ದಾರಿಯಲ್ಲಿ ಹೋಗುತ್ತಿರುವಾಗ, ಆ ಆ ಸ್ಥಳಗಳಲ್ಲಿ ಇರುವ ಆ ಆ ದೃಶ್ಯಗಳು ಆ ಆ ಸ್ಥಳಕ್ಕೆ ಹೋದಾಗ ತಾನಾಗಿಯೇ ಕಾಣಿಸುತ್ತವೆ. ಆ ವಿಷಯದಲ್ಲಿ ‘ಯಾಕೆ’ ಎಂದು ಹೇಗೆ ಪ್ರಶ್ನೆ ಉದ್ಭವಿಸುವದಿಲ್ಲವೋ, ಅದೇ ರೀತಿ ಸಾಧಕನಿಗೆ ಆ ಆ ಭೂಮಿಕೆಯಲ್ಲಿ ಆ ಆ ಅನುಭವ ಬರುತ್ತಿರುತ್ತದೆ. ‘ಯಾಕೆ’ ಎಂದು ಪ್ರಶ್ನೆ ಮಾಡಬಾರದು.

(ಶ್ರೀ ಶಂಕರ ಪಂಡಿತ, ಸಜ್ಜನಗಡ ಅವರಿಗೆ ಬರೆದ ಪತ್ರದ ಎರಡನೆಯ ಭಾಗ)

‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

ಮತ್ತಿನ್ನಾವುದೂ ಗಮನಕ್ಕೆ ಬರದೇ, ತಾನು ಕೇವಲ ನಿರ್ವಿಕಲ್ಪ ಆನಂದಮಾತ್ರನಾಗಿ ಉಳಿಯುವವರೆಗೆ ಸಾಧನೆಯನ್ನು ಮಾಡುತ್ತಲೇ ಇರಬೇಕು. ಆ ಆನಂದವೇ ತನ್ನ ಸ್ವರೂಪ ಎಂದು ಸುನಿಶ್ಚಿತ ಮಾಡಿಕೊಂಡು ಸಾಧನಾಪಥದಲ್ಲಿ ಮುಂದುವರಿಯುತ್ತಾ ಇರಬೇಕು. ದೃಶ್ಯ ಪ್ರಪಂಚದ ಮರೆವಾಗಿ, ದೃಷ್ಟಿಯನ್ನೂ ಮರೆತು, ನಮಗೇನು ಕಾಣಿಸುತ್ತದೆಯೋ ಆ ವೃತ್ಯಾತ್ಮಕ ಅರಿವೂ ನಷ್ಟವಾಗಿ, ಕೇವಲ ಜ್ಞಾನಮಾತ್ರ ಉಳಿಯುವವರೆಗೆ, ದಾರಿಯಲ್ಲಿನ ದೃಶ್ಯವನ್ನು ನಿರಾಸಕ್ತನಾಗಿ ನೋಡುತ್ತ, ಆತ್ಮಾನುಸಂಧಾನವನ್ನಷ್ಟೇ ಇಟ್ಟುಕೊಂಡು ಮುಂದೆ ಮುಂದೆ ಹೋಗುತ್ತಿರಬೇಕು. ಆಕಾಶದೆಡೆ ನೋಡಿದಾಗ ವಿಶಾಲತೆಯ ಭಾವನೆ ಬರುತ್ತದೆ. ನೋಡಬೇಕು. ಅಸಂಖ್ಯ ಪ್ರಕಾಶದ ಅಣುರೇಣು ಆಕಾಶದಲ್ಲಿ ಕಾಣುವದು ಎಲ್ಲ ತಾರಕಯೋಗದ, ಬಹುವಿಧದ ಯೋಗಗಳ, ಬಹುವಿಧ ದೃಶ್ಯಗಳಲ್ಲಿ ಒಂದು.

RELATED ARTICLES  ಕಳೆದುಹೋಗುವ ಭಾವನೆಗಳು: ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲೆಗಳು(ಭಾಗ - 2).

