಿರ್ವಿಘ್ನವಾಗಿ ಇದೇ ರೀತಿ ಉತ್ತರೋತ್ತರ ಪ್ರಗತಿಯಾಗುತ್ತಾ ಇರಲಿ. ಪ್ರಣವದ ಉಚ್ಚಾರ ಮಾಡುವಾಗ ರೋಮಾಂಚನವಾದರೆ ಅದು ಭಕ್ತಿಯ ಅಷ್ಟಭಾವದ ಲಕ್ಷಣವಾಗಿದೆ. ಒಳ್ಳೆಯದೇ.

೩. ಅಭ್ಯಾಸ ಪರಿಪಕ್ವವಾದಂತೆ ಒಂದರ ನಂತರ ಒಂದು, ವಿವಿಧ ಬಣ್ಣಗಳ ದೃಶ್ಯ, ಕೆಲ ಕಾಲ ಸ್ಥಿರವಾಗಿದ್ದು ಹೋಗುತ್ತವೆ. ದೇವತಾ ದರ್ಶನದಿಂದ, ಅಭ್ಯಾಸದಿಂದ ಹೀಗೆ ಈ ಬಣ್ಣಗಳು ಕಾಣುತ್ತವೆ. ದೃಷ್ಟಿ ಸ್ಥಿರವಾಗಹತ್ತಿತೆಂದರೆ ಈ ಪ್ರಕಾಶದರ್ಶನದಿಂದ ಸಾಮಾನ್ಯವಾಗಿ ಸಿದ್ಧರಾಗುತ್ತಾರೆ.

RELATED ARTICLES  ಕಳೆದುಹೋದ ಎಳೆಯ ದಿನಗಳು (ಭಾಗ7)

ಇಷ್ಟ ಸ್ಥಳ ಸೇರಲು ಹೊರಟವನಿಗೆ ದಾರಿಯಲ್ಲಿ ಅನೇಕ ದೃಶ್ಯಗಳು ಕಣ್ಣಿಗೆ ಬೀಳುತ್ತಿರುತ್ತವೆ. ಅದನ್ನೆಲ್ಲ ದಾಟಿ ನಿಲ್ಲದೇ ಪಥಿಕ ಹೇಗೆ ಇಷ್ಟಸ್ಥಳಕ್ಕೆ ಹೋಗಿ ತಲುಪುತ್ತಾನೋ, ಅದೇ ರೀತಿ ಬ್ರಹ್ಮಸ್ವರೂಪದ ಸಾಕ್ಷಾತ್ಕಾರಕ್ಕಾಗಿ ಸಾಧನಪಂಥದ ಅವಲಂಬನ ಮಾಡಿ, ಹೊರಟವನಿಗೆ ದಾರಿಯ ಮೇಲಿನ ಈ ರೀತಿಯ ದೃಶ್ಯಗಳು ಕಣ್ಣಿಗೆ ಬೀಳುತ್ತವೆ. ಹತ್ತು ನಾದ, ಜ್ಯೋತಿ, ಹತ್ತು ವಿಧಿಮಂಡಳ, ಐದು ಆಕಾಶ ಈ ಎಲ್ಲ ದೃಶ್ಯಗಳನ್ನು ದಾಟಿ, ಸಾಧನೆ ನಿಲ್ಲಿಸದೇ, ಸಾಧಕ ಆನಂದಘನ ಸ್ವಮಾತ್ರವಾದ ಬ್ರಹ್ಮಸ್ಥಳಕ್ಕೆ ಹೋಗಿ ತಲುಪುತ್ತಾನೆ.

(ಈ ಪತ್ರದ ಎರಡನೆಯ ಭಾಗ ಮುಂದುವರಿಯುವದು)