ಅದಕ್ಕಿಂತಲೂ ಹೆಚ್ಚು ಅಭ್ಯಾಸವಾದಾಗ,  ಆ ಪದ್ಮಾಸನಸ್ಥ ಯೋಗಿ ನೆಲ ಬಿಟ್ಟು ಮಧ್ಯದಲ್ಲೇ ಇರಹತ್ತುವನು. ಇದಕ್ಕೆ ‘ಉತ್ಥಾನ’ ಎನ್ನುತ್ತಾರೆ. ಇದು ಪ್ರಾಣಾಯಾಮದ ಸಿದ್ಧಿ.

(ಶ್ರೀ ಶಂಕರ ಪಂಡಿತ, ಸಜ್ಜನಗಡ ಅವರಿಗೆ ಬರೆದ ಪತ್ರದ ನಾಲ್ಕನೆಯ ಭಾಗ)

—— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

೬. ಕರ್ನಾಟಕದ ಸಾಧಕರಿಗೆ ಮರಾಠಿಯ ‘ಮೋಕ್ಷ ಸಂದೇಶ’ ಅರ್ಥವಾಗುವದಿಲ್ಲವೆಂದು ಈ ಚಿಕ್ಕ ಸಂದೇಶ ಬರೆದು ಕೊಟ್ಟಿದ್ದೇನೆ. ಮೋಕ್ಷಸಂದೇಶಕ್ಕಿಂತಾ ಹೆಚ್ಚೇನೂ ಇದರಲ್ಲಿ ಇಲ್ಲ. ಮುಂದೆ ಇದರ ಭಾಷಾಂತರ ಆಗುವದು. ಸದ್ಯ ಸಾಧಕರ ಲಕ್ಷಣ ಸ್ವಲ್ಪದರಲ್ಲಿ ಹೇಳುವದಾದರೆ, ಯಾರು ಅಭ್ಯಾಸದ ಹೊರತು, ಅಂತರ್ಮುಖತೆಯಿಲ್ಲದೇ, ಆತ್ಮಾನುಸಂಧಾನ ಬಿಟ್ಟು, ಒಂದು ಕ್ಷಣ ಕೂಡಾ ಇರುವದಿಲ್ಲವೋ, ಬಹಿರ್ಮುಖವಾಗಿರುವದು ಯಾವಾತನಿಗೆ ಅತಿಶಯ ಬೇಸರ ತರಿಸಿದೆಯೋ, ಅವನು ಸಾಧಕನು ಎಂದು ಆ ಲೇಖನದ ಸಾರವೆಂದು ಹೇಳಬಹುದು.

೭. Moksha and Mukti – These two words are equivalent words. Mukti or Moksha means salvation. The identification of Supreme bliss and nothing else.

ನೀನು ಇಂಗ್ಲಿಷಿನಲ್ಲಿ ಪ್ರಶ್ನೆ ಕೇಳಿದೆ ಎಂದು ಇಂಗ್ಲಿಷಿನಲ್ಲಿ ಉತ್ತರ ಕೊಟ್ಟೆ. ಎಲ್ಲಿ ನಾಲ್ಕು ತರದ ಮುಕ್ತಿಯ ವರ್ಣನೆ ಬರುತ್ತದೆಯೋ ಆಗ, ಸಾಯುಜ್ಯ ಮುಕ್ತಿ ಮತ್ತು ಮೋಕ್ಷ, ಈ ಎರಡರದ್ದೂ ಅರ್ಥ, ಆನಂದಘನ ಬ್ರಹ್ಮೈಕ್ಯವೇ ಆಗಿದೆ. ನಿರ್ಗುಣ ಬ್ರಹ್ಮೈಕ್ಯರೂಪ ಮೋಕ್ಷಕ್ಕೆ ಸಾಯುಜ್ಯಮುಕ್ತಿ, ಕೈವಲ್ಯಮುಕ್ತಿ ಎಂದು ಸಮರ್ಥರು ಹೆಸರಿಸಿದ್ದಾರೆ. ಶಿವಗೀತೆ, ಕೈವಲ್ಯೋಪನಿಷದ್ದಿನಲ್ಲೂ ಹೀಗೆಯೇ ಮುಕ್ತಿಯ ವಿವರಣೆ ಇದೆ.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ

೮. ಪ್ರಾಣಾಯಾಮವು ಒಂದು ರೀತಿಯ ವ್ಯಾಯಾಮಾಗಿದೆ. ದೇಹಶ್ರಮದಿಂದಾಗಿ ಬೆವರು ಬರುತ್ತದೆ. ೮೦ ಪ್ರಾಣಾಯಾಮದ ವರೆಗೆ ಹೆಚ್ಚಿಸಲು ಹೇಳಿದ್ದಾರೆ. ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಮತ್ತು ರಾತ್ರಿ ೧೨ ಗಂಟೆಗೆ ನಿದ್ದೆ ಮಾಡುವ ಮೊದಲು ಹೀಗೆ ನಾಲ್ಕು ಸಲ ಪ್ರಾಣಾಯಾಮದ ಅಭ್ಯಾಸದ ಕ್ರಮ ಇದೆ.

