ಅಹಮೇವೇದಂ ಸರ್ವಮ್’ – ‘ನಾನೇ ಈ ಎಲ್ಲವೂ ಆಗಿದ್ದೇನೆ’ ಎಂದು ಯೋಗಿಗಳಿಗೆ ಗುರುಕೃಪೆಯಿಂದ, ಆತ್ಮವಿಚಾರ ಘಟಿಸಿ, ಮನದಟ್ಟಾಯಿತು ಎಂದಾದಮೇಲೆ ‘ನೇತರಸ್ತತ್ರ ಚಾಣ್ವಪಿ’ – ಅಲ್ಲಿ ಎರಡನೆಯದು ಎಂದು ಏನೂ ಉಳಿಯುವದಿಲ್ಲ.
(ಶ್ರೀ ಶಂಕರ ಪಂಡಿತ, ಸಜ್ಜನಗಡ ಅವರಿಗೆ ಬರೆದ ಪತ್ರದ ಮೂರನೆಯ ಭಾಗ)
—— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ
೪. ‘ಜನ್ಮಮರಣದಿ ಬಿಡುಗಡೆ| ಅದಕೆನ್ನುವರು ಕೇಳು ಮೋಕ್ಷವಾಯ್ತು|
ದೇಹಪಾತವಾದ ನಂತರ ದೇಹ ಇದ್ದವರ ಚಿನ್ಹೆಯೆಂದರೆ,
‘ಯಾರ ಕಲ್ಪನೆ ನಶಿಸಿದೆಯೋ| ಅವನೇ ಪ್ರಾಪ್ತ ಪುರುಷ|’
ನಿರ್ವಿಕಲ್ಪ ಆನಂದರೂಪದಿಂದ ‘ನಾನು’ ಒಂದೇ ಉಳಿದುಕೊಳ್ಳುವದು ದೇಹ ಇರುವಾಗಲೇ ಲಭಿಸುವ ಮೋಕ್ಷವು.
‘ನಿರತಿಶಯಾನಂದಪ್ರಾಪ್ತಿಃ ಮೋಕ್ಷಸ್ಯ ಲಕ್ಷಣಮ್’
ಅನಂತ ಆನಂದದ ಅವಿಚಲ ಪ್ರಾಪ್ತಿ ಅಂದರೆ ತದ್ರೂಪತೆ, ಇದೇ ಮೋಕ್ಷದ ಲಕ್ಷಣವೆಂದು ಶಾಸ್ತ್ರಕಾರರು ಸಿದ್ಧಮಾಡಿದ್ದಾರೆ.
೫. ಯೋಗಿಗಳಿಗೆ ಯಾವ ತೇಜೋವಲಯ ಕಾಣಿಸುತ್ತದೆಯೋ ಆ ಎಲ್ಲ ಪ್ರಕಾಶ ಯೋಗಿಗಳ ಕಣ್ಣುಗಳದ್ದೋ ಅಥವಾ ಹೊರಗಿನಿಂದ ಬರುತ್ತದೆಯೋ? ಇದು ನಿನ್ನ ಪ್ರಶ್ನೆ. ಎಲ್ಲಿಯವರೆಗೆ ಯೋಗಿಗಳ ಸರ್ವತ್ರ ಸ್ವರೂಪವ್ಯಾಪ್ತಿ ಆಗುವದಿಲ್ಲವೋ, ಅಲ್ಲಿಯರೆಗೆ, ಹೊರಶಕ್ತಿಯ, ಅತಿವಿಶಾಲ, ಆನಂದದಾಯಿ ದೃಶ್ಯ ಅಪ್ರಯತ್ನದಿಂದ ಕಾಣಿಸಿದಾಗ, ಅದು ಉಪಾಸನೆಯ ಕೃಪೆಯಿಂದ, ಮಾಡುತ್ತಿರುವ ಸಾಧನೆಯಿಂದಾಗಿ ಕಂಡಿತು ಎಂದು ಹೇಳಬೇಕಾಗುತ್ತದೆ ಮತ್ತು ಅದು ಸರಿಯೇ.