‘ಇದೇಕೆ ಕಾಣಿಸುತ್ತಿದೆ, ಅದೇಕೆ ಕಾಣಿಸುತ್ತಿದೆ, ಹೀಗೇ ಏಕೆ ಕಾಣಬಾರದು, ಹಾಗೇ ಏಕೆ ಕಾಣುತ್ತದೆ’ ಇತ್ಯಾದಿ ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿಯೂ ಮೂಡಬಾರದು. ದಾರಿಯಲ್ಲಿ ಹೋಗುತ್ತಿರುವಾಗ, ಆ ಆ ಸ್ಥಳಗಳಲ್ಲಿ ಇರುವ ಆ ಆ ದೃಶ್ಯಗಳು ಆ ಆ ಸ್ಥಳಕ್ಕೆ ಹೋದಾಗ ತಾನಾಗಿಯೇ ಕಾಣಿಸುತ್ತವೆ. ಆ ವಿಷಯದಲ್ಲಿ ‘ಯಾಕೆ’ ಎಂದು ಹೇಗೆ ಪ್ರಶ್ನೆ ಉದ್ಭವಿಸುವದಿಲ್ಲವೋ, ಅದೇ ರೀತಿ ಸಾಧಕನಿಗೆ ಆ ಆ ಭೂಮಿಕೆಯಲ್ಲಿಯ ಆ ಆ ಅನುಭವ ಬರುತ್ತಿರುತ್ತದೆ. ‘ಯಾಕೆ’ ಎಂದು ಪ್ರಶ್ನೆ ಮಾಡಬಾರದು. ತಮ್ಮ ನಿಷ್ಠೆಯಲ್ಲಿ ಶ್ರೀಗುರುವಿನ ಕೃಪೆ ತಮ್ಮ ಮೇಲೆ ನಿಃಸ್ಸೀಮವಾಗಿದೆ ಎಂದು ನಿರಾತಂಕದಿಂದ ಧ್ಯಾನಸಾಧನೆ ಹೆಚ್ಚೆಚ್ಚು ವೇಳೆ ಮಾಡುತ್ತಾ ಹೋಗಬೇಕು. ‘ನಾವು ದಾರಿ ತಪ್ಪುತ್ತಿದ್ದೆವೋ ಏನೋ? ಸಾಧನಮಾರ್ಗದಲ್ಲಿಯ ಅನುಭವ ತೆಗೆದುಕೊಳ್ಳುತ್ತಿರುವಾಗ ಇದರಿಂದ ನಮಗೇನಾದರೂ ಅನಿಷ್ಟವಾಗುವದೋ ಏನೋ?’ ಮೊದಲಾದ ಸಂಶಯ ಏಳಲಿಕ್ಕೇ ಕೊಡಬಾರದು. ಇಷ್ಟಸ್ಥಳಕ್ಕೆ ಹೊರಟವನು, ದಾರಿಸಾಗುತ್ತಾ, ಮತ್ತೂ ಮುಂದೆ ಮುಂದೆ ಹೋಗಿ, ಹೇಗೆ ತನಗೆ ಎಲ್ಲಿ ತಲುಪಬೇಕೆಂದಿದೆಯೋ ಆ ಸ್ಥಳವನ್ನು ತಲುಪುತ್ತಾನೋ, ಅದೇ ರೀತಿ ಸಾಧನವನ್ನು ಮಧ್ಯದಲ್ಲೇ ನಿಲ್ಲಿಸದೇ, ಮತ್ತೂ ಹೆಚ್ಚು – ಹೆಚ್ಚು ವೇಳೆ ಮಾಡುತ್ತಾ ಹೋದರೆ ಕ್ರಮೇಣ ಸಾಧಕನು ಸಮಾಧಿಯವರೆಗೆ ಹೋಗಿ ಮುಟ್ಟುತ್ತಾನೆ. ಮನಸ್ಸಿನಲ್ಲಿ ಯಾವುದೇ ವಿಕಲ್ಪ ತರಬಾರದು; ಆ ದೃಷ್ಟಿಯಿಂದ, ಕಳೆದ ಪತ್ರದಲ್ಲಿ ನಿನಗೆ ಹೆದರಬಾರದೆಂದು ತಿಳಿಸಿದ್ದೆ. ಯಾವುದರ ಬಗ್ಗೂ ಹೆದರಿಕೆ ಇಟ್ಟುಕೊಳ್ಳಬಾರದು. ಇದು ನಿರ್ಭಯ ಪರಮಾರ್ಥಮಾರ್ಗವಾಗಿದೆ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

(ಈ ಪತ್ರದ ಮೂರನೆಯ ಭಾಗ ಮುಂದುವರಿಯುವದು)