ಯಾರಿಗೆ ಪ್ರಾಣಾಯಾಮದ ಅಭ್ಯಾಸವಿಲ್ಲವೋ, ಯಾರು ಪ್ರಾರಂಭದ ಹಂತದಲ್ಲಿದ್ದಾರೋ, ಅವರು, ಮೊದಲು ಎರಡೂ ಮೂಗಿನ ಸೊರಳೆಗಳಿಂದ ಸಾವಕಾಶ ಶ್ವಾಸ ತೆಗೆದುಕೊಂಡು ಹಾಗೇ ಸಾವಕಾಶ ಶ್ವಾಸ ಬಿಡುವ ಅಭ್ಯಾಸ ಕೆಲದಿನ ಮಾಡಬೇಕು.

(ಶ್ರೀ ಶಂಕರ ಪಂಡಿತ, ಸಜ್ಜನಗಡ ಅವರಿಗೆ ಬರೆದ ಪತ್ರದ ಐದನೆಯ ಭಾಗ)

—— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

೯. ಕ್ರಿಯಾಶುದ್ಧಿ, ಮನಃಶುದ್ಧಿ, ವೈರಾಗ್ಯ ಮತ್ತು ಆತ್ಮನಿಷ್ಠೆ ಇವು ಯೋಗದ ಮುಖ್ಯ ಸಿದ್ಧಿಗಳು. ಶರೀರ ಹಗುರಾಗಿರುವದು, ನಿರೋಗಿತ್ವ, ಉತ್ಸಾಹಿಯಾಗಿರವದು, ಶರೀರ ತೇಜಸ್ವಿಯಾಗಿರುವದು ಮತ್ತು ದೂರದೃಷ್ಟಿ, ದೂರಶ್ರವಣ, ಅಂತರ್ಜ್ಞಾನಾದಿಗಳು ಗೌಣ ಸಿದ್ಧಿಗಳು.

೧೦. ನಾನು ಬರೆದು ಕಳುಹಿಸಿದ ಪ್ರಾಣಾಯಾಮಕ್ಕೆ ಪ್ರಾಣಾಯಾಮ ಎನ್ನುತ್ತಾರೆ. ನಾನು ಇದೊಂದು ಶೀತಲಿಯ ಪ್ರಕಾರ ಎಂದು ಹೆಸರು ಕೊಡದೇ ಬರೆದಿದ್ದೆ. ಇದರಿಂದ ಹಲ್ಲಿನಿಂದ ರಕ್ತ ಬರುವದು ನಿಲ್ಲುವದು ಮತ್ತು ಶರೀರದ ಉಷ್ಣತೆಯೂ ಕಡಿಮೆಯಾಗುವದು. ಸ್ವಪ್ನಾವಸ್ಥೆಯ ತೊಂದರೆಯೂ ಆಗುವದಿಲ್ಲ. ಈ ದೃಷ್ಟಿಯಿಂದ ಈ ಪ್ರಾಣಾಯಾಮ ಹೇಳಿದೆ. ಬಾಯಿಯ ಮುಖಾಂತರ ಶ್ವಾಸ ತೆಗೆದುಕೊಳ್ಳುವದರಿಂದ ಏನಾದರೂ ಲಾಭವಾಗಿದ್ದರೆ ಆ ಪ್ರಾಣಾಯಾಮ ಮುಂದುವರಿಸು; ಇಲ್ಲವಾದರೆ ಮೇಲೆ ವರ್ಣಿಸಿದ ಪ್ರಾಣಾಯಾಮಗಳನ್ನು ಮಾಡಲು ಅಭ್ಯಂತರವಿಲ್ಲ. ಮುಖದ್ವಾರಾ ಶ್ವಾಸ ಬಿಡಬಾರದೆಂದು ಬರೆಯಬೇಕಾದರೆ ಮುಖದ್ವಾರದಿಂದ ವಾಯು ತೆಗೆದುಕೊಳ್ಳುವ ಪ್ರಾಣಾಯಾಮ ಹೇಳಬೇಕೆಂದು ಅನಿಸಿ, ಶೀತಲಿಯ ಪ್ರಕಾರದ ಈ ಪ್ರಾಣಾಯಾಮ ಉತ್ತಮವೆನಿಸಿತು ಮತ್ತು ಹಾಗಾಗಿ ಬರೆದೆ. ಸೀತ್ಕಾರಿ ಪ್ರಾಣಾಯಾಮದಲ್ಲಿ, ನಾಲಿಗೆ ತುಟಿಯ ಹೊರಗೆ ತೆಗೆದು ಮೇಲ್ಭಾಗದಲ್ಲಿ ಹಲ್ಲಿನಿಂದ ಮತ್ತು ತುಟಿಗಳಿಂದ ಹಗುರವಾಗಿ ಒತ್ತಿ ಹಿಡಿದು ಛಿದ್ರದ್ವಾರದಿಂದ ಸೀತ್ಕಾರ ಶಬ್ದಪೂರ್ವಕ ವಾಯವನ್ನು ಒಳಗೆ ಸೆಳೆದುಕೊಳ್ಳಲ್ಪಡುತ್ತದೆ. ಕಾಗೆಯ ಚುಂಚಿನಂತೆ ತುಟಿಯ ಹೊರಗೆ ತೆಗೆದ ನಾಲಿಗೆಯ ಮುಖಾಂತರ ವಾಯುವನ್ನು ಸಾವಕಾಶ ಒಳಗೆ ತೆಗೆದುಕೊಳ್ಳುವದು; ಹೊಟ್ಟೆಯಲ್ಲಿ ವಾಯು ಸಂಗ್ರಹಿಸುವದು ಮತ್ತು ನಂತರ ಸ್ವಲ್ಪ ಕುಂಭಕ ಮಾಡಿ ಎರಡೂ ಮೂಗಿನ ಸೊರಳೆಗಳಿಂದ ವಾಯುವನ್ನು ಹೊರಗೆ ಬಿಡುವದು, ಈ ಪ್ರಾಣಾಯಾಮಕ್ಕೆ ಶೀತಲಿ ಎನ್ನುತ್ತಾರೆ.