‘ಅಂಗಾನಾಂ ಮರ್ದನಂ ಕೃತ್ವಾ ಶ್ರಮಜಾತೇನ ವಾರಿಣಾ’

ಶ್ರಮದಿಂದಾದ ಬೆವರಿನಿಂದ ಅಂಗಾಂಗಗಳನ್ನು ತಿಕ್ಕಿಕೊಳ್ಳಬೇಕು ಎಂದು ಹೇಳಿದ್ದಾರೆ. ಆದುದರಿಂದ ಬೆವರು ಬರುವದು ಅಂದರೆ ಪ್ರಾಣಾಯಾಮದ ಸಿದ್ಧಿಯಲ್ಲ.  (ಯೋಗಚೂಡಾಮಣಿ ಉಪನಿಷದ್ದು ೪೧)

ಪೂರಕ ೧೨, ಕಂಭಕ ೧೬, ರೇಚಕ ೧೦. ಓಂಕಾರ – ಇದು ಅಧಮ ಪ್ರಾಣಾಯಾಮ. ಈ ಅಧಮ ಪ್ರಾಣಾಯಾಮದಿಂದ ಬೆವರು ಬರುತ್ತದೆ.

ಇದರ ಎರಡು ಪಟ್ಟು ಮಧ್ಯಮ ಪ್ರಾಣಾಯಾಮ. ಇದರಿಂದ ಕಂಪನವಾಗುತ್ತದೆ. ಮೂರು ಪಟ್ಟು ಉತ್ತಮ ಪ್ರಾಣಾಯಾಮ. ಇದರಿಂದ ಬ್ರಹ್ಮಸ್ಥಾನದ ಪ್ರಾಪ್ತಿಯಾಗುತ್ತದೆ.

(ಯೋಗಚೂಡಾಮಣಿ ೩-೧೦೪-೧೦೫)

ಯೋಗತತ್ವೋಪನಿಷದ್ದಿನಲ್ಲಿ ‘ಮೊದಲು, ಮೂಗಿನ ಸೊರಳೆಗಳಿಂದ ಸಾವಕಾಶ ವಾಯು ಎಳೆದುಕೊಂಡು, ಸ್ವಲ್ಪವೇಳೆ ಕುಂಭಕ ಮಾಡಿ, ಸಾವಕಾಶ ರೇಚಕ ಮಾಡಬೇಕು’ ಎಂದು ಹೇಳಿ ೧೬ ಪೂರಕ, ೬೪ ಕುಂಭಕ, ೩೨ ಮಾತ್ರೆಗಳ ರೇಚಕ, ಎಂಬಂತ ದೊಡ್ಡ ಪ್ರಾಣಾಯಾಮ ಹೇಳಿದ್ದಾರೆ. ೮೦ ಸಲ ಹೀಗೆ ಈ ಪ್ರಾಣಾಯಾಮ ಹೇಳಿದ್ದಾರೆ. ಅದೂ ಮೇಲೆ ಹೇಳಿದಂತೆ ನಾಲ್ಕು ವೇಳೆ. ಇದರ ಬಹುದಿನದ ಅಭ್ಯಾಸದಿಂದ ಮುಂದೆ ಕೇವಲ ಕುಂಭಕ ಸಿದ್ಧಿಸುತ್ತದೆ. ಈ ಕೇವಲ ಕುಂಭಕದಲ್ಲಿ ರೇಚಕ, ಪೂರಕವಿರುವದಿಲ್ಲ. ಈ ರೀತಿಯ ಪ್ರಾಣಾಯಾಮದ ಅಭ್ಯಾಸದಿಂದ ಮೊದಲು ಬೆವರು ಬಿಡುತ್ತದೆ. ಅದನ್ನು ಒರೆಸದೇ ಶರೀರದಲ್ಲೇ ಹಿಂಗಿಸಬೇಕು. ಇದಕ್ಕಿಂತಲೂ ಹೆಚ್ಚಿನ ಅಭ್ಯಾಸದಿಂದ ದೇಹ ಆಸನದಲ್ಲೇ ಅಲುಗಹತ್ತುತ್ತದೆ. ಇದನ್ನೇ ‘ಕಂಪ’ ಎನ್ನುತ್ತಾರೆ. ಇದಕ್ಕಿಂತಲೂ ಹೆಚ್ಚು ಅಭ್ಯಾಸ ಮಾಡಿದರೆ ದಾರ್ದುರೀಭಾವ ಉತ್ಪನ್ನವಾಗುತ್ತದೆ. ಆಸನಸ್ಥ ಯೋಗಿ ಕಪ್ಪೆಯಂತೆ ಹಾರುತ್ತ ಹೋಗುತ್ತಾನೆ. ಅದಕ್ಕಿಂತಲೂ ಹೆಚ್ಚು ಅಭ್ಯಾಸವಾದಾಗ,  ಆ ಪದ್ಮಾಸನಸ್ಥ ಯೋಗಿ ನೆಲ ಬಿಟ್ಟು ಮಧ್ಯದಲ್ಲೇ ಇರಹತ್ತುವನು. ಇದಕ್ಕೆ ‘ಉತ್ಥಾನ’ ಎನ್ನುತ್ತಾರೆ. ಇದು ಪ್ರಾಣಾಯಾಮದ ಸಿದ್ಧಿ. ಈ ಎಲ್ಲ ವರ್ಣನೆ ಯೋಗತತ್ವೋಪನಿಷದ್ದಿನ ೩೬ ರಿಂದ ೫೫ ಶ್ಲೋಕದವರೆಗಿನದ್ದಾಗಿದೆ.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ

ಕಂಪ ಮತ್ತು ರೋಮಾಂಚನ ಇದರ ಅಂತರ – ಕಂಪ ಅಂದರೆ ಶರೀರ ಅಲುಗಾಡುವದು; ರೋಮಾಂಚನ ಅಂದರೆ ಹರ್ಷಾದಿಕಗಳಿಂದ ಶರೀರದ ಮೇಲಿನ ಕೂದಲು ಸೆಟೆದು ನಿಲ್ಲುವದು.

(ಈ ಪತ್ರದ ಐದನೆಯ ಭಾಗ ಮುಂದುವರಿಯುವದು)