ನಾಟಕ ಕೆಲ ಸಮಯ ಕಣ್ಮುಂದಿದ್ದು, ನಂತರ ತಾನೇತಾನಾಗಿ ಹೇಗೆ ಮುಗಿಯುತ್ತದೆಯೋ, ಅದೇ ರೀತಿ ಈ ಪ್ರಕಾಶದ ಬಣ್ಣವೂ ಕೆಲ ಕಾಲ ಕಾಣಿಸಿಕೊಂಡು ನಂತರ ಪೂರ್ಣವಾಗಿ ಇಲ್ಲವಾಗುತ್ತದೆ ಮತ್ತು ಆತ್ಮಪ್ರಕಾಶವೊಂದೇ ಉಳಿಯುತ್ತದೆ.

(ಶ್ರೀ ಶಂಕರ ಪಂಡಿತ, ಸಜ್ಜನಗಡ ಅವರಿಗೆ ಬರೆದ ಪತ್ರದ ಆರನೆಯ ಭಾಗ)

—— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

೧೧. ‘ಓಂಕಾರದ ದೀರ್ಘ ಉಚ್ಚಾರ ಮಾಡಾದ ಮೇಲೆ ತಾನೇ ತಾನಾಗಿ ಮನಸ್ಸು ಏಕಾಗ್ರವಾಗುತ್ತದೆ; ಶರೀರದ ಎಚ್ಚರವಿರುವದಿಲ್ಲ. ನಂತರ ಅತಿ ಆನಂದವಾಗುತ್ತದೆ.’ ಎಂದು ನೀನೇನು ಬರೆದು ತಿಳಿಸಿದ್ದೀಯೋ ಅದೇ ರೀತಿ ಧ್ಯಾನದ ಅಭ್ಯಾಸ ಮುಂದುವರಿಯಲಿ. ಪೂರ್ವಜನ್ಮದ ಸಂಸ್ಕಾರದಂತೆ ಹಾಗೆ ಮಾಡಲು ಬುದ್ಧಿ ಆಗುತ್ತದೆ ಮತ್ತು ಅದೇ ಪ್ರಮಾಣದಲ್ಲಿ ಮಾಡುತ್ತ ಮುಂದೆ ಹೋದೆಯೆಂದರೆ ಸುಲಭವಾಗಿ ಸಾಧಿಸುತ್ತದೆ. ಪ್ರಕಾಶದಲ್ಲಿಯೇ ಸಮರಸವಾಗಿ ದೇಹದೆಚ್ಚರ ಮರೆವಾಗುವದು ಹಾಗೇ ಮುಂದುವರಿಯಲಿ. ಪ್ರಕಾಶದ ಬಣ್ಣವನ್ನು ನಮ್ಮ ಮನಃಪಟಲದಿಂದ ತೆಗೆಯುವ ಪ್ರಯತ್ನ ಮಾಡಹತ್ತಿದರೆ ಮನಸ್ಸಿಗೆ ಎರಡನೆಯದೊಂದರಲ್ಲಿ ಸೇರಲು ಅವಕಾಶ ಸಿಕ್ಕು ಯಾವ ಆನಂದ ಸಿಗಬೇಕೋ ಅದು ಸಿಗುವದಿಲ್ಲ. ಬ್ರಹ್ಮತೇಜ ನಿನ್ನ ಸ್ವರೂಪವೇ ಇದೆ. ಅದೇ ತೇಜಸ್ಸು ನಿನ್ನ ಈ ಪ್ರಕಾಶದಲ್ಲೂ ಇರುತ್ತದೆ. ಈ ಪ್ರಕಾಶ ಕಾಣುತ್ತಿದ್ದರೂ ಅದರಿಂದ ನಿನ್ನದೇನೂ ನಷ್ಟವಾಗುವದಿಲ್ಲ. ನೋಡುವ ನೀನು ಅದೇ ನಿನ್ನ ತೇಜಸ್ಸಿನಿಂದಲೇ ಈ ಎಲ್ಲ ಬಣ್ಣಗಳನ್ನು ನೋಡುತ್ತಾ ಇರುತ್ತೀಯೆ. ಆದುದರಿಂದ ಅಸಮಾಧಾನಕ್ಕೆ ಏನೂ ಕಾರಣವಿರುವದಿಲ್ಲ. ನಾಟಕ ನೋಡುತ್ತಿರುವಾಗ ಪ್ರೇಕ್ಷಕ ಹೇಗೆ ಅದರಲ್ಲಿ ಸಮರಸನಾಗುತ್ತಾನೋ, ಅದೇ ರೀತಿ ಆ ಆ ವೇಳೆಗೆ ಏನೇನು ಅನುಭವವಾಗುತ್ತದೆಯೋ ಅದರಲ್ಲಿ ಸಮರಸವಾಗಿ ಬಿಡಬೇಕು. ನಾಟಕ ಕೆಲ ಸಮಯ ಕಂಡು ನಂತರ ಹೇಗೆ ತಾನೇತಾನಾಗಿ ಮುಗಿಯುತ್ತದೆಯೋ ಅದೇ ರೀತಿ ಈ ಪ್ರಕಾಶದ ಬಣ್ಣವೂ ಕೆಲ ಕಾಲ ಕಾಣಿಸಿಕೊಂಡು ನಂತರ ಪೂರ್ಣವಾಗಿ ಇಲ್ಲವಾಗುತ್ತದೆ ಮತ್ತು ಆತ್ಮಪ್ರಕಾಶವೊಂದೇ ಉಳಿಯುತ್ತದೆ. ಪ್ರಕಾಶ ಬೇರೆ ಬೇರೆ ಬಣ್ಣಗಳಲ್ಲಿ ಕಾಣುತ್ತಿದ್ದರೂ, ಆತ್ಮಪ್ರಕಾಶದಿಂದಲೇ ಬೆಳಗುತ್ತಿರುತ್ತವೆ. ಆ ಆತ್ಮಪ್ರಕಾಶ ನಿತ್ಯವಾಗಿದೆ. ಹೀಗೆ ಸಿದ್ಧಾಂತವೇ ಇರುವಾಗ ಯಾವ ತಳಮಳವೂ ಇರಲಿಕ್ಕೆ ಕಾರಣವೇ ಇಲ್ಲ. ತಳಮಳದಿಂದ ಸಮಾಧಾನವಿರುವದಿಲ್ಲ ಎಂದು ಹೀಗೆ ವಿವೇಚನೆ ಮಾಡಿದೆ ಎಂಬುದು ಸತ್ಯ.

