ನಮಸ್ಕಾರ..ತಿಗಣೇಶ ಬಂದಿಹೆನು ನೆನಪುಗಳ ಹೊತ್ತು.

ಮಾಣಿ ಗನಸ್ತನಾಗಿ ಓದಿ ಉದ್ದಾರ ಆಗಲಿ ಎಂದು ಅಜ್ಜನ ಮನೆಗೆ ಕಳಿಸಿದ್ದಲ್ಲ..ಅಣ್ಣ-ತಮ್ಮನ ಪಿಂಟಿಂಗಿರಿ ತಡೆಯಲಾಗದೇ ಕಳಿಸಿದ್ದು. ಅಲ್ಲಿಯೂ ನನ್ನ ದಂಡಯಾತ್ರೆ ಹಾಗೇ ಇದ್ದದ್ದಕ್ಕೆ ಮತ್ತೆ ನಾನು ಮನಗೇ ಬರುವಂತಾಯ್ತು.ಒಂದೆರಡುದಿನ ಮರ್ಯಾದೆಯಾತ್ತು.ಕೊನೆಗೆ ಮತ್ತೆ ಅದೇ ಬೋರ್ಡ ಬಿತ್ತು.ಮಳ್ಳಿಕೇರಿ ಶಾಲೆ ಸ್ವಲ್ಪ ದೂರ.ಜಟಗನ ಮನೆ ದಾಟಿ ಕೆಳಮಾಗೋಡ ಗದ್ದೆಬೈಲ ಒಂದು ದಾರಿ..ದೇವಸ್ಥಾನದದಿಂದ..ದೀವರಕೇರಿ ದಾಟಿ ಹೋಗುವ ಒಂದು ದಾರಿ.. ಸೋಮವಾರ..ಶನಿವಾರ ಹಬ್ಬದದಿನಗಳಲ್ಲಿ ದೀವರಕೇರಿ ದಾರಿಯಲ್ಲಿ ಹೋಗುತ್ತಿರಲಿಲ್ಲ.ಯಾಕೆಂದರೆ ಮಾರಮಾರಿಗೆ ದಣಪೆ..ಕೊಳೆಮುಸರೆ ಇಲ್ಲೆ..ಎಲ್ಲಾ ದಾಟತೇ ಬರೆಕಾಗ್ತು..ಅಂತ ಬಯ್ಯುತ್ತಿದ್ದರು.ಅಲ್ಲದೇ ಮನೆಗೆ ಮೂರು ಪಕ್ಕಿಕುನ್ನಿ..ಎಂಟಹತ್ತ ಕೋಳಿ..ಅದಕೆ ನೂರಾರು ಮರಿ..ಎಲ್ಲನೋಡಿದರೂ ಕೋಳಿಪಿಟ್ಟಿ ರಾಶಿ..ಎಲ್ಲಾ ತೆಂಗನ ಮರದಂಚಿಗೆ ಕತ್ತಿಕಾಲಡಿಗೆ ಇಟ್ಟು ಮೀನ ಕೊಚ್ಚುವ ದೃಶ್ಯ ಸಾಮಾನ್ಯವಾಗಿತ್ತು..ನಾವು ಮೂಗು ಮುಚ್ಚಿ ದಾರಿಯಲ್ಲಿ ಹೋಗುವಾಗ..’ಮಾಣಿ ಮೀನಲ್ವ..ಹೊಳಿಬಾಳಿಕಾಯಿ’ ಎಂದು ನಂಬಿಸುತ್ತಿದ್ದರು.