‘ಅಹಮೇವೇದಂ ಸರ್ವಮ್’ – ‘ನಾನೇ ಈ ಎಲ್ಲವೂ ಆಗಿದ್ದೇನೆ’ ಎಂದು ಯೋಗಿಗಳಿಗೆ ಗುರುಕೃಪೆಯಿಂದ, ಆತ್ಮವಿಚಾರ ಘಟಿಸಿ, ಮನದಟ್ಟಾಯಿತು ಎಂದಾದಮೇಲೆ ‘ನೇತರಸ್ತತ್ರ ಚಾಣ್ವಪಿ’ – ಅಲ್ಲಿ ಎರಡನೆಯದು ಎಂದು ಏನೂ ಉಳಿಯುವದಿಲ್ಲ. ಎಲ್ಲರ ಅನುಭವ ತೆಗೆದುಕೊಳ್ಳುತ್ತಿರುವವನು ‘ನಾನೇ’ ಇದ್ದೇನೆ, ‘ನನ್ನ’ ಹೊರತು ಯಾವುದರ ಅನುಭವವೂ ಆಗುವದಿಲ್ಲ. ಯಾವುದೇ ಅನುಭವದ ಮೊದಲು, ಯಾವುದೇ ವೃತ್ತಿ ಇಲ್ಲದಿರುವಾಗ ‘ನಾನು’ ಹೇಗೆ ಇರುತ್ತದೆಯೋ ಅದೇ ರೀತಿಯಲ್ಲೇ ಅನುಭವದ ಕೊನೆಗೂ ಇರುತ್ತದೆ. ಬೇರೆ ಯಾವುದೇ ಕಲ್ಪನೆ ಉತ್ಪನ್ನವಾಗುವ ಮೊದಲು ಸರ್ವಪ್ರಕಾಶಕ, ಸ್ವಯಂಪ್ರಕಾಶ ‘ನಾನು’ ಒಂದೇ ‘ಅರಿವಿ’ನ ರೂಪದಲ್ಲಿ ಇರುತ್ತದೆ. ಅದೇ ನನ್ನ ರೂಪ ಎಂದು ಒಮ್ಮೆ ನಿಶ್ಚಿತವಾಯಿತು ಎಂದರೆ, ಯಾವುದೇ ಅನುಭವ ಪಡೆಯುತ್ತಿರುವಾಗ, ಅದರಲ್ಲಿ ‘ನನ್ನ ಜ್ಞಾನಮಾತ್ರ ಆನಂದರೂಪದಿಂದ ನಾನು ಅದ್ವಿತೀಯನಾಗಿದ್ದೇನೆ’ ಎಂಬ ಆತ್ಮಾನುಭವವೇ ಪ್ರಕಟವಾಗುತ್ತದೆ. ಈ ರೀತಿಯಾಗಿ ಆತ್ಮನಿಷ್ಟಾವೃತ್ತಿ ಆಯಿತು ಎಂದಾದರೆ ಎಲ್ಲದರಿಂದಲೂ, ಎಲ್ಲ ಅನುಭವಗಳಿಂದಲೂ ನನ್ನದೇ ಒಂದು ಆನಂದಘನರೂಪ ಯಾವಾಗಲೂ ಪ್ರಕಟವಾಗುತ್ತಿರುತ್ತದೆ. ಜೀವನಮುಕ್ತಾವಸ್ಥೆ ಅಂದರೆ ಇದೇ. ಪ್ರತಿಯೊಂದು ಅಲೆಗಳಲ್ಲೂ ಸಮುದ್ರವೇ ಇದ್ದಂತೆ ಪ್ರತಿಯೊಂದು ಪ್ರಾಣಿ-ಪದಾರ್ಥಗಳಿಂದ, ಅದು ಕಾಣಲು ಎಷ್ಟೇ ಅಲ್ಪವಾಗಿದ್ದರೂ, ಆ ಒಂದು ಬ್ರಹ್ಮನೇ ತನ್ನ ಸಂಪೂರ್ಣ ರೂಪದಿಂದ ಪ್ರಕಟವಾಗಿರುತ್ತಾನೆ. ಈ ದೃಷ್ಟಿಯಿಂದ ನನ್ನದೇ ರೂಪ ಎಲ್ಲ ರೂಪದಲ್ಲೂ ಪ್ರಕಟವಾಗುತ್ತದೆ ಎಂದೇ ಹೇಳಬೇಕಾಗುತ್ತದೆ. ಜ್ಞಾನಿ ಯೋಗಿಗೆ ಎಲ್ಲ ತೇಜೋವಲಯಗಳಿಂದ ತನ್ನ ಆನಂದಘನ ಬ್ರಹ್ಮಸ್ವರೂಪದ್ದೇ ಸ್ವಯಂಪ್ರಕಾಶ ಅನುಭವಕ್ಕೆ ಬರುತ್ತದೆ. ಎಲ್ಲ ನಾದಗಳಿಂದ ‘ಅಹಂ ಬ್ರಹ್ಮಾಸ್ಮಿ’ ಈ ಶಬ್ದದ್ದೇ ಅರಿವಾಗುತ್ತದೆ.
(ಈ ಪತ್ರದ ನಾಲ್ಕನೆಯ ಭಾಗ ಮುಂದುವರಿಯುವದು)