RELATED ARTICLES  ಮೃತ್ಯುವಿಗೆ ತುತ್ತಾಗುವ ಗೋವುಗಳ ಉಳಿಸುವ GouSanjivini

ಪ್ರಾಣಾಯಾಮದಿಂದಾಗಿ ಚಳಿ ಹೆಚ್ಚೆನಿಸಿದರೆ ಚಂದ್ರಭೇದಿ ಅಥವಾ ಸೂರ್ಯಭೇದಿ ಅಥವಾ ಯವುದೇ ಆದರೂ ಪ್ರಾಣಾಯಾಮ ಮಾಡಿದರೂ ನಡೆಯುತ್ತದೆ.ಯಾರಿಗೆ ಪ್ರಾಣಾಯಾಮದ ಅಭ್ಯಾಸವಿಲ್ಲವೋ, ಯಾರು ಪ್ರಾರಂಭದ ಹಂತದಲ್ಲಿದ್ದಾರೋ, ಅವರು, ಮೊದಲು ಎರಡೂ ಮೂಗಿನ ಸೊರಳೆಗಳಿಂದ ಸಾವಕಾಶ ಶ್ವಾಸ ತೆಗೆದುಕೊಂಡು ಹಾಗೇ ಸಾವಕಾಶ ಶ್ವಾಸ ಬಿಡುವ ಅಭ್ಯಾಸ ಕೆಲದಿನ ಮಾಡಬೇಕು. ನಂತರ ವಾಮ(ಎಡ) ಮೂಗಿನ ಸೊರಳೆಯಿಂದ ಸಾವಕಾಶ ಪೂರಕ ಮಾಡಿ, ಕೆಲಕಾಲ ಕುಂಭಕ ಮಾಡಿ ನಂತರ ಸಾವಕಾಶ ರೇಚಕ ಮಾಡುವ ಅಭ್ಯಾಸ ಮಾಡಬೇಕು.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಆಮೇಲೆ ಯೋಗಚೂಡಾಮಣಿ ಉಪನಿಷದ್ದಿನಲ್ಲಿ ಹೇಳಿದ  ಅಧಮ, ಮಧ್ಯಮ, ಉತ್ತಮ ಪ್ರಾಣಾಯಾಮ ಮಾಡಬೇಕು. ಅದಾದ ಮೇಲೆ ಯೋಗತತ್ವೋಪನಿಷದ್ದಿನಲ್ಲಿ ಹೇಳಿದ ದೊಡ್ಡ ಪ್ರಾಣಾಯಾಮ ಮಾಡಬೇಕು. ಎಡ ನೊಸಳು ಚಂದ್ರನಾಡಿ. ಇದರಿಂದ ಶ್ವಾಸವನ್ನು ಮೊದಲು ತೆಗೆದುಕೊಂಡರೆ ಅದು ಚಂದ್ರಭೇದಿ ಪ್ರಾಣಾಯಾಮವಾಗುತ್ತದೆ. ಅಂದರೆ ದಾಹವೆನಿಸುವದಿಲ್ಲ. ಮೂಗಿನ ಬಲ ಸೊರಳೆ ಸೂರ್ಯನಾಡಿ. ಇದು ಉಷ್ಣ ಮತ್ತು ಮೊದಲಿನದು ತಂಪು. ನಂತರ ಒಮ್ಮೆ ಎಡ, ಒಮ್ಮೆ ಬಲ, ಹೀಗೆ ಬಲ-ಎಡ ಈ ರೀತಿ ಪ್ರಾಣಾಯಾಮ ಮಾಡುವದಿರುತ್ತದೆ.

(ಈ ಪತ್ರದ ಆರನೆಯ ಭಾಗ ಮುಂದುವರಿಯುವದು)