RELATED ARTICLES  ಆಸ್ಕರ್ ಸ್ಪರ್ಧೆಯ ಪಟ್ಟಿಯಲ್ಲಿ ಕಾಂತಾರ

ಬಳಚನಚಿಪ್ಪಿ ಕಾಲಿಗೆ ಹೆಟ್ಟಿಸಿಕೊಂಡು ತೀಡಿದ್ದು ಇದೆ.ಯಾಕೆಂದರೆ ನಮ್ಮ ಕಾಲಿಗೆ ಚಪ್ಪಲ್ಲಿಲ್ಲ.ಹಸ್ಲಕೇರಿ ದಾಟಿದ ಮೇಲೆ.ದೇವಸ್ಥಾನ..ಕಾಕಾಸಾಯಬ್ರ ಮನೆ..ಅದಮ್ ಸಾಯಬ್ರ ಮನೆ.ಪುಟ್ಟಯ್ಯನಮನೆ..ಬೊಕ್ಕನಾಗಪ್ಪನಮನೆ…..ಕನ್ನೆ ನಾರಣ..ಬಲಿಂದ್ರ..ತಿಪ್ಪು..ಕೂರನಾರಣನ ಮನೆ.ಜನಗದ್ದೆನಾರಣ.ದೇವಪ್ಒನಮನೆ..ಶಕೀನಮ್ಮನಮನೆ.ಕೊನೇಗೆ ..ಐಸಾಬಿಮನೆ..ಅನಂತಶಾನಬಾಗರ ಮನೆ..ಅಬ್ಬಿಲಕ್ಷ್ಮಿಮನೆ.. ದಾಟಿ..ಶಾಲೆ ಸೇರುವುದು..ಬಾಕಿ ದಿನ ಗದ್ದೆಯ ದಾರಿಯಲ್ಲು ಹೋಗುತ್ತಿದ್ದೆವು.ದಾಸಪೈ ಅಂಗಡಿಯಲ್ಲಿ ಆಗಚಾ ಮಾಡುತ್ತಿದ್ದರು.ಅವಲಕ್ಕಿ ಕರೆ..ಉಪ್ಪಿಟ್ಟು ಪರಿಮಳ ಬರುತ್ತಿತ್ತು..ಆದರೆ ಒಮ್ಮೆಯೂ ತಿನ್ನುವ ಭಾಗ್ಯ ಬರಲೇ ಇಲ್ಲ.ಯಾಕೆಂದರೆ..ನಮ್ಮ ಹೃದಯ ಮಾತ್ರ ಶ್ರೀಮಂತ.ನಾಕೆ ದಾರಿಯಲ್ಲಿ ಹೋದರೆ ರಾಯ್ಕರ ಗಾರ್ಡರು..ಕೆಳಗಿನ ದಾರಿಯಲ್ಲಿ ಗಾಳಿಮನೆ ಸುಬ್ರಾಯಣ್ಣನ ಮನೆ..ನಾವು ಹೆಚ್ಚು ಕಡಿಮೆ ಸಾವಿರಾರು ಲೀಟರ ನೀರು ಕುಡಿದಿದ್ದೇವೆ..ಗಾಳಿಮನೆಯಲ್ಲಿ.ಮಾಬ್ಲಣ್ಣನ ಆಯಿ..ಕವಳತುಂಬಿದ ಬಾಯಲ್ಲು..’ಬಾಬು ಎಂತ ಮಾಡ್ತ್ನ’ ‘ತುಪ್ಪಿದ್ದನ’ ಕೇಳುವುದು ವಾಡಿಕೆ.ಅಗ ಭಂಡಾರ್ಕರ ಮಾಸ್ತರ್ರು ಹೆಡಮಾಸ್ತರು..ವೀಣಕ್ಕೋರು..ಬಂಡಾರ್ಕರ ಮಾಸ್ರ್ರು ಶಾಲೆ ಕೋಲಿಯಲ್ಲಿಯೇ ಉಳಿಯುತ್ತಿದ್ದರು.ಅವರಿಗಿಂತ ಅವರ ಹೆಂಡತಿ ಎತ್ತರಕ್ಕಿದ್ದರು..ನಾವು ಚಾಳಿಸುತ್ತಿದ್ದೆವು.ಅವರ ಮಗಳು ಪೂರ್ಣ..ನನ್ನ ಕ್ಲಾಸು..ವಂದನ ಕಿರಿಯಳು.ಅವರ ಮನೆಗೆ ಹಾಲು ತಂದುಕೊಟ್ಟದ್ದು ನೆನಪಿದೆ.ಗಾಳಿಮನೆ ಹಿಂದಿನ ಮನೆಯಲ್ಲಿ ವೀಣಕ್ಕೋರು ಬಾಡಿಗೆಗೆ ಇದ್ದರು…

RELATED ARTICLES  ಅಕ್ಷರ‌ಕ್ರಾಂತಿಯ ಮೂಲಕ‌ ಗೋವಿನ ಬಾಳಲಿ ಸಂಕ್ರಾಂತಿ ಮೂಡಿಸೋಣ

ಕೃಷ್ಣಮೂರ್ತಿ..ನಾನು..ಪೂರ್ಣ..ದಾಸಪೈರಮನೆ ಜಯಶ್ರೀ..ಸೈಪುಲ್ಲಾ..ಕೋಣನಮಂಜುನಾಥ..ನಾವೆಲ್ಲ ಒಂದೇ ಕ್ಲಾಸು.ಅದರಲ್ಲಿ ನಾನು ಬುದ್ದಿವಂತ..ಆದರೆ ಜೀವನದಲ್ಲಿ ಪೇಲಾದವ ನಾನೇ..ನಮ್ಮ ಬ್ಯಾಚ್ ಕಂಡು ಅಕ್ಕೋರು ಖುಷಿ ಮಾಡಿಕೊಂಡಿದ್ದರು..ಅದರಲ್ಲಿ ಸೈಪುಲ್ಲನಿಗೆ ಅ..ಆ..ಇ..ಈ..ಬರುತ್ತಿರಲಿಲ್ಲ..ದಡ್ಡ..ಆದರೆ ನಾವೆಲ್ಲಾ ಏನೂ ಸಾಧನೆ ಮಾಡಲೇ ಇಲ್ಲ..ಇನ್ನೂ ಹೋರಾಟದಲ್ಲೇ ಇದ್ದೇವೆ ಆದರೆ ದಡ್ಡ ಎಂದು ಕರೆಸಿಕೊಂಡ ಸೈಪುಲ್ಲ..ಮನೆಕಟ್ಟಿ ನಾಕಾರು ಮಕ್ಕಳ ತಂದೆಯಾಗಿ ಸುಖವಾಗಿದ್ದಾನೆ..ನಾವು ಕಲಿಯುವಾಗ ಪಾಸಾಗುತ್ತ..ಜೀವನದಲ್ಲಿ..ಗಾಂದಿಕ್ಲಾಸು.ಸೇಪುಲ್ಲ..ಪೇಲಾಗುತ್ತ ಏಳನೆತ್ತಿಗೆ ಶಾಲೆಬಿಟ್ಟು..ಏಳ್ಗತಿಯಾದ.. ಹೇಳಿ..ಬದುಕಿಗೆ ಅಕ್ಷರ ಬೇಕು..
ಆದರೆ ಅಕ್ಷರವೇ ಬದುಕಲ್ಲ..

ಮುಂದಿನವಾರ..ನಿಮ್ಮೊಡನೆ.