RELATED ARTICLES  ಮುಳುಗು ಸೂರ್ಯನೆ..ನಾಳೆ ಮೂಡಿ ನೋಡು..!

೧೨. ದಿವ್ಯದೃಷ್ಟಿ ಒಂದು ಸಿದ್ಧಿಯು. ಅದರ ಅಭ್ಯಾಸದಿಂದ ಮುಂದೆ ಅದರ ಪ್ರಾಪ್ತಿಯಾಗುತ್ತದೆ.

೧೩. ೧೦೮ ಸೂರ್ಯನಮಸ್ಕಾರ ಸಾಕು. ಮತ್ತೂ ಹೆಚ್ಚು ಮಾಡಬೇಡ. ಉಷ್ಣತೆ ಹೆಚ್ಚುತ್ತದೆ.

RELATED ARTICLES  ಕಾದಿರುವ ದಿನ….!

ಒಟ್ಟಿನಮೇಲೆ, ಅಭ್ಯಾಸ ಮಾಡುತ್ತಾ ಹೋಗು. ಒಂದರ ನಂತರ ಒಂದು ಹೆಜ್ಜೆ ಬೀಳುವಂತೆ ಪ್ರಗತಿಯಾಗುತ್ತಾ ಹೋಗುತ್ತದೆ. ತಳಮಳ, ಅಧೀರತೆ, ಅಸಮಾಧಾನ ಇರಲೇ ಬಾರದು. ಶಾಂತಿಯಿಂದ, ಪ್ರಸನ್ನತೆಯಿಂದ, ಆನಂದದಿಂದ, ವಿಶ್ವಾಸದಿಂದ ಶ್ರದ್ಧಾ-ಭಕ್ತಿ ಇಟ್ಟುಕೊಂಡು ಶ್ರೀಗುರುವಿನ ಛತ್ರ ತನ್ನ ಮೇಲೆ ಇದೆ ಎಂಬ ನಿಶ್ಚಯದಿಂದ ಸಂತೋಷದಿಂದ ಸಾಧನೆ ಮಾಡುತ್ತರಬೇಕು. ಆವಶ್ಯವಿದ್ದಾಗ ಆ ಆ ಸಮಯಕ್ಕೆ ಸರಿಯಾಗಿ ಸ್ವಪ್ನದಲ್ಲಿ ಗುರುದೇವನ ಸೂಚನೆ ಆಗುತ್ತಿರುತ್ತದೆ. ಚಾತುರ್ಮಾಸ ಹತ್ತಿರ ಬಂತು. ಮುಂದೆ ನನ್ನ ಲೇಖನ-ವಾಚನ ನಿಂತರೂ ಮೇಲೆ ಹೇಳಿದಂತೆ ಯೋಗ್ಯವೇಳೆಗೆ ಸೂಚನೆ ಆಗುತ್ತಲೇ ಇರುತ್ತದೆ. ಕಾಳಜಿಗೆ ಏನೂ ಕಾರಣವಿಲ್ಲ. ಏಕಾಗ್ರತೆ ಒಂದು ಮುಖ್ಯ ಅಭ್ಯಾಸ. ಸ್ವರೂಪದ ಅನಂತ ಆನಂದದಿಂದ ತೃಪ್ತನಾಗಿ ಪೂರ್ಣತ್ವ ಹೊಂದು.

                                                           ಶ್ರೀಧರ