ದೀರ್ಘ ಪ್ರಣವೋಚ್ಚಾರ ಮಾಡಿ, ಎಲ್ಲಿ ಉಚ್ಚಾರ ಮತ್ತು ಉಚ್ಚಾರದ ನಾದ ಮುಗಿಯುತ್ತದೆಯೋ ಆ ನಿರ್ವಿಕಲ್ಪ, ನಿಃಶಬ್ದ, ಆನಂದಘನ, ಸ್ವಯಂಪ್ರಕಾಶ ಬ್ರಹ್ಮನೇ ‘ನಾನು’ ಎಂದು ಧ್ಯಾನ ಮಾಡಲಿಕ್ಕೆ, ಇತಸ್ತತಃ ಉಪನಿಷದ್ದುಗಳಿಂದ ಉಪದೇಶಿಸಿದ್ದಾರೆ.
(ಶ್ರೀ ಶಂಕರ ಪಂಡಿತ, ಸಜ್ಜನಗಡ ಅವರಿಗೆ ಬರೆದ ಪತ್ರದ ಮೊದಲ ಭಾಗ)
—— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ
|| ಶ್ರೀರಾಮ ಸಮರ್ಥ ||
ಚಿ. ಶಂಕರ ಪಂಡಿತನಿಗೆ ಆಶೀರ್ವಾದ,
ನಿನ್ನ ಪತ್ರ ಸಂಪೂರ್ಣ ಓದಿ ನೋಡಿದೆ. ನಿನ್ನ ಉಪನಾಮವೂ ಕರಮರಕರ ಎಂದು ಅದೆಂತೋ ತಿಳಿದುಬಂದದ್ದರಿಂದ ಹಿಂದಿನ ಪತ್ರದಲ್ಲಿ ಕರಮರಕರ ಎಂದು ಬರೆದದ್ದು. ಅದು ಹೇಳಿದವನ ಏನೋ ತಪ್ಪು ತಿಳುವಳಿಕೆಯಿಂದ ಆಗಿರಬೇಕು.
ಅನುಕ್ರಮವಾಗಿ ನೀನು ಕೇಳಿದ ಪ್ರಶ್ನೆಗಳ ಉತ್ತರ ಕೆಳಗೆ ಕೊಡುತ್ತಿದ್ದೇನೆ.
ಶಿಷ್ಯರು ಇಲ್ಲಿ ಅಲ್ಲಿ ಎಲ್ಲಾ ಒಂದೇ. ಸದ್ಯ ಅಭ್ಯಾಸ ಮಾಡು. ಮುಂದೆ ಸೇವೆ ಮಾಡಬಹುದು.
೧. ಹುಣ್ಣಿವೆಗೆ ಕ್ಷೌರವಿರುವದರಿಂದ ಕೇವಲ ಸನ್ಯಾಸಿಗಳ ಚಾತುರ್ಮಾಸಾರಂಭ ಆಷಾಢ ಹುಣ್ಣಿವೆಯಿಂದ ಆಗುತ್ತದೆ. ಉಳಿದೆಲ್ಲ ಆಶ್ರಮಿಗಳ ಚಾತುರ್ಮಾಸಾರಂಭ ಏಕಾದಶಿಯಿಂದಲೇ ಆಗುತ್ತದೆ. ಆದ್ದರಿಂದ ನಿನ್ನ ಚಾತುರ್ಮಾಸದ ಆರಂಭ ಆಷಾಢ ಶು| ೧೧ರಿಂದ ಎಂದೇ ತಿಳಿದು ಕೊಳ್ಳಬೇಕು.
೨. ನನ್ನ ಮೂರ್ತಿಗಿಂತ ಶ್ರೀಸಮರ್ಥರ ಮೂರ್ತಿ ಅತ್ಯಾವಶ್ಯಕವಿದೆ. ಅದನ್ನು ಮಾಡಲು ನಿನ್ನ ಬಂಧುಗಳಿಗೆ ತಿಳಿಸು.
೩. ‘ಓಂ ಮಿತ್ಯಾತ್ಮಾನಮಾದಾಯ ಮನಸಾ ಬ್ರಹ್ಮಣೈಕೀ ಕುರ್ಯಾತ್|
ಓಂ ತ್ಯಾತ್ಮಾನಂ ಯುಂಜೀತಃ|’
ದೀರ್ಘ ಪ್ರಣವೋಚ್ಚಾರ ಮಾಡಿ ಎಲ್ಲಿ ಉಚ್ಚಾರ ಮತ್ತು ಉಚ್ಚಾರದ ನಾದ ಮುಗಿಯುತ್ತದೆಯೋ ಆ ನಿರ್ವಿಕಲ್ಪ, ನಿಃಶಬ್ದ, ಆನಂದಘನ, ಸ್ವಯಂಪ್ರಕಾಶ ಬ್ರಹ್ಮನೇ ನಾನು ಎಂದು ಧ್ಯಾನ ಮಾಡಲಿಕ್ಕೆ ಇತಸ್ತತಃ ಉಪನಿಷದ್ದುಗಳಿಂದ ಉಪದೇಶಿಸಿದ್ದಾರೆ. ಆದ್ದರಿಂದ ಅಭ್ಯಾಸ ನಿಲ್ಲಿಸಬೇಡ. ಇಲ್ಲಿ ಅಲ್ಲಿ ತಲೆ ಹಾಕದೇ, ಅಖಂಡ ಅಭ್ಯಾಸದಲ್ಲೇ ದಿನ ಕಳೆಯಬೇಕು. ಬೇರೆ ವಿಚಾರವೇ ಇರಬಾರದು.
(ಈ ಪತ್ರದ ಎರಡನೆಯ ಭಾಗ ಮುಂದುವರಿಯುವದು)