ಮಗನ ಹದಿನಾರು ಮಂದಿ ಗೆಳೆಯರಿಗೆ ಪರಿಸರ ಅಧ್ಯಯನ ಶಿಬಿರವನ್ನು ಏರ್ಪಡಿಸಿ ತಮ್ಮ ಹದಿನಾರನೇ *ವಿವಾಹ ವಾರ್ಷಿಕೋತ್ಸವ* ವನ್ನು ಆಚರಿಸಿ ಕುಟುಂಬವೊಂದು ಆದರ್ಶ ಮೆರೆದಿದೆ *ಕುಂಬಳೆ ಬಳಿಯ ಕಾರ್ಲೆಯ ಶ್ರೀ ಸದಾಶಿವ ಭಂಡಾರಿ ಹಾಗೂ ಧರ್ಮತ್ತಡ್ಕ ಹೈಸ್ಕೂಲಿನ ಶಿಕ್ಷಕಿ ಶ್ರೀಮತಿ ತುಳಸಿ* ಯವರ ಕೈಲಾಸ್ ನಿವಾಸದಲ್ಲಿ ಈ ಅಪೂರ್ವ ಅವಕಾಶ ಮಕ್ಕಳಿಗೆ ಒದಗಿ ಬಂತು.

RELATED ARTICLES  ಮೋಹವೆಂಬ ಜಾಲ

ಚಿಟ್ಟೆಗಳು,ಕಪ್ಪೆಗಳು,
ಹಾವುಗಳು ಹಾಗೂ ಪಕ್ಷಿಗಳ ಬಗ್ಗೆ ವಿವಿಧ ತರಗತಿಗಳನ್ನು ಶಿಬಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. *ಆಹಾರ ಮತ್ತು ನೀರು ಪೋಲಾಗುವ* ವಿವಿಧ ಸಂದರ್ಭಗಳನ್ನು ಸಹ ಶಿಬಿರದಲ್ಲಿ ಚರ್ಚಿಸಲಾಯಿತು.ರಾತ್ರೆ ಹೊತ್ತು *ಶಿರಿಯ ನದಿ ಬದಿಯ ಜೈವ ವೈವಿಧ್ಯ* ದ ಬಗ್ಗೆ ಕಲಿತರೆ,ಮುಂಜಾವಿನಲ್ಲಿ *ಶಿರಿಯ ಅಳಿವೆ ಪ್ರದೇಶದಲ್ಲಿ ಪಕ್ಷಿ ನಿರೀಕ್ಷಣೆ* ಮಾಡಲಾಯಿತು. ಶಿಬಿರದ ಮೂಲಕ ಪರಿಸರ ಪ್ರೇಮದ ಬೀಜ ಬಿತ್ತಿದ ದಂಪತಿಗಳಿಗೆ ಮಕ್ಕಳು ಶುಭ ಹಾರೈಸಿದರು.

RELATED ARTICLES  ಆಮ್ ಆದ್ಮಿ ಪಾರ್ಟಿ ಭಟ್ಕಳ- ಹೊನ್ನಾವರ ವಿಧಾನಸಭಾ ಕ್ಷೇತ್ರದ ಸೇವಾಕಾಂಕ್ಷಿ ಸಮಾಜ ಸೇವಕ , ಸರ್ವ ಧರ್ಮ ಪ್ರಿಯ , ಜನಸ್ನೇಹಿ ಡಾಕ್ಟರ್ ನಸಿಮ್ ಖಾನ್

*ಫ್ರೆಂಡ್ಸ್ ಆಫ್ ನೇಚರ್ ಕಾಸರಗೋಡು* ಹಾಗೂ *ಕಿದೂರು ಪಕ್ಷಿ ಪ್ರೇಮಿ* ತಂಡ ಶಿಬಿರಕ್ಕೆ ಸಹಕಾರ ನೀಡಿತು.